For Quick Alerts
ALLOW NOTIFICATIONS  
For Daily Alerts

ಪ್ರತಿ ಗುರುವಾರದಂದು ಹೀಗೆ ಮಾಡಿ, ಜೀವನದಲ್ಲಿ ಸುಖ,ಶಾಂತಿ-ನೆಮ್ಮದಿ ಎಲ್ಲವೂ ದೊರೆಯುವುದು

|

ವಾರ ಬಂತಮ್ಮ ಗುರುವಾರ ಬಂತಮ್ಮ ಎಂಬ ಪ್ರಸಿದ್ಧ ಹಾಡನ್ನು ನೀವು ಕೇಳಿರುತ್ತೀರಿ. ಈ ಹಾಡು ಗುರುವಾರದ ಮಹಿಮೆಯನ್ನು ಸಾರುತ್ತಿದೆ. ಈ ವಾರ ರಾಯರನ್ನು ಅಂದರೆ ಗುರುರಾಯರನ್ನು ನೆನೆದರೆ ಎಲ್ಲವೂ ಸಫಲವಾಗುತ್ತದೆ ಎಂಬುದು ನಂಬಿಕೆಯಾಗಿದೆ. ಗ್ರಹಗಳಿಗೆ ಅಧಿಪತಿಯಾದ ಬೃಹಸ್ಪತಿಯನ್ನು ಈ ದಿನ ನೆನೆಯುವುದರಿಂದ ಸಕಲವೂ ನೆರವೇರುತ್ತದೆ ಎಂಬುದು ನಂಬಿಕೆಯಾಗಿದೆ.

ಒಂಬತ್ತು ಗ್ರಹಗಳಲ್ಲಿ ಬೃಹಸ್ಪತಿಯನ್ನು ಮಹತ್ತರವಾದುದು ಎಂದು ಪರಿಗಣಿಸಲಾಗಿದೆ. ತಮ್ಮ ಕುಂಡಲಿಯಲ್ಲಿ ಯಾರು ಬಲವಾದ ಬೃಹಸ್ಪತಿಯನ್ನು ಅಂದರೆ ಗುರುವನ್ನು ಹೊಂದಿದ್ದಾರೋ ಅವರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂದಾಗಿದೆ. ಗುರುವಾರವನ್ನು ಬೃಹಸ್ಪತಿ ದಿನ ಎಂದು ಕರೆಯುತ್ತಾರೆ. ಈ ದಿನದಂದು ಕೆಲವು ನಿರ್ದಿಷ್ಟ ಕಾರ್ಯಗಳನ್ನು ಮಾಡಿದರೆ ಅದು ಸಂಪತ್ತು ಮತ್ತು ಯಶಸ್ಸನ್ನು ನೀಡುತ್ತದೆ ಎಂಬುದು ವೇದಗಳಲ್ಲಿ ತಿಳಿಸಿರುವ ಅಂಶವಾಗಿದೆ.

ಗುರುವಾರವನ್ನು ಬೃಹಸ್ಪತಿಯನ್ನು ಪೂಜಿಸುವುದರ ಜೊತೆಗೆ ಸಾಯಿಬಾಬಾ ಮತ್ತು ಮಹಾವಿಷ್ಣುವಿನ ಆರಾಧರನೆಯನ್ನು ಮಾಡಬಹುದಾಗಿದೆ. ನಾವು ಹುಟ್ಟಿದ ದಿನವನ್ನು ಆಧರಿಸಿಕೊಂಡು ನಮ್ಮ ಜನ್ಮಕುಂಡಲಿಯನ್ನು ರಚಿಸುತ್ತಾರೆ. ಇದು ಕೆಲವೊಂದು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಿರುತ್ತದೆ. ನೀವು ನಿರಂತರ ಕಷ್ಟವನ್ನು ಅನುಭವಿಸುತ್ತಿದ್ದರೆ ನಿಮ್ಮ ಜನ್ಮಕುಂಡಲಿಯಲ್ಲಿರುವ ದೋಷವನ್ನು ಪತ್ತೆಹಚ್ಚಿ ಪರಿಹಾರ ಕ್ರಮಗಳನ್ನು ನಡೆಸಬಹುದಾಗಿದೆ. ಕಷ್ಟವನ್ನು ಅನುಭವಿಸುತ್ತಿದ್ದರೆ ಅದೇ ಪ್ರಶ್ನೆಯನ್ನು ದುಃಖದಲ್ಲಿ ಕೇಳುತ್ತಾರೆ ಅಷ್ಟೆ.

ವ್ಯಕ್ತಿಯ ವ್ಯಕ್ತಿತ್ವ ಅದೃಷ್ಟ, ಮಾನಸಿಕ ಸ್ಥಿತಿ ಎಲ್ಲವೂ ಗ್ರಹಗತಿಗಳು ಹಾಗೂ ರಾಶಿಚಕ್ರದ ಪ್ರಭಾವದಿಂದ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಮ್ಮ ವೈವಾಹಿಕ ಜೀವನ, ವಿದ್ಯಾಭ್ಯಾಸ, ಸಾಮಾಜಿಕ ಬದುಕು, ಬಂಧುಗಳ ಬಳಗ ಹೀಗೆ ಅನೇಕ ವಿಚಾರಗಳು ನಾವು ಯಾವ ವಾರ ಹುಟ್ಟಿದ್ದೇವೆ? ಎನ್ನುವುದರ ಮೇಲೂ ನಿರ್ಧಾರವಾಗುತ್ತದೆ. ವ್ಯಕ್ತಿಯು ಗುರುವಾರದಂದು ಜನಿಸಿದ್ದರೆ ಆತ ಕೆಲವೊಂದು ಉತ್ತಮ ಅಂಶಗಳನ್ನು ಹೊಂದಿರುತ್ತಾನೆ ಎಂಬುದು ವೇದಗಳಲ್ಲಿ ತಿಳಿಸಿರುವಂತಹ ಮಾತಾಗಿದೆ. ಅದಾಗ್ಯೂ ನೀವು ಗುರುವಾರದಂದು ಬೃಹಸ್ಪತಿಯನ್ನು ಪೂಜಿಸುವುದರಿಂದ ಕೆಲವೊಂದು ಉತ್ತಮ ಅಂಶಗಳನ್ನು ದೇವರಿಂದ ಪಡೆದುಕೊಳ್ಳ ಬಹುದಾಗಿದೆ....

ಬೃಹಸ್ಪತಿಯ ಶಕ್ತಿ

ಬೃಹಸ್ಪತಿಯ ಶಕ್ತಿ

ಇಡಿಯ ಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿಯಾದುದು ಬೃಹಸ್ಪತಿಯಾಗಿದೆ. ಜನ್ಮಕುಂಡಲಿಯಲ್ಲಿ ಬೃಹಸ್ಪತಿ ಹೊಂದಿರುವವರು ಜೀವನದಲ್ಲಿ ಯಶಸ್ಸನ್ನು ಪಡೆದಿರುತ್ತಾರೆ.

ಬೃಹಸ್ಪತಿ ದಿನ

ಬೃಹಸ್ಪತಿ ದಿನ

ಗುರುವಿನ ದಿನವನ್ನು ಗುರುವಾರ ಎಂದು ಕರೆಯುತ್ತಾರೆ. ಈ ದಿನ ನಿಮಗೆ ಅದೃಷ್ಟ ಮತ್ತು ಶುಭವನ್ನು ತರುತ್ತದೆ ಎಂದು ಹೇಳುತ್ತಾರೆ. ಹಾಗಿದ್ದರೆ ಈ ದಿನದ ಮಹತ್ವ ಮತ್ತು ಮಾಡಬೇಕಾದ ಕಾರ್ಯಗಳೇನು ಎಂಬುದನ್ನು ಅರಿತುಕೊಳ್ಳೋಣ.

ವಿಷ್ಣುವಿನ ಪ್ರಾರ್ಥನೆ

ವಿಷ್ಣುವಿನ ಪ್ರಾರ್ಥನೆ

ಗುರುವಾರದಂದು ಪ್ರಾತಃ ಕಾಲದಲ್ಲಿಯೇ ಎದ್ದು ಸ್ನಾನವನ್ನು ಮಾಡಿ, ವಿಷ್ಣುವಿನ ಪೋಟೋದ ಮುಂದೆ ದೀಪವನ್ನು ಹಚ್ಚಿ. ವಿಷ್ಣುವಿನ ಫೋಟೋದ ಮುಂದೆ ತುಪ್ಪದ ದೀಪವನ್ನು ಹಚ್ಚಿ ಮತ್ತು ಭಕ್ತಿಯಿಂದ ಅವರಲ್ಲಿ ಪ್ರಾರ್ಥಿಸಿಕೊಳ್ಳಿ. ಭಗವಂತನು ಮಹಾನ್ ಶಕ್ತಿಯಾಗಿದ್ದು ನಿಮ್ಮೆಲ್ಲಾ ದುಃಖವನ್ನು ನೀಗಿಸುವ ಶಕ್ತಿಯನ್ನು ಅವರು ಹೊಂದಿದ್ದಾರೆ. ವಿಷ್ಣುವ ಸಹಸ್ರನಾಮವನ್ನು ನೀವು ಪಠಿಸಬಹುದಾಗಿದೆ. ಪಠಿಸಿದ ನಂತರ ದೇವರಿಗೆ ಭಕ್ತಿಯಿಂದ ಪೂಜೆಯನ್ನು ಮಾಡಿ ತಿಲಕವನ್ನು ಹಚ್ಚಿ.

ಕೇಸರಿ

ಕೇಸರಿ

ನಿಮ್ಮ ಹಣೆಗೆ ಕೇಸರಿ ಅಥವಾ ಹಳದಿಯನ್ನು ಹಚ್ಚಿಕೊಳ್ಳಿ. ಇದು ನಿಮ್ಮನ್ನು ಬಿಸಿ ಹವಾಮಾನದಲ್ಲಿ ತಂಪಾಗಿರಿಸುತ್ತದೆ.

ದಾನ ಧರ್ಮಾದಿಗಳು

ದಾನ ಧರ್ಮಾದಿಗಳು

ಗುರುವಾರದಂದು ಹಳದಿ ಬಣ್ಣದ ಬಟ್ಟೆಯನ್ನು ದಾನ ಮಾಡುವುದರಿಂದ ನಿಮಗೆ ಅದೃಷ್ಟ ಮತ್ತು ಶುಭ ಉಂಟಾಗಲಿದೆ.

ವ್ರತ

ವ್ರತ

ಸಾಧ್ಯವಾದಲ್ಲಿ ಗುರುವಾರದಂದು ಉಪವಾಸ ಮಾಡಿ ಇದರಿಂದ ಇನ್ನಷ್ಟು ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.

 ಹಳದಿ ಲಾಡು

ಹಳದಿ ಲಾಡು

ಗುರುವಾರಂದು ಶಿವನಿಗೆ ಹಳದಿ ಲಾಡನ್ನು ನೀಡುವುದರಿಂದ ನಿಮಗೆ ಉತ್ತಮ ಫಲ ದೊರೆಯಲಿದೆ.

ಬಾಳೆಗಿಡ

ಬಾಳೆಗಿಡ

ಬಾಳೆಗಿಡವನ್ನು ಈ ದಿನ ಪ್ರಾರ್ಥಿಸುವುದರಿಂದ ಅದೃಷ್ಟ ನಿಮ್ಮದಾಗಲಿದೆ. ಹಳದಿ ಪ್ರಸಾದವನ್ನು ತಯಾರಿಸಿ ಮತ್ತು ಹಳದಿ ಬಣ್ಣದ ಬಟ್ಟೆಯನ್ನು ದಾನ ಮಾಡಿ.

ಬಾಳೆಹಣ್ಣು

ಬಾಳೆಹಣ್ಣು

ಇದಲ್ಲದೆ, ಗುರುವಾರದಂದು ಬಾಳೆಹಣ್ಣನ್ನು ದಾನ ಮಾಡುವುದರಿಂದ ತುಂಬಾ ಒಳ್ಳೆಯದಾಗಲಿದೆ.

ಹೂಮಾಲೆ

ಹೂಮಾಲೆ

ಹಳದಿ ಬಣ್ಣದ ಹೂಮಾಲೆಯನ್ನು ಗುರುವಾರ ವಿಷ್ಣುವಿಗೆ ಅರ್ಪಿಸಿ. ಇದರಿಂದ ದೇವರು ಪ್ರಸನ್ನಗೊಳ್ಳುತ್ತಾರೆ.

ಹಳದಿ ಬಣ್ಣದ ದಿರಿಸುಗಳು

ಹಳದಿ ಬಣ್ಣದ ದಿರಿಸುಗಳು

ಗುರುವಾರದಂದು ಹಳದಿ ಬಣ್ಣದ ಬಟ್ಟೆಯನ್ನು ಧರಿಸಲು ಪ್ರಯತ್ನಿಸಿ ಇದರಿಂದ ನಿಮಗೆ ಶುಭ ಉಂಟಾಗುವುದಲ್ಲದೆ, ನಿಮ್ಮನ್ನು ಖುಷಿಯಾಗಿರಿಸುತ್ತದೆ.

ಉಪ್ಪು ರಹಿತ

ಉಪ್ಪು ರಹಿತ

ಸಾಧ್ಯವಾದಲ್ಲಿ ಗುರುವಾರಂದು ಉಪ್ಪು ಸೇವಿಸಬೇಡಿ. ನೀವು ಉಪವಾಸ ಮಾಡದೇ ಇದ್ದಲ್ಲಿ ಕೂಡ ಈ ದಿನ ಉಪ್ಪು ಸೇವಿಸಬೇಡಿ.

ಮಂತ್ರ ಪಠಣೆ

ಮಂತ್ರ ಪಠಣೆ

ಗುರುವಾರದಂದು "ಓಂ ನಮಃ ನಾರಾಯಣಾಯ" ಮಂತ್ರವನ್ನು ಪಠಿಸಿ - ಇದು ನಿಮಗೆ ಸಂತಸವನ್ನು ನೀಡುತ್ತದೆ ಮತ್ತು ಮನಸ್ಸಿಗೆ ನೆಮ್ಮದಿಯನ್ನುಂಟು ಮಾಡುತ್ತದೆ.

ಗುರುವಾರ ಉಪವಾಸವನ್ನು ಏಕೆ ಮಾಡಬೇಕು?

ಗುರುವಾರ ಉಪವಾಸವನ್ನು ಏಕೆ ಮಾಡಬೇಕು?

ಈ ದಿನ ಉಪವಾಸ ಮಾಡುವುದರಿಂದ ವೈವಾಹಿಕ ಜೀವನದಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ದಿನ ಲಕ್ಷ್ಮೀಯನ್ನು ಪೂಜಿಸುವುದರಿಂದ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ.

ಈ ಉಪವಾಸ ಮಾಡುವುದು

ಈ ಉಪವಾಸ ಮಾಡುವುದು

ತಮ್ಮ ಕುಂಡಲಿಯಲ್ಲಿ ದುರ್ಬಲ ಗುರುವನ್ನು ಹೊಂದಿರುವವರು ಈ ದಿನ ಉಪವಾಸ ಮಾಡುತ್ತಾರೆ. ಇನ್ನು ವಿವಾಹ ವಿಳಂಬವಾದವರು ಕೂಡ ಈ ದಿನ ಉಪವಾಸ ಮಾಡಬಹುದು.

ಶೀಘ್ರ ವಿವಾಹ

ಶೀಘ್ರ ವಿವಾಹ

ಯಾರಿಗೆ ಶಿಘ್ರವೇ ವಿವಾಹವಾಗಬೇಕು ಎಂಬುದು ಬಯಸುತ್ತಾರೋ ಅವರು ಈ ದಿನ ಉಪವಾಸ ಮಾಡಬೇಕು - ಇದರಿಂದ ಶೀಘ್ರ ವಿವಾಹ ಲಭ್ಯವಾಗುತ್ತದೆ.

ಪೂಜೆಯನ್ನು ಹೇಗೆ ಮಾಡಬೇಕು?

ಪೂಜೆಯನ್ನು ಹೇಗೆ ಮಾಡಬೇಕು?

ಹಳದಿ ಬಣ್ಣದ ವಸ್ತುಗಳನ್ನು ಬಳಸಿ ಗುರುವಾರ ಪೂಜೆಯನ್ನು ಮಾಡಬೇಕು. ಹಳದಿ ಹೂವು, ಬೇಳೆ, ಹಳದಿ ಸಿಹಿಖಾದ್ಯ, ಹಳದಿ ಅಕ್ಕಿ ಇತ್ಯಾದಿ. ಹಣಕ್ಕಾಗಿ ನೀವು ವ್ರತ ಮಾಡುತ್ತಿದ್ದರೆ ಬೃಹಸ್ಪತಿಯನ್ನು ಪೂಜಿಸಿ ಅದೂ ಕೂಡ ಹಳದಿ ಬಣ್ಣದ ವಸ್ತುಗಳಿಂದ.

ಅಭಿಷೇಕ

ಅಭಿಷೇಕ

ಈ ದಿನ ಕೇಸರಿ ಮಿಶ್ರಿತ ಹಾಲಿನಿಂದ ಗುರುವಿಗೆ ಅಭಿಷೇಕವನ್ನು ಮಾಡಿದರೆ ಒಳಿತು.

ವಿವಾಹ

ವಿವಾಹ

ವಿವಾಹಕ್ಕಾಗಿ ಉಪವಾಸ ಕೈಗೊಳ್ಳುವವರು ಬೃಹಸ್ಪತಿಗೆ ಹಳದಿ ಬಣ್ಣದ ಸಿಹಿಖಾದ್ಯಗಳಿಂದ ಪೂಜೆಯನ್ನು ಮಾಡಬೇಕು ಜೊತೆಗೆ ನೀರು ನೀಡಬೇಕು.

 ಆರ್ಥಿಕ ಸ್ಥಿತಿ ಉತ್ತಮವಾಗಲು

ಆರ್ಥಿಕ ಸ್ಥಿತಿ ಉತ್ತಮವಾಗಲು

ವ್ಯಕ್ತಿಯು ಆರ್ಥಿಕವಾಗಿ ಉತ್ತಮ ಪ್ರಗತಿಯನ್ನು ಸಾಧಿಸಲು ಈ ಉಪವಾಸವನ್ನು ಮಾಡಬೇಕು - ವ್ಯಕ್ತಿಯು ವ್ರತವನ್ನು ಮಾಡುವುದರ ಜೊತೆಗೆ ಬಡವರಿಗೆ ಆಹಾರವನ್ನು ದಾನ ಮಾಡಬೇಕು.

English summary

Following these easy steps on Thursday can make you rich

Dev guru Brihaspati is known as one of the most important planets amongst the nine planets ---- It is said that those who have a strong Brihaspati in their kundali are deemed to have success in life.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more