For Quick Alerts
ALLOW NOTIFICATIONS  
For Daily Alerts

April 2022 Vrat And Festivals : ಏಪ್ರಿಲ್‌ 2022ರಲ್ಲಿ ಬರುವ ಹಬ್ಬಗಳು, ವ್ರತಗಳ ಸಂಪೂರ್ಣ ಮಾಹಿತಿ

|

ಏಪ್ರಿಲ್‌ ತಿಂಗಳಿನಲ್ಲಿ ಹಲವಾರು ವಿಶೇಷ ದಿನಗಳಿವೆ. ಇಂದು ಎಲ್ಲೆಡೆ ಯುಗಾದಿ ಆಚರಿಸಲಾಗುತ್ತಿದೆ, ರಂಜಾನ್‌ ಮಾಸ ಪ್ರಾರಂಭವಾಗಿದೆ. ಅಲ್ಲದೆ ಈ ತಿಂಗಳಿನಲ್ಲಿ ವಿಷು, ರಾಮ ನವಮಿ, ಈಸ್ಟರ್ ಮುಂತಾದ ದೊಡ್ಡ ಹಬ್ಬಗಳಿವೆ, 2 ಏಕಾದಶಿ ಇವೆ. ಈ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:

ಏಪ್ರಿಲ್‌ 2022ರಲ್ಲಿ ಬರುವ ಹಬ್ಬಗಳು, ವ್ರತಗಳು

ಏಪ್ರಿಲ್‌ 2022ರಲ್ಲಿ ಬರುವ ಹಬ್ಬಗಳು, ವ್ರತಗಳು

ಏಪ್ರಿಲ್ 2 ಶನಿವಾರ : ಯುಗಾದಿ ಹಾಗೂ ಗುಡಿ ಪರ್ವ, ಚೈತ್ರ ನವರಾತ್ರಿ (ಚೈತ್ರ, ಶುಕ್ಲ ಪ್ರತಿಪಾದ)ದ

ಏಪ್ರಿಲ್‌ 4 ಸೋಮವಾರ: ಗೌರಿ ಪೂಜೆ

ಗುರುವಾರ 7, ಗುರುವಾರ: ಯಮುನಾ ಚಾಥ್‌

ಏಪ್ರಿಲ್ 10, ಭಾನುವಾರ: ರಾಮ ನವಮಿ, ಸ್ವಾಮಿ ನಾರಾಯಣ ಜಯಂತಿ

ಏಪ್ರಿಲ್ 12 ಮಂಗಳವಾರ: ಕಾಮದ ಏಕಾದಶಿ

ಏಪ್ರಿಲ್ 14, ಗುರುವಾರ:ಮೇಷ ಸಂಕ್ರಾಂತಿ, ಸೂರ್ಯ ಸಂಕ್ರಮಣ

ಏಪ್ರಿಲ್ 16 ಶನಿವಾರ: ಹನುಮಾನ್‌ ಜಯಂತಿ, ಚೈತ್ರ ಶುಕ್ಕಲ ಪೂರ್ಣಿಮಾ

ಏಪ್ರಿಲ್ 26, ಮಂಗಳವಾರ: ವರೂಧಿನಿ ಏಕಾದಶಿ

ಏಪ್ರಿಲ್ 28, ಗುರುವಾರ: ಪ್ರದೋಷ ವ್ರತ

ಗೌರಿ ಪೂಜೆ:

ಗೌರಿ ಪೂಜೆ:

ದೇಶದ ಹಲವೆಡೆ ಏಪ್ರಿಲ್ 4ರಂದು ಗೌರಿ ಪೂಜೆಯನ್ನು ಆಚರಿಸಲಾಗುವುದು. ಈ ದಿನ ಮುತ್ತೈದೆಯರು ವ್ರತ ನಿಯಮಗಳನ್ನು ಗೌರಿಯನ್ನು ಪೂಜಿಸುತ್ತಾರೆ. ಗೌರಿಯನ್ನು ಪೂಜಿಸುವುದರಿಂದ ಅಷ್ಟ ಐಶ್ವರ್ಯಗಳನ್ನು ಕರುಣಿಸುತ್ತಾಳೆ.

ರಾಮ ನವಮಿ

ರಾಮ ನವಮಿ

ಶ್ರೀ ರಾಮ ಶ್ರೀ ವಿಷ್ಣುವಿನ 7ನೇ ಅವತಾರ ಎಂದು ನಂಬಲಾಗಿದೆ.

ಏಪ್ರಿಲ್‌ 12ಕ್ಕೆ ಕಾಮದ ಏಕಾದಶಿ, ಏಪ್ರಿಲ್ 26ಕ್ಕೆ ವರೂಧಿನಿ ಏಕಾದಶಿ ಆಚರಿಸಲಾಗುವುದು.

ಆದ್ದರಿಂದ ಏಪ್ರಿಲ್‌ ತಿಂಗಳು ಶ್ರೀ ವಿಷ್ಣುವಿನ ಭಕ್ತಿರಿಗೆ ತುಂಬಾ ವಿಶೇಷವಾಗಿದೆ.

ವಿಷು, ಮೇಷ ಸಂಕ್ರಾಂತಿ

ವಿಷು, ಮೇಷ ಸಂಕ್ರಾಂತಿ

ಈ ದಿನ ಸೂರ್ಯ ಮೇಷ ರಾಶಿ ಪ್ರವೇಶಿಸುತ್ತಾನೆ. ವಿಷು ಅಥವಾ ಬಿಷು ಈ ದಿನದಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ವಿಷುವನ್ನು ಕರ್ನಾಟದಕದಲ್ಲಿ ದಕ್ಷಿಣ ಕನ್ನಡದಲ್ಲಿ ಆಚರಿಸಲಾಗುವುದು.

ಗುಡ್‌ ಫ್ರೈಡೇ, ಈಸ್ಟರ್

ಗುಡ್‌ ಫ್ರೈಡೇ, ಈಸ್ಟರ್

ಕ್ರಿಶ್ಚಿಯನ್‌ರಿಗೆ ಈ ದಿನ ಮುಖವಾಗಿದೆ. ಏಸುದೇವ ಮಾನವೀಯತೆಗಾಗಿ ತನ್ನ ತ್ಯಾಗ ಮಾಡಿದ ದಿನವನ್ನು ಗುಡ್‌ ಫ್ರೈಡೇ ಎಂದು ಆಚರಿಸಲಾಗುವುದು. ಈ ವರ್ಷಷ ಏಪ್ರಿಲ್ 15ಕ್ಕೆ ಆಚರಿಸಲಾಗುವುದು.

ಯೇಸುಕ್ರಿಸ್ತ

ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿ 3ನೇ ದಿನಕ್ಕೆ ಯೇಸು ಕ್ರಿಸ್ತ ಮರಳಿ ಬರುತ್ತಾನೆ. ಈ ಪವಾಡವನ್ನು ಆಚರಿಸಲಾಗುವುದು.

ಹನುಮಾನ್‌ ಜಯಂತಿ ಏಪ್ರಿಲ್ 16

ಹನುಮಾನ್‌ ಜಯಂತಿ ಏಪ್ರಿಲ್ 16

ಚೈತ್ರ ಮಾಸದ ಪೂರ್ಣಿಮಾ ತಿಥಿಯಂದು ಹನುಮಾನ್‌ ಜಯಂತಿಯನ್ನು ಆಚರಿಸಲಾಗುವುದು.

ವೈಕುಂಠ ಸಂಕಷ್ಠಿ ಚತುರ್ಥಿ ಏಪ್ರಿಲ್ 19

ವೈಕುಂಠ ಸಂಕಷ್ಠಿ ಚತುರ್ಥಿ ಏಪ್ರಿಲ್ 19

ಚೈತ್ರ ಮಾಸದ ಚತುರ್ಥಿ ತಿಥಿಯಂದು ವೈಕುಂಠ ಏಕಾದಶಿ ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ಶ್ರೀ ಗಣಪತಿಯನ್ನು ಪೂಜಿಸುವುದರಿಂದ ಜೀವನದಲ್ಲಿರುವ ಸಂಕಷ್ಟಗಳು ದೂರಾಗುವುದು.

English summary

Festivals and Vrats in the month of April 2022

Festivals and Vrats in the month of April 2022, Read on.....
X
Desktop Bottom Promotion