For Quick Alerts
ALLOW NOTIFICATIONS  
For Daily Alerts

ಸನಾತನ ಧರ್ಮ: ಸಂಸ್ಕೃತಿ ಬೆಳೆಸಿದ ಮಹಾನ್ ತಾಯಿ

By Super
|

ಮೂಲತಃ ಸಂಸ್ಕೃತ ಪದವಾದ ಸನಾತನ ಎಂದರೆ "ಆದಿ ಮತ್ತು ಅಂತ್ಯವಿಲ್ಲದ, ನಿರಂತರ ನಡೆಯುತ್ತಿರುವ" ಮತ್ತು ಧರ್ಮ ಎಂದರೆ "ಶಾಶ್ವತವಾಗಿ ಉಳಿಯಬಲ್ಲ, ಎಲ್ಲರಿಂದ ಸ್ವೀಕೃತವಾಗಬಲ್ಲ ಜೀವನಮಾರ್ಗ" ಎಂಬ ಅರ್ಥವಿರುವ ಸನಾತನಧರ್ಮ ವಾಸ್ತವವಾಗಿ ಒಂದು ಚೌಕಟ್ಟಿಗೆ ಮೀರದ ನೀತಿಗೆ ಒಳಪಟ್ಟ ನಿಯಮವೇ ಆಗಿದೆ. ಸನಾತನ ಧರ್ಮವೆಂಬುದನ್ನು ಇತರ ಧರ್ಮಗಳಾದ ಕ್ರೈಸ್ತಮತ ಅಥವಾ ಇಸ್ಲಾಂಗೆ ಹೋಲಿಸಲಾಗದು.

ಇದೊಂದು ಜೀವನವನ್ನು ಸಾಗಿಸುವ ನಿಯಮಾವಳಿಯಾಗಿದ್ದು ನಿರ್ದಿಷ್ಟ ನೀತಿಗಳನ್ನು ಪಾಲಿಸುವುದೇ ಆಗಿದೆ. ಇದನ್ನೊಂದು ನೈಸರ್ಗಿಕ ಕಾನೂನು ಎಂದೂ ಹೇಳಬಹುದು. ಸನಾತನ ಧರ್ಮವನ್ನು ‘ಆಧ್ಯಾತ್ಮಿಕದ ತೊಟ್ಟಿಲು' ಎಂದೂ, ‘ಎಲ್ಲ ಧರ್ಮಗಳ ತಾಯಿ' ಎಂದೂ ಕರೆಯಲಾಗುತ್ತದೆ. ಈ ತೊಟ್ಟಿಲನ್ನು ತೂಗಿದ ಭಾರತ, ಹತ್ತುಹಲವು ಮತಪಂಥಗಳ ಪ್ರಯೋಗಶಾಲೆಯಾಗಿ ಬಳಕೆಯಾಗಿದೆ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು

ಯಾವುದನ್ನೂ ತಿರಸ್ಕರಿಸದೆ, ಪ್ರತಿಯೊಂದಕ್ಕೂ ತನ್ನೊಡಲಲ್ಲಿ ಜಾಗ ನೀಡಿ ತಾಯ್ತನ ಮೆರೆದಿದೆ. ವಿಶ್ವದ ಅತ್ಯಂತ ಪುರಾತನ ಸಂಸ್ಕೃತಿಯಾಗಿ ಇದನ್ನು ಗುರುತಿಸಲಾಗುತ್ತದೆ. ಈ ಧರ್ಮದ ಕುರಿತಾದ ಕೆಲವು ಅಚ್ಚರಿಯ ಸಂಗತಿಗಳನ್ನು ಮುಂದೆ ಓದಿ..

 Interesting Facts about Sanathan Dharma in Hinduism

ಒಂದು: ಓರ್ವನೇ ದೇವರು
ಸನಾತನ ಧರ್ಮದ ಪ್ರಕಾರ ದೇವರು ಒಬ್ಬನೇ, ಅವನೇ ಬ್ರಹ್ಮ್ (ಬ್ರಹ್ಮ ಅಲ್ಲ)

ಎರಡು: ಎರಡು ಪಕ್ಷಗಳು
ಚಂದ್ರನ ಬೆಳವಣಿಗೆಯನ್ನಾಧರಿಸಿ ಪ್ರತಿ ಹದಿನೈದು ದಿನಗಳನ್ನು ಒಂದು ಪಕ್ಷ ಎಂದು ಕರೆಯಲಾಗುತ್ತದೆ. ಕೃಷ್ಣಪಕ್ಷ ಮತ್ತು ಶುಕ್ಲಪಕ್ಷ.
ಶುಕ್ಲಪಕ್ಷ-ಅಮವಾಸ್ಯೆಯ ಮರುದಿನದಿಂದ ಹುಣ್ಣಿಮೆಯವರೆಗೆ
ಕೃಷ್ಣಪಕ್ಷ-ಹುಣ್ಣಿಮೆಯ ಮರುದಿನದಿಂದ ಅಮಾವಾಸ್ಯೆಯವರೆಗೆ.

ಮೂರು: ಮೂರು ಋಣಗಳು ಮತ್ತು ಮೂರ್ತಿಗಳಿವೆ
ಪ್ರತಿಯೊಬ್ಬರೂ ಮೂರು ಋಣಗಳಿಗೆ ಬಾಧ್ಯರಾಗಿದ್ದಾರೆ. ಅವೆಂದರೆ ದೇವಋಣ (ದೇವರಿಂದ ಪಡೆದದ್ದು), ಪಿತೃಋಣ (ವಂಶಸ್ಥರಿಂದ ಪಡೆದದ್ದು) ಮತ್ತು ಗುರುಋಣ (ಗುರುವಿನಿಂದ ಪಡೆದದ್ದು)
ತ್ರಿಮೂರ್ತಿಗಳು: ಬ್ರಹ್ಮ, ವಿಷ್ಣು ಮತ್ತು ಮಹೇಶ (ಅಥವಾ ಮಹೇಶ್ವರ)

ನಾಲ್ಕು: ಒಟ್ಟು ನಾಲ್ಕು ಯುಗ, ಕ್ಷೇತ್ರ, ಆಶ್ರಮ ಮತ್ತು ಪೀಠಗಳಿವೆ
ಸತ್ಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ

ನಾಲ್ಕು ಪವಿತ್ರ ಕ್ಷೇತ್ರಗಳು:
ದ್ವಾರಕಧಾಮ, ಬದರೀನಾಥ, ಜಗನ್ನಾಥ ಪುರಿ, ರಾಮೇಶ್ವರಂ

ನಾಲ್ಕು ಆಶ್ರಮಗಳು -
ಬ್ರಹ್ಮಚರ್ಯ (ಅವಿವಾಹಿತ), ಗೃಹಸ್ಥ (ವಿವಾಹಿತ), ವಾನಪ್ರಸ್ಥ (ಅರಣ್ಯವಾಸ) ಮತ್ತು ಸನ್ಯಾಸ (ತ್ಯಾಗ)

ನಾಲ್ಕು ಪೀಠಗಳು:
(ಈ ಪೀಠದಲ್ಲಿ ಹಿಂದೂಗಳ ಅತ್ಯುನ್ನತ ಸ್ಥಾನದಲ್ಲಿರುವ ಪೂಜಾರಿಗಳಾದ ಶಂಕರಾಚಾರ್ಯರು ಪವಡಿಸುತ್ತಾರೆ)-ದ್ವಾರಕಾದಲ್ಲಿರುವ ಶಾರದಾ ಪೀಠ, ಜೋಶಿಧಾಮ್ ಬದ್ರಿಧಾಮ್ ನಲ್ಲಿರುವ ಜ್ಯೋತಿಷ್ ಪೀಠ, ಜಗನ್ನಾಥ ಪುರಿಯಲ್ಲಿರುವ ಗೋವರ್ಥದ ಪೀಠ ಮತ್ತು ಶೃಂಗೇರಿ ಪೀಠ.

ಐದು: ಪಂಚ ತತ್ವಗಳು, ಗವ್ಯಗಳು ಮತ್ತು ದೈವಗಳಿವೆ
ಐದು ತತ್ವಗಳಿವೆ: ಪೃಥ್ವಿ (ಭೂಮಿ), ಜಲ (ನೀರು), ಅಗ್ನಿ (ಬೆಂಕಿ), ವಾಯು (ಗಾಳಿ) ಮತ್ತು ಅಕಾಶ (ಮೇಲ್ಬಾನು, ಖಾಲಿಸ್ಥಳ)
ಐದು ಗವ್ಯಗಳಿವೆ (ಗೋವಿನಿಂದ ಪಡೆಯಬಹುದಾದ ಉಪಯುಕ್ತ ವಸ್ತುಗಳು)-ಗೋವಿನ ತುಪ್ಪ, ಹಾಲು, ಮೊಸರು (ಹಾಲಿನಿಂದ ತಯಾರಿಸಿದ್ದು), ಗೋಮೂತ್ರ ಮತ್ತು ಗೊಬ್ಬರ.
ಪಂಚ ದೈವಗಳು: ಗಣೇಶ, ವಿಷ್ಣು, ಶಿವ, ದೇವಿ ಮತ್ತು ಸೂರ್ಯ

ಆರು: ಆರು ತತ್ವಗಳಿವೆ
ಆರು ತತ್ವಗಳು: ವೈಶೇಷಿಕ, ನ್ಯಾಯ, ಚಾಣಕ್ಯ, ಯೋಗ, ಪೂರ್ವ ಮೀಮಾಂಸೆ ಮತ್ತು ಉತ್ತರ ಮೀಮಾಂಸೆ.

ಏಳು ಋಷಿ ಮತ್ತು ನಗರಗಳಿವೆ
ಸಪ್ತಋಷಿಗಳು: ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ ಮತ್ತು ಕಶ್ಯಪ
ಸಪ್ತಪುರಿಗಳು: (ಏಳು ನಗರಗಳು) ಅಯೋಧ್ಯೆ, ಮಥುರೆ, ಮಾಯಾಪುರಿ (ಹರಿದ್ವಾರ), ಕಾಶಿ, ಕಾಂಚಿ, ಆವಂತಿಕಾ ಮತ್ತು ದ್ವಾರಕಾನಗರಗಳು.

ಎಂಟು ಲಕ್ಷ್ಮಿಯರು ಮತ್ತು ಯೋಗಗಳಿವೆ
ಅಷ್ಟಲಕ್ಷ್ಮಿಯರು: ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ಧ್ರಿಯಲಕ್ಷ್ಮಿ, ವಿಜಯಲಕ್ಷ್ಮಿ ಮತ್ತು ವಿದ್ಯಾಲಕ್ಷ್ಮಿ.
ಅಷ್ಟಯೋಗಗಳು: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ. ಇವನ್ನು ಅಷ್ಟಾಂಗ ಸೋಪಾನಗಳು ಎಂದೂ ಹೇಳುತ್ತಾರೆ

ಒಂಬತ್ತು: ದುರ್ಗೆಗೆ ಒಂಭತ್ತು ರೂಪಗಳಿವೆ
ದುರ್ಗೆಯ ನವ ರೂಪಗಳಿವೆ: ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.

ಹತ್ತು: ದಶದಿಕ್ಕುಗಳಿವೆ
ದಶದಿಕ್ಕುಗಳು: ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಇಶಾನ್ಯ, ನೈರುತ್ಯ, ವಾಯುವ್ಯ, ಆಗ್ನೇಯ, ಆಕಾಶ ಮತ್ತು ಪಾತಾಳ. (ಈ ಎಲ್ಲಾ ದಿಕ್ಕುಗಳಲ್ಲಿ ರಥ ಓಡಿಸಿದ ಖ್ಯಾತಿಯೇ ಧಶರಥನ ಹೆಸರಿಗೆ ಕಾರಣವಾಯಿತು)

ಹನ್ನೊಂದು: ವಿಷ್ಣುವಿನ ಹನ್ನೊಂದು ಅವತಾರಗಳು:
ಏಕಾದಶ ಅವತಾರಗಳು:ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಬಲರಾಮ, ಕೃಷ್ಣ, ಭಗವಾನ್ ಬುದ್ಧ ಮತ್ತು ಕಲ್ಕಿ

ಹನ್ನೆರಡು: ಮಾಸಗಳು ಮತ್ತು ಜ್ಯೋತಿರ್ಲಿಂಗಗಳಿವೆ
ದ್ವಾದಶ ಮಾಸಗಳು: ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಭಾದ್ರಪದ, ಅಶ್ವಿನ, ಕಾರ್ತಿಕ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ

ಹನ್ನೆರಡು ರಾಶಿಗಳು: ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ.
ಹನ್ನೆರಡು ಜ್ಯೋತಿರ್ಲಿಂಗಗಳು: ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಳೇಶ್ವರ, ಓಂಕಾರೇಶ್ವರ, ವೈದ್ಯನಾಥೇಶ್ವರ, ಭೀಮಶಂಕರ, ರಾಮನಾಥೇಶ್ವರ, ನಾಗೇಶ್ವರ, ವಿಶ್ವೇಶ್ವರ ಜ್ಯೋತಿರ್ಲಿಂಗ, ತ್ರಯಂಬಕೇಶ್ವರ, ಕೇದಾರೇಶ್ವರ ಮತ್ತು ಗೃಷ್ಣೇಶ್ವರ

ಹದಿನೈದು:ತಿಥಿ ಅಥವಾ ದಿನಾಂಕಗಳಿವೆ
ಹದಿನೈದು ತಿಥಿ ಅಥವಾ ದಿನಾಂಕಗಳು: ಪ್ರತಿಪಾದ ಅಥವಾ ಪ್ರಥಮ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮಿ, ಶಷ್ಠಿ, ಸಪ್ತಮಿ, ಅಷ್ಠಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಪೂರ್ಣಿಮೆ (ಹುಣ್ಣಿಮೆ) ಮತ್ತು ಅಮಾವಾಸ್ಯೆ

English summary

Interesting Facts about Sanathan Dharma in Hinduism

Sanatan is a Sanskrit word which means “something which does not have beginning and end” and dharma means “which can be accepted as a way of life, which is sustainable”. It is not the religion in the sense as other religions like Christianity and Islam. Sanatan Dharma is a way of life, code of ethics. It is a natural law through which we are governed.
X
Desktop Bottom Promotion