For Quick Alerts
ALLOW NOTIFICATIONS  
For Daily Alerts

ಹನುಮ ಜಯಂತಿ 2020: ಪೂಜಾ ಸಮಯ ಮತ್ತು ಮಹತ್ವ

|

ಇಂದು ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಆಂಜನೇಯನ ದೇವಸ್ಥಾನಗಳಲ್ಲಿ ಮತ್ತು ಭಕ್ತರ ಮನೆಗಳಲ್ಲಿ ಹಬ್ಬದ ವಾತಾವರಣ. ಏಕೆಂದರೆ ಆಂಜನೇಯ, ಹನುಮಾನ್, ವಾನರ ಸೈನ್ಯದ ದೇವರು ಎಂದೆಲ್ಲಾ ಕರೆಸಿಕೊಳ್ಳುವ ರಾಮನ ಬಂಟ ಹನುಮಂತನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಚೈತ್ರ ಮಾಸದ ಹುಣ್ಣಿಮೆಯ ದಿನ ನಮ್ಮ ಭಜರಂಗಬಲಿಯ ಜನುಮ ದಿನ. ಹಾಗಾಗಿ ಶ್ರೀರಾಮನ ಭಕ್ತರು ಮತ್ತು ಹನುಮಂತನ ಭಕ್ತರು ಕೂಡಿ ಸಂತೋಷದಿಂದ ಆಚರಿಸುವ ಹಬ್ಬ ಇದು.

Hanuman Jayanti 2020: Time, Puja vidhi, Significance

ಶ್ರೀರಾಮನಿಗೆ ಒಬ್ಬ ಪ್ರಜ್ಞಾವಂತ ಮತ್ತು ನಿಷ್ಠಾವಂತ ಭಕ್ತ ಯಾರಾದರೂ ಇದ್ದರೆ, ಅದು ನಮ್ಮ ಆಂಜನೇಯ ಮಾತ್ರ. ಹಾಗಾಗಿ ಶಿವನ ಮುಂದೆ ನಂದಿ ಹೇಗೋ ಶ್ರೀರಾಮನ ಮಂದೆ ಹನುಮಂತ ಕೂಡ ಹಾಗೆ. ಭಕ್ತರು ತಮ್ಮ ಸಂಕಷ್ಟಗಳನ್ನು, ದುಃಖ - ದುಮ್ಮಾನಗಳನ್ನು ಶ್ರೀರಾಮನ ಬಳಿ ಪರಿಹರಿಸಿಕೊಳ್ಳಲು ಮೊದಲು ಹನುಮಂತನ ಮೂಲಕವೇ ಬೇಡಿಕೊಳ್ಳಬೇಕು ಎಂಬ ಪ್ರತೀತಿ ಇದೆ.
ಹನುಮ ಜಯಂತಿ 2020: ದಿನಾಂಕ ಮತ್ತು ಸಮಯ

ಹನುಮ ಜಯಂತಿ 2020: ದಿನಾಂಕ ಮತ್ತು ಸಮಯ

ಈ ವರ್ಷದ ದ್ರಿಕಪಂಚಾಂಗವನ್ನು ನೋಡುವುದಾದರೆ, ಹನುಮ ಜಯಂತಿ ಚೈತ್ರ ಪೂರ್ಣಿಮೆಯ ಬುಧವಾರ ಅಂದರೆ ಏಪ್ರಿಲ್ 8, 2020 ರಂದು ಬರುತ್ತದೆ. ಪೂರ್ಣಿಮಾ ತಿಥಿ ಏಪ್ರಿಲ್ 7 ರಂದು ಮಧ್ಯಾಹ್ನ 12.07 ರಿಂದ ಏಪ್ರಿಲ್ 8 ರ ಬೆಳಗ್ಗೆ 8.04 ಕ್ಕೆ ಕೊನೆಗೊಳ್ಳುತ್ತದೆ.

ಪೂರ್ಣಿಮಾ ತಿಥಿ ಪ್ರಾರಂಭದ ಸಮಯ : ಏಪ್ರಿಲ್ 7, 2020 ಮಧ್ಯಾಹ್ನ 12 ಗಂಟೆ 01 ನಿಮಿಷ.

ಪೂರ್ಣಿಮಾ ತಿಥಿ ಮುಕ್ತಾಯದ ಸಮಯ : ಏಪ್ರಿಲ್ 8, 2020 ಬೆಳಗ್ಗೆ 08 ಗಂಟೆ 04 ನಿಮಿಷ.

ಶಕ್ತಿ ಮತ್ತು ಸಾಮರ್ಥ್ಯದ ಸಂಕೇತ ಹನುಮಾನ್

ಶಕ್ತಿ ಮತ್ತು ಸಾಮರ್ಥ್ಯದ ಸಂಕೇತ ಹನುಮಾನ್

ಸೀತೆಯನ್ನು ರಾವಣನಿಂದ ಕಾಪಾಡುವ ಸಮಯದಲ್ಲಿ ಲಂಕೆಯಲ್ಲಿ ನಡೆಯುವ ರಾಮ ಮತ್ತು ರಾವಣರ ಯುದ್ಧದಲ್ಲಿ ರಾಮನ ತಮ್ಮ ಲಕ್ಷ್ಮಣನಿಗೆ ಬಲವಾಗಿ ಪೆಟ್ಟು ಬಿದ್ದು ಬದುಕುವುದೇ ಕಷ್ಟವಾಗುತ್ತದೆ. ಆಗ ಶ್ರೀ ರಾಮನ ಆಣತಿಯಂತೆ ಹಿಮಾಲಯ ಪರ್ವತದ ದ್ರೋಣಗಿರಿ ಬೆಟ್ಟದಲ್ಲಿನ ಸಂಜೀವಿನಿ ಬಳ್ಳಿಯನ್ನು ತರಲು ಹನುಮಂತ ಹೊರಡುತ್ತಾನೆ.

ಸಂಜೀವಿನಿ ಸಸ್ಯದ ಬಗ್ಗೆ ತಿಳಿಯದ ಹನುಮಂತ ಇಡೀ ದ್ರೋಣಗಿರಿ ಬೆಟ್ಟವನ್ನೇ ತನ್ನ ಬಲಗೈಯಲ್ಲಿ ಹಲವಾರು ಸಮುದ್ರಗಳನ್ನು ದಾಟಿ ಯುದ್ಧ ಭೂಮಿಗೆ ತಂದು ಅಚ್ಚರಿ ಮೂಡಿಸುತ್ತಾನೆ. ಆಗ ಲಕ್ಷ್ಮಣ ಬದುಕುಳಿಯುತ್ತಾನೆ. ಇದು ಪುರಾಣದಲ್ಲಿ ಉಲ್ಲೇಖವಾಗಿರುವ ಕಥೆ. ಹಾಗಾಗಿ ಹನುಮಂತನು ಶಕ್ತಿ ಮತ್ತು ಸಾಮರ್ಥ್ಯದ ಸಂಕೇತ ಎಂದು ಭಾವಿಸಲಾಗಿದೆ. ಎಲ್ಲಾ ಬಗೆಯ ದುಷ್ಟಶಕ್ತಿಗಳು ಮತ್ತು ಪಾಪಗಳ ವಿರುದ್ಧ ಜಯ ಸಾಧಿಸಲು ಹನುಮಂತನ ಪ್ರಾರ್ಥನೆ ಮಾಡುವುದು ಬಹಳ ಹಿಂದಿನಿಂದ ನಡೆದು ಬಂದ ಸಂಪ್ರದಾಯ.

ಹನುಮ ಜಯಂತಿ ಪೂಜಾ ವಿಧಾನ

ಹನುಮ ಜಯಂತಿ ಪೂಜಾ ವಿಧಾನ

ಹನುಮ ಜಯಂತಿಯ ಪೂಜಾ ಸಂದರ್ಭದಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವೆಂದರೆ ಭಕ್ತರು ಪೂಜೆ ಮಾಡುವ ಸಮಯದಲ್ಲಿ ಹನುಮಂತನಿಗೆ ದೇವಾಲಯದಲ್ಲಿ ಕುಂಕುಮ ಅಥವಾ ಕೆಂಪು ವಸ್ತ್ರಧಾರಣೆ ಮಾಡಿಸಿ ಚಂಡು ಹೂವು ಮತ್ತು ಗುಲಾಬಿ ಹೂಗಳಿಂದ ಅಲಂಕಾರ ಮಾಡಿ ಲಾಡು, ಹಲ್ವಾ ಮತ್ತು ಬಾಳೆ ಹಣ್ಣುಗಳನ್ನು ನೈವೇದ್ಯಕ್ಕೆ ತೆಗೆದುಕೊಂಡು ಹೋಗುತ್ತಾರೆ. ಕೆಲವು ಕಡೆ ಉತ್ಸವ ಮತ್ತು ಜಾತ್ರೆಗಳನ್ನು ಏರ್ಪಾಡು ಮಾಡುತ್ತಾರೆ. ಆದರೆ ಈ ವರ್ಷ ಕರೋನ ವೈರಸ್ ತಂದಿರುವ ಪರಿಸ್ಥಿತಿಯಿಂದ ಉಂಟಾಗಿರುವ ಲಾಕ್ಡೌನ್ ಕಾರಣದಿಂದ ಯಾವುದೇ ಬಗೆಯ ಉತ್ಸವಗಳಾಗಲೀ ಅಥವಾ ವಿಶೇಷ ಪೂಜೆ ಪುನಸ್ಕಾರಗಳಾಗಲೀ ನಡೆಯುವುದಿಲ್ಲ. ಹಲವು ಬಗೆಯ ಆಹಾರಗಳು, ತಿನಿಸುಗಳು ಮತ್ತು ಹೂಗಳನ್ನು ಆಂಜನೇಯ ಸ್ವಾಮಿಗೆ ಎಡೆಯ ರೂಪದಲ್ಲಿ ಸಮರ್ಪಿಸಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಕೂಡ ವಿತರಣೆ ಮಾಡುತ್ತಾರೆ.

ಹನುಮ ಜಯಂತಿ ಮಹತ್ವ

ಹನುಮ ಜಯಂತಿ ಮಹತ್ವ

ಹನುಮಂತನು ವಾನರ ಸೈನ್ಯದ ರಾಜನಾದ ವನರಾಜ ಕೇಸರಿ ಮತ್ತು ರಾಣಿ ಅಂಜನಾದೇವಿಗೆ ಮಗನಾಗಿ ಜನಿಸಿದನು. ಪುರಾಣಗಳಲ್ಲಿ ಹೇಳಿರುವಂತೆ ಅಂಜನಾದೇವಿ ಒಮ್ಮೆ ವಿಶ್ವಾಮಿತ್ರ ಋಷಿಯ ತಪಸ್ಸಿಗೆ ಭಂಗ ತಂದ ಕಾರಣ ಆಕೆಗೆ ಒಂದು ಗಂಡು ಕೋತಿಗೆ ಜನ್ಮ ನೀಡುವಂತೆ ವಿಶ್ವಾಮಿತ್ರನು ಶಾಪಕೊಟ್ಟನು. ಅಂಜನಾದೇವಿ ಈ ಶಾಪದಿಂದ ಪಾರಾಗಲು ಶಿವನನ್ನು ನೀನು ನನ್ನ ಮಗನ ಒಂದು ಭಾಗವಾಗಿರಬೇಕು ಎಂದು ಪ್ರಾರ್ಥಿಸಿದಳು. ಹಾಗಾಗಿ ಹನುಮಂತನು ಶಿವನ ಒಂದು ಅವತಾರ ಎಂದು ನಂಬಲಾಗಿದೆ.

ಇನ್ನೊಂದು ಕಥೆಯಲ್ಲಿ ಹೇಳಿರುವ ಹಾಗೆ ಒಮ್ಮೆ ದಶರಥ ಮಹಾರಾಜ ಮಕ್ಕಳನ್ನು ಪಡೆಯಲು ಪುತ್ರಕಾಮೇಷ್ಟಿ ಯಾಗವನ್ನು ಕೈಗೊಂಡಿರುತ್ತಾನೆ. ಆಗ ಆತನಿಗೆ ಪಾಯಸ ಲಭ್ಯವಾಗುತ್ತದೆ. ಆಗ ಒಂದು ಗಿಡುಗ ಅದರಲ್ಲಿ ಸ್ವಲ್ಪ ಭಾಗವನ್ನು ತೆಗೆದುಕೊಂಡು ಪವನ ದೇವನ ಕೈಗೆ ಕೊಡುತ್ತದೆ. ಪವನ ದೇವ ಅದನ್ನು ಅಂಜನಾದೇವಿಗೆ ಕೊಡುವ ಕಾರಣದಿಂದ ಹನುಮಂತ ಜನಿಸಿದನು ಎಂದು ನಂಬಲಾಗಿದೆ. ಹೀಗಾಗಿ ಹನುಮಂತನನ್ನು ' ಪವನ ಪುತ್ರ ' ಎಂದು ಕೂಡ ಕರೆಯುತ್ತಾರೆ.

ಭಾರತದಾದ್ಯಂತ ಹನುಮ ಜಯಂತಿಯ ಆಚರಣೆ

ಭಾರತದಾದ್ಯಂತ ಹನುಮ ಜಯಂತಿಯ ಆಚರಣೆ

ಪಂಚಾಂಗದಲ್ಲಿ ಹೇಳಿರುವ ಹಾಗೆ ಭಕ್ತರು ತಮ್ಮ ಸಾಂಪ್ರದಾಯಿಕ ನಂಬಿಕೆಯಂತೆ ಹನುಮ ಜಯಂತಿಯನ್ನು ವರ್ಷದಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹನುಮ ಜಯಂತಿಯನ್ನು ಬಹಳ ವಿಜೃಂಭಣೆಯಿಂದ 41 ದಿನಗಳ ಕಾಲ ಆಚರಿಸುತ್ತಾರೆ. ಅವರ ಪ್ರಕಾರ ಚೈತ್ರ ಪೂರ್ಣಿಮೆಯ ದಿನ ಪ್ರಾರಂಭವಾಗಿ ವೈಶಾಖ ಮಾಸದ ಕೃಷ್ಣ ಪಕ್ಷದ ಸಮಯದಲ್ಲಿ 10 ನೆಯ ದಿನ ಹನುಮ ಜಯಂತಿಯಂದು ಕೊನೆಗೊಳ್ಳುತ್ತದೆ.

ತಮಿಳುನಾಡಿನಲ್ಲಿ ಹನುಮಾನ್ ಜಯಂತಿಯನ್ನು ಹನುಮಂತ ಜಯಂತಿಯನ್ನು ಆಗಿ ಆಚರಣೆ ಮಾಡುತ್ತಾರೆ. ಅಲ್ಲಿನ ಭಕ್ತರು ಮಾರ್ಗಶಿರ ಅಮಾವಾಸ್ಯೆಯಂದು ಈ ಹಬ್ಬವನ್ನು ಬಹಳ ಸಂತೋಷ ಸಂಭ್ರಮದಿಂದ ಆಚರಿಸುತ್ತಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ತಮಿಳುನಾಡಿನಲ್ಲಿ ಹನುಮ ಜಯಂತಿ ಡಿಸೆಂಬರ್ ಅಥವಾ ಜನವರಿ ಮಾಹೆಯಲ್ಲಿ ಆಚರಣೆಯಾಗುತ್ತದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಹನುಮ ಜಯಂತಿಯು, ಹನುಮ ವ್ರತ ಎಂದು ಪ್ರಸಿದ್ಧಿ ಪಡೆದಿದೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಆಚರಣೆ ಮಾಡಲಾಗುತ್ತದೆ.

ನಮ್ಮ ಉತ್ತರ ಭಾರತದಲ್ಲಿ ಹನುಮ ಜಯಂತಿ ಬಹಳ ಪ್ರಸಿದ್ಧಿ ಪಡೆದಿದೆ. ಈ ಹಬ್ಬವನ್ನು ನಮ್ಮ ಹಿಂದುಗಳು ಬಹಳಷ್ಟು ಭಕ್ತಿಭಾವದಿಂದ ವಿವಿಧ ಸಂಪ್ರದಾಯಗಳಲ್ಲಿ ವಿಜೃಂಭಣೆಯಾಗಿ ಆಚರಣೆ ಮಾಡುತ್ತಾರೆ.

English summary

Hanuman Jayanti 2020: Time, Puja vidhi, Significance

Here we are discussing about Hanuman Jayanti 2020:time, puja vidhi, significance. Hanuman Jayanti is one of the famous Hindu festivals. It is celebrated on full moon day during Chaitra month. Read more.
X
Desktop Bottom Promotion