For Quick Alerts
ALLOW NOTIFICATIONS  
For Daily Alerts

ಹಿಂದೂ ಸಂಪ್ರದಾಯದ ಪ್ರಕಾರ ಹಣೆ ಕುಂಕುಮ ಇಡುವುದರ ಮಹತ್ವವೇನು

By Sushma Charhra
|

ಸಿಂಧೂರವನ್ನು ಹಣೆಯಲ್ಲಿ ಹಚ್ಚಿಕೊಳ್ಳುವುದು, ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆದ ಮಹಿಳೆಯನ್ನು ಸೂಚಿಸುತ್ತದೆ.ಎಲ್ಲಾ ರಾಜ್ಯಗಳನ್ನು ಪ್ರತಿಯೊಂದು ಹಿಂದೂ ಸಂಪ್ರದಾಯದ ಜನಾಂಗದ ಮಹಿಳೆಯರಲ್ಲೂ ಹಣೆಗೆ ಕುಂಕುಮ ಇಡುವ ಸಂಪ್ರದಾಯವಿದ್ದು, ಕೆಲವು ಸಂಪ್ರದಾಯವು ಸ್ವಲ್ಪ ಭಿನ್ನ ಅನ್ನಿಸದರೂ ಕೂಡ ಇದು ಮಾತ್ರ ಸಾಮಾನ್ಯವಾಗಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಕಂಡುಬರುತ್ತೆ. ಹರಪ್ಪ ನಾಗರೀಕತೆಯ ಕಾಲದಿಂದಲೂ ಈ ಸಂಪ್ರದಾಯವು ರೂಢಿಯಲ್ಲಿದ್ದು, ಆಗಲೇ ಇದು ಆರಂಭವಾಗಿದ್ದು ಎಂದು ಹೇಳಲಾಗುತ್ತೆ. ಅಂದರೆ ಕುಂಕುಮವಿಡುವ ಸಂಪ್ರದಾಯ ಆರಂಭವಾಗಿ ಹೆಚ್ಚು ಕಡಿಮೆ 3000 ವರ್ಷಗಳೇ ಕಳೆದಿದೆ. ಮದುವೆಯಾಗದ ಮಹಿಳೆಯರು ಕುಂಕುಮವನ್ನು ತಮ್ಮ ಬೈತಲೆಗೆ ಹಚ್ಚಿಕೊಳ್ಳುವಂತಿಲ್ಲ. ಹಿಂದೂ ಸಮಾಜದಲ್ಲಿ ಬೈತಲೆಗೆ ಕುಂಕುಮವಿಡಲೂ ಕೂಡ ಒಂದು ವಿಶೇಷ ಸ್ಥಾನಮಾನವಿದೆ.

ಹಿಂದೂ ದೇವತೆಗಳೂ ಕೂಡ ಕುಂಕುಮ ಹಚ್ಚಿಕೊಳ್ಳುತ್ತಾರೆ

ಹಣೆಗೆ ಕುಂಕುಮವಿಡುವ ಅಭ್ಯಾಸ ಹಿಂದೂ ದೇವತೆಗಳಿಗೂ ಇದೆ ಎಂದು ನಂಬಲಾಗಿದೆ. ಶಿವ ಆರಾಧನೆಗಾಗಿ ಪಾರ್ವತಿ ದೇವಿಯೂ ಕೂಡ ತನ್ನ ಬೈತಲೆಯಲ್ಲಿ ಸಿಂಧೂರ ಇಟ್ಟುಕೊಳ್ಳುತ್ತಾಳೆ ಅನ್ನೊದೊಂದು ಪ್ರತೀತಿ. ಶ್ರೀರಾಮನ ಪೂಜೆಗಾಗಿ ದೇವಿ ಸೀತೆಯೂ ಕೂಡ ಸಿಂಧೂರವನ್ನು ಹಚ್ಚಿಕೊಳ್ಳುತ್ತಾಳೆ. ಸಿಂಧೂರವು ತನ್ನ ಗಂಡನಿಗೆ ಹೆಂಡತಿಯು ನೀಡುವ ಗೌರವ ಎಂದು ಭಾವಿಸಲಾಗುತ್ತೆ. ಅದೇ ಕಾರಣಕ್ಕೆ ಕೌರವರು ದ್ರೌಪದಿ ವಸ್ತ್ರಾಪಹರಣ ಮಾಡುವ ಸಂದರ್ಬದಲ್ಲಿ ತನ್ನ ಕೂದಲನ್ನು ಕೆದರಿ, ಬೈತಲೆಯ ಸಿಂಧೂರವನ್ನು ಅಳಿಸಿ ಹಾಕಿ ಪಾಂಡವರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದಳು ಎಂದು ಹೇಳಲಾಗುತ್ತೆ.

ಸಿಂಧೂರ ಅಥವಾ ಕುಂಕುಮವನ್ನು ಹಣೆಗೆ ಇಡುವುದು ಹಿಂದೂ ಸಂಪ್ರದಾಯಸ್ಥ ಮಹಿಳೆಗೆ ಬಹಳ ಪ್ರಮುಖವಾದದ್

ಸಿಂಧೂರದ ಮಹತ್ವ ಮತ್ತು ಅದರ ಆಯುರ್ವೇದ ಗುಣಗಳು

ಕೆಲವು ಅಧ್ಯಯನಗಳ ಪ್ರಕಾರ, ಪವಿತ್ರ ವಸ್ತುಗಳಾಗಿರುವ ಸಿಂಧೂರ, ಗಂಧ,ಅರಿಶಿನ, ಇತರೆ ಕೆಲವು ಇಂತಹ ವಸ್ತುಗಳನ್ನು ಹಿಂದೂ ಸಂಪ್ರದಾಯದ, ಇಲ್ಲವೇ ವೈದಿಕ ಸಂಪ್ರದಾಯದ ಮಂದಿ ನಂಬಿಕೆಯಿಂದ ಹಚ್ಚಿಕೊಳ್ಳುವುದರ ಹಿಂದೆ, ಕೆಲವು ಆಯುರ್ವೇದ ಹಿನ್ನಲೆಯೂ ಇದೆ.ಇವುಗಳೆಲ್ಲವೂ ಕೆಲವು ಔಷಧೀಯ ವಸ್ತುಗಳಿಂದ ತಯಾರಿಸಲ್ಪಟ್ಟವು. ಇವೆಲ್ಲವುಗಳನ್ನು ವೈಜ್ಞಾನಿಕ ಕಾರಣಗಳಿಂದಲೇ ಬಳಸಲಾಗುತ್ತೆ. ಉದಾಹರಣೆಗೆ ಗಂಧವನ್ನು ಹಣೆಗೆ ತಿಲಕದಂತೆ ಹಚ್ಚಿಕೊಳ್ಳುವುದರಿಂದ ತಲೆಗೆ ತಂಪಾಗುತ್ತೆ ಮತ್ತು ಮನಸ್ಸು ಪ್ರಶಾಂತವಾಗಿರಲು ಸಹಾಯ ಮಾಡುತ್ತೆ. ಇದು ಮನಸ್ಸನ್ನು ಶಾಂತವಾಗಿರಿಸಿರುತ್ತೆ. ಅದೇ ರೀತಿ ಅರಿಶಿನವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಚರ್ಮವನ್ನು ಸುಂದರವಾಗಿರಿಸಿಕೊಳ್ಳಬಹುದು.ಚರ್ಮದ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿ. ಕೆಲವು ಮಾಲೆಗಳನ್ನು ಕೂಡ ಅರಿಶಿನದ ಕೊಂಬುಗಳಿಂದ ತಯಾರಿಸಿದ ಮಣಿಗಳನ್ನು ಬಳಸಿ ಮಾಡಲಾಗುತೆ. ಇದು ಕೂಡ ಕೆಲವು ಔಷಧೀಯ ಗುಣಗಳ ಕಾರಣದಿಂದ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ಒಳಗೊಂಡಿದೆ. ಅದೇ ರೀತಿ ಮದುವೆಯ ಚಿಹ್ನೆಯಂತೆ ಗುರುತಿಸ್ಪಡುವ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದಲೂ ಹೀಗೆ ಹಲವು ಕಾರಣಗಳಿವೆ.

ಸಿಂಧೂರದ ಬಣ್ಣವು ಕೇಸರಿ, ಕೆಂಪು, ಕಡುಗೆಂಪು,ತಿಳಿಗೆಂಪು ಬಣ್ಣಗಳಿಂದ ಕೂಡಿರುತ್ತದೆ. ಇದನ್ನು ಅರಿಶಿನ ಮತ್ತು ನಿಂಬೆಯ ರಸವನ್ನು ಬಳಸಿ ತಯಾರಿಸಲಾಗುತ್ತೆ. ಅಷ್ಟೇ ಅಲ್ಲ ಕೆಲವು ಪ್ರಮಾಣದ ಪಾದರಸವನ್ನೂ ಕೂಡ ಬಳಕೆ ಮಾಡಲಾಗುತ್ತೆ. ಪಾದರಸವನ್ನು ಆಂಟಿಆಕ್ಸಿಡೆಂಟ್ ಕಾರಣದಿಂದ ಬಳಕೆ ಮಾಡಲಾಗುತ್ತೆ. ಭಸ್ಮೀಕರಣದ ಒಂದು ಭಾಗವಾಗಿ, ಲೋಹದ ವಿಷತ್ವವನ್ನು ತೊಡೆದು ಹಾಕಿ ಗಿಡಮೂಲಿಕೆಗಳ ಲಾಭದ ಕಾರಣದಿಂದಾಗಿ ಇದನ್ನು ಬಳಕೆ ಮಾಡಲಾಗುತ್ತೆ. ಭಸ್ಮೀಕರಣ ಅನ್ನುವುದು ಆಯುರ್ವೇದದ ಒಂದು ವಿಧಾನವಾಗಿದ್ದು, ಲೋಹದ ವಿಷತ್ವವನ್ನು ತೆಗೆದುಹಾಕುವ ಪ್ರಕ್ರಿಯೆಯಾಗಿದ್ದು, ಇದು ಹಲವು ಔಷಧೀಯ ಲಾಭಗಳನ್ನು ಹೊಂದಿರುತ್ತದೆ. ಈ ಮರ್ಕ್ಯುರಿ ಇಲ್ಲವೇ ಭಸ್ಮವನ್ನು ರಸಸಿಂಧೂರವೆಂದೂ ಕರೆಯಲಾಗುತ್ತೆ. ಇದು ಸಿಪಿಲಿಸ್, ಜನನಾಂಗದ ಸಮಸ್ಯೆಗಳ ನಿವಾರಣೆಗೆ ಬಹಳ ಪ್ರಸಿದ್ಧಿ ಪಡೆದಿದೆ. ಅದೇ ಕಾರಣಕ್ಕೆ ಸಿಂಧೂರವನ್ನು ಮದುವೆಯಾದ ಗೃಹಿಣಿಯರು ಬೈತಲೆಯಲ್ಲಿ ಹಚ್ಚಿಕೊಳ್ಳಬೇಕು ಎಂದು ಹೇಳುವುದು.

ಹಿಂದೂ ದೇವತೆಗಳ ಆರಾಧನೆಯಲ್ಲೂ ಪ್ರಮುಖ ಸ್ಥಾನ

ಸಿಂಧೂರವನ್ನು ಹೂಂ ದೇವತೆಗಳ ಆರಾಧನೆಯಲ್ಲೂ ಬಳಕೆ ಮಾಡಲಾಗುತ್ತೆ. ಶಕ್ತಿದೇವತೆ, ಲಕ್ಷ್ಮೀ, ಗಣೇಶ, ವಿಷ್ಣು, ಹನುಮಂತನ ಆರಾಧನೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತೆ. ಈ ದೇವರುಗಳ ಕಾಲುಗಳಿಗೆ ಕುಂಕುಮ ಹಚ್ಚಿ ಪೂಜಿಸಿದರೆ, ಶ್ರೇಯಸ್ಕರವಾದದ್ದು ಅನ್ನುವ ನಂಬಿಕೆ ಅಚಲವಾಗಿದೆ. ಮಂತ್ರಗಳ ಪಠಣದ ಸಂದರ್ಬದಲ್ಲೂ ಕೂಡ ಕುಂಕುಮವನ್ನು ಅರ್ಚನೆ ಮಾಡಿದರೆ ಮತ್ತಷ್ಟು ಮಂಗಳಕರವಾದದ್ದು ಎಂದು ನಂಬಲಾಗಿದೆ. ಆದರೆ ಹನುಮಂತನಿಗೆ ಯಾಕೆ ಕುಂಕುಮವನ್ನು ಹಚ್ಚಲಾಗುತ್ತೆ ಅನ್ನುವುದಕ್ಕೆ ಒಂದು ಕಥೆಯಿದೆ. ಅದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಯಾಕೆ ಹನುಮಂತನಿಗೆ ಕುಂಕುಮವನ್ನು ಅರ್ಚಿಸಲಾಗುತ್ತೆ

ನಮಗೆಲ್ಲರಿಗೂ ತಿಳಿದಿರುವಂತೆ ಹನುಮಂತ ರಾಮನ ಆರಾಧಕ. ಒಮ್ಮೆ ಸೀತಾದೇವಿಯು ತನ್ನ ಬೈತಲೆಗೆ ಕುಂಕುಮವನ್ನು ಹಚ್ಚಿಕೊಳ್ಳುತ್ತಿರುತ್ತಾಳೆ. ಅದರ ಕುತೂಹಲದಿಂದ ಹನುಮಂತನು ಯಾಕೆ ಹೀಗೆ ಹಚ್ಚಿಕೊಳ್ಳುತ್ತಿದ್ದೀರಿ ಎಂದು ಸೀತಾದೇವಿಯನ್ನು ಪ್ರಶ್ನಿಸುತ್ತಾನೆ. ಆಕೆ ಇದು ತನ್ನ ದೇವರಿಗೆ ತಾನು ನೀಡುವ ಗೌರವ ಎಂದು ಉತ್ತರಿಸುತ್ತಾಳೆ. ಆಕೆಯ ದೇವರು ಎಂದರೆ ಅದು ಶ್ರೀರಾಮ ಎಂಬುದನ್ನೂ ಹನುಮಂತನಿಗೆ ಮತ್ತೆ ಬಿಡಿಸಿ ಹೇಳಬೇಕಾಗಿಲ್ಲ. ಈ ಕಾರಣವು ಹನುಮಂತನಿಗೆ ಬಹಳ ಆಕರ್ಷಿತವಾಗುತ್ತೆ, ಅದೇ ಕಾರಣಕ್ಕೆ ಆತ ಹೇಳುತ್ತಾನೆ. ಶ್ರೀರಾಮನಿಗೆ ಪ್ರಿಯವಾಗಬೇಕು ಎಂದರೆ ತನ್ನ ಹಣೆಗೆ ಮಾತ್ರವಲ್ಲ ಇಡೀ ಮೈಗೆ ಕುಂಕುಮ ಬಳಿಯಬೇಕು ಎಂದು ಹೇಳುತ್ತಾನೆ. ಶ್ರೀರಾಮನನ್ನು ಆರಾಧಿಸಬೇಕು ಎಂದರೆ ಹನುಮಂತನನ್ನು ಆರಾಧಿಸಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಹನುಮಂತನನ್ನು ಆರಾಧಿಸಿ ಪ್ರಸನ್ನ ಗೊಳಿಸಬೇಕು ಎಂದರೆ ಆತ ಹೇಳಿದಂತೆ ಕುಂಕುಮವನ್ನು ಆತನ ಸಂಪೂರ್ಣ ದೇಹಕ್ಕೆ ಹಚ್ಚಬೇಕು ಎಂಬುದು ಪ್ರತೀತಿಯಾಗಿದೆ.

Read more about: inspiration
English summary

importance-of-sindur-vermilion-in-hinduism

importance-of-sindur-vermilion-in-hinduism
Story first published: Friday, May 18, 2018, 17:13 [IST]
X
Desktop Bottom Promotion