For Quick Alerts
ALLOW NOTIFICATIONS  
For Daily Alerts

  ಜ್ಯೋತಿಷ್ಯ: ಚಿನ್ನ, ಬೆಳ್ಳಿಗಿಂತಲೂ 'ತಾಮ್ರದ ಉಂಗುರ' ಶ್ರೇಷ್ಠ!

  By Manu
  |

  ಜ್ಯೋತಿಷ್ಯಶಾಸ್ತ್ರವನ್ನು ನಿಮ್ಮಲ್ಲೆಷ್ಟು ಜನರು ನಂಬುತ್ತೀರಿ? ನಮ್ಮಲ್ಲಿ ಬಹುತೇಕ ಜನರು ಈ ಪ್ರಶ್ನೆಗೆ ಕೈ ಎತ್ತದಿದ್ದರೂ ಪ್ರತಿದಿನ ವೃತ್ತಪತ್ರಿಕೆಗಳಲ್ಲಿ ದಿನಭವಿಷ್ಯವನ್ನು ಮಾತ್ರ ತಪ್ಪದೇ ನೋಡುತ್ತಾರೆ. ಕೆಲವರು ಈ ಶಾಸ್ತ್ರವನ್ನು ಗಾಢವಾಗಿ ನಂಬಿದರೆ ಕೆಲವರು ನಂಬುವುದೇ ಇಲ್ಲ. ಇನ್ನುಳಿದಂತೆ ಹೆಚ್ಚಿನವರು ತಾವು ನಂಬುತ್ತೇವೆ ಎಂಬುದನ್ನು ಸ್ಪಷ್ಟವಾಗಿ ತೋರ್ಪಡಿಸದೇ, ಅತ್ತ ನಿರಾಕರಿಸಲೂ ಆಗದೇ ದ್ವಂದದಲ್ಲಿಯೇ ಇರುತ್ತಾರೆ.

  ಜ್ಯೋತಿಷ್ಯಶಾಸ್ತ್ರದಲ್ಲಿ ಅಭ್ಯಸಿಸಿದ ಪಂಡಿತರು ಭಿನ್ನ ವ್ಯಕ್ತಿಗಳ ಜೀವನ ಉತ್ತಮಗೊಳ್ಳಲು ಕೆಲವು ಸಲಹೆಗಳನ್ನು ನೀಡುತ್ತಾರೆ. ವಾಸ್ತು, ಪೂಜೆ, ಕೆಲವು ಲೋಹದ ಆಭರಣಗಳನ್ನು ಧರಿಸುವುದು, ಧರಿಸದಿರುವುದು, ದಾನ ಮೊದಲಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೀವನ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ.      ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರಿನ ಆರೋಗ್ಯ ಲಾಭಗಳು

  ಜ್ಯೋತಿಷ್ಯಾಸ್ತ್ರವನ್ನು ಪೂರ್ಣವಾಗಿ ನಂಬದೇ ಇರುವವರು ಸಹಾ ಸುಮ್ಮನೇ ಪ್ರಯತ್ನಿಸೋಣ ಎಂದಾದರೂ ಕೆಲವು ಕ್ರಮಗಳನ್ನು ಅನುಸರಿಸುತ್ತಾರೆ. ಇದರಲ್ಲಿ ಸುಲಭವಾದುದು ಎಂದರೆ ಉಂಗುರ ಧರಿಸುವುದು. ಯಾರಾದರೂ ಕೇಳಿದರೆ ಜ್ಯೋತಿಷ್ಯಾಸ್ತ್ರದ ಪ್ರಕಾರ ಅಲ್ಲ, ಸುಮ್ಮನೇ ಫ್ಯಾಷನ್ನಿಗೆ ಎಂದು ಹೇಳಿದರಾಯಿತು ಎಂಬ ಸಿದ್ಧ ಉತ್ತರವೂ ಅವರ ಬಳಿ ಇರುತ್ತದೆ.

  ಆದರೆ ಧರಿಸಬಹುದಾದ ಆಭರಣಗಳಲ್ಲಿ ಅಳವಡಿಸುವ ಲೋಹಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ಮಹತ್ವವಿದೆ. ವಿಶೇಷವಾಗಿ ತಾಮ್ರ, ಹಿತ್ತಾಳೆ, ಜ್ಯೋತಿಷ್ಯಶಾಸ್ತ್ರದಲ್ಲಿ ಉಳಿದ ಲೋಹಗಳಿಗಿಂತಲೂ ಹೆಚ್ಚಿನ ಮಹತ್ವವಿದೆ. ಬನ್ನಿ ಇಂದಿನ ಲೇಖನದಲ್ಲಿ, ತಾಮ್ರ ಹಾಗೂ ತಾಮ್ರದ ಉಂಗುರವನ್ನು ಧರಿಸುವ ಮೂಲಕ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೀಡಲಾಗಿದೆ, ಮುಂದೆ ಓದಿ...

  ತಾಮ್ರ ಪುರಾತನ ಕಾಲದಿಂದಲೂ ಚಾಲ್ತಿಯಲ್ಲಿದೆ

  ತಾಮ್ರ ಪುರಾತನ ಕಾಲದಿಂದಲೂ ಚಾಲ್ತಿಯಲ್ಲಿದೆ

  ತಾಮ್ರ ಒಂದು ಬಹು ಪುರಾತನ ಕಾಲದಿಂದಲೂ ಬಳಸಲ್ಪಡುತ್ತಾ ಬಂದಿರುವ ಲೋಹವಾಗಿದ್ದು ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆಯ ಉತ್ಖತನದಲ್ಲಿಯೂ ತಾಮ್ರದ ಪಾತ್ರೆ ದೊರಕಿರುವುದು ಅಂದಿನ ಕಾಲದಲ್ಲಿ ಇದರ ಬಳಕೆಯ ಪಾತ್ರವನ್ನು ತಿಳಿಸುತ್ತದೆ.

  ತಾಮ್ರ ಪುರಾತನ ಕಾಲದಿಂದಲೂ ಚಾಲ್ತಿಯಲ್ಲಿದೆ

  ತಾಮ್ರ ಪುರಾತನ ಕಾಲದಿಂದಲೂ ಚಾಲ್ತಿಯಲ್ಲಿದೆ

  ಅಲ್ಲದೆ, ತಾಮ್ರದ ಪಾತ್ರೆಯಲ್ಲಿ ಸಿದ್ಧಪಡಿಸಿದ ಆಹಾರ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ ಹಾಗೂ ಯಕೃತ್ತಿನ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.

  ಆದರೆ ಇಂದು....

  ಆದರೆ ಇಂದು....

  ಆದರೆ ಇಂದು ವೈಜ್ಞಾನಿಕವಾಗಿ ಸಾಬೀತುಪಡಿಸಿರುವಂತೆ ತಾಮ್ರದ ಪಾತ್ರೆಯಲ್ಲಿ ನೇರವಾಗಿ ಕುದಿಸಿದಾಗ ತಾಮ್ರದ ಅಗಾಧ ಪ್ರಮಾಣ ಆಹಾರ ಅಥವಾ ಹಾಲಿನಲ್ಲಿ ಬೆರೆತುಬಿಡುತ್ತದೆ. ಇದು ಆರೋಗ್ಯಕ್ಕೆ ಮಾರಕವಾಗಿದೆ. ಆದ್ದರಿಂದ ತಾಮ್ರದ ಒಳಭಾಗಕ್ಕೆ ತವರದ ಲೇಪನ (ಇದಕ್ಕೆ ಕಲಾಯದ ಕೆಲಸ ಎಂದು ಕರೆಯುತ್ತಾರೆ) ಮಾಡಿ ಬಳಿಕವೇ ಅಡುಗೆ ಮಾಡಬೇಕು.

  ಸಂಶೋಧಕರ ಪ್ರಕಾರ

  ಸಂಶೋಧಕರ ಪ್ರಕಾರ

  ತಾಮ್ರ ನಮ್ಮ ನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಲೋಹವಾಗಿದೆ. ಇದರ ಕೊರತೆಯಿಂದ ವಿವಿಧ ಸೋಂಕುಗಳು, ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ ಓಸ್ಟಿಯೋಪೋರೋಸಿಸಿ ಮತ್ತು ಚರ್ಮ ಮತ್ತು ಕೂದಲಿನ ಬಣ್ಣ ಕಳೆದುಕೊಳ್ಳುವುದು ಮೊದಲಾದ ತೊಂದರೆಗಳೂ ಎದುರಾಗುತ್ತವೆ. ಆದರೆ ಎಷ್ಟು ಬೇಕು?

  ಸಂಶೋಧಕರ ಪ್ರಕಾರ

  ಸಂಶೋಧಕರ ಪ್ರಕಾರ

  ಈ ಪ್ರಶ್ನೆಗೆ ಸಂಶೋಧಕರು ನೀಡುವ ಉತ್ತರದ ಪ್ರಕಾರ ಆರೋಗ್ಯವಂತ ಪುರುಷರಿಗೆ ಮತ್ತು ಮಹಿಳೆಯರಿಗೆ 900 ಮೈಕ್ರೋಗ್ರಾಂ, ಗರ್ಭಿಣಿಯರಿಗೆ ಸಾವಿರ ಮೈಕ್ರೋಗ್ರಾಂ, ಬಾಣಂತಿಯರಿಗೆ 1,300 ಮೈಕ್ರೋಗ್ರಾಂ ಅಗತ್ಯವಿದೆ. ಮಕ್ಕಳಿಗೆ ಅವರ ವಯಸ್ಸಿಗನುಗುಣವಾಗಿ ಮೊದಲ ವರ್ಷಕ್ಕೆ ಇನ್ನೂರು ಮೈಕ್ರೋಗ್ರಾಂ ಅಗತ್ಯವಿದ್ದರೆ ಹದಿನೆಂಟು ವರ್ಷದವರೆಗೆ ಕ್ರಮೇಣ ಏರುತ್ತಾ ಒಂಭೈನೂರು ಮೈಕ್ರೋಗ್ರಾಂ ವರೆಗೆ ಅಗತ್ಯವಿದೆ.

  ತಾಮ್ರದ ಉಂಗುರ ಧರಿಸುವುದರಿಂದ?

  ತಾಮ್ರದ ಉಂಗುರ ಧರಿಸುವುದರಿಂದ?

  ತಾಮ್ರವನ್ನು ಸೇವಿಸುವುದರಿಂದ ಇವೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಿತು. ಆದರೆ ಧರಿಸುವುದರಿಂದ? ಜ್ಯೋತಿಷ್ಯಾಸ್ತ್ರದ ಪ್ರಕಾರ ತಾಮ್ರದ ಉಂಗುರ ಮತ್ತು ಆಭರಣಗಳನ್ನು ಧರಿಸುವುದರಿಂದಲೂ ಹಲವು ಉಪಯೋಗಗಳಿವೆ.

  ತಾಮ್ರದ ಉಂಗುರ ಧರಿಸುವುದರಿಂದ?

  ತಾಮ್ರದ ಉಂಗುರ ಧರಿಸುವುದರಿಂದ?

  ವಿಶೇಷವಾಗಿ ಉಂಗುರ ಅಥವಾ ಮಣಿಕಟ್ಟಿನಲ್ಲಿ ಧರಿಸುವ ಕೈಸರ (ಬ್ರೇಸ್ಲೆಟ್)ದಿಂದ ವಿವಿಧ ಕ್ರಿಮಿಗಳ ಧಾಳಿಯಿಂದ ರಕ್ಷಣೆ ದೊರಕುತ್ತದೆ. ಇದರಿಂದ ವಾಸ್ತು ದೋಷವನ್ನೂ ಸರಿಪಡಿಸಬಹುದಾಗಿದ್ದು ಮನೆಯ ವಾತಾವರಣ ಶಾಂತಿಯುತ ಮತ್ತು ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಕಂಡುಕೊಳ್ಳಬಹುದು.

  ಆರೋಗ್ಯಕ್ಕೆ

  ಆರೋಗ್ಯಕ್ಕೆ

  ತಾಮ್ರದ ಉಂಗುರ ಧರಿಸುವ ಮೂಲಕ ಸೂರ್ಯನ ಕಿರಣಗಳನ್ನು ಹೆಚ್ಚು ಹೀರಿಕೊಂಡು ದೇಹದ ಮೇಲೆ ಇತರ ಕಾರಣಗಳಿಂದ ಆಗುತ್ತಿರುವ ದುಷ್ಪರಿಣಾಮವನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಕಿರಿಕಿಯಾಗುವ ಸಂದರ್ಭಗಳಲ್ಲಿ ಈ ಕಿರಿಕಿರಿ ಶೀಘ್ರವೇ ಶಾಂತಗೊಳ್ಳಲೂ ತಾಮ್ರದ ಉಂಗುರ ನೆರವಾಗುತ್ತದೆ.

  ತಾಪವನ್ನು ತಂಪುಮಾಡುವ ಗುಣ

  ತಾಪವನ್ನು ತಂಪುಮಾಡುವ ಗುಣ

  ಈ ಲೋಹ ದೇಹದ ಹೆಚ್ಚಿನ ತಾಪಮಾನವನ್ನು ಸೆಳೆದು ತಂಪುಮಾಡುವ ಗುಣ ಹೊಂದಿದ್ದು ದೇಹ ಬಿಸಿಯಾಗುವುದನ್ನು ತಪ್ಪಿಸುತ್ತದೆ.

  ತಾಪವನ್ನು ತಂಪುಮಾಡುವ ಗುಣ

  ತಾಪವನ್ನು ತಂಪುಮಾಡುವ ಗುಣ

  ಉದ್ಯೋಗದಲ್ಲಿ ಯಾವುದೋ ಅಡ್ಡಿ ಎದುರಾಗಿದ್ದರೆ ತಾಮ್ರದ ಲೋಹದ ಉಂಗುರ ಈ ಅಡ್ಡಿಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಯಾವುದೇ ಮಹತ್ತರ ನಿರ್ಣಯ ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

  ಸೂರ್ಯನ ಪ್ರಭಾವ ಕಡಿಮೆ ಇದ್ದರೆ....

  ಸೂರ್ಯನ ಪ್ರಭಾವ ಕಡಿಮೆ ಇದ್ದರೆ....

  ಒಂದು ವೇಳೆ ನಿಮ್ಮ ಜನ್ಮರಾಶಿಯಲ್ಲಿ ಸೂರ್ಯನ ಪ್ರಭಾವ ಕಡಿಮೆ ಇದ್ದರೆ ಇದರ ಕಾರಣ ಮಹಾದಶ ಎಂದ ಕಂಟಕ ಎದುರಾಗಬಹುದು. ಜ್ಯೋತಿಷ್ಯಾಸ್ತ್ರದ ಪ್ರಕಾರ ಈ ದೋಶವನ್ನು ಸರಿಪಡಿಸಲು ಅತ್ಯಂತ ಸುಲಭವಾದ ಪರಿಹಾರವೆಂದರೆ ತಾಮ್ರದ ಉಂಗುರವೊಂದನ್ನು ಧರಿಸುವುದು. ಇದರಿಂದ ಜೀವನದಲ್ಲಿ ನಿಗದಿತ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

  ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ

  ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ

  ಅಧಿಕ ಅಥವಾ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಈ ಉಂಗುರ ಧರಿಸುವ ಮೂಲಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಕೆಲವರಲ್ಲಿ ರಕ್ತದೊತ್ತಡ ಅತೀವ ಹೆಚ್ಚು ಮತ್ತು ಅತಿ ಕಡಿಮೆ ಮಟ್ಟದಲ್ಲಿ ಏರುಪೇರಾಗುತ್ತಾ ಇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ

  ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ

  ಈ ತೊಂದರೆಯನ್ನೂ ತಾಮ್ರದ ಉಂಗುರ ಧರಿಸುವ ಮೂಲಕ ಕಡಿಮೆ ಮಾಡಬಹುದು. ಈ ಏರುಪೇರಿನ ಮೂಲಕ ಎದುರಾಗುವ ಉರಿಯೂತ ಮತ್ತು ಬಾವುಗಳನ್ನೂ ಬರದಂತೆ ತಡೆಗಟ್ಟಬಹುದು.

  ಉಗುರಿನಲ್ಲಿ ಸೋಂಕು ಇದ್ದರೆ

  ಉಗುರಿನಲ್ಲಿ ಸೋಂಕು ಇದ್ದರೆ

  ಚರ್ಮ ಮತ್ತು ಉಗುರಿನಲ್ಲಿ ಸೋಂಕು ಇದ್ದು ಹೊಸ ಚರ್ಮ ಉಗುರು ಬೆಳೆಯಲು ಸಾಧ್ಯವೇ ಆಗುತ್ತಿಲ್ಲ ಎಂಬ ಸ್ಥಿತಿ ಇದ್ದವರಿಗೂ ತಾಮ್ರದ ಉಂಗುರ ಧರಿಸತೊಡಗಿದ ಬಳಿಕ ನಿಧಾನವಾಗಿ ಈ ತೊಂದರೆ ಹಿಮ್ಮೆಟ್ಟುವುದನ್ನು ಗಮನಿಸಬಹುದು. ಒಟ್ಟಾರೆಯಾಗಿ ಪರಿಗಣಿಸುವುದಾದರೆ ತಾಮ್ರದ ಉಂಗುರವನ್ನು ಧರಿಸುವ ಮೂಲಕ ಸೂರ್ಯನ ಪ್ರಭಾವದಿಂದ ಎದುರಾರ ಎಲ್ಲಾ ದೋಶಗಳನ್ನು ಸರಿಪಡಿಸಬಹುದು.

   

  English summary

  Importance Of Wearing A Copper Ring, As Per Astrology

  How many of you believe in Astrology? Many of us do. Some of us do not believe in it completely; however, are interested to know about it. It is an amazing fact that many of the metals such as copper, brass, platinum, gold, silver and iron find an important place in astrology. Having known about the health benefits, let us now see how wearing a copper ring benefits you, as per astrology. Wearing a copper ring or bracelet makes you germ resistant.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more