For Quick Alerts
ALLOW NOTIFICATIONS  
For Daily Alerts

ಗೋವರ್ಧನ ಪೂಜೆ 2020: ಪೂಜೆ ಶುಭ ಮುಹೂರ್ತ, ಪೂಜಾ ವಿಧಿ

|

ಇಂದ್ರನ ಕೋಪದಿಂದ ವೃಂದಾವನದ ಜನರನ್ನು ರಕ್ಷಿಸಲು ಶ್ರೀ ಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದ ಲೀಲೆಯನ್ನು ಕೊಂಡಾಡಲು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 15ಕ್ಕೆ ಗೋವರ್ಧನ ಪೂಜೆ ಮಾಡಲಾಗುವುದು.

 ಗೋವರ್ಧನ ಪೂಜೆಯ ಹಿಂದಿರುವ ಪೌರಾಣಿಕ ಕತೆ

ಗೋವರ್ಧನ ಪೂಜೆಯ ಹಿಂದಿರುವ ಪೌರಾಣಿಕ ಕತೆ

ವೃಂದಾವನದ ಜನರು ಇಂದ್ರಯಜ್ಞಕ್ಕೆ ಸಿದ್ಧರಾಗುತ್ತಿದ್ದರು. ಇದನ್ನು ತಿಳಿದ ಶ್ರೀ ಕೃಷ್ಣ ಪರಮಾತ್ಮನನ್ನು ಇಂದ್ರನನ್ನು ಪೂಜಿಸುವುದನ್ನು ಬಿಟ್ಟು ಅವರು ಗೋವರ್ಧನ ಗಿರಿಯನ್ನು ಆರಾಧಿಸಬೇಕೆಂದು ಸೂಚಿಸಿದನು. ಅದರಂತೆ ವೃಂದಾವನದ ಜನರು ಗೋವರ್ಧನ ಗಿರಿಯನ್ನು ಪೂಜಿಸಲು ನಿಶ್ಚಿಯಿಸಿದರು. ಇದರಿಂದ ಕೋಪಗೊಂಡ ಇಂದ್ರನು ಕೋಪದಿಂದ ಭಾರಿ ಮಳೆ ಸುರಿಸಲು ಮೋಡಗಳಿಗೆ ಆಜ್ಞಾಪಿಸಿದನು. ಆಗ ಕೃಷ್ಣನು ತನ್ನ ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ವೃಂದಾವನದ ಎಲ್ಲ ನಿವಾಸಿಗಳಿಗೆ ಅದರ ಕೆಳಗೆ ಆಶ್ರಯ ನೀಡಿದನು.

ಇದರಿಂದಾಗಿ ಇಂದ್ರನಿಗೆ ತಾನು ಮಾಡಿದ ಅರಿವಾಗಿ ಕೃಷ್ಣನ ಬಳಿ ಬಂದು ಕ್ಷಮೆ ಯಾಚಿಸಿದ. ದೇವೋತ್ತಮನಿಗೆ ಶರಣಾದ ಮ ಹಾಗೂ ಭಕ್ತಿಯಿಂದ ಸೇವೆ ಸಲ್ಲಿಸುವ ಭಕ್ತರು ಎಲ್ಲ ಹೊಣೆಗಾರಿಕೆಯಿಂದ ಮುಕ್ತರು ಮತ್ತು ಅವರು ಲೌಕಿಕ ಅನುಕೂಲಕ್ಕಾಗಿ ಯಾವ ದೇವತೆಯನ್ನೂ ಪೂಜಿಸುವ ಅಗತ್ಯ ಇಲ್ಲ ಎನ್ನುವ ಅಂಶವನ್ನು ಕೃಷ್ಣನು ಹೇಳಿದನು. ಇದು ಗೋವರ್ಧನ ಲೀಲೆ ಎಂದು ಪ್ರಸಿದ್ಧಿಯಾಗಿದೆ.

 ಪೂಜೆಯ ವಿಧಾನ

ಪೂಜೆಯ ವಿಧಾನ

ಭಕ್ತರು ಧಾನ್ಯ ಮತ್ತು ತುಪ್ಪದ (ಅನ್ನ, ದಾಲ್, ಹಲ್ವ, ಪಕೋಡ, ಪೂರಿ ಇತ್ಯಾದಿ) ವಿವಿಧ ತಿನಿಸುಗಳನ್ನು ಮತ್ತು ಹಾಲಿನ ಖಾದ್ಯಗಳನ್ನು (ಸಿಹಿ ಅನ್ನ, ಪೊಂಗಲ್, ರಬ್ಡಿ, ಸಂದೇಶ್, ರಸಗುಲ್ಲ, ಲಡ್ಡು ಇತ್ಯಾದಿ) ತಯಾರಿಸಿ, ಅವುಗಳನ್ನು ಬೆಟ್ಟದಂತೆ ಜೋಡಿಸಿ ಭಗವಂತನಿಗೆ ಅರ್ಪಿಸುತ್ತಾರೆ. ಅನಂತರ ಆ ತಿನಿಸುಗಳನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಗುವುದು. ಇದನ್ನು ಅನ್ನಕೂಟ ಉತ್ಸವ ಎಂದೂ ಕರೆಯುತ್ತಾರೆ.

ಗೋವರ್ಧನ ಪೂಜೆಗೆ ಮುಹೂರ್ತ

ಗೋವರ್ಧನ ಪೂಜೆಗೆ ಮುಹೂರ್ತ

ನವೆಂಬರ್ 15ಕ್ಕೆ ಗೋವರ್ಧನ ಪೂಜೆ ಪ್ರಾರಂಭದ ಸಮಯ ಸಂಜೆ 3 ಗಂಟೆ 18 ನಿಮಿಷ 37 ನಿಮಿಷಕ್ಕೆ ಪ್ರಾರಂಭವಾಗಿ 5 ಗಂಟೆ 27 ನಿಮಿಷ 15 ಸೆಕೆಂಡ್‌ಗೆ ಮುಕ್ತಾಯ.

ಗೋ ಪೂಜೆ

ಗೋ ಪೂಜೆ

ಗೋವರ್ಧನ ಪೂಜೆಯಂದು ಭಕ್ತರು ಗೋವುಗಳನ್ನೂ ಪೂಜಿಸುತ್ತಾರೆ. ಕೃಷ್ಣನು ಗೋವುಗಳ ಸಂರಕ್ಷಕ, ಗೋಪಾಲ. ವಿಷ್ಣು ಪುರಾಣದಲ್ಲಿ ಕೃಷ್ಣನ ಕುರಿತು ನಮೋ ಬ್ರಾಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯ ಚ ಅಂದರೆ ಇಲ್ಲಿ ಕೃಷ್ಣನನ್ನು ಗೋವುಗಳ ಮತ್ತು ಬ್ರಾಹ್ಮಣರ ಹಿತಚಿಂತಕ ಎಂದು ವರ್ಣಿಸಲಾಗಿದೆ. ಸಂಜೆ ಗೋವುಗಳನ್ನು ಅಲಂಕರಿಸಿ ಅವುಗಳಿಗೆ ಪೂಜೆ ಸಲ್ಲಿಸಿ ಅವುಗಳನ್ನು ಗೋವುಗಳನ್ನು ಮುಂದಿಟ್ಟುಕೊಂಡು ಭಕ್ತರು ಗೋವರ್ಧನ ಗಿರಿಯ ಪ್ರದಕ್ಷಿಣೆ ಮಾಡುವರು.

English summary

Govardhan Puja 2020: Date, Shubh Muhurat And Vidhi

Govardhan Puja 2020: Date, Shubh Muhurat And Vidhi, have a look.
Story first published: Saturday, November 14, 2020, 13:05 [IST]
X
Desktop Bottom Promotion