For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ವ್ರತ 2021: ಸಂಪತ್ತಿನ ದೇವತೆ 'ವರಮಹಾಲಕ್ಷ್ಮಿಗೆ' ಸೀರೆಯ ಅಲಂಕಾರ ಹೀಗಿರಲಿ...

By Lekhaka
|

ಹಿಂದೂ ಧರ್ಮದಲ್ಲಿ ದೇವಿ ದೇವತೆಗಳಿಗೆ ಪವಿತ್ರವಾದ ಸ್ಥಾನವಿದೆ. ದುರ್ಗಾ ಮಾತೆಯನ್ನು ಜಗದ ತಾಯಿ ಎಂಬುದಾಗಿ ಪರಿಗಣಿಸಿದ್ದರೆ, ಪರಮೇಶ್ವರ ತಂದೆಯಾಗಿದ್ದಾರೆ. ಭಗವಾನ್ ವಿಷ್ಣುವನ್ನು ಸ್ನೇಹಿತ, ಒಡನಾಡಿ, ಮಾರ್ಗದರ್ಶಕ ಹೀಗೆ ಹಲವಾರು ಬಗೆಯಲ್ಲಿ ನಾವು ಸಂಕಲ್ಪಿಸಿಕೊಳ್ಳುತ್ತೇವೆ. ನಾವು ಕೇಳಿದ ವರವನ್ನು ದೇವರು ನೀಡಬೇಕೆಂದು ಅವರನ್ನು ಸಂತೃಪ್ತಿಗೊಳಿಸಲು ಪೂಜೆ ಹವನಗಳನ್ನು ನಾವು ಕೈಗೊಳ್ಳುತ್ತೇವೆ. ವರಮಹಾಲಕ್ಷ್ಮಿ ಹಬ್ಬಕ್ಕೆ, ಪೂಜಾ ಕೋಣೆಯ ಸಿದ್ಧತೆ ಹೀಗಿರಲಿ

ಅವರಿಗೆ ಚಿನ್ನ, ಬೆಳ್ಳಿ, ವಜ್ರ ವೈಢೂರ್ಯಗಳ ಅಲಂಕಾರವನ್ನು ಮಾಡುತ್ತೇವೆ. ಹೂವಿನಿಂದ ಸಿಂಗರಿಸಿ ಧೂಪ ದೀಪ, ನೈವೇದ್ಯಗಳನ್ನು ಅರ್ಪಿಸಿ ಕೊಂಡಾಡುತ್ತೇವೆ. ಹೀಗೆ ದೇವರ ಕಾರ್ಯದಲ್ಲಿ ಕೊಂಚವೂ ಲೋಪದೋಷವುಂಟಾಗದಂತೆ ನಾವು ದೇವರನ್ನು ಪೂಜಿಸುತ್ತೇವೆ. ದೇವಿಗೆ ಪೂಜೆಗಳನ್ನು ನಡೆಸಿಕೊಡುವಾಗ ಅವರಿಗೆ ಸೀರೆಗಳನ್ನು ಉಡಿಸಿ ಆಭರಣಗಳನ್ನು ತೊಡಿಸುವುದು ವಾಡಿಕೆ.

2021 ಆಗಸ್ಟ್ 20ರ ಶುಭ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ ಕೂಡ ಹೌದು. ಇಂದಿನ ಶುಭ ದಿನದಂದು ದೇವಿಗೆ ಯಾವ ಯಾವ ಬಗೆಯ ಸೀರೆಗಳನ್ನು ಉಡಿಸಬಹುದು ಮತ್ತು ಅವರಿಗೆ ಮಾಡುವ ಅಲಂಕಾರ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ....

ರೇಷ್ಮೆ ಸೀರೆ

ರೇಷ್ಮೆ ಸೀರೆ

ವರಮಹಾಲಕ್ಷ್ಮಿ ವ್ರತದಂದು ದೇವಿಗೆ ನೀವು ಉಡಿಸುವ ಸೀರೆಯಲ್ಲಿ ರೇಷ್ಮೆ ಸೀರೆಯನ್ನು ಆಯ್ದುಕೊಳ್ಳಬಹುದಾಗಿದೆ. ಸಾಂಪ್ರಾದಾಯಿಕ ಸೀರೆಯೆಂದೇ ಭಾರತದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ರೇಷ್ಮೆ ಸೀರೆ ಅದ್ಭುತವಾಗಿ ಕಾಣಿಸುತ್ತದೆ. ಹಬ್ಬದಂದು ಲಕ್ಷ್ಮೀಯನ್ನು ಸೀರೆಯಿಂದ ಸಂಪ್ರೀತಿಗೊಳಿಸಿದರೆ ಆಕೆ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ.

ಮೈಸೂರ್ ಸಿಲ್ಕ್ ಸೀರೆ

ಮೈಸೂರ್ ಸಿಲ್ಕ್ ಸೀರೆ

ಸಾಂಪ್ರಾದಾಯಿಕ ಸೀರೆ ಮತ್ತು ಧೋತಿಗಳನ್ನು ಸಿದ್ಧಪಡಿಸುವುದರಲ್ಲಿ ಮೈಸೂರ್ ಸಿಲ್ಕ್ ಎತ್ತಿದ ಕೈಯಾಗಿದೆ. ಕೈಗೆಟಕುವ ಬೆಲೆಯಲ್ಲಿ ಈ ಬಗೆಯ ಸೀರೆಗಳು ನಿಮಗೆ ದೊರೆಯುತ್ತದೆ. ಲಕ್ಷ್ಮೀ ದೇವಿಯನ್ನು ಮೈಸೂರ್ ಸಿಲ್ಕ್ ಸೀರೆಯಲ್ಲಿ ನೋಡಬೇಕು ಎಂಬುದು ನಿಮ್ಮ ಇಚ್ಛೆಯಾಗಿದ್ದರೆ ಇದನ್ನು ಆರಿಸಿಕೊಳ್ಳಿ.

9 ಮೊಳದ ಸೀರೆ

9 ಮೊಳದ ಸೀರೆ

ಭಾರತದ ದಕ್ಷಿಣ ಭಾಗದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನೆರಿಗೆಗಳಿರುವ 9 ಗಜದ ಸೀರೆಗಳನ್ನು ಮಹಿಳೆಯರು ಉಡುತ್ತಾರೆ. ಲಕ್ಷ್ಮೀಯನ್ನು ತಾವು ಸೀರೆ ಉಡುವ ಮಾದರಿಯಲ್ಲಿಯೇ ಉಡಿಸಿ ಅಲಂಕರಿಸಬುದಾಗಿದೆ. ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮೀಯನ್ನು ಸಿಂಗರಿಸಲು ಈ ಸೀರೆಯನ್ನು ಆರಿಸಿಕೊಳ್ಳಬಹುದಾಗಿದೆ.

ಕಾಂಚೀವರಮ್ ಸೀರೆ

ಕಾಂಚೀವರಮ್ ಸೀರೆ

ಪಟ್ಟಿ ಮತ್ತು ಚೆಕ್ಸ್ ಒಳಗೊಂಡಿರುವ ಸೀರೆ ದೇವಿಯನ್ನು ಅಲಂಕರಿಸಲು ಸೂಕ್ತವಾಗಿದೆ. ನಿಮಗೆ ಇದರಲ್ಲಿ ಅದ್ಭುತ ಬಣ್ಣಗಳು ದೊರೆಯಲಿದೆ. ಕೆಂಪು ಸೀರೆಯಲ್ಲಿ ದೇವರನ್ನು ನೋಡಬೇಕು ಎಂಬುದು ನಿಮ್ಮ ಆಸೆಯಾಗಿದ್ದರೆ, ಅತ್ಯದ್ಭುತ ಬಣ್ಣದ ಸೀರೆಯನ್ನು ದೇವಿಗೆ ಉಡಿಸಬಹುದಾಗಿದೆ.

ಕೊನಾರ್ಡ್ ಸಿಲ್ಕ್ ಸೀರೆ

ಕೊನಾರ್ಡ್ ಸಿಲ್ಕ್ ಸೀರೆ

ವರಮಹಾಲಕ್ಷ್ಮಿ ಪೂಜೆಯು ತಮಿಳು ನಾಡಿನಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದು ರಾಜ್ಯದ ಪ್ರಸಿದ್ಧ ಸೀರೆ ಕೂಡ ಹೌದು. ಹಬ್ಬದ ದಿನಂದು ದೇವಿಗೆ ಉಡಿಸುವ ಸೀರೆಯಲ್ಲಿ ಇದೂ ಕೂಡ ಒಂದು. ದೇವಸ್ಥಾನದ ದೇವಿಯರಿಗೆ ಉಡಿಸಲೆಂದೇ ಈ ಸೀರೆಯನ್ನು ನೇಯುತ್ತಾರೆ. ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಈ ಸೀರೆಯನ್ನು ನಿಮಗೆ ಖರೀದಿಸಬಹುದಾಗಿದೆ.

ಪಟೋಲಾ ಸಿಲ್ಕ್

ಪಟೋಲಾ ಸಿಲ್ಕ್

ಆಂಧ್ರಪ್ರದೇಶ, ಗುಜರಾತ್ ಮತ್ತು ಒರಿಸ್ಸಾದಲ್ಲಿ ಈ ಪ್ರಕಾರದ ಸೀರೆ ಹೆಚ್ಚು ಪ್ರಸಿದ್ಧವಾಗಿದೆ. ಪಟೋಲಾ ಸಿಲ್ಕ್ ಸೀರೆಯಿಂದ ವರಮಹಾಲಕ್ಷ್ಮಿ ದೇವಿಯ ಅಲಂಕಾರವನ್ನು ಮಾಡಿ ದೇವಿಯನ್ನು ನಿಮಗೆ ಸಂತೃಪ್ತಿಗೊಳಿಸಬಹುದಾಗಿದೆ. ಕೆಂಪು ಬಣ್ಣದ ಪಟೋಲಾ ಸೀರೆ ದೇವಿಗೆ ಉಡಿಸಲು ಅತ್ಯುತ್ತಮ ಎಂದೆನಿಸಿದೆ. ಹೀಗೆ ಬೇರೆ ಬೇರೆ ಪ್ರಕಾರದ ಸೀರೆಗಳನ್ನು ದೇವಿಗೆ ಉಡಿಸಲು ನಿಮಗೆ

ಆಯ್ಕೆಮಾಡಿಕೊಳ್ಳಬಹುದಾಗಿದೆ. ಲಕ್ಷ್ಮೀಯನ್ನು ಅಲಂಕರಿಸಲು ಯಾವುದೇ ಬಗೆಯ ಸೀರೆಯನ್ನು ನಿಮಗೆ ಆರಿಸಬಹುದಾಗಿದೆ. ಇದರ ಜೊತೆಗೆ ಶ್ರದ್ಧೆ ಭಕ್ತಿಯಿಂದ ದೇವಿಯ ಪೂಜೆಯನ್ನು ನೀವು ಮಾಡಬೇಕು.

English summary

Varalakshmi Vratha 2021: How to Drape Saree for Varalakshmi Pooja in Kannada

In the Hinduism, the gods and goddesses are regarded as the near and dear ones. If all the goddesses are regarded as a mother figure, Lord Shiva is considered to be the father. Lord Vishnu is regarded as the best friend, as a lover, as a protector and so on. When you find your dear ones in the form of gods and goddesses, you want them to happy and hence you may offer them several things, in order to please them.
X
Desktop Bottom Promotion