For Quick Alerts
ALLOW NOTIFICATIONS  
For Daily Alerts

ನೆನಪಿಡಿ, ದೇವರಿಗೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ...

|

ಇಷ್ಟದೇವರನ್ನು ಪ್ರಾರ್ಥಿಸಿ ನಮ್ಮ ಕೆಲಸಗಳು ಸಿದ್ಧಿಯಾಗಲೆಂದು ನಡೆಸುವ ಪೂಜೆಯಲ್ಲಿ ದೇವರಿಗೆ ಇಷ್ಟವಾಗುವ ವಸ್ತುಗಳನ್ನೂ ಅರ್ಪಿಸುತ್ತೇವೆ. ಕೆಲವೊಮ್ಮೆ ಅರಿವಿಲ್ಲದೇ ಅಪವಿತ್ರವಾದ ಅಥವಾ ಪೂಜೆಗೆ ಸಲ್ಲದ ವಸ್ತುಗಳನ್ನೂ ಅರ್ಪಿಸುವ ಮೂಲಕ ಅಮಂಗಳಕರ ವಾತಾವರಣವನ್ನು ಹರಡಲು ಕಾರಣವಾಗುತ್ತೇವೆ. ಆದ್ದರಿಂದ ಯಾವುದೇ ಪೂಜೆಗೆ ಮುನ್ನ ಪೂಜೆಗೆ ಸೂಕ್ತವಾದ ಹಾಗೂ ಪವಿತ್ರವಾದ ವಸ್ತುಗಳು ಯಾವುವು ಹಾಗೂ ಯಾವುವು ಅಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿರುವುದು ಅವಶ್ಯ.

ಅಲ್ಲದೇ ವಿವಿಧ ದೇವರ ಪೂಜೆಗೆ ಬಳಸಲಾಗುವ ವಸ್ತುಗಳೂ ಬೇರೆ ಬೇರೆಯಾಗಿರಬಹುದು ಹಾಗೂ ಕೆಲವು ಸಮಾನವಾಗಿರಬಹುದು. ಕೆಲವು ವಸ್ತುಗಳು ಕೆಲವು ದೇವರುಗಳಿಂದ ಹರಸಲ್ಪಟ್ಟಿದ್ದರೆ ಇದೇ ವಸ್ತುಗಳನ್ನು ಇತರ ದೇವರು ಶಪಿಸಿರಬಹುದು. ಹಾಗಾಗಿ ಯಾವ ದೇವರ ಪೂಜೆ ಎಂದು ಖಚಿತಪಡಿಸಿಕೊಂಡು ಶಪಿಸಲ್ಪಟ್ಟ ವಸ್ತುಗಳನ್ನು ಸರ್ವಥಾ ಬಳಸಕೂಡದು. ಹಾಗಾಗಿ ಪೂಜೆಗೂ ಮೊದಲು ಯಾವ ದೇವರಿಗೆ ಯಾವ ವಸ್ತುಗಳು ಇಷ್ಟ ಎಂಬುದನ್ನು ಅರಿತುಕೊಂಡು ಆ ಪ್ರಕಾರವೇ ಪೂಜಾಗೃಹವನ್ನು ಸಿದ್ಧಪಡಿಸಬೇಕು. ಬನ್ನಿ, ಪೂಜೆಯ ಸಮಯದಲ್ಲಿ ಪ್ರತಿಯೊಬ್ಬರೂ ಅರಿತಿರಬೇಕಾದ ಕೆಲವು ವಿಚಾರಗಳನ್ನು ನೋಡೋಣ....

ಅಗರಬತ್ತಿ ಬಳಸಬೇಡಿ

ಅಗರಬತ್ತಿ ಬಳಸಬೇಡಿ

ಪೂಜೆಯಲ್ಲಿ ಅಗರಬತ್ತಿಯನ್ನು ನಾವೆಲ್ಲರೂ ಬಳಸುತ್ತಾ ಬಂದಿದ್ದೇವೆ. ಪೂಜೆಯಲ್ಲಿ ಧೂಪವನ್ನು ಬಳಸಬೇಕೆಂದು ಹೇಳಲ್ಪಟ್ಟಿದೆಯೇ ಹೊರತು ಅಗರಬತ್ತಿಗಳನ್ನಲ್ಲ! ಅಗರಬತ್ತಿಯನ್ನು ಬಿದಿರಿನ ಕಡ್ಡಿಗಳಿಂದ ತಯಾರಿಸಲಾಗುತ್ತದೆ ಹಾಗೂ ಪೂಜೆಯಲ್ಲಿ ಬಿದಿರು ಅಪವಿತ್ರವಾದ ವಸ್ತುವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ. ಆದ್ದರಿಂದಲೇ ವೇದಕಾಲದಲ್ಲಿ ಹವನ, ಯಜ್ಞಗಳಲ್ಲಿ ಬಿದಿರನ್ನು ಎಂದಿಗೂ ಬಳಸಲಾಗುತ್ತಿರಲಿಲ್ಲ.

ದುರ್ವಾಸನೆ ಸೂಸುವ ಬಾಯಿಯಿಂದ ಮಂತ್ರ ಪಠಿಸಬಾರದು

ದುರ್ವಾಸನೆ ಸೂಸುವ ಬಾಯಿಯಿಂದ ಮಂತ್ರ ಪಠಿಸಬಾರದು

ಒಂದು ವೇಳೆ ಮಂತ್ರ ಪಠಿಸುವವರ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ ಮಂತ್ರಗಳೂ ಅಪವಿತ್ರವೆಂದು ಭಾವಿಸಲಾಗುತ್ತದೆ. ಅಲ್ಲದೇ ಪೂಜೆ ಸಲ್ಲಿಸುವವರ ಕೂದಲು ಸಹಾ ತೊಳೆದು ಸ್ವಚ್ಛಪಡಿಸಿಕೊಂಡಿರಬೇಕು. ದುರ್ವಾಸನೆ ಸೂಸುವ ಬಾಯಿ ಹಾಗೂ ಕೂದಲಿನಿಂದ ಸಲ್ಲಿಸುವ ಪೂಜೆ ಅಯಶಸ್ವಿಯಾಗುತ್ತದೆ ಎಂದು ಪಂಡಿತರು ತಿಳಿಸುತ್ತಾರೆ.

ಕೊಳೆಯಾದ, ಹರಿದ ಬಟ್ಟೆಗಳನ್ನು ತೊಡಬಾರದು

ಕೊಳೆಯಾದ, ಹರಿದ ಬಟ್ಟೆಗಳನ್ನು ತೊಡಬಾರದು

ಪೂಜೆಯ ಸಮಯಲ್ಲಿ ಧರಿಸುವ ಉಡುಗೆಗಳು ಸ್ವಚ್ಛವಾಗಿರಬೇಕು ಹಾಗೂ ಎಲ್ಲಿಯೂ ಹರಿದಿರಬಾರದು. ಹರಿದ ಬಟ್ಟೆಗಳು ದಾರಿದ್ರ್ಯದ ಸಂಕೇತವಗಿದೆ ಹಾಗೂ ದೇವರು ದಾರಿದ್ರ್ಯವನ್ನು ಇಷ್ಟಪಡುವುದಿಲ್ಲ ಎಂದು ನಂಬಲಾಗಿದೆ. ಆದ್ದರಿಂದ ಪೂಜೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ತಮ್ಮಲ್ಲಿರುವ ಅತ್ಯುತ್ತಮ, ಒಗೆದು ಒಪ್ಪಗೊಳಿಸಿದ ಉಡುಗೆಗಳನ್ನೇ ತೊದಬೇಕು. ವಿಶೇಷಪೂಜೆಗಳಲ್ಲಿ ಹೊಸಬಟ್ಟೆಗಳನ್ನು ಧರಿಸುವುದು ಪವಿತ್ರ ಎಂದು ಭಾವಿಸಲಾಗಿದೆ.

ಗಣೇಶನಿಗೆಂದೂ ತುಳಸಿ ಅರ್ಪಿಸಬೇಡಿ

ಗಣೇಶನಿಗೆಂದೂ ತುಳಸಿ ಅರ್ಪಿಸಬೇಡಿ

ಗಣೇಶ ಹಾಗೂ ದೇವ ಬೈರವನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸದಿರಿ. ಗಣೇಶನು ತುಳಸಿಯನ್ನು ಶಪಿಸಿದ್ದು ತನ್ನ ಪೂಜೆಗೆ ಎಂದಿಗೂ ಆಕೆಯನ್ನು ಆಮಂತ್ರಿಸದ ಕಾರಣ ಗಣೇಶನ ಪೂಜೆಯಲ್ಲಿ ತುಳಸಿಯನ್ನು ಇರಿಸುವ ಮೂಲಕ ಗಣೇಶನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಸ್ನಾನ ಮಾಡದೇ ತುಳಸಿ ಎಲೆಗಳನ್ನು ಕೀಳಬೇಡಿ

ಸ್ನಾನ ಮಾಡದೇ ತುಳಸಿ ಎಲೆಗಳನ್ನು ಕೀಳಬೇಡಿ

ತುಳಸಿದೇವಿಯ ಕೃಪೆಗೆ ಒಳಗಾಗಬೇಕಾದರೆ ತುಳಸಿ ಎಲೆಗಳನ್ನು ಕೊಯ್ಯುವವರು ಸ್ನಾನ ಮಾಡಿ ಸ್ವಚ್ಛರಾಗಿರಬೇಕಾಗುತ್ತದೆ. ಮಲಿನ ಶರೀರದಿಂದ ತುಳಸಿ ಎಲೆಗಳನ್ನು ಕೊಯ್ಯುವವರರನ್ನು ತುಳಸಿದೇವಿ ಇಷ್ಟಪಡುವುದಿಲ್ಲ ಹಾಗೂ ಈ ಎಲೆಗಳನ್ನು ಪೂಜೆಯಲ್ಲಿ ಸಲ್ಲಿಸಿದರೆ ಸ್ವೀಕರಿಸುವುದೂ ಇಲ್ಲ. ಅಲ್ಲದೇ ತುಳಸಿ ಗಿಡಕ್ಕೆ ಭಾನುವಾರ ನೀರು ಹಾಕಬಾರದು.

ಶಿವನಿಗೆ ಕೇತಕಿ ಹೂವುಗಳನ್ನು ಅರ್ಪಿಸಬಾರದು

ಶಿವನಿಗೆ ಕೇತಕಿ ಹೂವುಗಳನ್ನು ಅರ್ಪಿಸಬಾರದು

ಶಿವಪೂಜೆಯಲ್ಲಿ ಕೇತಕಿ ಹೂವನ್ನು ಅರ್ಪಿಸಬಾರದು, ಆದರೆ ಕಾರ್ತಿಕ ಮಾಸದಲ್ಲಿ ಭಗವಂತ ವಿಷ್ಣುವಿನ ಪೂಜೆಯಲ್ಲಿ ಈ ಹೂವನ್ನು ಬಳಸಬಹುದು.

ಭಾನುವಾರ ಕೆಲವು ಹೂವುಗಳನ್ನು ಕೀಳಬಾರದು

ಭಾನುವಾರ ಕೆಲವು ಹೂವುಗಳನ್ನು ಕೀಳಬಾರದು

ಶಾಸ್ತ್ರಗಳ ಪ್ರಕಾರ, ಕೆಲವು ಹೂವುಗಳನ್ನು ಭಾನುವಾರದಂದು ಕೀಳಬಾರದು. ತುಳಸಿ ಮತ್ತು ದೂರ್ವ ಪುಷ್ಪಗಳು ಈ ಪಟ್ಟಿಯಲ್ಲಿ ಸೇರುತ್ತವೆ. ಈ ದಿನ ಕೊಯ್ದ ಹೂವುಗಳನ್ನು ಪೂಜೆಗೆ ಅರ್ಪಿಸಿದರೆ ದೇವರುಗಳು ನಿರಾಶರಾಗುತ್ತಾರೆ.

ಕುಂಡಹೂವು ಶಿವನಿಗೆ ಕೇವಲ ಮಾಘಮಾಸದಲ್ಲಿ ಮಾತ್ರ

ಕುಂಡಹೂವು ಶಿವನಿಗೆ ಕೇವಲ ಮಾಘಮಾಸದಲ್ಲಿ ಮಾತ್ರ

ಶಿವನಿಗೆ ಸಲ್ಲಿಸುವ ಪೂಜೆಯಲ್ಲಿ ಕುಂಡಹೂವನ್ನು ಕೇವಲ ಮಾಘಮಾಸದಲ್ಲಿ ಮಾತ್ರವೇ ಅರ್ಪಿಸಬಹುದು. ಇತರ ಮಾಸಗಳಲ್ಲಿ ಈ ಹೂವನ್ನು ಶಿವನಿಗೆ ಅರ್ಪಿಸುವುದು ಅಪವಿತ್ರ ಎಂದು ಭಾವಿಸಲಾಗಿದೆ.

ಭಗವಂತ ಸಾಲಿಗ್ರಾಮನಿಗೆ ಅವಾಹನೆ ಮತು ವಿಸರ್ಜನೆ ಸಲ್ಲದು

ಭಗವಂತ ಸಾಲಿಗ್ರಾಮನಿಗೆ ಅವಾಹನೆ ಮತು ವಿಸರ್ಜನೆ ಸಲ್ಲದು

ಭಗವಂತ ಸಾಲಿಗ್ರಾಮನಿಗೆ ಅವಾಹನೆ ಮತು ವಿಸರ್ಜನೆಗಳನ್ನು ಸರ್ವಥಾ ಮಾಡಕೂಡದು! ಅಲ್ಲದೇ ಈ ದೇವರಿಗೆ ಅಕ್ಷತೆಯನ್ನೂ ಸಲ್ಲಿಸಬಾರದು! ಈ ದೇವರನ್ನು ಪೂಜಿಸುವ ವೇಳೆಯಲ್ಲಿ ಕೇವಲ ಅರಿಶಿನ ಬೆರೆಸಿದ ಅಕ್ಕಿಯನ್ನು ಮಾತ್ರವೇ ಬಳಸಬೇಕು.

ಕರಗಿದ ತುಪ್ಪ ಅಥವಾ ಗಂಧದ ದ್ರವವನ್ನು ಸಲ್ಲಿಸಬಾರದು

ಕರಗಿದ ತುಪ್ಪ ಅಥವಾ ಗಂಧದ ದ್ರವವನ್ನು ಸಲ್ಲಿಸಬಾರದು

ಯಾವುದೇ ದೇವರ ಪೂಜೆಯಲ್ಲಿ ಕರಗಿಸಿದ ತುಪ್ಪ ಅಥವಾ ದ್ರವ ಗಂಧವನ್ನು ಅರ್ಪಿಸುವುದು ಸಲ್ಲದು.

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು

ಹೀಗೆ ಮಾಡುವುದರಿಂದ ಅನಾರೋಗ್ಯ ಮತ್ತು ದಾರಿದ್ರ್ಯ ಆವರಿಸುತ್ತದೆ. ಪ್ರತಿ ದೀಪವನ್ನು ಹಚ್ಚಲು ಬೇರೆ ಕಡ್ಡಿಯನ್ನೇ ಉಪಯೋಗಿಸಬೇಕು, ಒಂದೇ ಕಡ್ಡಿಯಿಂದ ಹಲವಾರು ದೀಪಗಳನ್ನು ಹಚ್ಚಬಹುದು.

ದೀಪವನ್ನು ದಕ್ಷಿಣಾಭಿಮುಖವಾಗಿ ಇರಿಸಬಾರದು

ದೀಪವನ್ನು ದಕ್ಷಿಣಾಭಿಮುಖವಾಗಿ ಇರಿಸಬಾರದು

ಪೂಜಾಗೃಹದಲ್ಲಿ ದೀಪವನ್ನು ಎಂದಿಗೂ ದಕ್ಷಿಣಾಭಿಮುಖವಾಗಿ ಇರಿಸಬಾರದು. .

ಮೂರ್ತಿಗಳನ್ನು ತೊಳೆಯುವಾಗ ಹೆಬ್ಬೆಟ್ಟಿನಿಂದ ಉಜ್ಜಬಾರದು

ಮೂರ್ತಿಗಳನ್ನು ತೊಳೆಯುವಾಗ ಹೆಬ್ಬೆಟ್ಟಿನಿಂದ ಉಜ್ಜಬಾರದು

ಆಗಾಗ ದೇವರ ಮೂರ್ತಿಗಳನ್ನು ಸ್ವಚ್ಛಪಡಿಸುತ್ತಿರಬೇಕು. ಆದರೆ ಸ್ವಚ್ಛಗೊಳಿಸುವಾಗ ಹೆಬ್ಬೆಟ್ಟಿನಿಂದ ಉಜ್ಜಬಾರದು. ಹೀಗೆ ಮಾಡುವುದರಿಂದ ದೇವರಿಗೆ ಕೋಪ ಬರುತ್ತದೆ ಎಂದು ಭಾವಿಸಲಾಗುತ್ತದೆ.

ಕೃಷ್ಣಪಕ್ಷದಲ್ಲಿ ಲಕ್ಷ್ಮಿಪೂಜೆ ಸಲ್ಲದು

ಕೃಷ್ಣಪಕ್ಷದಲ್ಲಿ ಲಕ್ಷ್ಮಿಪೂಜೆ ಸಲ್ಲದು

ಕೃಷ್ಣಪಕ್ಷ, ಶ್ರವಣ ನಕ್ಷತ್ರ ಹಾಗೂ ಋತ್ತಿಕ ತಿಥಿಯ ಸಮಯದಲ್ಲಿ ಎಂದಿಗೂ ಲಕ್ಷ್ಮೀಪೂಜೆಯನ್ನು ನಡೆಸಬಾರದು.

ಪೂಜೆಗೂ ಮೊದಲು ಗೌರವಾನ್ವಿತರು ಆಗಮಿಸಿದರೆ ಅವರನ್ನು ಕಡೆಗಣಿಸಬಾರದು

ಪೂಜೆಗೂ ಮೊದಲು ಗೌರವಾನ್ವಿತರು ಆಗಮಿಸಿದರೆ ಅವರನ್ನು ಕಡೆಗಣಿಸಬಾರದು

ಪೂಜೆಗೂ ಮುನ್ನ ಹಿರಿಯರು ಹಾಗೂ ಗೌರವಾನ್ವಿತರು ಮನೆಗೆ ಆಗಮಿಸಿದರೆ ಅವರನ್ನೆಂದೂ ಕಡೆಗಣಿಸಬಾರದು ಹಾಗೂ ಅವರಿಗೆ ಸಲ್ಲಬೇಕಾದ ಗೌರವ, ಆದರದಿಂದ ಸ್ವಾಗತಿಸಬೇಕು. ಪೂಜೆಯ ಕಾರಣದಿಂದ ಹಿರಿಯರನ್ನು ಕಡೆಗಣಿಸಿದರೆ ಇದು ಅಪವಿತ್ರ ಎಂದು ಭಾವಿಸಲಾಗುತ್ತದೆ.

ಪೂಜೆಯ ಸಮಯದಲ್ಲಿ ಸಾಮಾನ್ಯವಾಗಿ ಅರಿವಿಲ್ಲದೇ ಮಾಡುವ ತಪ್ಪುಗಳ ಬಗ್ಗೆ ಅರಿತೆವು. ಪೂಜೆಯ ಸಮಯದಲ್ಲಿ ಸಾಮಾನ್ಯವಾಗಿ ಗಮನಕ್ಕೆ ಬಾರದೇ ಹೋಗುವ ಕೆಲವು ಸಂಗತಿಗಳ ಬಗ್ಗೆ ವಿವರಿಸಲಾಗಿದೆ, ಇವುಗಳನ್ನು ಅನುಸರಿಸುವ ಮೂಲಕ ಪೂಜೆಯ ಪರಿಪೂರ್ಣ ಪ್ರಯೋಜನವನ್ನು ಪಡೆಯಬಹುದು.

1. ಅಮೃತದಷ್ಟೇ ಪಂಚಾಮೃತವೂ ಪವಿತ್ರ ಎಂದು ಶಾಸ್ತ್ರಗಳು ತಿಳಿಸುತ್ತವೆ. ಆದ್ದರಿಂದ ಪೂಜೆಯ ಸಮಯದಲ್ಲಿ ಪಂಚಾಮೃತವನ್ನು ಬಳಸುವುದು ಉತ್ತಮ. ಅಲ್ಲದೇ ದೇವರಿಗೂ ಪಂಚಾಮೃತ ಇಷ್ಟವಾಗಿದ್ದು ದೇವರ ಅನುಗ್ರಹವನ್ನು ಪಡೆಯಲು ಪೂಜೆಯಲ್ಲಿ ಪಂಚಾಮೃತವನ್ನು ಸದಾ ಬಳಸಬೇಕು.

2. ಲಕ್ಷ್ಮೀಪೂಜೆಯಲ್ಲಿ ಕೆಂಪು ಬಣ್ಣ ಬಳಸುವುದು ಪವಿತ್ರವಾಗಿದೆ. ಆದ್ದರಿಂದ ಪೂಜೆಯಲ್ಲಿ ಬಳಸುವ ದೀಪದ ಬತ್ತಿ ಕೆಂಪುಬಣ್ಣದ್ದಾಗಿದ್ದರೆ ಒಳ್ಳೆಯದು. ಅಲ್ಲದೇ ದೀಪವನ್ನು ಬೆಳಗಿಸಿದ ಬಳಿಕ ಬಲಭಾಗದಲ್ಲಿರಿಸಬೇಕು.

3. ಶಂಖದ ಸದ್ದಿನಿಂದ ಪೂಜಾಗೃಹ ಹಾಗೂ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊಡೆದೋಡಿಸಲು ಸಾಧ್ಯವಾಗುತ್ತದೆ ಹಾಗೂ ಈ ಸ್ಥಳದಲ್ಲಿ ಧನಾತ್ಮಕ ಕಂಪನಗಳನ್ನು ಉತ್ಪತ್ತಿಮಾಡುತ್ತದೆ. ಇದೇ ಕಾರಣಕ್ಕೆ ದೇವಸ್ಥಾನಗಳಲ್ಲಿ ಶಂಖವನ್ನು ಪೂಜಾಸಮಯದಲ್ಲಿ ಮೊಳಗಿಸಲಾಗುತ್ತದೆ. ಅಲ್ಲದೇ ಶಂಖನಾದದಿಂದ ಲಕ್ಷ್ಮೀದೇವಿಯೂ ಪ್ರಸನ್ನಳಾಗುತ್ತಾಳೆ.

4. ಪೂಜೆಯ ಸಮಯದಲ್ಲಿ ಕುಳಿತುಕೊಳ್ಳಲು ಉಣ್ಣೆಯ ಚಾಪೆಯನ್ನು ಬಳಸುವುದು ಉತ್ತಮ.

5. ಲಕ್ಷ್ಮೀದೇವಿಗೆ ಪೂಜೆಯ ಸಮಯದಲ್ಲಿ ಕಮಲದ ಹೂವನ್ನು ಅರ್ಪಿಸುವುದು ಪವಿತ್ರ ಎಂದು ಭಾವಿಸಲಾಗಿದೆ.

6. ದೇವರಿಗೆ ವೀಳ್ಯದೆಲೆ ಹಾಗೂ ಗುಲ್ಕಂದ್ ಸಹಾ ಇಷ್ಟವಾಗಿದ್ದು ಪೂಜೆಯಲ್ಲಿ ಬಳಸಬಹುದು.

7. ವಿಷ್ಣುದೇವರ ಪೂಜೆಯ ಸಮಯದಲ್ಲಿ ದೇವರಿಗೆ ಹಳದಿ ವಸ್ತ್ರಗಳನ್ನು ಅರ್ಪಿಸಬೇಕು ಹಾಗೂ ಪೂಜಾಸಮಯದಲ್ಲಿ ಸಾಧ್ಯವಾದಷ್ಟೂ ಮಟ್ಟಿಗೆ ಹಳದಿ ಬಣ್ಣದ ಬಟ್ಟೆಗಳನ್ನೇ ತೊಡಬೇಕು.

8. ಪ್ರತಿ ಪೂಜೆಯ ಸಮಯದಲ್ಲಿಯೂ ಭಗವಂತ ಗಣೇಶ, ಸೂರ್ಯ, ವಿಷ್ಣು, ಶಿವ ಹಾಗೂ ದೇವತೆ ದುರ್ಗೆಯ ಹೆಸರನ್ನು ಪ್ರಸ್ತಾಪಿಸಬೇಕು ಹಾಗೂ ಸ್ತುತಿಸಬೇಕು. ಈ ಐವರು ದೇವರನ್ನು ಪಂಚದೇವರೆಂದು ಕರೆಯಲಾಗುತ್ತದೆ ಹಾಗೂ ಪ್ರತಿ ಪೂಜೆಯಲ್ಲಿಯೂ ಪಂಚದೇವರ ಸ್ತುತಿ ಕಡ್ಡಾಯವಾಗಿದೆ ಎಂದು ಹಿಂದೂ ಶಾಸ್ತ್ರಗಳು ವಿವರಿಸುತ್ತವೆ.

English summary

Do's and Don'ts For Any Puja

With the aim of pleasing our deity with all that we have and all that we can, we might offer a few things which are unconsecrated and might end up spreading inauspiciousness around. Therefore, one must always know what are the things that are sacred and what are not, before performing a puja. Among all the items that we use for a puja, it is not at all necessary that the same items can be used for offering to every deity or in another puja. Here is a list of various items that can not be used, as well as those which can be used in a puja. Take a look.
X
Desktop Bottom Promotion