ದೀಪಾವಳಿ ವಿಶೇಷ: ಲಕ್ಷ್ಮೀ ಪೂಜೆ ಹೀಗಿರಲಿ, ಸಕಲ ಸಂಕಷ್ಟಗಳು ನಿವಾರಣೆಯಾಗಲಿದೆ

By: Jaya subramanya
Subscribe to Boldsky

ಲಕ್ಷ್ಮೀ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂಬುದಾಗಿ ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಸಂಪತ್ತಿನ ದೇವತೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿದ್ದು, ಈಕೆಯನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಸಿರಿ ಮನೆಯಲ್ಲಿ ವೃದ್ಧಿಯಾಗುತ್ತದೆ ಎಂಬುದು ನಂಬಿಕೆಯಾಗಿದೆ. ಮೋಹ ಮತ್ತು ಮಾಯೆಯ ಬಂಧನದಲ್ಲಿರುವವರು ಲಕ್ಷ್ಮೀಯನ್ನು ಪೂಜಿಸುವುದರಿಂದ ಮುಕ್ತಿ ದೊರಕುತ್ತದೆ ಎಂಬ ಪ್ರತೀತಿ ಕೂಡ ಇದೆ. ಈಕೆಯನ್ನು ಪೂಜಿಸುವುದು ಮುಕ್ತಿಗೆ ದಾರಿಯನ್ನು ಕಲ್ಪಿಸುತ್ತದೆ ಎಂಬುದಾಗಿದೆ.

ಲಕ್ಷ್ಮೀ ದೇವಿಯನ್ನು ನಿಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುವುದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಗೊಳ್ಳಲಿದೆ. ನಿಮ್ಮ ಸಕಲ ಸಂಕಷ್ಟಗಳು ನಿವಾರಣೆಯಾಗಿ ಧನ ಕನಕವನ್ನು ನೀವು ಪಡೆದುಕೊಳ್ಳಬಹುದು. ನಿಮ್ಮ ಮನೆಯಲ್ಲಿ ದೇವಿಯನ್ನು ಬರಮಾಡಿಕೊಳ್ಳುವುದು ಹೇಗೆ ಎಂಬುದು ತಿಳಿದಿರದಿದ್ದಲ್ಲಿ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ...

ಪೂಜಾ ಕೊಠಡಿಯಲ್ಲಿ ಶ್ರೀ ಯಂತ್ರ ಸ್ಥಾಪಿಸುವುದು

ಪೂಜಾ ಕೊಠಡಿಯಲ್ಲಿ ಶ್ರೀ ಯಂತ್ರ ಸ್ಥಾಪಿಸುವುದು

ಹಿಂದೂ ಧರ್ಮದಲ್ಲಿ ಬೇರೆ ಬೇರೆ ಪ್ರಕಾರದ ಯಂತ್ರಗಳನ್ನು ಬಳಸಲಾಗುತ್ತದೆ ಅಂತೆಯೇ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಕೂಡ ಈ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಶ್ರೀ ಯಂತ್ರಕ್ಕಿಂತ ಹೆಚ್ಚು ಪ್ರಭಾವಶಾಲಿಯಾದ ಮತ್ತೊಂದು ಯಂತ್ರವಿಲ್ಲ. ನಿಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಈ ಯಂತ್ರವನ್ನು ಇರಿಸಿ. ನೀವು ಸರಿಯಾದ ಅನುಷ್ಠಾನಗಳನ್ನು ಅನುಸರಿಸಿದಲ್ಲಿ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುವುದು ಖಂಡಿತ.

ಕಮಲದ ದಳ

ಕಮಲದ ದಳ

ಲಕ್ಷ್ಮೀ ದೇವಿಗೆ ತಾವರೆ ಯಾ ಕಮಲ ಎಂದರೆ ಹೆಚ್ಚು ಪ್ರೀತಿ. ತಾವರೆಯ ಮೇಲೆ ಆಕೆ ವಿರಾಜಮಾನರಾಗಿದ್ದಾರೆ. ಕಮಲದ ಹೂವು ಸಂಪತ್ತಿನ ಪ್ರತೀಕವಾಗಿದೆ. ಪೂಜಾ ಕೊಠಡಿಯಲ್ಲಿ ಈ ಹೂವನ್ನು ಇರಿಸಿಕೊಂಡು ಲಕ್ಷ್ಮೀ ಮಂತ್ರವನ್ನು ಪಠಿಸಿ. ಇದರಿಂದ ದೇವಿಯ ಮನಸ್ಸು ಪ್ರಸನ್ನಗೊಳ್ಳುತ್ತದೆ ಮತ್ತು ಆಕೆಯಲ್ಲಿ ನಿಮ್ಮ ಕುರಿತಾಗಿ ದಯೆ ಕರುಣೆ ಉಂಟಾಗುತ್ತದೆ.

ನಿಮ್ಮ ಮನೆಯಲ್ಲಿ ಮೋತಿ ಶಂಖವನ್ನು ಇರಿಸುವುದು

ನಿಮ್ಮ ಮನೆಯಲ್ಲಿ ಮೋತಿ ಶಂಖವನ್ನು ಇರಿಸುವುದು

ಮುತ್ತುಗಳಿಂದ ಮಾಡಿದ ಶಂಖವಾಗಿದೆ. ಇದು ಹೆಚ್ಚು ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಂಡಿವೆ. ಇದು ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವಲ್ಲಿ ಸಹಾಯ ಮಾಡಲಿದೆ. ಶುದ್ಧವಾದ ಕೆಂಪು, ಹಳದಿ ಅಥವಾ ಬಿಳಿ ಬಟ್ಟೆಯ ಮೇಲೆ ಈ ಶಂಖವನ್ನು ಇರಿಸಬೇಕು

ತುಪ್ಪದ ದೀಪವನ್ನು ಹಚ್ಚಿ

ತುಪ್ಪದ ದೀಪವನ್ನು ಹಚ್ಚಿ

ಲಕ್ಷ್ಮೀ ದೇವಿಯು ಶುಭ ಮತ್ತು ಸಂತಸದ ಭವಿಷ್ಯಕ್ಕೆ ಕಾರಣೀಭೂತರಾಗಿದ್ದಾರೆ. ನಿಮ್ಮ ಪೂಜಾ ಮನೆಯಲ್ಲಿ ಲಕ್ಷ್ಮೀ ದೇವಿಯ ಮೂರ್ತಿಯನ್ನು ಇರಿಸಿಕೊಳ್ಳಿ. ತುಪ್ಪದ ದೀಪವನ್ನು ಬೆಳಗ್ಗೆ ಮತ್ತು ಸಂಜೆಗೆ ದೇವಿಗೆ ಹಚ್ಚಿ. ನಿಮ್ಮ ಮನೆಯಲ್ಲಿ ತುಳಸಿ ಗಿಡವಿದ್ದರೆ ತುಳಸಿ ಕಟ್ಟೆಗೂ ದೀಪವನ್ನು ಹಚ್ಚಿ.

ಸಮುದ್ರದ ಚಿಪ್ಪುಗಳು ಮತ್ತು ಕವಚಗಳನ್ನು ಇರಿಸಿ

ಸಮುದ್ರದ ಚಿಪ್ಪುಗಳು ಮತ್ತು ಕವಚಗಳನ್ನು ಇರಿಸಿ

ನಿಮ್ಮ ಮನೆಯಲ್ಲಿ ಪೂಜಾ ಸ್ಥಳದಲ್ಲಿ ಕವರಿಗಳು ಮತ್ತು ಸಮುದ್ರದ ಚಿಪ್ಪುಗಳನ್ನು ಇರಿಸಿ. ಸಕಾರಾತ್ಮಕ ಶಕ್ತಿಯನ್ನು ನಿಮ್ಮ ಮನೆಯೊಳಗೆ ಸೆಳೆಯುವಲ್ಲಿ ಇದು ಸಹಾಯ ಮಾಡುತ್ತದೆ. ಇವುಗಳು ಸಂಪತ್ತಿನ ಒಂದು ರೂಪವಾಗಿದೆ ಮತ್ತು ನಿಮ್ಮ ಮನೆಯಲ್ಲಿ ಅವುಗಳನ್ನು ಇಟ್ಟುಕೊಳ್ಳುವುದರಿಂದ ಹೆಚ್ಚಿನ ಸಂಪತ್ತಿನ ಆಗಮನವಾಗುತ್ತದೆ. ಇದು ವಾತಾವರಣವನ್ನು ಆಧ್ಯಾತ್ಮಿಕವಾಗಿರಿಸುತ್ತದೆ.

ಲಕ್ಷ್ಮಿ ದೇವಿಯನ್ನು ಪೂಜಿಸಲು ತೆಂಗಿನಕಾಯಿ ಬಳಸಿ

ಲಕ್ಷ್ಮಿ ದೇವಿಯನ್ನು ಪೂಜಿಸಲು ತೆಂಗಿನಕಾಯಿ ಬಳಸಿ

ತೆಂಗಿನಕಾಯಿ ಒಂದು ಮಂಗಳಕರವಾದ ವಸ್ತುವಾಗಿದೆ. ಅದು ಶ್ರೀ ಪಲ್ ಎಂದು ಕರೆಯಲ್ಪಡುವ ಮಂಗಳಕರ ಸಂಗತಿಯನ್ನು ಇದು ಹೊಂದಿದೆ. ಪೂಜಿಸುವ ಎಲ್ಲಾ ದೇವತೆಗಳಿಗೆ ಇದನ್ನು ಅರ್ಪಿಸಲಾಗುತ್ತದೆ.ಲಕ್ಷ್ಮಿಯ ದೇವತೆಗೆ ತೆಂಗಿನಕಾಯಿಯನ್ನು ಪ್ರತಿದಿನ ಸಲ್ಲಿಸುವುದು ಮನೆಗೆ ಒಳ್ಳೆಯದನ್ನು ಮಾಡುತ್ತದೆ.

ನೀವು ಮಾಡಬೇಕಾದ ಪ್ರಮುಖ ಕಾರ್ಯಗಳು

ನೀವು ಮಾಡಬೇಕಾದ ಪ್ರಮುಖ ಕಾರ್ಯಗಳು

ಕರುಣೆ, ಪ್ರೀತಿ ಮತ್ತು ಒಳ್ಳೆಯತನವು ದೇವಿಯನ್ನು ಮನೆಗೆ ಆಹ್ವಾನಿಸುವಲ್ಲಿ ಮುಖ್ಯವಾದುದು. ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಮುಖ್ಯವಾಗಿದೆ. ಮನೆ ಕೊಳಗಾಗಿದ್ದರೆ ಅಲ್ಲಿ ದೇವರು ಇರುವುದಿಲ್ಲ.ಮನೆಯಲ್ಲಿ ಶಾಂತಿ, ನೆಮ್ಮದಿಗಳು ತುಂಬಿರಲಿ. ಜಗಳ, ಕೋಪವಿರುವ ಮನೆಯಲ್ಲಿ ಆಕೆ ನೆಲೆಸುವುದಿಲ್ಲ.ನಿಮ್ಮ ಮನೆಯಲ್ಲಿರುವ ಮಹಿಳೆಯನ್ನು ಅಸಂತೋಷಗೊಳಿಸಬೇಡಿ. ನಿಮ್ಮ ಮನೆಯಲ್ಲಿರುವ ಮಹಿಳೆ ಸಂತುಷ್ಟರಾಗಿರದಿದ್ದರೆ, ಲಕ್ಷ್ಮೀ ಮಾತೆ ಕೂಡ ಸಂತಸವಾಗಿರುವುದಿಲ್ಲ.

ಪ್ರಾತಃ ಕಾಲದಲ್ಲಿ ಎದ್ದು, ಸೂರ್ಯಾಸ್ತದ ನಂತರವೇ ನಿದ್ದೆ ಮಾಡಿ.

ನೀವು ಅಡುಗೆ ಮಾಡುವಾಗ ಅಡುಗೆಯ ರುಚಿ ನೋಡಬೇಡಿ.ಸ್ನಾನದ ನಂತರ ದೇವಿಗೆ ಆಹಾರವನ್ನು ಅರ್ಪಿಸಿದ ನಂತರವೇ ಸ್ನಾನ ಮಾಡಿ.ಶುಭದಿನಗಳನ್ನು ಗೌರವಿಸಿ. ಶುಕ್ರವಾರ ಮತ್ತು ದೀಪಾವಳಿಯ ದಿನಗಳು ಲಕ್ಷ್ಮೀ ದೇವಿಗೆ ಮುಖ್ಯವಾಗಿದೆ. ಈ ದಿನಗಳಲ್ಲಿ ದೇವಿಯ ಪೂಜೆಯನ್ನು ತಪ್ಪದೆ ಮಾಡಿ.

ದೀಪಾವಳಿಯಂದು ನೀವು ಮಾಡಬೇಕಾದ ಮತ್ತು ಮಾಡಲೇಬಾರದ ಕಾರ್ಯಗಳು

ದೀಪಾವಳಿಯಂದು ನೀವು ಮಾಡಬೇಕಾದ ಮತ್ತು ಮಾಡಲೇಬಾರದ ಕಾರ್ಯಗಳು

ಮನೆಯ ಸದಸ್ಯರ ಸಮ್ಮುಖದಲ್ಲಿ ದೇವಿಗೆ ಆರತಿಯನ್ನು ಮಾಡಬೇಕು. ದೇವಿಯ ಆಶಿರ್ವಾದವನ್ನು ಮನೆಯ ಎಲ್ಲಾ ಸದಸ್ಯರು ಪಡೆದುಕೊಂಡಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಮನೆಯಲ್ಲಿ ಶಾಂತಿ ನೆಲೆಗೊಂಡಿರಲಿ. ದೇವಿಗೆ ಗದ್ದಲದ ವಾತಾವರಣ ಇಷ್ಟವಾಗುವುದಿಲ್ಲ.

ಆರತಿಯನ್ನು ಬೆಳಗುವಾಗ ಕೈಯಿಂದ ಚಪ್ಪಳೆಯನ್ನು ಹೊಡೆಯಬೇಡಿ. ಘಂಟಾನಾದವನ್ನು ಮೊಳಗಿಸಿಕೊಂಡು ಪೂಜೆಯನ್ನು ನಡೆಸಿ.ಆರತಿ ಮುಗಿದ ಕೂಡಲೇ ಪಟಾಕಿ ಸುಡಬೇಡಿ.

English summary

How to Invite Goddess Lakshmi into your Home

Diwali is a very auspicious time for Lakshmi Pooja and to invite Goddess Lakshmi into your home. There are certain things that you can do to make sure that Goddess Lakshmi is welcome at your home. Read on to know more.
Story first published: Wednesday, October 11, 2017, 23:46 [IST]
Subscribe Newsletter