For Quick Alerts
ALLOW NOTIFICATIONS  
For Daily Alerts

ಪೂಜೆಯಲ್ಲಿ ಗಂಟೆನಾದ: ಇದರ ಹಿಂದಿರುವ ವೈಜ್ಞಾನಿಕ ಕಾರಣ ತಿಳಿದಿರೆ ನೀವು ಅಚ್ಚರಿಗೊಳ್ಳುವಿರಿ

|

ದೇವಾಸ್ಥಾನಕ್ಕೆ ಹೋದಾಗ ಅಲ್ಲಿ ಗಂಟೆಯ ನಾದ ಕಿವಿಗೆ ಬೀಳುತ್ತಿದ್ದಂತೆ ಭಕ್ತಿಯ ಭಾವದಲ್ಲಿ ಮುಳುಗಿ ಹೋಗುತ್ತೀರಿ. ಗಂಟೆ ನಾದ ಕಿವಿಗೆ ಬೀಳುತ್ತಿದ್ದಂತೆ ಮೈಯೆಲ್ಲಿ ಏನೋ ಒಂದು ಬಗೆಯ ರೋಮಾಂಚನ ಉಂಟಾಗುವುದು. ನಮಗರಿಯದೇ ಕಣ್ಣು ಮುಚ್ಚಿ ಹಾಗೇ ಪ್ರಾರ್ಥನೆ ಮಾಡಲಾರಂಭಿಸುತ್ತೇವೆ ಅಲ್ಲವೇ?

ಗಂಟೆಗೆ ಅಂಥದ್ದೊಂದು ಶಕ್ತಿಯಿದೆ. ಗಂಟೆ ಶಬ್ದ ಮಾತ್ರ ಕಿವಿಗೆ ಬೀಳುತ್ತಿದ್ದರೆ ಬೇರೆಲ್ಲಾ ಹೊರಗಿನ ಶಬ್ದಗಳ ಕೇಳಿಸುವುದಿಲ್ಲ, ನಮ್ಮ ಮನಸ್ಸು ಏಕಾಗ್ರತೆಯಿಂದ ದೇವರ ಸ್ಮರಣೆಯಲ್ಲಿ ತೊಡಗಿಕೊಳ್ಳುವುದು. ಈ ಲೇಖನದಲ್ಲಿ ದೇವಸ್ಥಾನದಲ್ಲಿ ಹಾಗೂ ಪೂಜೆ ಮಾಡುವಾಗ ಏಕೆ ಗಂಟೆ ಬಾರಿಸಬೇಕು ಎಂದು ತಿಳಿಯೋಣ:

ಪೂಜೆಯಲ್ಲಿ ಗಂಟೆ ನಾದದ ಮಹತ್ವ

ಪೂಜೆಯಲ್ಲಿ ಗಂಟೆ ನಾದದ ಮಹತ್ವ

ಗಂಟೆಯನ್ನು ಪಂಚ ಲೋಹ ಅಥವಾ ಹಿತ್ತಾಳೆಯಿಂದ ತಯಾರಿಸಲಾಗುವುದು. ಗಂಟೆ ಬಾರಿಸಿದಾಗ ಎರಡು ಲೋಹಗಳು ಪರಸ್ಪರ ಒಂದಕ್ಕೊಂದು ಡಿಕ್ಕಿ ಹೊಡೆದು ಕಿವಿಗೆ ಇಂಪಾದ ಶಬ್ದ ತರಂಗಗಳು ಏರ್ಪಡುತ್ತವೆ. ಈ ಶಬ್ದ ಕಿವಿಗೆ ಬಿದ್ದಾಗ ಹೊರಗಿನ ಪ್ರಪಂಚದ ಕ್ಷಣ ಕಾಲ ಮರೆತು ದೇವರ ಧ್ಯಾನದಲ್ಲಿ ಮಗ್ನರಾಗುತ್ತೇವೆ.

ಮಾನಸಿಕ ಚಿಂತೆ ದೂರಮಾಡುವ ಸಾಮಾರ್ಥ್ಯ ಗಂಟೆ ಶಬ್ದಕ್ಕಿದೆ

ಮಾನಸಿಕ ಚಿಂತೆ ದೂರಮಾಡುವ ಸಾಮಾರ್ಥ್ಯ ಗಂಟೆ ಶಬ್ದಕ್ಕಿದೆ

ಗಂಟೆಯನ್ನು ಬಾರಿಸಿದಾಗ ಓಂಕಾರ ನಾದ ಕೇಳಿಸುವುದು. ಇದು ಕಿವಿಗೆ ಬಿದ್ದಾಗ ನಮ್ಮೆಲ್ಲಾ ಚಿಂತೆಗಳು ದೂರುವಾಗುವುದು, ಆದ್ದರಿಂದ ಗಂಟೆಗೆ ಮಾನಸಿಕ ಚಿಂತೆ ದೂರ ಮಾಡುವ ಸಾಮಾರ್ಥ್ಯವಿದೆ ಎಂಬುವುದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.

ಶಿವತತ್ತ್ವ ಆಕರ್ಷಿಸುತ್ತದೆ

ಶಿವತತ್ತ್ವ ಆಕರ್ಷಿಸುತ್ತದೆ

ಗಂಟೆಯ ವಿಶಿಷ್ಟ ಆಕಾರವು ಭೂಮಿ ಲಹರಿಯನ್ನು ತನ್ನತ್ತ ಆಕರ್ಷಿಸುತ್ತದೆ. ಗಂಟೆ ಬಾರಿಸಿದಾಗ ಅದರಿಂದ ಉಂಟಾಗುವ ಶಬ್ದದಿಮದ ವಾಯುಮಂಡಲದಲ್ಲಿನ ಲಹರಿಗಳು ಕಂಪನಗೊಳ್ಳುತ್ತವೆ, ಇದರಿಂದ ಉಂಟಾಗುವ ನಾದ ಶಿವತತ್ತ್ವವನ್ನು ಆಕರ್ಷಿಸುತ್ತದೆ. ಗಂಟೆಯ ಶಬ್ದದಿಂದ ಊರ್ಧ್ವದಿಶೆಯಲ್ಲಿ ಕಾರ್ಯಮಾಡುವ ವಾಯು ಮಂಡಲದಲ್ಲಿನ ಲಹರಿಗಳು ಶುದ್ಧವಾಗುತ್ತದೆ. ಸುತ್ತಲಿರುವ ವಾಯು ಮಂಡಲ ಸಾಧನೆಗಾಗಿ ಸಾತ್ತ್ವಿಕವಾಗುತ್ತದೆ. ಆದ್ದರಿಂದಲೇ ಪೂಜೆಯಲ್ಲಿ ಗಂಟೆ ಶಬ್ದ ಹಾಗೂ ಶಂಖ ಶಬ್ದಕ್ಕೆ ತುಂಬಾ ಮಹತ್ವವಿದೆ.

ದುಷ್ಟ ಶಕ್ತಿಗಳನ್ನು ದೂರವಿಡುವ ಗಂಟೆ

ದುಷ್ಟ ಶಕ್ತಿಗಳನ್ನು ದೂರವಿಡುವ ಗಂಟೆ

ಗಂಟೆಯ ನಾಲಗೆಯಲ್ಲಿ ಸರಸ್ವತಿ ದೇವಿ, ಉದರದಲ್ಲಿ ಮಹಾರುದ್ರ, ಮುಖದಲ್ಲಿ ಸೃಷ್ಟಿಕರ್ತ ಬ್ರಹ್ಮ, ಹಿಡಿಯ ಭಾಗದಲ್ಲಿ ಪ್ರಾಣ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ. ಗಂಟೆಯನ್ನು ಬಾರಿಸಿದಾಗ ಅದರಿಂದ ಉಂಟಾಗುವ ಶಬ್ದ ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಹಾಗೂ ಮನಸ್ಸಿನಲ್ಲಿ ಆಧ್ಯಾತ್ಮಿಕ ಭಾವನೆಗಳು ಮೂಡುವುದು, ಮನಸ್ಸು ಪ್ರಶಾಂತವಾಗುವುದು.

ದೇವಸ್ಥಾನ ಮುಂದೆ ಗಂಟೆ ಇಟ್ಟಿರುವ ಉದ್ದೇಶವೇನು?

ದೇವಸ್ಥಾನ ಮುಂದೆ ಗಂಟೆ ಇಟ್ಟಿರುವ ಉದ್ದೇಶವೇನು?

ನಾವು ದೇವಸ್ಥಾನ ಪ್ರವೇಶಿಸುವ ಮುನ್ನ ಗಂಟೆ ಇರುತ್ತದೆ. ದೇವಸ್ಥಾನಗಳು ಶಾಸ್ತ್ರವಾಗಿ ಕಟ್ಟಲಾಗಿರುವ ಶಕ್ತಿಯ ಕೇಂದ್ರಗಳು ಎಂಬುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ದೇವಸ್ಥಾನಕ್ಕೆ ಪ್ರವೇಶ ಮಾಡುವಾಗ ನಮ್ಮ ದೇಹ ಹಾಗೂ ಮನಸ್ಸು ಶುಚಿಯಾಗಿರಬೇಕು. ಆದ್ದರಿಂದಲೇ ದೇವಸ್ಥಾನ ಪ್ರವೇಶಿಸುವ ಮುನ್ನ ಕೈ-ಕಾಲುಗಳಿಗೆ ನೀರು ಹಾಕಿ, ತಲೆಗೆ ನೀರು ಸಿಂಪಡಿಸಿ ದೇವಸ್ಥಾನ ಪ್ರಮುಖ ದ್ವಾರ ಹಾಗೂ ಧ್ವಜ ಸ್ತಂಭಕ್ಕೆ ನಮಸ್ಕರಿಸಿ, ಗಂಟೆಯನ್ನು ಬಾರಿಸಿ ಒಳಗೆ ಪ್ರವೇಶಿಸಿ ದೇವರ ದರ್ಶನ ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

ನಮ್ಮ ಶಾಸ್ತ್ರಗಳು ಹಾಗೂ ಅದರ ಆಚರಣೆಗಳ ಹಿಂದೆ ಎಷ್ಟೊಂದು ಮಹತ್ವಪೂರ್ಣವಾದ ಅಂಶಗಳು ಅಡಗಿದೆ ಅಲ್ಲವೇ?

English summary

Health Benefits Of Temple Bell And Scientific Reason To Use Temple Bell In Pooja

With out temple bell sound no pooja will be perform. Here are health benefits of temple bell and its important in Pooja.
X
Desktop Bottom Promotion