ದೈವೀ ಸ್ವರೂಪಗಳ ಕಥೆಗಳನ್ನು ಒಳಗೊಂಡ 'ಹೋಳಿ' ಹಬ್ಬದ ಹಿನ್ನೆಲೆ

Posted By: Deepu
Subscribe to Boldsky

ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಬರಲಿದೆ, ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ.

ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಪ್ರೀತಿ, ಸಂತಸ ಮತ್ತು ಸಹೋದರತ್ವದ ಪಾಠವನ್ನು ಬಣ್ಣಗಳ ಹಬ್ಬ ಹೋಳಿ ತಿಳಿಸುತ್ತದೆ. ಬಣ್ಣಗಳೊಂದಿಗೆ ಓಕುಳಿಯಾಡುತ್ತಾ ಸರ್ವ ಮತಬೇಧಗಳನ್ನು ಮರೆತು ರಂಗಿನಾಟದಲ್ಲಿ ನಾವು ಸಂಪೂರ್ಣ ಮೈಮರೆಯುತ್ತೇವೆ. ಈ ಹಬ್ಬದಂದು ಬಾಂಗ್‌ನಂತಹ ಪಾನೀಯವನ್ನು ಸೇವಿಸಿ ಉನ್ಮತ್ತರಾಗಿ ಹಬ್ಬದಲ್ಲಿ ಇನ್ನಷ್ಟು ತಲ್ಲೀನತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಕೂಡ ಚಾಲ್ತಿಯಲ್ಲಿದೆ.

'ಹೋಳಿ ಹಬ್ಬದ' ಭರದಲ್ಲಿ ಬಣ್ಣ ಕಣ್ಣಿಗೆ ಹೋಗದಂತೆ ನೋಡಿಕೊಳ್ಳಿ!

ಅಂತೆಯೇ ಪ್ರತಿಯೊಂದು ಹಬ್ಬಗಳಂತೆ ಹೋಳಿ ಹಬ್ಬವೂ ಪುರಾಣ ಕಥೆಯನ್ನು ಹೊಂದಿದೆ. ಹೋಳಿ ಹಬ್ಬದ ಆಚರಣೆಯ ಹಿಂದೆ ಕೆಲವು ಕಾರಣಗಳಿದ್ದು ದೈವೀ ಸ್ವರೂಪಗಳ ಮಹತ್ವತೆಯನ್ನು ಈ ಹಬ್ಬವು ಒಳಗೊಂಡಿದೆ. ಹಿರಣ್ಯಕಶಿಪು ಮತ್ತು ಆತನ ಸಹೋದರಿ ಹೋಲಿಕಾಳಿಂದ ತನ್ನ ಭಕ್ತನನ್ನು ಕಾಪಾಡುವ ಶ್ರೀಮನ್ನಾರಾಯಣನ ದೈವೀ ಮಹಿಮೆ ಅಂತೆಯೇ ಶಿವ ಪಾರ್ತಿಯರ ಸಮ್ಮಿಲನಕ್ಕಾಗಿ ತನ್ನ ದೇಹವನ್ನೇ ಸುಟ್ಟು ಭಸ್ಮ ಮಾಡಿದ ಕಾಮದೇವನ ತ್ಯಾಗದ ಮಹಿಮೆಯನ್ನು ಹೋಳಿಯಂದು ಜನರು ಕೊಂಡಾಡುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ಹೋಳಿ ಹಬ್ಬದ ಪ್ರಾಮುಖ್ಯತೆ ಮತ್ತು ಅದರ ಮಹತ್ವವನ್ನು ನಾವು ಅರಿಯಲಿದ್ದು ಇದು ಭಾರತದಲ್ಲಿ ಏಕೆ ಇಷ್ಟೊಂದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಎಂಬುದನ್ನು ಕಂಡುಕೊಳ್ಳೋಣ.... 

ಹೋಲಿಕಾನ ಕಥೆ

ಹೋಲಿಕಾನ ಕಥೆ

ರಾಕ್ಷಸ ರಾಜ ಹಿರಣ್ಯಕಶಿಪುವಿನ ತಂಗಿಯಾದ ಹೋಲಿಕಾನ ಕಥೆ ಎಲ್ಲರಿಗೂ ತಿಳಿದಿದೆ. ತನ್ನ ಸೋದರಳಿಯ ಪ್ರಹ್ಲಾದನನ್ನು ಸಾಯಿಸಲು ಪ್ರಯತ್ನಿಸಿದ ಆಕೆ ಸ್ವತಃ ಅಗ್ನಿಗೆ ಆಹುತಿಯಾದಳು. ಅಲ್ಲಿಂದೀಚೆಗೆ ಹೋಲಿಕಾ ದಹನವೆಂಬ ಆಚರಣೆ ಚಾಲ್ತಿಗೆ ಬಂದಿತು.

ಹೋಲಿಕಾ ದಹನ

ಹೋಲಿಕಾ ದಹನ

ಹೋಳಿಯ ನಿಜವಾದ ಹಬ್ಬ ಆರಂಭಗೊಳ್ಳುತ್ತಿದ್ದಂತೆ, ಜನರು ಹೋಲಿಕಾ ದಹನಕ್ಕಾಗಿ ಒಟ್ಟು ಸೇರುತ್ತಾರೆ. ಹೋಳಿ ಹಬ್ಬದ ಸಂಜೆ ಹೋಲಿಕಾ ದಹನವನ್ನು ಏರ್ಪಡಿಸಲಾಗುತ್ತದೆ. ದುಷ್ಟತೆಯ ವಿರುದ್ಧ ಒಳ್ಳೆಯ ಅಂಶಗಳ ಗೆಲುವೆಂಬ ನೀತಿ ಹೋಲಿಕಾ ದಹನದಲ್ಲಿ ಸಮ್ಮಿಳಿತವಾಗಿದೆ. ಬೆಂಕಿಯು ತನ್ನ ಕೆನ್ನಾಲಿಗೆಯನ್ನು ಚಾಚಿ ಪ್ರಖರವಾಗಿ ಉರಿಯಲು ಪ್ರಾರಂಭಗೊಳ್ಳುತ್ತಿದ್ದಂತೆ ದೀಪೋತ್ಸವದ ಸುತ್ತ ನೆರೆದಿದ್ದ ಜನರು ಹಾಡುಗಳನ್ನು ಹಾಡಲು ಪ್ರಾರಂಭಿಸುತ್ತಾರೆ.

ಬಣ್ಣಗಳೊಂದಿಗೆ ಆಟವಾಡುವುದು

ಬಣ್ಣಗಳೊಂದಿಗೆ ಆಟವಾಡುವುದು

ಹೋಳಿಯ ಬೆಳಿಗ್ಗೆ ಸಾಮಾನ್ಯ ಪೂಜೆಯನ್ನು ಏರ್ಪಡಿಸಲಾಗುತ್ತದೆ. 'ಅಬೀರ್' ಅಥವಾ 'ಗುಲಾಲ್' ಅನ್ನು ಮನೆಯ ದೇವರ ಪಾದಗಳಗೆ ಹಚ್ಚುತ್ತಾರೆ. ನಂತರ ಯುವಕರು ಗುಲಾಲ್ ಅನ್ನು ಮನೆಯ ಹಿರಿಯರಿಗೆ ಪಾದಗಳಿಗೆ ಹಚ್ಚಿ ಅವರ ಆಶಿರ್ವಾದವನ್ನು ಪಡೆದು ಕೊಳ್ಳಬೇಕಾಗುತ್ತದೆ. ಅದರ ನಂತರವೇ ಪ್ರತಿಯೊಬ್ಬರೂ ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುತ್ತಾರೆ. ವಿವಿಧ ಬಣ್ಣಗಳಿಂದ ಜನರು ಮುಳುಗೇಳುತ್ತಾರೆ ಹೀಗೆ ಹಬ್ಬದ ಸಂಭ್ರಮ ಮುಂದುವರಿಯುತ್ತದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ

ಹಿಂದೂ ಧರ್ಮಗ್ರಂಥಗಳ ಪ್ರಕಾರ

ಹಿಂದೂ ಧರ್ಮಗ್ರಂಥಗಳ ಪ್ರಕಾರ ಹಿರಣ್ಯಕಶಿಪು ರಾಕ್ಷಸರಾಜನಾಗಿದ್ದು ಬ್ರಹ್ಮನನ್ನು ಮೆಚ್ಚಿಸಿ ವರವನ್ನು ಪಡೆದುಕೊಂಡ ಅಸುರನಾಗಿದ್ದ. ಜನರು ತನ್ನನ್ನು ಪೂಜಿಸಬೇಕು ಮತ್ತು ತನ್ನ ಸಹೋದರ ಹಿರಣ್ಯಾಕ್ಷನ ಅಂತ್ಯಕ್ಕೆ ಕಾರಣನಾದ ವಿಷ್ಣುವನ್ನು ಸಂಹರಿಸಬೇಕೆಂಬ ಹೆಬ್ಬಯಕೆಯನ್ನು ಹಿರಣ್ಯಕಶಿಪು ಹೊಂದಿದ್ದ.

ಪ್ರಹ್ಲಾದನ ಮೇಲೆ ಸೇಡು...

ಪ್ರಹ್ಲಾದನ ಮೇಲೆ ಸೇಡು...

ಹಿರಣ್ಯಕಶಿಪುವಿಗೆ ಹೆದರಿ ಆತನ ಆಳ್ವಿಕೆಯಲ್ಲಿದ್ದ ಜನರು ಅವನನ್ನು ಪೂಜಿಸಲು ಆರಂಭಿಸುತ್ತಾರೆ. ಆದರೆ ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದ ನಾರಾಯಣ ಭಕ್ತನಾಗಿರುತ್ತಾನೆ. ವಿಷ್ಣುವಿನ ಅಪರಾವತಾರವಾದ ನಾರಾಯಣನ ಭಕ್ತನಾಗಿದ್ದ ಪ್ರಹ್ಲಾದನನ್ನು ಕೊಲ್ಲಲು ಹಿರಣ್ಯಕಶಿಪು ಹಲವು ಸಲ ಪ್ರಯತ್ನಪಡುತ್ತಾನೆ ಆದರೆ ತನ್ನ ಭಕ್ತನಿಗೆ ಕೂದಲೆಳೆಯ ಅಪಾಯವೂ ತಗುಲದಂತೆ ಶ್ರೀಮನ್ನಾರಾಯಣನು ಪ್ರಹ್ಲಾದನನ್ನು ಕಾಪಾಡುತ್ತಾನೆ.

ಪ್ರಹ್ಲಾದನ ಮೇಲೆ ಸೇಡು...

ಪ್ರಹ್ಲಾದನ ಮೇಲೆ ಸೇಡು...

ಆದರೆ ಎಷ್ಟುಬಾರಿ ಸಾಯಿಸಲು ಪ್ರಯತ್ನಿಸಿದರೂ, ಮರಣ ಹೊಂದದ ಪ್ರಹ್ಲಾದನನ್ನು ಕೊಲ್ಲಿಸುವುದಕ್ಕಾಗಿ ಹಿರಣ್ಯಕಶಿಪು ತನ್ನ ಸಹೋದರಿ ಹೋಲಿಕಾಳ ನೆರವನ್ನು ಪಡೆಯುತ್ತಾನೆ. ಹೋಲಿಕಾ ಬೆಂಕಿಯಲ್ಲಿ ಧಹಿಸದೇ ಇರುವ ವರವನ್ನು ಪಡೆದುಕೊಂಡಿರುತ್ತಾಳೆ. ಉಪಾಯದಿಂದ ತನ್ನ ಸೋದರಳಿಯ ಪ್ರಹ್ಲಾದನನ್ನು ಚಿತೆಯ ಮೇಲೆ ತನ್ನೊಂದಿಗೆ ಕುಳಿತುಕೊಳ್ಳುವಂತೆ ಹೋಲಿಕಾ ಮಾಡುತ್ತಾಳೆ. ಪ್ರಹ್ಲಾದನಿಗೆ ಈ ಷಡ್ಯಂತ್ರದ ಅರಿವಾಗುತ್ತದೆ ಆದರೆ ದೃಢಚಿತ್ತದಿಂದ ಹೆದರದೇ ಶ್ರೀಮನ್ನಾರಾಯಣನ ನಾಮಸ್ಮರಣೆಯನ್ನು ಮಾಡುತ್ತಾನೆ. ಚಿತೆಗೆ ಬೆಂಕಿಯನ್ನು ನೀಡಿದೊಡನೆ ಅದು ಉರಿಯಲು ಆರಂಭವಾಗುತ್ತದೆ. ಬೆಂಕಿಯಲ್ಲಿ ಸುಡದೇ ಇರುವ ಹೋಲಿಕಾ ತಾನು ಪಡೆದುಕೊಂಡ ವರದಿಂದಲೇ ಸಾವನ್ನು ಹೊಂದುತ್ತಾಳೆ. ಒಬ್ಬ ವ್ಯಕ್ತಿಯು ಬೆಂಕಿಯನ್ನು ಪ್ರವೇಶಿಸಿದಾಗ ಮಾತ್ರವೇ ತನ್ನ ವರ ಫಲಿಸುವುದು ಎಂಬುದನ್ನು ಆಕೆ ಮರೆತಿರುತ್ತಾಳೆ. ನಂತರ ನರಸಿಂಹನ ರೂಪವನ್ನು ತಾಳಿ ಹಿರಣ್ಯಕಶಿಪುವನ್ನು ವಿಷ್ಣುವು ಸಂಹರಿಸುತ್ತಾನೆ. ಬೆಂಕಿಯಲ್ಲಿ ಹೋಲಿಕಾ ಧಹಿಸಿದ ನಂತರ ಈ ಹಬ್ಬಕ್ಕೆ ಹೋಳಿ ಹೆಸರನ್ನು ಇಡಲಾಯಿತು ಎಂಬುದು ಪ್ರತೀತಿಯಲ್ಲಿದ್ದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಎಂಬ ಅಚರಣೆಯನ್ನು ಹೋಳಿ ಇಲ್ಲಿ ಪ್ರತನಿಧಿಸುತ್ತದೆ.

ಕಾಮದೇವ ಮತ್ತು ಶಿವ ದೇವರು

ಕಾಮದೇವ ಮತ್ತು ಶಿವ ದೇವರು

ಪ್ರೇಮದ ಅಧಿದೇವತೆ ಎಂದೇ ಖ್ಯಾತಿವೆತ್ತಿರುವ ಕಾಮದೇವನೂ ಕೂಡ ಹೋಳಿ ಹಬ್ಬಕ್ಕೆ ಪುರಾಣ ಹಿನ್ನಲೆಯನ್ನು ಒದಗಿಸಿದ್ದಾನೆ. ಪತ್ನಿ ದಾಕ್ಷಾಯಿಣಿಯ ಮರಣದ ನಂತರ ಶಿವನು ದೀರ್ಘ ತಪಸ್ಸನ್ನು ಆಚರಿಸುತ್ತಾನೆ. ಆದರೆ ಶಿವನನ್ನೇ ತನ್ನ ಪತಿಯಾಗಿ ಸ್ವೀಕರಿಸಬೇಕೆಂಬ ಇಚ್ಛೆಯನ್ನು ಹೊಂದಿ ಮರುಜನ್ಮವನ್ನು ಪಡೆದಿದ್ದ ದಾಕ್ಷಾಯಿಣಿಯು ಪಾರ್ವತಿಯ ರೂಪದಲ್ಲಿ ಘೋರ ತಪಸ್ಸನ್ನು ಮಾಡುತ್ತಿರುತ್ತಾಳೆ.

ಕಾಮದೇವ ಮತ್ತು ಶಿವ

ಕಾಮದೇವ ಮತ್ತು ಶಿವ

ದೇವರು ಶಿವನಿಗೆ ಇದರ ಅರಿವಿರುವುದಿಲ್ಲ ಏಕೆಂದರೆ ಆತ ಘೋರ ತಪ್ಪಸ್ಸಿನಲ್ಲಿರುತ್ತಾನೆ. ಇದನ್ನರಿತ ಬ್ರಹ್ಮನು ಶಿವನ ತಪೋಭಂಗವನ್ನು ಮಾಡಲು ಕಾಮದೇವನನ್ನು ಕಳುಹಿಸುವ ಯೋಜನೆಯನ್ನು ಸಿದ್ಧಪಡಿಸುತ್ತಾನೆ. ಕಾಮದೇವನು ದಕ್ಷಿಣ ತಂಗಾಳಿಯಲ್ಲಿ ನಂದಿನಿಯ ಮೂಲಕ ಹಾದು ಹೋಗಿ ಶಿವನ ನಿವಾಸವನ್ನು ಪ್ರವೇಶಿಸುತ್ತಾನೆ. ಹೂಗಳ ಬಾಣವನ್ನು ಧ್ಯಾನಸ್ಥಿತಿಯಲ್ಲಿರುವ ಶಿವನ ಮೇಲೆ ಮದನನು ಹೂಡುತ್ತಾನೆ. ಇದರಿಂದ ತಪೋಭಂಗಗೊಂಡ ಶಿವನು ಕ್ರೋಧನಾಗಿ ಮೂರನೆಯ ಕಣ್ಣಿನಿಂದ ಕಾಮದೇವನನ್ನು ಸುಟ್ಟು ಭಸ್ಮ ಮಾಡುತ್ತಾನೆ. ಕಾಮದೇವನನ್ನು ಶಿವನು ಹೋಳಿಯಂದೇ ಭಸ್ಮ ಮಾಡಿರುವುದಾಗಿ ಪ್ರತೀತಿ ಇದ್ದು ಜನರು ಕಾಮದೇವನ ದೇಹತ್ಯಾಗವನ್ನು ಕೊಂಡಾಡುತ್ತಾ ಹೋಳಿ ಹಬ್ಬವನ್ನು ಆಚರಿಸುತ್ತಾರೆ.

English summary

Holi: Story Behind The Festival Of Colours

As we celebrate Holi this year, lets take a look into our mythology. The stories that revolve around this festival are quite intriguing. There is the story of the demon king Hiranyakashipu, his equally evil sister Holika and how Lord Vishnu saved his ardent devotee from them. Then there is the Hindu God of Love playing cupid with none other than the most fiercest of God's, Shiva. You should read them to believe them.