For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2021: ಪೂಜಾ ಶುಭ ಮುಹೂರ್ತ, ಮಹತ್ವ ಹಾಗೂ ಪೂಜೆ ಮಾಡುವ ಪದ್ಧತಿ

|

ಭಾದ್ರಪದ ಮಾಸ ಶುಕ್ಲಪಕ್ಷದ 4ನೇ ದಿನ ವಿಘ್ನ ನಿವಾರಕನ ಜನ್ಮ ದಿನ. ಈ ದಿನ ಲಂಬೋದರ ಮೋದಕ ಹಾಗೂ ಕರ್ಜಿಕಾಯಿ ಸೇವಿಸುತ್ತಾ, ಶೋಡಶೋಪಚಾರ ಸೇವೆ ಪಡೆಯಲು ಮನೆ ಮನೆಗೆ ಬರುತ್ತಾನೆ ಹಾಗೂ ತವರು ಮನೆಗೆ ಬಂದ ತಾಯಿ ಗೌರಿಯನ್ನು ಕರೆದುಕೊಂಡು ಹೋಗಲು ಬರುತ್ತಾನೆ ಎಂದು ಹಿಂದೂ ಪುರಾಣದಲ್ಲಿ ಹೇಳಲಾಗಿದೆ.

ಅಂತೆಯೇ 2021ರಲ್ಲಿ ನಾಡಿದ ಪ್ರಸಿದ್ಧ ಹಿಂದೂ ಹಬ್ಬಗಳಲ್ಲಿ ಒಂದಾದ ವಿನಾಯಕ ಚತುರ್ಥಿಯು ಸೆಪ್ಟೆಂಬರ್‌ 10ರಂದು ಆಚರಿಸಲಾಗುತ್ತದೆ. ಇದನ್ನು ಭಾರತದಾದ್ಯಂತಲೂ ಆಚರಿಸುವ ವಾಡಿಕೆ ಇದೆ. ಈ ಸಾಲಿನ ಗಣೇಶ ಚತುರ್ಥಿಯಂದು ಪೂಜೆಗೆ ಶುಭ ಮುಹೂರ್ತ ಯಾವುದು, ಹಬ್ದದ ಮಹತ್ವವೇನು, ಪೂಜೆ ಮಾಡುವ ಪದ್ಧತಿ ಹೇಗೆ ಎಂಬುದರ ಬಗ್ಗೆ ತಿಳಿಯೋಣ.

ಗಣೇಶ ಚತುರ್ಥಿಯ ಪೂಜಾ ದಿನ ಹಾಗೂ ಶುಭ ಮುಹೂರ್ತ

ಗಣೇಶ ಚತುರ್ಥಿಯ ಪೂಜಾ ದಿನ ಹಾಗೂ ಶುಭ ಮುಹೂರ್ತ

ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು

ಸೆಪ್ಟೆಂಬರ್‌ 10 ಶುಕ್ರವಾರ

ಪೂಜೆಗೆ ಮುಹೂರ್ತ: ಬೆಳಿಗ್ಗೆ 11.03 ರಿಂದ ಮಧ್ಯಾಹ್ನ 1.33 ರವರೆಗೆ

ಸೆಪ್ಟೆಂಬರ್‌ 10 ಶುಕ್ರವಾರ ಚತುರ್ಥಿ ತಿಥಿ ಆರಂಭ: 12.18 ರಿಂದ

ಚತುರ್ಥಿ ತಿಥಿ ಅಂತ್ಯ ಸಮಯ: ರಾತ್ರಿ 9.57ರವರೆಗೆ

ಗಣೇಶ ಚತುರ್ಥಿಯ ಮಹತ್ವ

ಗಣೇಶ ಚತುರ್ಥಿಯ ಮಹತ್ವ

ಬಾಧ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಗಣೇಶನನ್ನು ಪೂಜಿಸಲು ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ, ಈ ದಿನ ವಿನಾಯಕನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಅವನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಅತ್ಯಂತ ಬುದ್ಧಿವಂತ, ಜ್ಞಾನವಂತ, ಸಂಪತ್ತು ಹಾಗೂ ಜ್ಞಾನದ ದೇವರು ಮತ್ತು ಎಲ್ಲಾ ಅಡೆತಡೆಗಳನ್ನು ನಿವಾರಿಸುವವನು ಎಂದು ಪರಿಗಣಿಸಲಾಗಿದೆ. ಎಲ್ಲಾ ದೇವರುಗಳಲ್ಲಿ ಮತ್ತು ಯಾವುದೇ ಪೂಜೆ ಅಥವಾ ಆಚರಣೆಯನ್ನು ಪ್ರಾರಂಭಿಸುವ ಮೊದಲು ಗಣೇಶನಿಗೆ ಮೊದಲು ಪೂಜಿಸಲಾಗುತ್ತದೆ.

ಗಣೇಶ ಪುರಾಣ ಮತ್ತು ಸ್ಕಂದ ಪುರಾಣದ ಪ್ರಕಾರ, ಗಣೇಶನು ಶುಕ್ಲ ಚತುರ್ಥಿಯಂದು ಭಾದ್ರಪದ ಮಾಸದಲ್ಲಿ ಜನಿಸಿದನು. ಆದಾಗ್ಯೂ, ಶಿವ ಧರ್ಮದ ಪ್ರಕಾರ ಗಣೇಶ ಮಾಘ ಮಾಸದಲ್ಲಿ ಕೃಷ್ಣ ಚತುರ್ಥಿಯಂದು ಜನಿಸಿದರು ಎಂದೂ ಸಹ ಹೇಳಲಾಗುತ್ತದೆ.

ವಿಘ್ನಗಳನ್ನು ನಿವಾರಿಸುತ್ತಾನೆ, ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ಸುಲಭವಾಗಿ ಪರಿಹರಿಸುತ್ತಾನೆ, ಸದಾ ಭಕ್ತರ ಪರವಾಗಿರುವ ವಿನಾಯಕ ಎಲ್ಲ ದೇವತೆಗಳ ನಡುವೆ ಮೊದಲ ಸ್ಥಾನವನ್ನು ಪಡೆಯುತ್ತಾನೆ.

ಪೂಜೆ ಮಾಡುವ ಪದ್ಧತಿ

ಪೂಜೆ ಮಾಡುವ ಪದ್ಧತಿ

ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಈ ಹಬ್ಬವು ಸುಮಾರು ಹತ್ತು ದಿನಗಳ ಕಾಲ ನಡೆಯುತ್ತದೆ ( ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ).

ಮೊದಲನೆ ದಿನ ಮನೆಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ.

ಮನೆಗಳನ್ನು ಹೂವಿನಿಂದ ಅಲಂಕರಿಸಿ, ತಳಿರು ತೋರಣಗಳಿಂದ ಸಿಂಗರಿಸಬೇಕು.

ಗಣೇಶನಿಗೆ ಪ್ರಿಯವಾದ ಹೂಗಳು, ಎಕ್ಕದ ಹೂ, ದಾಸವಾಳ, ಗರಿಕೆಯನ್ನು ತಪ್ಪದೆ ಅರ್ಪಿಸಬೇಕು.

ಗಣೇಶನಿಗೆ ಪ್ರಿಯವಾದ ತಿಂಡಿಗಳು, ಮೋದಕ, ಕರ್ಜಿಕಾಯಿ ಮಾಡಿ ಅರ್ಪಿಸಲಾಗುತ್ತದೆ.

ಹಸುವಿನ ಸಗಣಿಯಲ್ಲಿ ಗರಿಕೆಯನ್ನು ಇಟ್ಟರೆ ಗಣಪನಿಗೆ ಶ್ರೇಷ್ಟ ಎಂದು ಹೇಳಲಾಗುತ್ತದೆ.

ಇಡೀ ದಿನ ಉಪವಾಸ ಮಾಡುವ ಪದ್ಧತಿ ಸಹ ಇದೆ.

ಸಂಜೆಯ ವೇಳೆಗೆ ಗಣಪನಿಗೆ ಧಾನ್ಯಗಳಿಂದ ಮಾಡಿದ ಪ್ರಸಾದ ಅಥವ ಮೊಸರನ್ನವನ್ನು ಅರ್ಪಿಸಿ ಮಂಗಳಾರತಿ ಮಾಡಬೇಕು.

ಕೆಲವರು ಮನೆಗಳಲ್ಲಿ ಇರುವವರು ಒಂದೇ ದಿನ ಇಟ್ಟು ಗಣಪನನ್ನು ವಿಸರ್ಜಿಸುತ್ತಾರೆ. ಆಗ ಸಂಜೆ ಪ್ರಸಾದ ಅರ್ಪಿಸಿ ಮಹಾ ಮಂಗಳಾರತಿ ಮಾಡಿ ಗಣೇಶನನ್ನು ಬೀಳ್ಕೊಡಬೇಕು.

ಬಹುತೇಕರು ಅನಂತ ಚತುರ್ದಶಿಯಂದು ಗಣೇನನ್ನು ವಿರ್ಜಿಸುತ್ತಾರೆ.

ಗಣೇಶನನ್ನು ವಿಷರ್ಜಿಸುವ ದಿನದವರೆಗೂ ಪ್ರತಿ ದಿನ ಸಂಜೆ ಪ್ರಸಾದ ಅರ್ಪಿಸಿ ಮಂಗಳಾರತಿ ಮಾಡಬೇಕು.

English summary

Ganesh Chaturthi 2021 Date, Shubh Muhurat, Rituals and Significance of Vinayak Chaturthi in Kannada

Here we are discussing about Ganesh Chaturthi 2021 Date, Shubh Muhurat, Rituals and Significance of Vinayak Chaturthi in Kannada. Read more.
Story first published: Thursday, September 2, 2021, 14:52 [IST]
X
Desktop Bottom Promotion