For Quick Alerts
ALLOW NOTIFICATIONS  
For Daily Alerts

ರುದ್ರಾಕ್ಷಿಯ ಬಗೆಗಿನ ಆಸಕ್ತಿಕರ ಅಂಶಗಳು

|

ರುದ್ರಾಕ್ಷಿಯ ಬಗೆಗೆ ನಿಮಗೆ ತಿಳಿದಿದೆಯೇ? ಕಂದು ಬಣ್ಣದ ಹರಳುಗಳನ್ನು ಶಿವ ಭಕ್ತರು ಹೆಚ್ಚಾಗಿ ಧರಿಸುತ್ತಾರೆ. ರುದ್ರಾಕ್ಷ ಎಂಬುದು ಎರಡು ಪದಗಳ ಅರ್ಥದಿಂದ ಸಮ್ಮಿಲಿತಗೊಂಡಿದೆ. ರುದ್ರ ಎಂದರೆ ಶಿವ ಅಕ್ಷಿ ಎಂದರೆ ಕಣ್ಣುಗಳು. ಶಿವನ ಕಣ್ಣೀರಿನಿಂದ ರುದ್ರಾಕ್ಷಿಗಳು ಜನ್ಮ ತಾಳಿವೆ ಎಂಬ ಪ್ರತೀತಿಯೂ ಇದೆ. ಇದೊಂದು ಮರವಾಗಿದ್ದು ಇದರ ಉಗಮಕ್ಕೆ ಕಾರಣವಾಗಿರುವುದು ಶಿವನ ಕಣ್ಣೀರಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಿಶೇಷ ಮಹತ್ವ ಹೊಂದಿರುವ ಶಿವನ ಆಭರಣಗಳು

ಹಿಮಾಲಯದಲ್ಲಿ ರುದ್ರಾಕ್ಷಿಯ ಮರ ಕಂಡುಬರುತ್ತದೆ. ಈ ಮರ ಬದುಕಲು ಬೇಕಾಗಿರುವುದು ಕಡಿಮೆ ತಾಪಮಾನ ಹಾಗೂ ಕಲುಷಿತವಲ್ಲದ ವಾತಾವರಣ. ಆದ್ದರಿಂದಲೇ ಇದು ಶಿಖರ ಪ್ರದೇಶಗಳಾದ ಹಿಮಾಲಯ ಮತ್ತು ನೇಪಾಳಗಳಲ್ಲಿ ಮಾತ್ರ ಕಂಡುಬರುತ್ತದೆ. ರುದ್ರಾಕ್ಷಿ ಮರವು 100 ವರ್ಷಗಳಷ್ಟು ಕಾಲ ಬದುಕಬಲ್ಲದು.

ರುದ್ರಾಕ್ಷಿ ಹರಳನ್ನು 'ಮಾಲೆ' ಯ ರೂಪದಲ್ಲಿ ಮತ್ತು ಪ್ರಾರ್ಥನೆಯ ಸಮಯದಲ್ಲಿ ಜಪ ತಪಗಳನ್ನು ಮಾಡಲು ಬಳಸುತ್ತಾರೆ. ರುದ್ರಾಕ್ಷಿಯ ಹರಳಿಗೆ 21 ಮುಖಗಳಿವೆ. 1 ರಿಂದ 4 ಮುಖಗಳುಳ್ಳ ರುದ್ರಾಕ್ಷಿಯನ್ನು ಮನುಷ್ಯರು ಧರಿಸಬಹುದು. ಪ್ರತಿಯೊಂದು ಮುಖದ ಹರಳೂ ಕೂಡ ಒಂದೊಂದು ಮಹತ್ವವನ್ನು ಹೊಂದಿದ್ದು ತೇಜಸ್ವಿ ಶಕ್ತಿಯನ್ನು ಒಳಗೊಂಡಿದೆ. ರುದ್ರಾಕ್ಷಿಯನ್ನು ಧರಿಸಿದ ಮನುಷ್ಯನಲ್ಲಿ ಧನಾತ್ಮಕ ಶಕ್ತಿಗಳು ಹುಟ್ಟಿಕೊಳ್ಳುತ್ತವೆ ಹಾಗೂ ದುಷ್ಟ ಶಕ್ತಿಯ ವಿರುದ್ಧ ಹೋರಾಡುವ ಚೈತನ್ಯವುಂಟಾಗುತ್ತದೆ ಎಂಬ ನಂಬಿಕೆಯೂ ಪ್ರಬಲವಾಗಿದೆ. ರುದ್ರಾಕ್ಷಿ ಮಾಲೆಯ ಇನ್ನಷ್ಟು ಕುತೂಹಲಕಾರಿ ಅಂಶಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಭಾರತದಲ್ಲಿರುವ 10 ಪ್ರಸಿದ್ಧ ಶಿವನ ದೇವಾಲಯಗಳು

ಏಕ ಮುಖಿ ರುದ್ರಾಕ್ಷ:

ಏಕ ಮುಖಿ ರುದ್ರಾಕ್ಷ:

ಈ ಏಕ ಮುಖದ ರುದ್ರಾಕ್ಷಿಯನ್ನು ಶಿವನಿಗೆ ಅತಿ ಸಮೀಪದ್ದೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಗಿರುವ ಮಂತ್ರ "ಓಂ ಹ್ರೀಂ ನಮಃ" ಎಂದಾಗಿದೆ. ಈ ರುದ್ರಾಕ್ಷಿಯನ್ನು ಧರಿಸಿದ ಸಮಯದಲ್ಲಿ ಈ ಮಂತ್ರವನ್ನು ಪಠಿಸಬೇಕು. ಇದನ್ನು ಧರಿಸಿದ ವ್ಯಕ್ತಿಗೆ ಎಲ್ಲಾ ತರಹದ ವಸ್ತು ಸಂತೋಷ ಮತ್ತು ಸಂಪತ್ತನ್ನು ಈ ರುದ್ರಾಕ್ಷಿ ಒದಗಿಸುತ್ತದೆ.

ದ್ವಿ ಮುಖಿ ರುದ್ರಾಕ್ಷ:

ದ್ವಿ ಮುಖಿ ರುದ್ರಾಕ್ಷ:

ಎರಡು ಮುಖದ ರುದ್ರಾಕ್ಷಿಯು ಎಲ್ಲಾ ಪ್ರಕಾರದ ಬಯಕೆಗಳನ್ನು ಈಡೇರಿಸುತ್ತದೆ. ಈ ರುದ್ರಾಕ್ಷಿಯನ್ನು ಧರಿಸಿದಾಗ ಉಚ್ಛರಿಸಬೇಕಾದ ಮಂತ್ರ "ಓಂ ನಮಃ".

ತ್ರಿ ಮುಖಿ ರುದ್ರಾಕ್ಷ:

ತ್ರಿ ಮುಖಿ ರುದ್ರಾಕ್ಷ:

ಯಾರಿಗೆ ಜ್ಞಾನದ ಅವಶ್ಯಕತೆಯಿದೆಯೋ ಅದನ್ನು ಪೂರೈಸುವ ಶಕ್ತಿ ಈ ರುದ್ರಾಕ್ಷಿಗಿದೆ. ಇದನ್ನು ಧರಿಸಿದಾಗ ಪಠಿಸಬೇಕಾದ ಮಂತ್ರ "ಓಂ ಕ್ಲೀನ್ ನಮಃ".

ಚತುರ್ಮುಖ ಹೊಂದಿರುವ ರುದ್ರಾಕ್ಷ:

ಚತುರ್ಮುಖ ಹೊಂದಿರುವ ರುದ್ರಾಕ್ಷ:

ಚತುರ್ಮುಖ ಹೊಂದಿರುವ ಈ ರುದ್ರಾಕ್ಷವನ್ನು ಬ್ರಹ್ಮನಿಗೆ ಹೋಲಿಸಲಾಗುತ್ತದೆ. ಇದನ್ನು ಧರಿಸಿದಾಗ ಪಠಿಸಬೇಕಾದ ಮಂತ್ರ "ಓಂ ಕ್ಲೀನ್ ನಮಃ"

ಪಂಚ ಮುಖಿ ರುದ್ರಾಕ್ಷ:

ಪಂಚ ಮುಖಿ ರುದ್ರಾಕ್ಷ:

ಕಾತ್ರಿಕೇಯ ದೇವರ ಪ್ರತಿರೂಪದಂತೆ ಈ ರುದ್ರಾಕ್ಷಿಯನ್ನು ಪರಿಗಣಿಸಲಾಗುತ್ತದೆ. ಬಲ ಕೈಗೆ ಈ ರುದ್ರಾಕ್ಷವನ್ನು ಧರಿಸುವುದರಿಂದ ಬ್ರಹ್ಮಹತ್ಯಾ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಈ ರುದ್ರಾಕ್ಷದ ಮಂತ್ರ "ಓಂ ಹ್ರೀಂ ಹುಮ್ ನಮಃ" ಎಂದಾಗಿದೆ.

ಆರು ಮುಖಿ ರುದ್ರಾಕ್ಷ:

ಆರು ಮುಖಿ ರುದ್ರಾಕ್ಷ:

ಜೀವನದಲ್ಲಿ ಎಲ್ಲಾ ತೊಡಕುಗಳನ್ನು ಸಂಕಷ್ಟಗಳನ್ನು ಈ ಆರು ಮುಖವುಳ್ಳ ರುದ್ರಾಕ್ಷಿ ನೀಗಿಸುತ್ತದೆ. ಇದನ್ನು ಧರಿಸಿದಾಗ ಹೇಳಬೇಕಾದ ಮಂತ್ರ "ಓಂ ಹ್ರೀಂ ನಮಃ" ಎಂದಾಗಿದೆ.

ಏಳು ಮುಖಿ ರುದ್ರಾಕ್ಷ:

ಏಳು ಮುಖಿ ರುದ್ರಾಕ್ಷ:

ಈ ಏಳು ಮುಖದ ರುದಾಕ್ಷಿಯು ಹೆಚ್ಚು ಹಣ ಕಳೆದುಕೊಂಡವರು ಮತ್ತು ಹೆಚ್ಚು ಸಂಪಾದಿಸಲು ಸಾಧ್ಯವಿಲ್ಲದವರಿಗಾಗಿ ಇದೆ. ಈ ರುದ್ರಾಕ್ಷಿಗಿರುವ ಮಂತ್ರವಾಗಿದೆ "ಓಂ ಹುಮ್ ನಮಃ" ಎಂದಾಗಿದೆ.

ಎಂಟು ಮುಖಿ ರುದ್ರಾಕ್ಷ:

ಎಂಟು ಮುಖಿ ರುದ್ರಾಕ್ಷ:

ಈ ಎಂಟು ಮುಖದ ರುದ್ರಾಕ್ಷಿಯನ್ನು ಭೈರವನ ರೂಪವೆಂದೇ ಕರೆಯಲಾಗುತ್ತದೆ. ಉತ್ತಮ ಆರೋಗ್ಯ ಮತ್ತು ಅಪಘಾತಗಳನ್ನು ನಿವಾರಿಸಲು ಈ ರುದ್ರಾಕ್ಷಿಯನ್ನು ಧರಿಸಲಾಗುತ್ತದೆ. ಇದಕ್ಕಿರುವ ಮಂತ್ರವಾಗಿದೆ "ಓಂ ಹುಮ್ ನಮಃ".

ನವ್ ಮುಖಿ ರುದ್ರಾಕ್ಷ:

ನವ್ ಮುಖಿ ರುದ್ರಾಕ್ಷ:

ಶಕ್ತಿಯ ಒಂಭತ್ತು ರೂಪಗಳೆಂದು ಈ ರುದ್ರಾಕ್ಷಿಯನ್ನು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯನ್ನು ಧರಿಸಿದವರಿಗೆ ಎಲ್ಲಾ ತರಹದ ಸುಖ ಸಂತೋಷ ಲಭ್ಯವಾಗುತ್ತದೆ. ಈ ರುದ್ರಾಕ್ಷಿಗಿರುವ ಮಂತ್ರ "ಓಂ ಹ್ರೀಂ ಹುಮ್ ನಮಃ" ಎಂದಾಗಿದೆ.

ದಶ ಮುಖಿ ರುದ್ರಾಕ್ಷ:

ದಶ ಮುಖಿ ರುದ್ರಾಕ್ಷ:

ಈ ಹತ್ತು ಮುಖವುಳ್ಳ ರುದ್ರಾಕ್ಷಿಯನ್ನು ವಿಷ್ಣುವಿನ ರೂಪವೆಂದೇ ಪರಿಗಣಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಸುಖ ಸಂತೋಷವನ್ನು ಈ ರುದ್ರಾಕ್ಷಿ ತರುತ್ತದೆ. ಈ ರುದ್ರಾಕ್ಷಿಯನ್ನು ಧರಿಸಿದಾಗ ಪಠಿಸಬೇಕಾದ ಮಂತ್ರ "ಓಂ ಹ್ರೀಂ ನಮಃ" ಎಂದಾಗಿದೆ.

ಹನ್ನೊಂದು ಮುಖಿ ರುದ್ರಾಕ್ಷ:

ಹನ್ನೊಂದು ಮುಖಿ ರುದ್ರಾಕ್ಷ:

ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಹೊಂದಲು ಈ ಹನ್ನೊಂದು ಮುಖದ ರುದ್ರಾಕ್ಷಿಯನ್ನು ಧರಿಸಲಾಗುತ್ತದೆ. ಇದಕ್ಕಿರುವ ಮಂತ್ರವಾಗಿದೆ "ಓಂ ಹ್ರೀಂ ಹುಮ್ ನಮಃ".

ಹನ್ನೆರಡು ಮುಖಿ ರುದ್ರಾಕ್ಷ:

ಹನ್ನೆರಡು ಮುಖಿ ರುದ್ರಾಕ್ಷ:

ಈ ಹನ್ನೆರಡು ಮುಖದ ರುದ್ರಾಕ್ಷಿಯನ್ನು ಸಂತೋಷ ಮತ್ತು ಒಳ್ಳೆಯ ಆರೋಗ್ಯಕ್ಕಾಗಿ ಧರಿಸಲಾಗುತ್ತದೆ. ಇದನ್ನು ಕೂದಲಲ್ಲಿ ಧರಿಸಬೇಕು. ಈ ರುದ್ರಾಕ್ಷಿಗಿರುವ ಮಂತ್ರ "ಓಂ ಕ್ರೋಂ ಶ್ರೋಂ ರೂಮ್ ನಮಃ" ಎಂದಾಗಿದೆ.

ಹದಿಮೂರು ಮುಖಿ ರುದ್ರಾಕ್ಷ:

ಹದಿಮೂರು ಮುಖಿ ರುದ್ರಾಕ್ಷ:

ಈ ಹದಿಮೂರು ಮೂಖದ ರುದ್ರಾಕ್ಷಿಯನ್ನು ವಿಶ್ವದೇವನ ಪ್ರತಿರೂಪವೆಂದು ನಂಬಲಾಗುತ್ತದೆ. ಅದೃಷ್ಟಕ್ಕಾಗಿ ಇದನ್ನು ಧರಿಸಲಾಗುತ್ತದೆ. ಈ ರುದ್ರಾಕ್ಷಿರುವ ಮಂತ್ರ "ಓಂ ಹ್ರೀಂ ನಮಃ" ಎಂದಾಗಿದೆ.

ಹದಿನಾಲ್ಕು ಮುಖಿ ರುದ್ರಾಕ್ಷ:

ಹದಿನಾಲ್ಕು ಮುಖಿ ರುದ್ರಾಕ್ಷ:

ಈ ಹದಿನಾಲ್ಕು ಮುಖದ ರುದ್ರಾಕ್ಷಿಯನ್ನು ಶಿವ ದೇವರ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಹಣೆಗೆ ಇದನ್ನು ಸ್ಪರ್ಶಿಸಬೇಕು. ಎಲ್ಲಾ ಪಾಪಗಳಿಂದ ಹೊರಬರಲು ಈ ರುದ್ರಾಕ್ಷವನ್ನು ಧರಿಸಿದರೆ ಒಳ್ಳೆಯದು. ಈ ರುದ್ರಾಕ್ಷವನ್ನು ಧರಿಸಿದಾಗ ಪಠಿಸಬೇಕಾದ ಮಂತ್ರ "ಓಂ ನಮಃ" ಎಂದಾಗಿದೆ.

English summary

Interesting Facts About Rudraksha

You must have heard about the Rudraksha. These are the brown coloured beads which Lord Shiva devotees usually wear in their arms or neck. The term Rudraksha is a combination of two words Rudra meaning Shiva and Aksha meaning eyes.
X
Desktop Bottom Promotion