Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಸ್ವರ್ಗದಲ್ಲಿರುವ ನಿಮ್ಮ ಪಿತೃಗಳು ಈ ನಾಲ್ಕು ಸಂದರ್ಭಗಳಲ್ಲಿ ನಿಮ್ಮನ್ನು ಭೇಟಿಯಾಗಬಹದು!
ಆತ್ಮಕ್ಕೆ ಸಾವಿಲ್ಲ, ದೇಹಕ್ಕೆ ಮಾತ್ರ ಎನ್ನುವ ಮಾತಿದೆ. ದೇಹವು ಅಂತಿಮವಾಗಿ ಮಣ್ಣಾಗಿ ಹೋಗುವುದು. ಆದರೆ ಆತ್ಮ ಮಾತ್ರ ಹೊಸ ಜೀವನ ಪಡೆಯುವುದು ಎನ್ನುವ ಮಾತಿದೆ. ನಮ್ಮ ಹಿರಿಯರು ಸಾವಿನ ಬಳಿಕವೂ ನಮ್ಮೊಂದಿಗೆ ಇರುವರು ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಅವರ ಮಕ್ಕಳು ಅಥವಾ ಸಂಬಂಧಿಕರು ಮಾಡುವಂತಹ ತಪ್ಪುಗಳನ್ನು ತಿದ್ದಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುವರು ಎನ್ನುವ ಮಾತಿದೆ.

ಇಂತಹ ಆತ್ಮಗಳಿಗೆ ದೇವರ ಸ್ಥಾನಮಾನ ಸಿಗುವುದು ಮತ್ತು ಇವುಗಳನ್ನು ಪಿತೃದೇವ ಎಂದು ಕರೆಯಲಾಗುತ್ತದೆ. ಪ್ರತೀ ವರ್ಷ ಹಿಂದೂ ಧರ್ಮದಲ್ಲಿ ಪಿತೃಗಳಿಗೆ ಪ್ರಾರ್ಥನೆ ಸಲ್ಲಿಸುವಂತಹ ಕ್ರಮವಿದೆ. ಸತ್ತ ಬಳಿಕವು ನಮ್ಮ ಹಿರಿಯರು ನಾಲ್ಕು ಸಂದರ್ಭಗಳಲ್ಲಿ ನಮ್ಮೊಂದಿಗೆ ಬರುವರು ಎಂದು ಹೇಳಲಾಗುತ್ತದೆ. ಈ ನಾಲ್ಕು ಸಂದರ್ಭಗಳು ಯಾವುದು ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

ಏಕಾಂಗಿಯಾದಾಗ
ಏಕಾಂಗಿಯಾಗಿರುವಂತಹ ಸಮಯದಲ್ಲಿ ನಮ್ಮನ್ನು ಬಿಟ್ಟುಹೋಗಿರುವ ಹಿರಿಯರ ಜತೆಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆದರೆ ನಾವು ಈ ಸಂದರ್ಭದಲ್ಲಿ ಹೆದರಬಾರದು. ಯಾಕೆಂದರೆ ಇವರು ನಮ್ಮ ಜೀವನದಲ್ಲಿ ಬೆಂಬಲ ನೀಡಲು ಕಾಣಿಸುವರು. ನಾವು ಭೀತಿಯಿಲ್ಲದೆ, ತುಂಬಾ ಸಂತೋಷವಾಗಿ ಅವರನ್ನು ನೋಡಲು ಬಯಸಿದರೆ ಖಂಡಿತವಾಗಿಯೂ ಅವರ ಉಪಸ್ಥಿತಿಯು ಕಂಡುಬರುವುದು. ಆದರೆ ಪ್ರತಿಯೊಬ್ಬರಿಗೂ ಅವರ ಉಪಸ್ಥಿತಿಯು ಗೊತ್ತಾಗದು.

ನಿದ್ರೆಯಲ್ಲಿ ಇರುವಾಗ ಅಥವಾ ಕನಸಿನಲ್ಲಿ…
ಕೆಲವು ಜನರು ನಡುರಾತ್ರಿಯಲ್ಲಿ ಎದ್ದು ತುಂಬಾ ಚುರುಕು, ತಾಜಾ ಹಾಗೂ ಚಟುವಟಿಕೆಯಿಂದ ಇರುವಂತಹ ಭಾವನೆಯಾಗುತ್ತದೆ ಎಂದು ಹೇಳುವರು. ಇದು ಸಾಮಾನ್ಯವಾಗಿ ಮುಂಜಾನೆ 3 ಗಂಟೆಯಿಂದ 5 ಗಂಟೆ ಮಧ್ಯೆ ನಡೆಯುವುದು. ಹಿರಿಯರು ನಮ್ಮನ್ನು ಭೇಟಿಯಾಗಲು ಬರುವ ವೇಳೆ ಇದು ನಡೆಯುತ್ತದೆ ಎಂದು ಹೇಳಲಾಗುತ್ತದೆ. ಅದಾಗ್ಯೂ, ನಾವು ಗಾಢನಿದ್ರೆಯಲ್ಲಿರುವಾಗ ಅವರು ನಮ್ಮನ್ನು ಭೇಟಿಯಾಗಲು ಬರುವರು ಎಂದು ಹೇಳಲಾಗುತ್ತದೆ. ಆದರೆ ಇಂತಹ ಭಾವನೆಗಳಿಗೆ ಇದು ಒಂದೇ ಕಾರಣವಲ್ಲ.

ಜೀವನದ ಸಂಕಷ್ಟದ ಸಮಯದಲ್ಲಿ
ವ್ಯಕ್ತಿಯೊಬ್ಬನು ಜೀವನದ ತುಂಬಾ ಕಠಿಣ ಸಮಯವನ್ನು ಎದುರಿಸುತ್ತಿರುವಾಗ, ಎಲ್ಲಾ ಸಮಸ್ಯೆಗಳಿಗೆ ಯಾವುದೇ ಪರಿಹಾರಗಳು ಇಲ್ಲದೆ ಇರುವಾಗ, ಯಾವುದೇ ರೀತಿಯ ನೆರವು ಸಿಗದೆ ಇರುವಾಗ ಮತ್ತು ಎಲ್ಲರೂ ಆತನ ವಿರುದ್ಧವೇ ಮಾತನಾಡುತ್ತಿರುವಾಗ ಹಿರಿಯರು ಬಂದು ನಿಮ್ಮನ್ನು ಭೇಟಿಯಾಗುವರು ಎಂದು ಹೇಳಲಾಗುತ್ತದೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರು ಬಂದು ನೆರವಾಗುವರು ಎಂದು ಹೇಳಲಾಗುತ್ತದೆ.

ಕುಟುಂಬದ ಕಾರ್ಯಕ್ರಮದ ವೇಳೆ
ಯಾವುದೇ ರೀತಿಯ ಕುಟುಂಬದ ಕಾರ್ಯಕ್ರಮಗಳು ಇರುವಾಗ ನಾವು ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳಬೇಕು. ಈ ವೇಳೆ ಹಿರಿಯರು ಬಂದು ತಮ್ಮ ಮಕ್ಕಳಿಗೆ ಆಶೀರ್ವಾದ ಮಾಡುವರು ಎಂದು ಹೇಳಲಾಗುತ್ತದೆ. ಕೆಲವು ಜನರು ಇವರ ಆಗಮನವನ್ನು ಗಮನಿಸುವರು. ಆದರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಇವರು ಕೆಲವೇ ಕ್ಷಣಗಳಿಗಾಗಿ ಬರುವರು ಮತ್ತು ಆಶೀರ್ವಾದ ನೀಡಿ ಹೋಗುವರು ಎಂದು ಹೇಳಲಾಗುತ್ತದೆ.



Click it and Unblock the Notifications
