For Quick Alerts
ALLOW NOTIFICATIONS  
For Daily Alerts

ನಂದಿಯ ಹುಟ್ಟು ಹಾಗೂ ಕುತೂಹಲಕಾರಿ ಸಂಗತಿಗಳು

|

ಹಿಂದೂ ಧರ್ಮದಲ್ಲಿ ಪ್ರಕೃತಿಯೇ ದೇವರು ಎಂದು ಪೂಜಿಸಲಾಗುವುದು. ಪ್ರಕೃತಿಯಲ್ಲಿ ಇರುವ ಮೂಕ ಪ್ರಾಣಿ ಪಕ್ಷಿಗಳು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತವೆ. ಅವುಗಳಲ್ಲೂ ದೈವ ಶಕ್ತಿಯಿದೆ ಎನ್ನುವ ನಂಬಿಕೆಯಿದೆ. ಈ ನಿಟ್ಟಿನಲ್ಲಿಯೇ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಆರಾಧಿಸಲಾಗುವುದು. ಹಿಂದೂ ಧರ್ಮದ ದೇವತೆಗಳ ವಾಹನಗಳು ವಿಶೇಷ ಶಕ್ತಿಯನ್ನು ಹೊಂದಿರುವ ಪ್ರಾಣಿ ಪಕ್ಷಿಗಳೇ ಎನ್ನುವುದನ್ನು ನಾವು ಕಾಣಬಹುದು. ತಮ್ಮ ವಾಹನಗಳಾದ ಪ್ರಾಣಿಗಳಿಂದಲೇ ಪ್ರಪಂಚವನ್ನು ಸುತ್ತುತ್ತಿದ್ದರು ಎನ್ನುವ ವಿಚಾರವನ್ನು ಇತಿಹಾಸದ ಪುರಾಣಗಳಲ್ಲಿ ಕಾಣಬಹುದು.

ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನು ಸೃಷ್ಟಿಯ ಲಯ ಕರ್ತ. ಶಿವನ ಮಹಿಮೆ ಹಾಗೂ ಶಕ್ತಿಯು ಅದ್ಭುತವಾದದ್ದು. ಮನುಕುಲದ ಏಳಿಗೆ ಹಾಗೂ ಉದ್ಧಾರಕ್ಕೆ ಕಾರಣೀ ಕರ್ತನು ಎನ್ನಲಾಗುವುದು. ಶಿವನು ತನ್ನ ವಾಹನವನ್ನಾಗಿ ಹಾಗೂ ಅತ್ಯಂತ ಪ್ರಿಯ ಪ್ರಾಣಿಯನ್ನಾಗಿ ನಂದಿಯನ್ನು ಹೊಂದಿದ್ದನು. ಹಾಗಾಗಿಯೇ ಶಿವನ ದೇವಸ್ಥಾನದ ನಿರ್ಮಾಣ ಮಾಡುವಾಗ ಶಿವನ ವಿಗ್ರಹಕ್ಕೆ ನೇರವಾಗಿ ನಂದಿಯ ವಿಗ್ರಹವನ್ನು ಇಡಲಾಗುವುದು. ನಂದಿಯಿಲ್ಲದ ಶಿವನ ದೇವಸ್ಥಾನ ಇರುವುದು ಅಪರೂಪ. ಶಿವನ ಮುಂದೆ ಕಾಲುಗಳನ್ನು ಮಡಚಿ ಕುಳಿತಿರುವ ನಂದಿಯು ವಿಶೇಷ ಶಕ್ತಿಯನ್ನು ಪಡೆದುಕೊಂಡಿರುತ್ತದೆ ಎಂದು ಹೇಳಲಾಗುವುದು.

Bull Nandi

ನಂದಿಯು ಪ್ರಾಮಾಣಿಕತೆ ಹಾಗೂ ಸತ್ಯದ ಸಂಕೇತ ಎಂದು ಪರಿಗಣಿಸಲಾಗುವುದು. ಬುದ್ಧಿವಂತ ಪ್ರಾಣಿಯಾದ ನಂದಿ ಬಹಳ ಶ್ರಮದಾಯಕವಾದ ಪ್ರಾಣಿ. ಜನರು ತಮ್ಮ ಹೊಲ-ಗದ್ದೆಯನ್ನು ಊಳಲು ಶಕ್ತಿವಂತ ನಂದಿ/ಬಸವನನ್ನೇ ಅವಲಂಬಿಸಿರುತ್ತಾರೆ. ಆಧುನಿಕತೆಯಲ್ಲಿ ಹಾಗೂ ತಂತ್ರಜ್ಞಾನದಲ್ಲಿ ಸಾಕಷ್ಟು ಸಾಧನೆ ಗೈದಿದ್ದರೂ, ಬಹುತೇಕ ಮಂದಿ ತಮ್ಮ ಹೊಲವನ್ನು ಊಳಲು ಬಸವನನ್ನು ಬಳಸುತ್ತಾರೆ. ಶಾಂತಿ, ಪ್ರೀತಿ ಹಾಗೂ ಸಹಾಯಕನಾದ ನಂದಿ/ಬಸವ ಕೋಪಗೊಂಡರೆ ಸಿಂಹನಂತೆ ಹೋರಾಡಬಲ್ಲ ಶಕ್ತಿಯನ್ನು ಹೊಂದಿದೆ. ನಂದಿಯ ಈ ವಿಶೇಷ ಗುಣಗಳನ್ನು ಅರಿತೇ ಶಿವನು ತನ್ನ ಕೈಲಾಸದಲ್ಲಿ ನಂದಿಯನ್ನು ವಾಹನವನ್ನಾಗಿ ಪಡೆದುಕೊಂಡಿದ್ದಾನೆ ಎನ್ನಲಾಗುವುದು. ಅದ್ಭುತ ದೈವ ಶಕ್ತಿಯನ್ನು ಹೊಂದಿರುವ ಶಿವ ಮತ್ತು ನಂದಿಯ ನಡುವೆ ಹೇಗೆ ಸ್ನೇಹ ಬೆಳೆಯಿತು? ನಂದಿಯೇ ಶಿವನ ವಾಹನವಾಗಿ ಏಕೆ ಬಂದ? ನಂದಿಯ ಹುಟ್ಟು ಹಾಗೂ ಕುತೂಹಲಕಾರಿ ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ನಂದಿ ಶಿವನ ಆಶೀರ್ವಾದ ಪಡೆದು ಜನಿಸಿದನು

ನಂದಿ ಶಿವನ ಆಶೀರ್ವಾದ ಪಡೆದು ಜನಿಸಿದನು

ವಾಯು ಪುರಾಣ ಕಥೆಯ ಅನುಸಾರ ಋಷಿ ಕಶ್ಯಪ ನಿಗೆ ಮಕ್ಕಳಿರಲಿಲ್ಲ. ಕಶ್ಯಪ ಮುನಿಗಳು ಮತ್ತು ಅವರ ಮಡದಿ ಸುರಭಿಯು ಮಕ್ಕಳನ್ನು ಹೊಂದಬೇಕು ಎಂದು ಬಯಸುತ್ತಿದ್ದರು. ತಮಗೆ ಹುಟ್ಟಿದ ಮಗುವಿಗೆ ಕುಲದ ಹೆಸರನ್ನು ಇಡಬೇಕು ಎಂದು ಬಯಸಿದ್ದರು. ಪತಿ-ಪತ್ನಿ ಇಬ್ಬರು ಶಿವನ ಆರಾಧನೆ ಮಾಡಿದರು. ಭಕ್ತಿಯ ಆರಾಧನೆಗೆ ಮೆಚ್ಚಿದ ಶೀವನು ಕಶ್ಯಪ ದಂಪತಿಗೆ ಮಕ್ಕಳಾಗಲಿ ಎಂದು ಹರಸಿದನು. ನಂತರ ಗಂಡು ಮಗುವನ್ನು ಪಡೆದ ದಂಪತಿಗಳು ತುಂಬಾ ಸಂತೋಷಪಟ್ಟರು. ಮನೆಯಲ್ಲಿಯೂ ಹರ್ಷದ ಹೊನಲು ಹರಿಯಿತು. ನಂತರ ತಮ್ಮ ಮಗುವಿಗೆ ನಂದಿ ಎಂದು ನಾಮಕರಣ ಮಾಡಿದರು.

Most Read: ಪುರಾಣದಲ್ಲಿ ಬಚ್ಚಿಟ್ಟ ಸತ್ಯ- ಭಗವಾನ್ ಶಿವನ ಜನ್ಮ ರಹಸ್ಯ!

ವರುಣ ದೇವ ಮತ್ತು ನಂದಿ ಶಿಲಾದ್ ಋಷಿಯನ್ನು ಭೇಟಿ ಮಾಡಿದರು

ವರುಣ ದೇವ ಮತ್ತು ನಂದಿ ಶಿಲಾದ್ ಋಷಿಯನ್ನು ಭೇಟಿ ಮಾಡಿದರು

ಕೆಲವು ಕಥೆ ಹಾಗೂ ಪುರಾಣದ ಅನುಸಾರ ಶಿಲಾದ್ ಋಷಿಯು ಇಂದ್ರ ದೇವನಲ್ಲಿ ತನಗೆ ಬಲವಾದ ಹಾಗೂ ಶಕ್ತಿಯುತವಾದ ಮಗುವನ್ನು ಕರುಣಿಸು ಎಂದು ಕೇಳಿಕೊಂಡನು. ಇದಕ್ಕೆ ನೀನು ಶಿವನನ್ನು ಪ್ರಾರ್ಥಿಸಬೇಕು ಎಂದು ಇಂದ್ರ ದೇವನು ಸಲಹೆ ನೀಡಿದನು. ನಂತರ ಋಷಿ ಶಿವನ ಆರಾಧನೆ ಮಾಡಿ ಆಶೀರ್ವಾದ ಪಡೆದನು. ಇದಾದ ಬಳಿಕ ಶಿಲಾದ್ ಋಷಿ ಬಲಶಾಲಿಯಾಗಿರುವ ಮಗುವನ್ನು ಪಡೆದುಕೊಂಡನು. ಆ ಮಗುವನ್ನು ತನ್ನ ಮಗುವನ್ನಾಗಿ ದತ್ತು ಪಡೆದುಕೊಂಡನು. ಕೆಲವು ವರ್ಷಗಳ ನಂತರ ಇಂದ್ರ ದೇವ ಮತ್ತು ದೇವ ಮಿತ್ರನು ಪ್ರತ್ಯಕ್ಷರಾದರು. ಶಿಲಾದ್ ಮುನಿಗಳಿಗೆ ಸುದೀರ್ಘ ಜೀವನವನ್ನು ಹರಸಿದರು. ಆದರೆ ಮಗ ನಂದಿ ತನ್ನ 8ನೇ ವರ್ಷದಲ್ಲಿ ಸಾವನ್ನಪ್ಪುತ್ತಾನೆ ಎಂದು ಹೇಳಿದರು.

ನಂದಿಯು ಶಿವನ ಪೂಜೆ ಮಾಡಿದನು

ನಂದಿಯು ಶಿವನ ಪೂಜೆ ಮಾಡಿದನು

ನಂದಿಯು ತನ್ನ ಜೀವಿತದ ಅವಧಿಯನ್ನು ತಿಳಿದಾಗ ಅವನಿಗೆ 7 ವರ್ಷವಾಗಿತ್ತು. ವಿಷಯ ತಿಳಿದ ತಂದೆ ದುಃಖಿತನಾಗಿರುವುದು ನಂದಿಗೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆಗ ನಂದಿಯು ಶಿವನನ್ನು ಮೆಚ್ಚಿಸಲು ತಪಸ್ಸನ್ನು ಗೈದನು. ತಪಸ್ಸನ್ನು ಮೆಚ್ಚಿ ಪ್ರತ್ಯಕ್ಷನಾದ ಶಿವನು ನಂದಿಗೆ ಗಂಟೆಯ ಹಾರವನ್ನು ನೀಡಿದನು. ನಂತರ ನಂದಿಯು ಅರ್ಧ ಮನುಷ್ಯನಾಗಿ ಹಾಗೂ ಅರ್ಧ ಗೂಳಿಯಾಗಿ ಇರುವಂತೆ ಆಶೀರ್ವಾದ ನೀಡಿದನು. ಇದಾದ ಬಳಿಕ ಶಿಲಾದ್ ಮುನಿ ಹಾಗೂ ನಂದಿ ಶಿವನ ಕೈಲಾಸ ಪರ್ವತಕ್ಕೆ ಹೋದರು. ಅಲ್ಲಿ ಅವನ ಗಣಗಳಲ್ಲಿ ಒಬ್ಬರಾಗಿ ಉಳಿದರು.

ನಂದಿ ದೇವತೆಯಾಗಿ ಪೂಜಿಸಲ್ಪಟ್ಟಿತು

ನಂದಿ ದೇವತೆಯಾಗಿ ಪೂಜಿಸಲ್ಪಟ್ಟಿತು

ಅದಾದ ಬಳಿಕ ಶಿವನ ಮೆಚ್ಚಿನ ವಾಹನ ಹಾಗೂ ಪ್ರಾಣಿಯಾಗಿ ನಂದಿ ಉಳಿದನು. ಶಿವನ ದೇವಸ್ಥಾನದಲ್ಲಿ ನಂದಿಯ ಮೂರ್ತಿಯನ್ನು ಇಡಲಾಯಿತು ಎನ್ನಲಾಗುತ್ತದೆ. ನಂದಿಗೂ ದೇವಾಲಯದಲ್ಲಿ ದೈವ ರೂಪ ಎಂದು ಪೂಜಿಸಲಾಗುವುದು. ಕರ್ನೂಲ್‍ಅಲ್ಲಿ ಇರುವ ಮಹಾನಂದೀಶ್ವರ ದೇವಾಲಯದಲ್ಲಿ ನಂದಿ ದೇವರ ವಿಶೇಷ ವಿಗ್ರಹ ಇರುವುದನ್ನು ಕಾಣಬಹುದು. ಅಲ್ಲದೆ ಇದು ನಂದಿಯ ಅತ್ಯಂತ ದೊಡ್ಡ ಪ್ರತಿಮೆ ಎಂದು ಹೇಳಲಾಗುವುದು.

Most Read: ದೇವಾದಿದೇವ 'ಶಿವ' ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ!

ನಂದಿಯ ವಿಶೇಷತೆ

ನಂದಿಯ ವಿಶೇಷತೆ

ನಂದಿ ನ್ಯಾಯ, ನಂಬಿಕೆ, ಗೌರವ, ಬುದ್ಧಿವಂತಿಕೆ ಮತ್ತು ಬಲಶಾಲಿಯ ಸಂಕೇತ ಎಂದು ಪರಿಗಣಿಸಲಾಗುವುದು. ಈ ಗುಣವನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳು ಶಿವನಿಗೆ ಪ್ರಿಯವಾದ ವ್ಯಕ್ತಿಗಳಾಗಿರುತ್ತಾರೆ. ಶಿವನು ತಾಂಡವ ನೃತ್ಯ ಮಾಡುವಾಗ ನಂದಿಯು ಸಂಗೀತನ್ನು ನುಡಿಸುತ್ತಾನೆ ಎಂದು ಹೇಳಲಾಗುವುದು. ಭಗವಾನ್ ಶಿವನ ಸೈನ್ಯದ ಅಧಿಪತಿಯಾಗಿದ್ದನು. ನಂದಿಯು ಧರ್ಮದ ರಕ್ಷಕ ಹಾಗೂ ವರಗಳನ್ನು ನೀಡುವವನು ಎಂದು ಹೇಳಲಾಗುವುದು.

English summary

Interesting Story Of The Sacred Bull Nandi

Nandi, the vehicle of Lord Shiva, is also his gatekeeper and the head of his Ganas. He was a human initially and was later transformed into a half-human, half-bull when Lord Shiva gave him the boon of immortality. A protector of Dharma, he is also the giver of boons. His largest statue is located in Mahanandiswara temple in Kurnool.
Story first published: Thursday, February 28, 2019, 17:30 [IST]
X
Desktop Bottom Promotion