For Quick Alerts
ALLOW NOTIFICATIONS  
For Daily Alerts

ಭೂಮಿಗೆ ನಾವು ಹೀಗೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತೆ, ಸಂಪತ್ತು ಹೆಚ್ಚಿಸುತ್ತೆ

|

ಇಂದು ಇಡೀ ಜಗತ್ತಿಗೆ ಎದುರಾಗಿರುವ ಸಮಸ್ಯೆ ಎಂದರೆ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು. ನಾಗರೀಕರಣ ಹೆಚ್ಚಾದಂತೆ ಕಾಡುಗಳು ಮಾಯವಾಗಿ ಕಾಂಕ್ರೇಟ್ ರಸ್ತೆ, ಕಟ್ಟಗಳು ತಲೆ ಎತ್ತಿವೆ. ಇರುವ ಅಲ್ಪ-ಸ್ವಲ್ಪ ಕಾಡು ಕೂಡ ಬೆಂಕಿ ಬಿದ್ದು, ಮನುಷ್ಯನ ದಾಳಿಯಿಂದಾಗಿ ನಶಿಸಿ ಹೋಗುತ್ತಿದೆ.

Googles Earth Day Doodle Shows How Everyone Can Plant Trees To Help Save The Planet

ಕಾಡು ಅಳಿದರೆ ಮನುಷ್ಯನಿಗೆ ಉಳಿಗಾಲವಿಲ್ಲ ಎಂಬ ಸತ್ಯ ಗೊತ್ತಿದ್ದರೂ ಮನುಷ್ಯ ಮಾತ್ರ ತನ್ನ ದುರಾಸೆಗೆ, ಈ ಕ್ಷಣ ಬದುಕಲು ಮುಂದಿನ ಪೀಳಿಗೆ ಬಗ್ಗೆ ಯೋಚಿಸಿದೆ ಕಾಡನ್ನು ನಾಶಪಡಿಸುತ್ತಿದ್ದಾನೆ. ಕಾಡು ಸಮೃದ್ಧಿಯಾಗಿದ್ದರೆ ಮಾತ್ರ ನಾವು ಸಮೃದ್ಧಿಯಾಗಿರುತ್ತೇವೆ. ಆದ್ದರಿಂದ ಭೂಮಿರ ರಕ್ಷಣೆ ಕುರಿತು ಅರಿವು ಮುಡಿಸಲು ಏಪ್ರಿಲ್ 22ನ್ನು ಭೂಮಿ ದಿನವನ್ನಾಗಿ ಆಚರಿಸುತ್ತೇವೆ. ಈ ದಿನಕ್ಕೆ ಗೂಗಲ್ ಡೂಡಲ್ ಮಾಡಿದ ವೀಡಿಯೋವೊಂದು ತುಂಬಾನೇ ಗಮನ ಸೆಳೆದಿದೆ. ಅಷ್ಟು ಮಾತ್ರವಲ್ಲ ಇದರಂತೆ ನಾವು ಮಾಡಿದ್ದೇ ಆದರೆ ನಮ್ಮನ್ನು ಸಲುಹುತ್ತಿರುವ ಭೂಮಿಗೆ ನಾವು ಮಾಡುತ್ತಿರುವ ಕೃತಜ್ಞತೆ ಆಗಿದೆ.

ಗೂಗಲ್ ಡೂಡಲ್‌ನ ಸುಂದರ ವೀಡಿಯೋದಲ್ಲಿ ಒಂದು ದೊಡ್ಡ ಮರದ ಕೆಳಗಡೆ ಒಬ್ಬ ಮಹಿಳೆ ಬುಕ್ ಓದುತ್ತಾ ಇರುತ್ತಾಳೆ. ಅವಳ ಮಗಳು ಒಂದು ಚಿಕ್ಕ ಗಿಡ ತೆಗೆದುಕೊಂಡು ಹೋಗಿ ನೆಡುತ್ತಾಳೆ, ಅವಳು ವಯಸ್ಸಾಗುವಾಗ ಆ ಮರ ಬೆಳೆದಿರುತ್ತದೆ, ಅವಳ ಮುಂದಿನ ಪೀಳಿಗೆ ಅಲ್ಲಿಗೆ ಬರುತ್ತದೆ, ಅವನು ಒಂದು ಮರ ನೆಡುತ್ತಾನೆ, ಅದು ದೊಡ್ಡದಾಗುತ್ತದೆ, ಹೀಗೆ ಪೀಳಿಗೆಯಿಂದ ಪೀಳಿಗೆಗೆ ಮರ ನೆಡುವುದು ಮುದುವರೆಯತ್ತೆ ಭೂಮಿ ಹಚ್ಚ ಹಸಿರಾಗಿ ಸುಂದರವಾಗಿರುತ್ತದೆ.

ಜೀವನದಲ್ಲಿ ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಬೆಳೆಸಿದರೆ ಸಾಕು ವನ್ಯಸಿರಿ ಸಮೃದ್ಧಿಯಾಗಿರುತ್ತದೆ.

English summary

Google's Earth Day Doodle Shows How Everyone Can Plant Trees To Help Save The Planet

Google's Earth Day Doodle shows how everyone can plant trees to help save the planet, read on,
X
Desktop Bottom Promotion