Just In
- just now
ಜೂನ್ 2022: ಈ ತಿಂಗಳಲ್ಲಿರುವ ಪ್ರಮುಖ ಹಬ್ಬ ಹಾಗೂ ವ್ರತಗಳ ಪಟ್ಟಿ
- 3 hrs ago
ಜೂನ್ 2022: ಮದುವೆ, ಪ್ರಯಾಣ, ಗೃಹಪ್ರವೇಶ, ಹೊಸ ವ್ಯವಹಾರಕ್ಕೆ ಶುಭ ದಿನಾಂಕಗಳು
- 5 hrs ago
ಮಂಕಿಪಾಕ್ಸ್: ಸಲಿಂಗಿಗಳು, ಮಾಂಸಾಹಾರಿಗಳಿಗೆ ಈ ಕಾಯಿಲೆ ಹರಡುವುದೇ? ಮಂಗನಿಂದ ಇದು ಹರಡುತ್ತಿಯೇ?
- 8 hrs ago
ಬ್ಯೂಟಿ ಟಿಪ್ಸ್: ತ್ವಚೆಗೆ ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ
Don't Miss
- Automobiles
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಕುರಿತು ನೀವು ತಿಳಿದುಕೊಳ್ಳಬೇಕಾದ ಆಸಕ್ತಿಕರ ವಿಷಯಗಳಿವು!
- News
ಪೊಲೀಸರಿಗೆ ಬಂದೂಕು ತೋರಿಸಿದ್ದ ಶಾರುಖ್ ಪಠಾಣ್ಗೆ ಭರ್ಜರಿ ಸ್ವಾಗತ
- Movies
ಪ್ಯಾನ್ ಇಂಡಿಯಾ ರೇಸ್ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?
- Sports
ಅತಿ ಹೆಚ್ಚು ರನ್ಗಳಿಸಿದರೂ ರಾಹುಲ್ ಎಡವಿದ್ದೆಲ್ಲಿ?: ಮನೀಶ್ ಇನ್ನಿಂಗ್ಸ್ ಉಲ್ಲೇಖಿಸಿದ ದೊಡ್ಡ ಗಣೇಶ್
- Finance
ಜೂನ್ 2022ರಿಂದ ಪ್ರಮುಖ 5 ವೈಯಕ್ತಿಕ ಹಣಕಾಸು ಬದಲಾವಣೆ ತಿಳಿಯಿರಿ
- Education
ಎಸ್ಎಸ್ಎಲ್ಸಿ ನಂತರದ ಕಾಲೇಜು ಆಯ್ಕೆ ಮಾಡುವ ಮುನ್ನ ಈ ಅಂಶಗಳು ನೆನಪಿರಲಿ
- Technology
ಇಂದು ಇನ್ಫಿನಿಕ್ಸ್ ನೋಟ್ 12 ಟರ್ಬೋ ಫೋನಿನ ಫಸ್ಟ್ ಸೇಲ್!..ಕೊಡುಗೆ ಏನು?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿಡಿಸಿ ಜನರಲ್ ಬಿಪಿನ್ ರಾವತ್: ಪ್ರತಿಯೊಬ್ಬ ದೇಶ ಭಕ್ತಿನಿಗೂ ಸ್ಪೂರ್ತಿ ಈ ವೀರ ಯೋಧ
Mi-17V5 ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ಇನ್ನೇನು 5 ನಿಮಿಷ ಬಾಕಿ ಇತ್ತು, ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದ್ದು , ಹೆಲಿಕಾಪ್ಟರ್ ದುರಂತಕ್ಕೆ ಹವಾಮಾನದಲ್ಲಿ ವೈಪರೀತ್ಯ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಹೆಲಿಕಾಪ್ಟರ್ ನಲ್ಲಿ 14 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಮತ್ತು ಹವಾಲ್ದಾರ್ ಸತ್ಪಾಲ್ ಹೆಲಿಕಾಪ್ಟರ್ ದುರಂತದಿಂದಾಗಿ ಸಾವನ್ನಪ್ಪಿದ್ದಾರೆ. ವೀರಯೋಧರನ್ನು ಕಳೆದುಕೊಂಡು ಇಡೀ ದೇಶವೇ ಕಣ್ಣೀರಿಡುತ್ತಿದೆ. 2020ರ ಜನವರಿಯಿಂದ ಭೂ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಜನರಲ್ ಬಿಪಿನ್ ರಾವತ್ ಈ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದು ಕೇಳಿ ದೇಶವೇ ಆಘಾತಕ್ಕೆ ಒಳಗಾಗಿದೆ. ಶತ್ರುಗಳ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು ಬಿಪಿನ್ ರಾವತ್. ಭಾರತೀಯ ಸೇನೆಗೆ ಬಿಪಿನ್ ರಾವತ್ ಅವರ ಸೇವೆ ಅಪಾರ. ಅವರ ಜೀವನವೂ ಸೇನೆಗೆ ಸೇರಿ ದೇಶ ಸೇವೆ ಮಾಡಲು ಯುವ ಜನತೆಗೆ ಸ್ಪೂರ್ತಿ ತುಂಬುವಂತಿದೆ.
ಅವರ ಜೀವನದ ಕುರಿತ ಕೆಲವೊಂದು ಮಾಹಿತಿಗಳನ್ನು ನಿಮಗೆ ನೀಡಲಾಗಿದೆ ನೋಡಿ:

ಬಿಪಿನ್ ರಾವತ್
ಉತ್ತರಾಖಂಡದ ಪೌರಿಯಲ್ಲಿ 1958, ಮಾರ್ಚ್ 16ರಂದು ಜನಿಸಿದರು. ಅವರ ತಂದೆ ದೇಶ ಕಾಯುವ ಯೋಧರಾಗಿದ್ದರು. ಬಿಪಿನ್‌ರಾವ್ ತಂದೆ ಲಕ್ಷಣ್ ಸಿಂಗ್ ರಾವತ್ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಮಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಡೆಹರಾಡೂನ್‌ನ ಕೇಂಬ್ರಡ್ಜ್ ಹಾಲ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಶಿಮ್ಲಾದ ಸೆಂಟ್ ಎಡ್ವರ್ಡ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಬಳಿಕ ಡೆಹರಾಡೂನ್‌ನ ಮಿಲಿಟರಿ ಅಕಾಡೆಮಿಯಲ್ಲಿ ಸೇರಿ ಸೈನ್ಯದ ತರಬೇತಿ ಪಡೆದರು.

ಬಿಪಿನ್ ರಾವತ್‌ರ ವೃತ್ತಿ ಜೀವನ
1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆ ಸೇರಿದ ಬಿಪಿನ್ ರಾವತ್ ಬ್ರಿಗೇಡ್ ಕಮಾಂಡರ್, ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಸದರ್ನ್ ಕಮಾಂಡ್, ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2, ಕರ್ನಲ್ ಮಿಲಿಟರಿ ಕಾರ್ಯದರ್ಶಿ ಹಾಗೂ ಉಪ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಿಲಿಟರಿ ಕಾರಯದರ್ಶಿಯ ಶಾಲೆ ಮತ್ತು ಜೂನಿಯರ್ ಕಮಾಂಡ್ ವಿಂಗ್‌ನಲ್ಲಿ ಬೋಧಕರಾಗಿದ್ದರು, ಯುನೈಟೆಡ್ ನೇಷನ್ಸ್ ಪೀಸ್ ಕೀಪಿಂಗ್ ಫೋರ್ಸ್‌ನ ಭಾಗವಾಗಿದ್ದರು, ಡೆಮಾಕ್ರಟಿಕ್ ರಿಪಬ್ಲಿಕ್ ಕಾಂಗೋದಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್ ಕಮಾಂಡರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. 2016ರಿಂದ ಭಾರತೀಯ 3 ಸೇನಾ ಪಡೆಗಳ ಮುಖ್ಯಸ್ಥರಾಗಿ ನಿಯೋಜನೆಗೊಂಡರು.

ಸೇನೆಗೆ ಬಿಪಿನ್ ರಾವತ್ ಕೊಡುಗೆ
* 1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚನಾ ವಿರುದ್ಧದ ಹೋರಾಟದಲ್ಲಿ ಬಿಪಿನ್ ರಾವತ್ ನೇತೃತ್ವದ ಬೆಟಾಲಿಯನ್ ತುಂಬಾ ಪ್ರಮುಖ ಪಾತ್ರವಹಿಸಿತ್ತು.
* 2015ರಲ್ಲಿ ಮಯನ್ಮಾರ್‌ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಚರಣೆಯಲ್ಲೂ ಪ್ರಮುಖ ಪಾತ್ರವಹಿಸಿದ್ದರು.
* ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಕಳುಹಿಸಲಾದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ಅವರೇ ವಹಿಸಿಕೊಂಡಿದ್ದರು.
* ತುಂಬಾ ಸೇನಾನುಭವ ಮತ್ತು ಯುದ್ಧಾನುಭವ ಹೊಂದಿರುವ ಬಿಪನ್ ರಾವತ್ ದೇಶಕ್ಕೆ ಅನರ್ಘ್ಯ ರತ್ನವಾಗಿದ್ದರು.
ಇವರು ಸೇನೆಯಲ್ಲಿ ಸಲ್ಲಿಸಿರುವ ಸೇವೆ ನೋಡಿದಾಗ ಪ್ರತಿಯೊಬ್ಬ ದೇಶ ಭಕ್ತರಿಗೂ ಇವರ ಮೇಲೆ ಗೌರವ ಹೆಚ್ಚುವುದು, ಇವರ ಸಾಧನೆಗಳು, ದೇಶಕ್ಕೆ ಇವರು ಸಲ್ಲಿಸಿದ ಅಪಾರ ಕೊಡುಗೆಗಳ ಬಗ್ಗೆ ಕೇಳಿದಾಗ ಎಷ್ಟೋ ಯುವ ಜನರಿಗೆ ಸೇನೆಯಲ್ಲಿ ಸೇರಿ ಸೇವೆ ಸಲ್ಲಿಸಬೇಕು ಎಂದು ಸ್ಪೂರ್ತಿ ಉಂಟಾಗುವುದು.