For Quick Alerts
ALLOW NOTIFICATIONS  
For Daily Alerts

ಅಚ್ಚರಿ! ಈ ದೇವಾಲಯಗಳಲ್ಲಿ ಕಣ್ಣೆದುರಿಗೆಯೇ ನಡೆಯುತ್ತಿದೆ ಪವಾಡಗಳು!

By Jaya subramanya
|

ಭಾರತದ ಸಂಸ್ಕೃತಿಯು ಶ್ರೀಮಂತವಾಗಿದ್ದು ಏಕತೆಯ ಮಂತ್ರವನ್ನು ಎತ್ತಿಹಿಡಿದಿದೆ. ಅಂತೆಯೇ ನಮ್ಮ ದೇಶದಲ್ಲಿ ಹಬ್ಬಗಳು ಅತಿ ಹೆಚ್ಚು. ಬೇರೆ ಬೇರೆ ಪ್ರಾಂತ್ಯಗಳು ಬೇರೆ ಬೇರೆ ರೀತಿಯಲ್ಲಿ ಸಂಪ್ರದಾಯ ಆಚರಣೆಗಳನ್ನು ಆಚರಿಸುತ್ತಿವೆ. ಅಂತೆಯೇ ನಮ್ಮ ದೇಶದಲ್ಲಿ ದೇವಸ್ಥಾನಗಳೂ ಅತಿ ಹೆಚ್ಚಿವೆ. ಭಾರತದ ಉತ್ತರದಿಂದ ಹಿಡಿದು, ಪೂರ್ವ ಪಶ್ಚಿಮದೆಲ್ಲೆಡೆಯೂ ದೇವಸ್ಥಾನಗಳ ಉದ್ದ ಪಟ್ಟಿಯೇ ಇದೆ. ಇಲ್ಲಿರುವ ದೇವಸ್ಥಾನಗಳು ನಡೆಸುವ ಆಚರಣೆಗಳು ಭಿನ್ನವಾಗಿದ್ದು ನಮ್ಮನ್ನು ಆಶ್ಚರ್ಯಕ್ಕೆ ದೂಡುತ್ತವೆ.

ಈ ಹಿಂದಿನ ಲೇಖನದಲ್ಲಿ ನಾವು ಕೆಟ್ಟ ಶಕ್ತಿಯನ್ನು ಪೂಜಿಸುವ ದೇವಸ್ಥಾನಗಳ ವಿವರಗಳನ್ನು ನೀಡಿದ್ದೆವು. ಅದೇ ಪ್ರಕಾರ ಇಂದಿನ ಲೇಖನದಲ್ಲಿ ಇನ್ನಷ್ಟು ಕೌತುಕವನ್ನು ಒಳಗೊಂಡಿರುವ ಮಹತ್ವದ ದೇವಸ್ಥಾನಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ.ಇಲ್ಲಿರುವ ದೇವಸ್ಥಾನಗಳು ಬಹು ವಿಚಿತ್ರವಾಗಿದ್ದು ಇಲ್ಲಿನ ಆಚರಣೆಗಳನ್ನು ನೀವು ನಂಬುವುದು ಕಷ್ಟವೇ ಆಗಿದೆ.....

ಜನರು ಈ ದೇವಸ್ಥಾನಕ್ಕೆ ಹೋಗಲು ಭಯಪಡುತ್ತಾರಂತೆ! ಯಾಕೆ ಗೊತ್ತೇ?

ಅಲ್ಲದೆ ಈ ದೇವಸ್ಥಾನಗಳು ಒಂದೊಂದು ಪವಾಡವನ್ನು ಹೊಂದಿದ್ದು ಈ ಪವಾಡಗಳು ಸಂಭವಿಸುತ್ತಿರುತ್ತವೆ. ಸಕಲ ದುಃಖಗಳನ್ನು ಪರಿಹರಿಸುವ ಶಕ್ತಿ ಇಲ್ಲಿನ ದೇವಾಲಯಗಳಲ್ಲಿದೆ. ಕೆಟ್ಟ ಶಕ್ತಿಯನ್ನು ಹೊಡೆದೋಡಿಸುವ, ಅಪಾಯಗಳಿಂದ ರಕ್ಷಿಸುವ, ಶಕ್ತಿಗಳನ್ನು ಈ ದೇವಸ್ಥಾನವು ಪಡೆದುಕೊಂಡಿದೆ. ಹಾಗಿದ್ದರೆ ಈ ದೇವಸ್ಥಾನಗಳನ್ನು ಕುರಿತು ಮತ್ತಷ್ಟು ಮಾಹಿತಿಗಳನ್ನು ಇಂದಿಲ್ಲಿ ತಿಳಿದುಕೊಳ್ಳೋಣ....

ಕಾಮಾಕ್ಯ ದೇವಸ್ಥಾನ

ಕಾಮಾಕ್ಯ ದೇವಸ್ಥಾನ

ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ ಕಾಮಾಕ್ಯ ದೇವಸ್ಥಾನ. 108 ಶಕ್ತಿ ಪೀಠಗಳಲ್ಲಿ ಇದೂ ಒಂದು. ಇದು ತನ್ನದೇ ಆದ ವಿಶಿಷ್ಟ ಕಥೆಯನ್ನು ಒಳಗೊಂಡಿದೆ. ಒಂದೊಮ್ಮೆ ಶಿವನ ಪತ್ನಿ ಸತಿಯು ಅಗ್ನಿಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿದ ಸಂದರ್ಭದಲ್ಲಿ ಶಿವನು ಕೋಪೋದ್ರಿಕ್ತನಾಗಿ ಸತಿಯ ದೇಹವನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ತಾಂಡವ ನೃತ್ಯವನ್ನು ಮಾಡುತ್ತಾರೆ. ಈ ನೃತ್ಯದಿಂದ ಇಡಿಯ ವಿಶ್ವವೇ ಭಸ್ಮವಾಗುತ್ತದೆ ಎಂದರಿತ ಮಹಾವಿಷ್ಣವು

ತಮ್ಮ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸುತ್ತಾರೆ. ಈ ತುಂಡುಗಳು ಬೇರೆ ಬೇರೆ ಸ್ಥಳದಲ್ಲಿ ಹೋಗಿ ಬೀಳುತ್ತವೆ. ಅಂತೆಯೇ ಸತಿಯ ಗರ್ಭಪಾತ್ರ ಯೋನಿಯು ಕಾಮಾಕ್ಯ ದೇವಸ್ಥಾನದಲ್ಲಿ ಬಿದ್ದಿತ್ತು.

ಋತುಸ್ರಾವದ ದೇವತೆ

ಋತುಸ್ರಾವದ ದೇವತೆ

ಕಾಮಾಕ್ಯ ದೇವಿಯು ಋತುಸ್ರಾವದ ದೇವತೆ ಎಂದೇ ಕರೆಯಿಸಿಕೊಂಡಿದ್ದಾರೆ. ಸತಿಯ ಗರ್ಭಪಾತ್ರ ಮತ್ತು ಯೋನಿಯನ್ನು ದೇವಸ್ಥಾನದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ. ಆಶಾಢ ಮಾಸದಲ್ಲಿ ದೇವಿಯು ಋತುಸ್ರಾವ ಕ್ರಿಯೆಗೆ ಒಳಗಾಗುತ್ತಾರೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಇಲ್ಲಿ ಹರಿಯುವ ಬ್ರಹ್ಮಪುತ್ರ ನದಿಯು ಕೆಂಬಣ್ಣಕ್ಕೆ ತಿರುಗುತ್ತದಂತೆ. ಅಂತೆಯೇ ಮೂರು ದಿನಗಳ ಕಾಲ ದೇವಳವು ಮುಚ್ಚಿರುತ್ತದೆ. ನಾಲ್ಕನೇ ದಿನ ಉತ್ಸವವಿರುತ್ತದೆ ಮತ್ತು ಈ ದಿನ

ದೇವಸ್ಥಾನವನ್ನು ತೆರೆಯುತ್ತಾರೆ ಹಾಗೂ ಪವಿತ್ರ ನೀರನ್ನು ತೀರ್ಥ ರೂಪದಲ್ಲಿ ಭಕ್ತರಿಗೆ ಹಂಚುತ್ತಾರೆ. ಹಾಗೆಯೇ ಪೂಜಾರಿಗಳು ಕುಂಕಮವನ್ನು ನದಿ ನೀರಿಗೆ ಚೆಲ್ಲುವುದರಿಂದ ಈ ನೀರು ಕೆಂಪಾಗುತ್ತದೆ ಎಂಬುದಾಗಿ ಕೂಡ ಜನರು ಹೇಳುತ್ತಾರೆ.

ಋತುಸ್ರಾವದ ದೇವಿಯನ್ನು ಪೂಜಿಸುವ ಭಾರತದ ಪವಿತ್ರ ದೇವಸ್ಥಾನವಿದು...

ಕೇದಾರನಾಥ ದೇವಾಲಯದಲ್ಲಿ ಅಂದು ನಡೆದ ಪವಾಡ!!

ಕೇದಾರನಾಥ ದೇವಾಲಯದಲ್ಲಿ ಅಂದು ನಡೆದ ಪವಾಡ!!

ಇದು ಪವಾಡದ ದೇವಸ್ಥಾನಾಗಿದ್ದರೂ ಕಳೆದ ವರ್ಷದ ಕೇದಾರನಾಥ ದುರಂತದ ನಂತರ ನಂದಿ ಮತ್ತು ದೇವಸ್ಥಾನದ ವಿಗ್ರಹಗಳು ನಾಶಗೊಂಡಿವೆ. ಅಂತೆಯೇ ಇಲ್ಲಿ ರಕ್ಷಣೆಯನ್ನು ಪಡೆದುಕೊಂಡಿದ್ದ ಭಕ್ತರು ಪವಾಡಸದೃಶರಾಗಿ ಬದುಕುಳಿದಿದ್ದರು. ಆದರೆ ಪ್ರವಾಹ ಮತ್ತು ಬಿರುಗಾಳಿಗೆ ಸಿಲುಕಿ ಅಸಂಖ್ಯಾತ ಮಂದಿ ಸಾವನ್ನಪ್ಪಿದ್ದರು. ದೇವಸ್ಥಾನದ ಸುತ್ತಲಿನ ಪರಿಸರವು ಬಹುತೇಕ ನಾಶಗೊಂಡಿದೆ.

ಜಗ್ನೇವಾದ ಹನುಮಂತ ದೇವಸ್ಥಾನ

ಜಗ್ನೇವಾದ ಹನುಮಂತ ದೇವಸ್ಥಾನ

ಇಲ್ಲಿನ ದೇವಸ್ಥಾನದ ಒಳಭಾಗದಲ್ಲಿರುವ ಕೈಪಂಪು ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಉತ್ತರ ಪ್ರದೇಶದಲ್ಲಿರುವ ಈ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ಹನುಂತನ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ. ಈ ಕೈ ಪಂಪಿನ ನೀರಿನಿಂದ ರೋಗಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಅಂತೆಯೇ ಎಲ್ಲಾ ಧರ್ಮದವರು ಇಲ್ಲಿಗೆ ಬಂದು ಪವಿತ್ರ ಜಲದಿಂದ ಪ್ರೋಕ್ಷಣೆಯನ್ನು ಮಾಡಿಕೊಳ್ಳುತ್ತಾರೆ. ಮಧ್ಯಪ್ರದೇಶದಿಂದ ಬಂದ ಸಾಧುವೊಬ್ಬರ ಆಗಮನದ ನಂತರ ಕೈಪಂಪು ಪವಿತ್ರ ನೀರಾಗಿ ಮಾರ್ಪಟ್ಟಿದೆ ಎಂಬುದು ಇಲ್ಲಿರುವ ಜನರು ಹೇಳುತ್ತಾರೆ.

ಬೈಟಲ ದೇಲಾ (ವೈಟಲ್) ದೇವಸ್ಥಾನ

ಬೈಟಲ ದೇಲಾ (ವೈಟಲ್) ದೇವಸ್ಥಾನ

ಭುವನೇಶ್ವರದಲ್ಲಿರುವ 8 ನೇ ಶತಮಾನದ ಬೈಟಲ ದೇವಾ (ವೈಟಲ) ದೇವಸ್ಥಾನವು ಶಕ್ತಿಯುತ ತಾಂತ್ರಿಕ ಸ್ಥಳವಾಗಿದೆ. ಇಲ್ಲಿರುವ ದೇವಿಯು ಚಾಮುಂಡಿಯಾಗಿದ್ದಾಳೆ. ಅಂತೆಯೇ ರುಂಡಗಳ ಹಾರವನ್ನು ಈಕೆ ಧರಿಸಿದ್ದು ತನ್ನ ಕಾಲಡಿಯಲ್ಲಿ ಮೃತದೇಹವನ್ನು ತುಳಿಯುತ್ತಿರುವ ಭಂಗಿಯಲ್ಲಿ ದೇವಿಯನ್ನು ಪ್ರತಿಷ್ಟಾಪಿಸಲಾಗಿದೆ. ಇಲ್ಲಿ ವಿದ್ಯುತ್ ಪ್ರವಾಹವು ಹರಿಯುತ್ತಿದ್ದು ಒಳಗಿನ ಆಂತರಿಕ ಮಸುಕಾದ ಪ್ರದೇಶವು ಇದನ್ನು ಹೀರಿಕೊಳ್ಳುತ್ತದೆ.

Image Courtesy

ಕಾರ್ಣಿ ಮಾತಾ ದೇವಸ್ಥಾನ

ಕಾರ್ಣಿ ಮಾತಾ ದೇವಸ್ಥಾನ

ದೇಶ್ನಾಕ್‌ನ ಸಣ್ಣ ಊರಿನಲ್ಲಿ ಈ ದೇವಸ್ಥಾನವಿದೆ. ಇದು ರಾಜಸ್ಥಾನದ ಬೈಕನಾರ್‌ನಿಂದ 30 ಕಿ.ಮೀ ದೂರದಲ್ಲಿದೆ. ಕಾರ್ಣಿ ಮಾತೆಗೆ ಈ ದೇವಸ್ಥಾನ ಮುಡಿಪಾಗಿದೆ. 14 ನೇ ಶತಮಾನದಲ್ಲಿ ಆಕೆ ಇಲ್ಲಿ ಜೀವಿಸಿದ್ದಳು ಎಂಬುದಾಗಿ ನಂಬಲಾಗಿದ್ದು, ಆಕೆಯ ಹದಿಹರೆಯದ ಮಗನು ಮೃತನಾದಾಗ ಆಕೆ ಯಮಧರ್ಮನಲ್ಲಿ ಮಗನನನ್ನು ಜೀವಂತಗೊಳಿಸಲು ಬೇಡಿಕೊಳ್ಳುತ್ತಾಳೆ. ಆದರೆ ಯಮನು ಆಕೆಯ ಇಚ್ಛೆಯನ್ನು ತಿರಸ್ಕರಿಸುತ್ತಾರೆ. ನಂತರ ದುರ್ಗೆಯನ್ನು ಆಕೆ ಪೂಜಿಸಿ ಮಗನನ್ನು ಜೀವಂತಗೊಳಿಸುತ್ತಾರೆ. ಅಂತೆಯೇ ತನ್ನ ಕುಟುಂಬದ ಸದಸ್ಯರು ಯಾರಾದರೂ ಮೃತರಾಗುವುದಿಲ್ಲ, ಅವರುಗಳು ಇಲಿಯ ರೂಪದಲ್ಲಿ ಜೀವತಳೆಯುವಂತೆ ಬೇಡಿಕೊಳ್ಳುತ್ತಾಳೆ.

Image Courtesy

ಕಾರ್ಣಿ ಮಾತಾ ದೇವಸ್ಥಾನ

ಕಾರ್ಣಿ ಮಾತಾ ದೇವಸ್ಥಾನ

15 ನೇ ಶತಮಾನಕ್ಕಿಂತಲೂ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಮತ್ತು ಮಹಾರಾಜ ಗಂಗಾ ಸಿಂಗ್ ಕಾಲದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಯಿತು. ಇಲ್ಲಿ 20,000 ಇಲಿಗಳನ್ನು ಕಾಣಬಹುದಾಗಿದೆ ಮತ್ತು ಅವುಗಳನ್ನು ಪೂಜಿಸಲಾಗುತ್ತದೆ. ಅಂತೆಯೇ ಇಲಿಗಳಿಗೆ ದೊಡ್ಡ ಪಾತ್ರೆಯಲ್ಲಿ ಹಾಲು, ಸಿಹಿ, ಖಾದ್ಯಗಳನ್ನು ನೀಡಲಾಗುತ್ತದೆ. ಅಂತೆಯೇ ಉಳಿದವುಗಳನ್ನು ಭೇಟಿನೀಡುವವರಿಗೆ ನೀಡಲಾಗುತ್ತದೆ. ಈ ಇಲಿಗಳನ್ನು ಕಾರ್ಣಿಮಾತೆ ಮತ್ತು ಅವರ ನಾಲ್ಕು ಪುತ್ರರು ಎಂಬುದಾಗಿ ನಂಬಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನದ ಪವಾಡ

ತಿರುಮಲ ತಿರುಪತಿ ದೇವಸ್ಥಾನದ ಪವಾಡ

ತಿರುಮಲದ ತಿರುಪತಿ ದೇವಸ್ಥಾನದಲ್ಲಿ ಕೂಡ ಪವಾಡಸದೃಶ ದೇವಾಲಯವೆಂದು ಕರೆಯಲಾಗಿದೆ. 7 ನವೆಂಬರ್ 1979 ರ ಮಧ್ಯರಾತ್ರಿಯಲ್ಲಿ ದೇವಸ್ಥಾನದ ಕಂಚಿನ ಘಂಟೆಗಳು ರಿಂಗಣಿಸಲು ತೊಡಗಿದವು. ವೆಂಕಟೇಶ್ವರ ಸ್ವಾಮಿಯ ಮುಂಭಾಗದಲ್ಲಿರುವ ಈ ಘಂಟೆಗಳು ತಮ್ಮಷ್ಟಕ್ಕೇ ಹೊಡೆದುಕೊಳ್ಳಲು ಆರಂಭಿಸಿದವು. ಇದನ್ನು ಯಾರು ಕೂಡ ಸ್ಪರ್ಶಿಸದೆಯೇ, ಗಾಳಿ ಬೀಸದೆಯೇ ಬೆಟ್ಟದ ಮೇಲಿರುವ ವೆಂಕಟೇಶ್ವರ ಗುಡಿಯಲ್ಲಿ ರಿಂಗಣಿಸಲು ಆರಂಭಿಸಿದವು.

ವೆಂಕಟೇಶ್ವರ ದೇವರ ಮೂರ್ತಿಯ ಕೆಲವೊಂದು ರಹಸ್ಯಗಳು

ಓಂ ಬನ್ನಾ ಶ್ರೈನ್ (ಬುಲ್ಲೆಟ್ ದೇವಸ್ಥಾನ)

ಓಂ ಬನ್ನಾ ಶ್ರೈನ್ (ಬುಲ್ಲೆಟ್ ದೇವಸ್ಥಾನ)

ಓಂ ಬನ್ನಾ ಅಥವಾ ಬುಲ್ಲೆಟ್ ಬಾಬಾ ದೇವಸ್ಥಾನ ಭಾರತದ ಜೋಧಪುರದಲ್ಲಿರುವ ದೇವಾಲಯವಾಗಿದೆ. ಇದು ಜೋಧಪುರದಿಂದ 50 ಕಿ.ಮೀ ದೂರದಲ್ಲಿರುವ ಚೋತಿಲಾ ಹಳ್ಳಿಯಲ್ಲಿದೆ. ಮದ್ಯವನ್ನು ಅರ್ಪಣೆ ಮಾಡಿ ಭಕ್ತರು ತಮ್ಮ ಸುಖ ಶಾಂತಿಯುಳ್ಳ ಪ್ರವಾಸವನ್ನು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಶ್ರೀ ಓಂ ಸಿಂಗ್ ರಾಥೋರ್ ಹಳ್ಳಿಯ ನಾಯಕರ ಪುತ್ರನಾಗಿದ್ದನು. ಆದರೆ ಬೈಕ್‌ನಲ್ಲಿ ಮರದೆಡೆಯಲ್ಲಿ ಪ್ರಯಾಣಿಸುತ್ತಿರುವಾಗ ಆತ ಕೊಲ್ಲಲ್ಪಡುತ್ತಾರೆ. ಅವರ ಮೋಟಾರ್

ಸೈಕಲ್‌ ಅನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ ಆದರೆ ಮರುದಿನ ಅದೇ ಅಪಘಾತ ನಡೆದ ಸ್ಥಳದಲ್ಲಿ ಅವರ ಮೋಟಾರ್ ಬೈಕ್ ಕಂಡುಬರುತ್ತದೆ. ಈ ಬಾರಿ ಬೈಕ್ ಅನ್ನು ಕಬ್ಬಿಣದ ಸರಪಣಿಗಳಿಂದ ಬಂಧಿಸಿ ಠಾಣೆಯಲ್ಲಿ ಇರಿಸಲಾಗುತ್ತದೆ. ಆದರೆ ಮರುದಿನ ಅದೇ ಸ್ಥಳದಲ್ಲಿ ಪುನಃ ಬೈಕ್ ಕಂಡುಬರುತ್ತದೆ.

ಈ ಊರಿನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕೇ ದೇವರು!

English summary

Secret about Indian temples that can keep you up at night!

India is a land of diversity. India is a land of varied cultures. India is a land of festivals. And then India is a land of temples. From the hilly areas of Himalayas to the mountains of Ladakh to the forgotten villages of Tamil Nadu to the caves of Maharashtra and deserts of Rajasthan - Temples are everywhere. The stories, legends and beliefs associated with these places are all the more astounding. There are so many unexplained things related to these worship places that one can run short of explanations and ideas. Here’s a look...
X
Desktop Bottom Promotion