For Quick Alerts
ALLOW NOTIFICATIONS  
For Daily Alerts

ಗುರು ಗೋಬಿಂದ್ ಸಿಂಗ್ ಜಯಂತಿ: ಸಿಖ್ಖರ 10ನೇ ಗುರುವಿನ ಆಶ್ಚರ್ಯಕರ ಸಂಗತಿಗಳು

|

ಹತ್ತನೇ ಸಿಖ್ ಗುರು, ಗುರು ಗೋಬಿಂದ್ ಸಿಂಗ್ ಜಿ ಅವರು 1666 ರಲ್ಲಿ ಪೋಹ್ (ಪೌಶ್) ತಿಂಗಳಲ್ಲಿ ಸಪ್ತಮಿ ತಿಥಿ, ಶುಕ್ಲ ಪಕ್ಷದಲ್ಲಿ ಜನಿಸಿದರು. ಈ ದಿನ ಸಿಖ್ಖರ ಪಾಲಿಗೆ ಅತೀ ಪವಿತ್ರ ದಿನವಾಗಿದ್ದು, ಜಗತ್ತಿನಾದ್ಯಂತ ಬಹಳ ಶ್ರದ್ಧೆಯಿಂದ ಆಚರಣೆ ಮಾಡಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ದಿನಾಂಕವು ಪ್ರತಿವರ್ಷ ಬದಲಾಗುತ್ತದೆ. ಈ ವರ್ಷ, ಗುರು ಗೋಬಿಂದ್ ಸಿಂಗ್ ಜಯಂತಿಯನ್ನು ಜನವರಿ 20 ರಂದು ಆಚರಿಸಲಾಗುತ್ತಿದೆ. ಹಾಗಾದ್ರೆ ಬನ್ನಿ ಈ ಸಿಖ್ ಗುರುಗಳ ಬಗ್ಗೆ ಇನ್ನಷ್ಟು ಆಶ್ಚರ್ಯಕರ ತಿಳಿದುಕೊಳ್ಳಲು ಮುಂದೆ ಓದಿ.

ಗುರು ಗೋಬಿಂದ್ ಜನನ:

ಗುರು ಗೋಬಿಂದ್ ಜನನ:

ಸಿಖ್ಖರು ಈ ವರ್ಷ ತಮ್ಮ ಹತ್ತನೇ ಗುರುವಿನ 354 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಗುರು ಗೋಬಿಂದ್ ಸಿಂಗ್ ಜಿ ಅವರು ಗುರು ತೇಜ್ ಬಹದ್ದೂರ್ (ಒಂಬತ್ತನೇ ಸಿಖ್ ಗುರು) ಮತ್ತು ಮಾತಾ ಗುಜ್ರಿ ಅವರ ಏಕೈಕ ಪುತ್ರ. ಇವರು ಪಾಟ್ನಾದಲ್ಲಿ ಜನಿಸಿದರು.

ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಅವನ ತಂದೆ ಗುರು ತೇಜ್ ಬಹದ್ದೂರ್ ರ ಶಿರಚ್ಛೇದ ಮಾಡಿದ ಮಾಡಿದ ನಂತರ ಗುರು ಗೋಬಿಂದ್ ರನ್ನು ಒಂಬತ್ತನೆಯ ವಯಸ್ಸಿನಲ್ಲಿ ಹತ್ತನೇ ಸಿಖ್ ಗುರು ಎಂದು ಪಟ್ಟಾಭಿಷೇಕವಾಯಿತು.

ಗೋಬಿಂದರ ಸಾಧನೆ:

ಗೋಬಿಂದರ ಸಾಧನೆ:

ಗುರು ಗೋಬಿಂದ್ ಸಿಂಗ್ ಅವರು ಖಲ್ಸಾ ಅಥವಾ ಯೋಧ ಸಮುದಾಯವನ್ನು ಸಾಂಸ್ಥೀಕರಣಗೊಳಿಸಿದರು. ತಮ್ಮ ಪ್ರಾಣವನ್ನು ತ್ಯಜಿಸಲು ಸಿದ್ಧರಿರುವ ಐದು ಜನರನ್ನು ಪಂಜ್ ಪ್ಯಾರೆ ಅಥವಾ ಮೊದಲ ಐದು ಖಲ್ಸಾ ಎಂದು ಕರೆಯಲಾಗುತ್ತದೆ. ಇವರು ಐದು ಜನರಿಗೆ ಅಮೃತ (ಸಕ್ಕರೆಯೊಂದಿಗೆ ಬೆರೆಸಿದ ನೀರು) ನೀಡಿ ಆಶೀರ್ವದಿಸಿ, ಅವರಿಗೆ ಸಿಂಗ್ (ಸಿಂಹ) ಬಿರುದನ್ನು ನೀಡಿದರು. ತರುವಾಯ, ಅವರನ್ನು ಖಲ್ಸಾ ಮಾಡುವಂತೆ ಕೇಳಿಕೊಂಡರು. ಪಂಜಾಬ್‌ನ ಆನಂದಪುರ ಬಳಿಯ ತಖ್ತ್ ಶ್ರೀ ಕೇಶಗರ್ ಸಾಹಿಬ್ ಈ ಘಟನೆ ನಡೆದ ಸ್ಥಳ ಎಂದು ಹೇಳಲಾಗುತ್ತದೆ. ಹೋಳಿ ಸಂದರ್ಭದಲ್ಲಿ ಮೂರು ದಿನಗಳ ಹಬ್ಬವಾದ ಹೋಲಾ ಮೊಹಲ್ಲಾವನ್ನು ಆಚರಿಸಲು ಸಿಖ್ಖರು ವಾರ್ಷಿಕವಾಗಿ ಇಲ್ಲಿ ಸೇರುತ್ತಾರೆ.

ಖಲ್ಸಾವನ್ನು ಸಾಂಸ್ಥೀಕರಣಗೊಳಿಸುವುದರ ಜೊತೆಗೆ, ಹತ್ತನೇ ಗುರು ದಾಸಮ್ ಗ್ರಂಥವನ್ನು ರಚಿಸಿದರು. ಜೊತೆಗೆ ಗುರು ಗ್ರಂಥ ಸಾಹಿಬ್ ಅನ್ನು ಸಿಖ್ ಧರ್ಮದ ಮೂಲಭೂತ ಗ್ರಂಥವೆಂದು ನಾಮಕರಣಗೊಳಿಸಿದರು.

ಪಂಜ್ ಕಾಕರ್:

ಪಂಜ್ ಕಾಕರ್:

ಸಿಖ್ ನಂಬಿಕೆಯ ಐದು ವೈಶಿಷ್ಟ್ಯಗಳು ಅಥವಾ ಐದು 'ಕೆ' ಗಳು (ಪಂಜ್ ಕಾಕರ್) ಗುರು ಗೋಬಿಂದ್ ಸಿಂಗ್ ಜಿ ಅವರಿಗೆ ಅರ್ಪಣೆ ಮಾಡಲಾಗಿದೆ. ಆದ್ದರಿಂದ, ಕೇಶ್ (ಕತ್ತರಿಸದ ಕೂದಲು), ಕಂಗಾ (ಬಾಚಣಿಗೆ), ಕಡ (ಕಬ್ಬಿಣದ ಕಂಕಣ), ಕಾಚ್ಚಾ(ಒಳ ಉಡುಪುಗಳು) ಮತ್ತು ಕಿರ್ಪಾನ್ (ಸಣ್ಣ ಕತ್ತಿ) ಸಿಖ್ ಜೀವನದ ಅವಿಭಾಜ್ಯ ಅಂಗಗಳಾಗಿವೆ.

ಯಾತ್ರಾಸ್ಥಳ:

ಯಾತ್ರಾಸ್ಥಳ:

ಗುರುಗಳು ತಮ್ಮ ಜೀವನದ ಕೊನೆಯ ಕೆಲವು ವರ್ಷಗಳನ್ನು ಮಹಾರಾಷ್ಟ್ರದ ನಾಂದೇಡ್ ನಲ್ಲಿ ಕಳೆದರು. ತಖ್ತ್ ಶ್ರೀ ಹಜೂರ್ ಸಾಹಿಬ್ ಎಂಬ ಯಾತ್ರಾ ಸ್ಥಳವನ್ನು ಗುರುಗಳ ಸ್ಮರಣಾರ್ಥವಾಗಿ ಇಲ್ಲಿ ನಿರ್ಮಿಸಲಾಗಿದೆ. ಇದು ಅವರು ಕೊನೆಯುಸಿರೆಳೆದ ಸ್ಥಳ.

ಇನ್ನೂ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಗೆ ಗೋಬಿಂದರ ಜನ್ಮ ದಿನದಂದು ಸಾಕಷ್ಟು ಭಕ್ತರು ದೇಶದ ನಾನಾ ಭಾಗಗಳಿಂದ ಆಗಮಿಸುತ್ತಾರೆ.

English summary

Guru Gobind Singh Jayanti 2021 : Know More About The Tenth Sikh Guru

Here we told about Guru Gobind Singh Jayanti : Know more about the tenth Sikh Guru, have a look
X
Desktop Bottom Promotion