For Quick Alerts
ALLOW NOTIFICATIONS  
For Daily Alerts

ರಾಧೆಯ ಹುಟ್ಟು ಹೇಗೆ ಆಯಿತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ

|

ಹಿಂದೂ ಪುರಾಣಗಳಲ್ಲಿ ಶ್ರೀಕೃಷ್ಣ ದೇವರು ಮತ್ತು ರಾಧೆಯ ಪ್ರೇಮದ ಬಗ್ಗೆ ತುಂಬಾ ಉಲ್ಲೇಖವಿದೆ. ಅದರಲ್ಲೂ ಈಗಲೂ ತುಂಬಾ ಪರಿಶುದ್ಧ ಆಗಿರುವ ಪ್ರೇಮಕ್ಕೆ ರಾಧೆ ಹಾಗೂ ಕೃಷ್ಣನ ಪ್ರೀತಿ ಎಂದು ಹೆಸರಿಡುವರು. ಇವರಿಬ್ಬರು ಪ್ರೇಮವು ಇಂದು ವಿಶ್ವದೆಲ್ಲೆಡೆಯಲ್ಲೂ ಚಿರಪರಿಚಿತವಾಗಿದೆ. ಶ್ರೀಕೃಷ್ಣನು ವಿಷ್ಣು ದೇವರ ಅವತಾರವಾದರೆ, ರಾಧೆಯನ್ನು ಲಕ್ಷ್ಮೀ ದೇವಿಯ ಅವತಾರ ಎಂದು ನಂಬಲಾಗುತ್ತದೆ. ಪ್ರತಿಯೊಬ್ಬರಿಗೂ ಕೃಷ್ಣ ಹುಟ್ಟಿನ ಕಥೆಯ ಬಗ್ಗೆ ಖಂಡಿತವಾಗಿಯೂ ತಿಳಿದಿರುವುದು.

ಆದರೆ ನಾವು ಈ ಲೇಖನದಲ್ಲಿ ಹೇಳಲು ಹೊರಟಿರುವುದು ರಾಧೆಯ ಜನ್ಮದ ಕಥೆಯ ಬಗ್ಗೆ. ಕೃಷ್ಣ ದೇವರು ಮತ್ತು ರಾಧೆಯ ಹಿಂದಿನ ಜೀವನದ ಘಟನೆಯೊಂದು ಇದಕ್ಕೆ ಸುಳಿವನ್ನು ನೀಡುತ್ತಲಿದೆ. ಬ್ರಹ್ಮ ವೈವರ್ತ ಪುರಾಣದ ಪ್ರಕಾರ ಕೃಷ್ಣ ದೇವರು ಮತ್ತು ರಾಧೆಯು ತಮ್ಮ ಹಿಂದಿನ ಜನ್ಮದಲ್ಲಿ ದೈವಿಕ ಜೋಡಿಯಾಗಿದ್ದರು. ದೈವಿಕ ಜೋಡಿ ಎಂದರೆ ಇಲ್ಲಿ ವಿಷ್ಣು ದೇವರು ಮತ್ತು ಲಕ್ಷ್ಮೀ ದೇವಿ ಎಂದು ಹೇಳಲಾಗುತ್ತದೆ. ಅವತಾರವು ತುಂಬಾ ಭಿನ್ನವಾಗಿರುವುದು ಮತ್ತು ಅದು ಅವರ ಮೂಲ ರೂಪವಲ್ಲವೆಂದು ಇನ್ನೊಂದು ಮೂಲಗಳು ಹೇಳುತ್ತವೆ.

ರಾಧೆಯ ಜನ್ಮದಿನವನ್ನು ರಾಧಾ ಅಷ್ಟಮಿ ಎಂದು ಆಚರಿಸಲಾಗುವುದು

ರಾಧೆಯ ಜನ್ಮದಿನವನ್ನು ರಾಧಾ ಅಷ್ಟಮಿ ಎಂದು ಆಚರಿಸಲಾಗುವುದು

ಪುರಾಣದ ಪ್ರಕಾರ ಭಾದ್ರಪದ ತಿಂಗಳು ಅಷ್ಟಮಿ ತಿಥಿಯಲ್ಲಿ ರಾಧೆಯು ಜನಿಸಿದಳು. ಈ ದಿನವನ್ನು ರಾಧಾ ಅಷ್ಟಮಿ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಇದು ಕೃಷ್ಣ ದೇವರ ಜನ್ಮಕ್ಕೆ ತುಂಬಾ ಸಮಾನವಾಗಿದೆ. ಯಾಕೆಂದರೆ ರಾಧೆ ಕೂಡ ತನ್ನ ತಾಯಿಯ ಗರ್ಭದಿಂದ ಜನ್ಮ ಪಡೆದಿಲ್ಲ. ಇದರಿಂದಾಗಿ ಆಕೆ ಜನ್ಮ ಪಡೆದಿಲ್ಲ ಮತ್ತು ಸಾಯುವುದು ಇಲ್ಲ ಎಂದು ಹೇಳಲಾಗುತ್ತದೆ. ಇದರಿಂದಾಗಿ ಆಕೆ ಲಕ್ಷ್ಮೀ ದೇವಿಯ ರೂಪದಲ್ಲಿ ಅಮರಳಾಗಿರುವಳು.

ರಾಧೆ ಕೃಷ್ಣ ದೇವರನ್ನು ವಿರ್ಜಾದೊಂದಿಗೆ ನೋಡಿದರು

ರಾಧೆ ಕೃಷ್ಣ ದೇವರನ್ನು ವಿರ್ಜಾದೊಂದಿಗೆ ನೋಡಿದರು

ತನ್ನ ಹಿಂದಿನ ಜನ್ಮದಲ್ಲಿ ರಾಧೆಯು ಕೃಷ್ಣ ದೇವರು ಪತ್ನಿಯಾಗಿದ್ದರು. ಒಂದು ಘಟನೆಯಲ್ಲಿ ಕೃಷ್ಣ ದೇವರು ಉದ್ಯಾನದಲ್ಲಿ ವಿರ್ಜಾಳೊಂದಿಗೆ ಕುಳಿತಿರುವುದು ರಾಧೆಗೆ ಕಾಣಿಸುವುದು. ವಿರ್ಜಾ ಕೃಷ್ಣ ದೇವರ ಮತ್ತೊಬ್ಬಳು ಪತ್ನಿಯಾಗಿರುವರು. ಇದನ್ನು ನೋಡಿದ ರಾಧೆಗೆ ತುಂಬಾ ಅಸೂಹೆ ಉಂಟಾಗುವುದು ಮತ್ತು ಕೃಷ್ಣ ದೇವರ ಬಗ್ಗೆ ಬೇಸರ ಮೂಡುವುದು. ಕೋಪಗೊಂಡಿರುವ ರಾಧೆಯು ಇದನ್ನು ಖಂಡಿಸುವರು.ಇದನ್ನು ಕೃಷ್ಣನ ಸ್ನೇಹಿತ ಶ್ರೀದಾಮಾನಿಗೆ ಸಹಿಸಲು ಆಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಆತ ರಾಧೆಯೊಂದಿಗೆ ಜಗಳಕ್ಕೆ ಇಳಿಯುತ್ತಾನೆ. ಇದರಿಂದ ತುಂಬಾ ನೊಂದ ರಾಧೆಯು ಆತನಿಗೆ ಶಾಪ ನೀಡಿ, ನೀನು ರಾಕ್ಷಸನ ಮನೆಯಲ್ಲಿ ಹುಟ್ಟು ಎಂದು ಹೇಳುವರು. ಇದರಿಂದ ನೊಂದ ಶ್ರೀದಾಮಾ ಕೂಡ ರಾಧೆಗೆ ಶಾಪವನ್ನು ನೀಡಿ, ನೀವು ಕೂಡ ಭೂಮಿ ಮೇಲೆ ಸಾಮಾನ್ಯ ಜನರಂತೆ ವಾಸಿಸು ಎಂದು ಶಪಿಸುತ್ತಾನೆ.

ರಾಧೆ ಮತ್ತು ಶ್ರೀದಾಮನ ಮರುಜನ್ಮ

ರಾಧೆ ಮತ್ತು ಶ್ರೀದಾಮನ ಮರುಜನ್ಮ

ರಾಧೆಯ ಶಾಪಕ್ಕೆ ಒಳಗಾದ ಶ್ರೀದಾಮನು ಶಂಕಚೂರ ಎನ್ನುವ ರಾಕ್ಷಸನಾಗಿ ಮರುಜನ್ಮ ಪಡೆಯುತ್ತಾನೆ. ರಾಧೆಯು ತನಗೆ ಸಿಕ್ಕಿದ ಶಾಪದಿಂದಾಗಿ ವೃಷಭಾನು ಮತ್ತು ಆತನ ಪತ್ನಿ ಕೃತಿಯ ಮಗಳಾಗಿ ಜನಿಸುವರು. ಅದಾಗ್ಯೂ, ಆಕೆ ತನ್ನ ತಾಯಿ ಗರ್ಭದಿಂದ ಜನ್ಮ ಪಡೆಯಲಿಲ್ಲ. ಹೆಣ್ಣು ಮಗುವಿಗೆ ಕೃತಿಯು ಜನ್ಮ ನೀಡಿದ ಬಳಿಕ ಆಕೆಯ ದೇಹದೊಳಗೆ ರಾಧೆಯು ಪ್ರವೇಶ ಮಾಡಿದಳು ಎಂದು ಹೇಳಲಾಗುತ್ತದೆ. ತಾಯಿ ಗರ್ಭದಿಂದ ಜನಿಸದೆ ಇರುವ ಕಾರಣದಿಂದಾಗಿ ರಾಧೆಯನ್ನು ಅಯೊನಿಜಾ ಎಂದೂ ಕರೆಯಲಾಗುತ್ತದೆ.

ಮರುಜನ್ಮಕ್ಕೆ ರಾಧೆಯನ್ನು ಕೃಷ್ಣ ದೇವರು ತಯಾರು ಮಾಡಿದರು

ಮರುಜನ್ಮಕ್ಕೆ ರಾಧೆಯನ್ನು ಕೃಷ್ಣ ದೇವರು ತಯಾರು ಮಾಡಿದರು

ತನಗೆ ಸಿಕ್ಕಿದ ಶಾಪದಿಂದಾಗಿ ರಾಧೆಯು ತುಂಬಾ ದುಃಖದಲ್ಲಿದ್ದಳು. ಇದನ್ನು ತಿಳಿದ ಕೃಷ್ಣ ದೇವರು ರಾಧೆಗೆ ಸಮಾಧಾನ ಪಡಿಸಿದರು. ನೀವು ವೃಷಭಾನು ಮತ್ತು ಕೃತಿಯ ಮಗಳಾಗಿ ಜನಿಸಲಿದ್ದಿ ಎಂದು ಹೇಳುತ್ತಾರೆ. ವಸುದೇವ ಮತ್ತು ದೇವಕಿಯ ಮಗನಾಗಿ ನಾನು ಜನಿಸಲಿದ್ದೇನೆ ಎಂದು ಕೃಷ್ಣ ದೇವರು ಆಕೆಗೆ ಹೇಳುವರು. ಇದರಿಂದಾಗಿ ಮುಂದಿನ ಜನ್ಮದಲ್ಲಿ ಅವರು ಪ್ರೇಮಿಗಳಾದರು. ಆದರೂ ಅವರು ಮರುಜನ್ಮದಲ್ಲಿ ಕೂಡ ಬೇರ್ಪಡುವರು. ಮಾನವ ಜನ್ಮದಲ್ಲಿ ಅವರು ಬೇರ್ಪಟ್ಟಿದ್ದಾರೆ. ಆದರೆ ದೈವಿಕವಾಗಿ ಅವರು ಒಂದಾಗಿಯೇ ಇರುವರು.

English summary

Interesting Story Of The Birth Of Radha

According to Brahma Vaivart Puran, Lord Krishna and Goddess Radha was a divine couple in their previous life. While some people say that the divine couple here refers to Lord Vishnu and Goddess Lakshmi, others say that this incarnation of theirs is different and not their original forms.
X
Desktop Bottom Promotion