For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2020: ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ ಹಾಗೂ ಪೂಜೆ ವಿಧಿವತ್ತಾಗಿ ಮಾಡುವುದು ಹೇಗೆ?

|

ಗಣೇಶ ಚತುರ್ಥಿಯನ್ನು ವಿನಾಯಕನ ಹುಟ್ಟಿದ ಹಬ್ಬವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆಗಸ್ಟ್‌ 22, 2020ರಂದು ಈ ಹಬ್ಬವನ್ನು ಇಡಿಯ ದೇಶವೇ ಕೊಂಡಾಡುತ್ತದೆ. ಮಣ್ಣಿನಿಂದ ಗಣಪನನ್ನು ತಯಾರಿಸಿ ಪೂಜೆ ಮಾಡಿ ಮೆರವಣಿಗೆ ನಡೆಸಿ ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಪ್ರಥಮ ಪೂಜೆಗೆ ಭಾಜನರಾಗಿರುವ ಗಣಪತಿಯ ಪೂಜೆಯನ್ನು ಗಣಪನ ಹಬ್ಬದಂದು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಗಣಪತಿ ಬಪ್ಪಾ ಮೋರಿಯಾ ಮಂಗಳ ಮೂರ್ತಿ ಮೋರಿಯಾ ಎಂಬ ಉದ್ಘೋಷದೊಂದಿಗೆ ಗಣಪತಿಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ಮತ್ತು ಮನೆಯಲ್ಲಿ ನಡೆಸುವ ಗಣಪನ ಪೂಜೆಗೆ ಹಲವಾರು ವ್ಯತ್ಯಾಸಗಳಿವೆ.

ಈ ಬಾರಿ ಕೊರೊನಾ ಕಾರಣದಿಂದ ಬೀದಿಗಳಲ್ಲಿ ಗಣೇಶನ ಕೂರಿಸಲು ಅನುಮತಿಯಿಲ್ಲ. ಆದರೂ ಗಣೇಶನ ಭಕ್ತರೂ ತಮ್ಮ ಮನೆಗಳಲ್ಲಿ ಗಣಪನ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.

ಕೆಲವರಂತೂ ಹೊರಗಡೆ ಹೋಗಲು ಸಾಧ್ಯವಾಗದಿದ್ದರೆ ಏನಂತೆ ಮನೆಯಲ್ಲಿ ಗಣಪನ್ನು ಕೂರಿಸುತ್ತೇವೆ ಎಂದು ಮಣ್ಣಿನ ಗಣಪನನ್ನು ಸ್ವತಃ ತಯಾರು ಕೂಡ ಮಾಡಿಟ್ಟುಕೊಂಡಿದ್ದಾರೆ. ಗಣಪನ ಪೂಜೆಗೆ ಯಾವುದೇ ಕಟ್ಟುಪಾಡು ಹಾಗೂ ನಿರ್ಬಂಧಗಳಿಲ್ಲ.

ಮನೆಯಲ್ಲಿ ನೀವು ಗಣೇಶನನ್ನು ಸ್ಥಾಪಿಸಿ ಮೂರ್ತಿಗೆ ಪೂಜೆಯನ್ನು ಮಾಡುತ್ತೀರಿ ಎಂದಾದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ವಿಧಿವತ್ತಾಗಿ ಮನೆಯಲ್ಲಿ ಗಣಪನ ಪೂಜೆಯನ್ನು ನಡೆಸಬೇಕು. ಇಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಶುಭ ಸಮಯ ಹಾಗೂ ಪ್ರತಿಷ್ಠಾಪನೆ ಹೇಗೆ ಮಾಡಬೇಕು ಎಂದು ಹೇಳಲಾಗಿದೆ ನೋಡಿ:

Ganesha Chaturthi 2018

ಗಣಪತಿಯ ಮೂರ್ತಿಯ ಮುಂದೆ ಭಕ್ತಿಯಿಂದ ಕೈಮುಗಿದರೂ ಸಾಕು ಆ ಗಣಪನ ಕೃಪಾಕಟಾಕ್ಷ ನಮ್ಮ ಮೇಲಿರುತ್ತದೆ. ಆದರೆ ಗಣೇಶನ ಪೂಜೆ ಮಾಡುವ ಸಮಯದಲ್ಲಿ ನೀವು ಕೆಲವೊಂದು ನಿಯಮಗಳನ್ನು ಅನುಸರಿಸಲೇಬೇಕಾಗುತ್ತದೆ. ಅದೇನು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದರಿಂದ ಹಿಡಿದು ನೀವು ಅನುಸರಿಸಬೇಕಾದ ಮುಹೂರ್ತ ಮೊದಲಾದ ನಿಯಮಗಳನ್ನು ಇದು ಒಳಗೊಂಡಿದೆ.

ಗಣೇಶ ಸ್ಥಾಪನಾ ಮುಹೂರ್ತ

ಗಣೇಶ ಸ್ಥಾಪನಾ ಮುಹೂರ್ತ

ಮನೆಯಲ್ಲಿ ಗಣಪನ ಮೂರ್ತಿಯನ್ನು ಇರಿಸುವ ಸಮಯ ಮತ್ತು ಪೂಜೆಗೆ ಅಣಿಗೊಳಸಿಬೇಕಾದ ಸಮಯವನ್ನು ಇದು ನಿಗದಿಪಡಿಸುತ್ತದೆ. ಈ ಸಮಯ ಹೆಚ್ಚು ಶುಭಕರವಾಗಿದೆ. ಈ ಬಾರಿ ಮುಹೂರ್ತವು ಆಗಸ್ಟ್‌ನ21ರ ರಾತ್ರಿ 11.04ರಿಂದ ಮರುದಿನ 22ರ ಸಂಜೆ 7.57ರವರೆಗೆ ಶುಭವಾಗಿದೆ.

ಗಣೇಶ ಪೂಜಾ ಮುಹೂರ್ತ: ಆಗಸ್ಟ್‌ 22 ಬೆಳಗ್ಗೆ 11:19 ರಿಂದ ಮಧ್ಯಾಹ್ನ 1:49 ರವರೆಗೆ

ಪೂಜಾ ಸಮಯ: 2 ಗಂಟೆ 30 ನಿಮಿಷಗಳು

ಚಂದ್ರನನ್ನು ಯಾವಾಗ ನೋಡಬಾರದು: ಚಂದ್ರನನ್ನು ಆಗಸ್ಟ್ 22ರಮದು ರಾತ್ರಿ 9:40 ರವರೆಗೆ ನೋಡಬಾರದು

ಚತುರ್ಥಿ ತಿಥಿ ಆರಂಭ: 2020 ಆಗಸ್ಟ್‌ 21 ರಾತ್ರಿ 11:02

ಚತುರ್ಥಿ ತಿಥಿ ಮುಕ್ತಾಯ: 2020 ಆಗಸ್ಟ್‌ 22 ರಾತ್ರಿ 7:57

ಗಣೇಶ ವಿಸರ್ಜನೆಗೆ ಶುಭ ಮುಹೂರ್ತ: 2020 ಸೆಪ್ಟೆಂಬರ್‌ 1

ಗಣೇಶನ ಮೂರ್ತಿಯನ್ನು ಸ್ಥಾಪಿಸುವುದು

ಗಣೇಶನ ಮೂರ್ತಿಯನ್ನು ಸ್ಥಾಪಿಸುವುದು

ಸ್ನಾನವನ್ನು ಮಾಡಿ ಪೂಜಾ ಸ್ಥಳವನ್ನು ಶುದ್ಧೀಕರಿಸಿದ ನಂತರ, ಸ್ಟೂಲ್ ತೆಗೆದುಕೊಳ್ಳಿ ಮತ್ತು ಅದರ ಮೇಲೆ ಕೆಂಪು ಬಟ್ಟೆಯನ್ನು ಹಾಸಿ. ಸ್ಟೂಲ್‌ನ ಮಧ್ಯಭಾಗದಲ್ಲಿ, ಸ್ವಲ್ಪ ಅಕ್ಕಿ ಹರಡಿ ಮತ್ತು ಅಕ್ಕಿಯ ಪದರದ ಮೇಲೆ ಗಣೇಶ ಮೂರ್ತಿಯನ್ನಿರಿಸಿ. ಗಣೇಶನ ಸೊಂಡಿಲು ಎಡಭಾಗದಲ್ಲಿದೆ ಮತ್ತು ಮೂರ್ತಿಯ ಬಣ್ಣವು ಕೆಂಪು ಇಲ್ಲದಿದ್ದರೆ ಬಿಳಿ ಬಣ್ಣದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಕಲಶ ಸ್ಥಾಪನೆ ಮತ್ತು ರಿಧಿ ಸಿದ್ಧಿ

ಕಲಶ ಸ್ಥಾಪನೆ ಮತ್ತು ರಿಧಿ ಸಿದ್ಧಿ

ಒಂದು ತಾಮ್ರದ ಕಲಶವನ್ನು (ಕಲಶ ಎಂದೂ ಕರೆಯುತ್ತಾರೆ) ತೆಗೆದುಕೊಳ್ಳಿ ಮತ್ತು ಅದನ್ನು ಅದರಲ್ಲಿ ನೀರು ತುಂಬಿಸಿ. ಕೆಂಪು ಬಟ್ಟೆಯಿಂದ ಅದನ್ನು ಮುಚ್ಚಿ ಮತ್ತು ಕಲಶ ಮತ್ತು ಬಟ್ಟೆಯನ್ನು ಎರಡೂ ಮೊಲಿ (ಪವಿತ್ರ ಕೆಂಪು ದಾರ) ಬಳಸಿ ಒಟ್ಟಿಗೆ ಕಟ್ಟಿ. ವಾಯುವ್ಯದಲ್ಲಿ ಕಲಶವನ್ನಿರಿಸಿ ಅಥವಾ ಗಣೇಶನ ವಿಗ್ರಹದ ಎಡಭಾಗದಲ್ಲಿ ಇರಿಸಿ. ಗಣೇಶನ ವಿಗ್ರಹದ ಪ್ರತಿ ಬದಿಯಲ್ಲಿ ಎರಡು ಅಡಿಕೆಯನ್ನು (ಸುಪರಿ) ಇರಿಸಲು ಮರೆಯಬೇಡಿ. ಇವು ಗಣೇಶನ ಪತ್ನಿಯರಾದ, ರಿಧಿ ಮತ್ತು ಸಿದ್ಧಿಯನ್ನು ಸಂಕೇತಿಸುತ್ತದೆ.

ಸಂಕಲ್ಪ ಮತ್ತು ಮಂತ್ರಗಳು

ಸಂಕಲ್ಪ ಮತ್ತು ಮಂತ್ರಗಳು

ನಿರ್ದಿಷ್ಟ ದಿನಗಳಂದು ಗಣೇಶನಿಗೆ ಮಾಡುವ ಪ್ರಾರ್ಥನೆಗಳನ್ನು ಸಂಕಲ್ಪ ಸೂಚಿಸುತ್ತದೆ. ಮೂರ್ತಿಯನ್ನು ಸ್ಥಾಪಿಸಿದ ನಂತರ ಅಕ್ಷತೆಯನ್ನು ತೆಗೆದುಕೊಂಡು ಅದರಲ್ಲಿ ಹೂವು ಹಾಕಿ ಬಲಕೈಯಲ್ಲಿ ಹೂವನ್ನು ಹಿಡಿದುಕೊಂಡು ಪ್ರಾರ್ಥನೆಯನ್ನು ಮಾಡಬೇಕು.

ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು:

ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು:

1. ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನ ಕುರುಮೇ ದೇವ, ಸರ್ವಕಾರ್ಯೇಷು ಸರ್ವದಾ

2. ಓಂ ಗಣೇಶಾಯ ನಮಃ

ಗಣೇಶ ಚತುರ್ಥಿ: ಗಣೇಶನಿಗೆ ಪೂಜೆ ಮಾಡುವ ವಿಧಿವಿಧಾನಗಳು ಹೀಗಿರಲಿ ...

ಪೂಜಾ ವಿಧಿ

ಪೂಜಾ ವಿಧಿ

ಗಣೇಶನಿಗೆ ಗಂಗಾ ಜಲ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಿ ಈ ಸಮಯದಲ್ಲಿ ದುರ್ವ ಹುಲ್ಲು ಮತ್ತು ವೀಳ್ಯದೆಲೆಯನ್ನು ಬಳಸಿ. ಶೋಡಶೋಪಚಾರ ಪೂಜೆಯನ್ನು ಮಾಡಿ ಅಂತೆಯೆ ವಿಗ್ರಹವನ್ನು ಹಳದಿ ಬಣ್ಣದ ಬಟ್ಟೆಯಿಂದ ಅಲಂಕರಿಸಿ. ಕುಂಕುಮ ಮತ್ತು ಅಕ್ಕಿಯಿಂದ ತಿಲಕವನ್ನು ಹಚ್ಚಿ. ಹೂವು ಅರ್ಪಿಸಿ ಮತ್ತು ಗಣಪನಿಗೆ ಸಿಹಿಯನ್ನು ಪ್ರಸಾದವಾಗಿ ನೀಡಿ. ಮೋದಕ ಅಥವಾ ಲಾಡನ್ನು ನೀವು ಪ್ರಸಾದವಗಿ ಗಣಪನಿಗೆ ನೀಡಬಹುದು. ಪಂಚಮೇವವನ್ನು ನೀಡಿ. (ಐದು ಹಣ್ಣುಗಳು) ನಂತರ, ದೀಪವನ್ನು ಹಚ್ಚಿ ಮತ್ತು ಆರತಿಯನ್ನು ಬೆಳಗಿ.

ದಿನಕ್ಕೆ ಮೂರು ಬಾರಿ ಭೋಗವನ್ನು ಅರ್ಪಿಸುವುದು

ದಿನಕ್ಕೆ ಮೂರು ಬಾರಿ ಭೋಗವನ್ನು ಅರ್ಪಿಸುವುದು

ಗಣೇಶನಿಗೆ ಆಹಾರ ಮತ್ತು ಸಿಹಿತಿಂಡಿ ಎಂದರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಲಾಡು ಮತ್ತು ಮೋದಕವೆಂದರೆ ಗಣೇಶನಿಗೆ ಪಂಚಪ್ರಾಣವಾದುದು. ಆದ್ದರಿಂದ ನಾವು ಗಣಪನಿಗೆ ಲಾಡು ಮತ್ತು ಮೋದಕವನ್ನು ಪ್ರಸಾದವಾಗಿ ನೀಡಬೇಕು. ಅದರಲ್ಲೂ ಗಣೇಶ ನಮ್ಮ ಮನೆಗೆ ಅತಿಥಿಯಾಗಿ ಬರುತ್ತಾರೆ ಮತ್ತು ಮೂರು ಹೊತ್ತು ನಾವು ಆಹಾರವನ್ನು ನೈವೇದ್ಯ ರೂಪದಲ್ಲಿ ನಾವು ಗಣಪನಿಗೆ ನೀಡಬೇಕು. ಹೀಗೆ ಹತ್ತು ದಿನ ಮಾಡಬೇಕು. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ, ಅದು ಅಶುಭ ಎಂದು ಕರೆಯಲಾಗುತ್ತದೆ.

English summary

Ganesha Chaturthi 2020: Ganpati Murti Sthapana Muhurat and Puja Vidhi

Ganesha Chaturthi, the festival of Lord Ganesha shall be observed on September 13, 2018. Lord Ganesha, the son of Lord Shiva and Goddess Parvati visits the houses of his devotees as a guest during this festival, where they worship him for ten days. Thereafter, the idol is immersed in water. A whole procession is carried out by a mass of people in which the idol of Lord Ganesha is carried to a sea or river on the tenth day from Chaturthi when he is to be immersed in water.
X
Desktop Bottom Promotion