ಲಕ್ಷ್ಮೀ ಪೂಜೆಗೂ ಮುನ್ನ ಸಿದ್ಧತೆ ಹೀಗಿರಲಿ, ಎಲ್ಲವೂ ಒಳ್ಳೆಯದಾಗಲಿದೆ..

By: manu
Subscribe to Boldsky

ನಮಗೆಲ್ಲಾ ತಿಳಿದಿರುವಂತೆ ಲಕ್ಷ್ಮೀ ದೇವತೆಯು ಸಂಪತ್ತಿನ ಅಧಿದೇವತೆಯಾಗಿದ್ದು ವಿಶೇಷವಾಗಿ ದೀಪಾವಳಿಯ ಸಮಯದಲ್ಲಿ ಆಕೆಯನ್ನು ಸ್ಮರಿಸುವುದು ಸರ್ವೇ ಸಾಮಾನ್ಯವಾಗಿದೆ. ಹೆಚ್ಚಿನ ವ್ಯಾಪಾರ ಮಳಿಗೆಗಳು ದೀಪಾವಳಿಯ ಸಂದರ್ಭದಲ್ಲಿ ಅಂಗಡಿ ಪೂಜೆಯನ್ನಿಟ್ಟುಕೊಂಡು ಲಕ್ಷ್ಮೀ ದೇವತೆಗೆ ಪೂಜೆಯನ್ನು ಅರ್ಪಿಸಿ ಸಿಹಿಯನ್ನು ಹಂಚುತ್ತಾರೆ. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಅವರ ನಂಬಿಕೆಯಾಗಿದೆ. ಇನ್ನು ಲಕ್ಷ್ಮೀ ದೇವಿಯು ದೀಪಾವಳಿಯಂದೇ ಜನಿಸಿದ್ದರು ಎಂಬ ಪ್ರತೀತಿ ಕೂಡ ಇದೆ.

ಸಾಮಾನ್ಯವಾಗಿ ಅಮವಾಸ್ಯೆಯ ರಾತ್ರಿ ಆಕೆಯನ್ನು ಪೂಜಿಸಲಾಗುತ್ತದೆ. ಈ ದಿನ ಮಾತೆಯನ್ನು ಪೂಜಿಸುವುದರಿಂದ ಆಕೆ ಸಿರಿ ಸಂಪತ್ತನ್ನು ಕರುಣಿಸುತ್ತಾರೆ ಎಂಬುದು ನಂಬಿಕೆಯಾಗಿದೆ. ದೀಪಾವಳಿಯಂದು ಲಕ್ಷ್ಮೀ ಪೂಜೆಯನ್ನು ನಡೆಸುವವರ ಮನೆಗೆ ದೇವಿ ಅಗತ್ಯವಾಗಿ ಭೇಟಿ ನೀಡುತ್ತಾರೆ. ಅಂತೆಯೇ ದೀಪಾವಳಿಯಂದು ನಡೆಸಲೇಬೇಕಾದ ಅತಿಮುಖ್ಯ ಕ್ರಿಯೆ ಕೂಡ ಇದಾಗಿದೆ. ಪೂಜೆಯನ್ನು ನಡೆಸುವಾಗ ನೀವು ಕೆಲವೊಂದು ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡರೆ ಲಕ್ಷ್ಮೀಯನ್ನು ಶೀಘ್ರದಲ್ಲಿ ಒಲಿಸಿಕೊಳ್ಳಬಹುದಾಗಿದೆ.

Goddess Lakshmi

ಮನೆಯನ್ನು ಮನವನ್ನು ಸ್ವಚ್ಛವಾಗಿರಿಸಿಕೊಳ್ಳುವುದರ ಮೂಲಕ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ದೇವಿಯು ನಿಮಗೆ ಬೇಗನೇ ಒಲಿಯುತ್ತಾರೆ. ಆದ್ದರಿಂದ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಿ. ಪೂಜೆಯ ಸಮಯದಲ್ಲಿ ಕಿರುಚಾಳ, ಜಗಳ, ದೊಡ್ಡ ಸದ್ದುಗದ್ದಲ, ಪಟಾಕಿ ಹಚ್ಚುವುದು ಮೊದಲಾದ ಕಾರ್ಯಗಳನ್ನು ನಡೆಸಬಾರದು. ಅಂತೆಯೇ ನಮ್ಮ ಅರಿಷಡ್ವರ್ಗಗಳ ಮೇಲೆ ಹಿಡಿತವನ್ನು ಸಾಧಿಸಲು ಕೂಡ ಲಕ್ಷ್ಮೀಯನ್ನು ಪೂಜಿಸುವುದು ಅವಶ್ಯವಾಗಿದೆ. ನೀವು ಲಕ್ಷ್ಮೀ ಮಾತೆಯನ್ನು ಪೂಜಿಸುವ ಮುನ್ನ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

Kubera

ಕುಬೇರನ ಮೂರ್ತಿಯನ್ನು ಪ್ರತಿಷ್ಠಾಪಿಸುವುದು

ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಕುಬೇರನ ಮೂರ್ತಿ ಸ್ಥಾಪಿಸುವುದು ಇಲ್ಲವೇ ಕುಬೇರ ಯಂತ್ರವನ್ನು ಬಳಸುವುದು ಮುಖ್ಯವಾಗಿದೆ. ಧನವನ್ನು ಸಂರಕ್ಷಿಸುವವರು ಕುಬೇರನಾಗಿದ್ದು ಸ್ವಚ್ಛವಾದ ಸ್ಥಳದಲ್ಲಿ ಅವರ ಮೂರ್ತಿಯನ್ನು ಇರಿಸಬೇಕು.

ಚಿಪ್ಪು, ಶಂಖಗಳನ್ನು ಮನೆಯಲ್ಲಿ ಇರಿಸುವುದು

ಸಮುದ್ರದಿಂದ ಜನ್ಮತಾಳಿರುವ ಲಕ್ಷ್ಮೀ ಕಡಲಿನಿಂದ ದೊರೆಯುವ ಚಿಪ್ಪುಗಳು, ಶಂಖ ತುಂಬಾ ಇಷ್ಟದ ವಸ್ತುಗಳಾಗಿವೆ. ಆದ್ದರಿಂದ ಇವುಗಳನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿ.

shanka

ದಾನ ಮಾಡುವುದು

ಪಂಡಿತರಿಗೆ ಬಡ ಬಗ್ಗರಿಗೆ ಬಟ್ಟೆ, ದವಸ ಧಾನ್ಯಗಳನ್ನು ದಾನ ಮಾಡುವುದರಿಂದ ಕೂಡ ಲಕ್ಷ್ಮೀ ದೇವಿ ಪ್ರಸನ್ನರಾಗುತ್ತಾರೆ.

ತುಳಸಿಯನ್ನು ಪೂಜಿಸುವುದು

ನಿಮ್ಮ ಮನೆಯ ವೆರಾಂಡದಲ್ಲಿರುವ ತುಳಸಿ ಕಟ್ಟೆಗೆ ದೀಪವನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಲಕ್ಷ್ಮೀಯನ್ನು ನಿಮ್ಮ ಮನೆಗೆ ಆಹ್ವಾನಿಸಿದಂತೆಯೇ.

shivlinga

ಶಿವಲಿಂಗದ ಪೂಜೆ

ದೀಪಾವಳಿಯ ಮುಂಜಾನೆ ತಾಮ್ರದ ತೊಟ್ಟಿಯಲ್ಲಿ ಇರಿಸಿರುವ ಶಿವಲಿಂಗಕ್ಕೆ ಕೇಸರಿ ಮತ್ತು ನೀರನ್ನು ಅರ್ಪಿಸಬೇಕು. ಇದು ಸಂಪತ್ತನ್ನು ಹೆಚ್ಚು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ದೀಪಾವಳಿ ವಿಶೇಷ: ಸಕಲ ಸಂಕಷ್ಟ ನಿವಾರಿಸುವ ಲಕ್ಷ್ಮೀ ಮಂತ್ರ, ತಪ್ಪದೇ ನಿತ್ಯ ಪಠಿಸಿ

ಸ್ವಸ್ತಿಕಾ ಚಿಹ್ನೆಯನ್ನು ರಚಿಸುವುದು

ಸ್ವಸ್ತಿಕಾ ಚಿಹ್ನೆಯನ್ನು ಬರೆದು ಎರಡೂ ಬದಿಯಲ್ಲಿ ಶುಭ ಮತ್ತು ಲಾಭವನ್ನು ಬರೆಯಿರಿ. ಇದರಿಂದ ಲಕ್ಷ್ಮೀ ದೇವಿಯು ನಿಮ್ಮ ಮನೆಯಲ್ಲಿ ನೆಲೆಗೊಳ್ಳುತ್ತಾರೆ.

ದೀಪವನ್ನು ಬೆಳಗಿ

ನಿಮ್ಮ ಮನೆಯಲ್ಲಿ ಬೆಳಗುವ ದೀಪವು ಸ್ವಚ್ಛವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಇದು ದೇವಿಯನ್ನು ಆಕರ್ಷಿಸುತ್ತದೆ.

ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ

ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುವುದು ಹಬ್ಬದ ಸಮಯದಲ್ಲಿ ಹೆಚ್ಚು ಮುಖ್ಯವಾಗಿದೆ. ಇದರಿಂದ ನಿಮ್ಮ ಪ್ರತೀ ಕಾರ್ಯದಲ್ಲೂ ಯಶಸ್ಸು ಸುಲಭವಾಗಿ ದೊರೆಯುತ್ತದೆ.

ಲಕ್ಷ್ಮೀ ಮತ್ತು ಗಣಪತಿಯರ ಮೂರ್ತಿ

ನಂಬಿಕೆಗಳ ಪ್ರಕಾರ ಲಕ್ಷ್ಮೀ ಮತ್ತು ಗಣಪತಿಯರ ಮೂರ್ತಿಯನ್ನು ಒಟ್ಟಿಗೆ ಇಟ್ಟು ಪೂಜಿಸುವುದು ಅತ್ಯಂತ ಶುಭವಂತೆ. ಗಣಪತಿಯ ಜೊತೆಗೆ ಲಕ್ಷ್ಮೀಯನ್ನು ಪೂಜಿಸಿದರೆ ಆಕೆಗೆ ಮತ್ತಷ್ಟು ಸಂತೋಷವಾಗುತ್ತದೆಯಂತೆ. ಅದರಲ್ಲೂ ಈ ಎರಡು ಮೂರ್ತಿಗಳು ಬೆಳ್ಳಿಯದಾಗಿದ್ದರಂತು ಆ ಮನೆಯಲ್ಲಿ ಸಂಪತ್ತು ಮತ್ತು ಐಶ್ವರ್ಯವು ಎಂದಿಗು ಕಡಿಮೆಯಾಗುವುದಿಲ್ಲವಂತೆ. 

ಕಮಲದ ಬೀಜಗಳ ಜಪಮಾಲೆ

ಸಾಕ್ಷಾತ್ ಲಕ್ಷ್ಮೀ ದೇವಿಯು ಕಮಲದ ಹೂವಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲಿ ಮನೆ ಮಾಡಿದೆ. ಅದರಲ್ಲೂ ನೀವು ಕಮಲದ ಬೀಜಗಳ ಜಪಮಾಲೆಯನ್ನು ಮನೆಯಲ್ಲಿ ಇರಿಸುವುದರಿಂದ ಆಕೆಯನ್ನು ಮನೆಗೆ ಆಹ್ವಾನಿಸಬಹುದು ಎಂದು ಹೇಳಲಾಗುತ್ತದೆ.

ಶ್ರೀ ಯಂತ್ರ

ಈ ಯಂತ್ರವು ಸಂಪತ್ತನ್ನು ಆಕರ್ಷಿಸುವ ಅದ್ಭುತ ಶಕ್ತಿಯನ್ನು ತನ್ನಲ್ಲಿ ಹೊಂದಿದೆ. ಈ ಯಂತ್ರವನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಮನೆಗೆ ಸಂಪತ್ತನ್ನು ಆಕರ್ಷಿಸಬಹುದು. 

ಪಾದರಸದ ಮೂರ್ತಿ

ಲಕ್ಷ್ಮೀ ಮತ್ತು ಗಣಪತಿಯರ ಪಾದರಸದ ಮೂರ್ತಿಯನ್ನು ಮನೆಯಲ್ಲಿ ಇಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಪಾದರಸವು ಮಹಾಲಕ್ಷ್ಮೀಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ. ಇದರಲ್ಲಿ ಮಾಡಿರುವ ಮೂರ್ತಿಯು ಲಕ್ಷ್ಮೀ ದೇವಿಯನ್ನು ಖಂಡಿತವಾಗಿ ಆಕರ್ಷಿಸುತ್ತದೆ. 

ದೀಪಾವಳಿ ವಿಶೇಷ: ಲಕ್ಷ್ಮೀ ಪೂಜೆ ಹೀಗಿರಲಿ, ಸಕಲ ಸಂಕಷ್ಟಗಳು ನಿವಾರಣೆಯಾಗಲಿದೆ

ತೆಂಗಿನಕಾಯಿ

ತೆಂಗಿನಕಾಯಿಯನ್ನು ಶ್ರೀಫಲ ಎಂದು ಸಹ ಕರೆಯುತ್ತಾರೆ. ಅಂದರೆ ಲಕ್ಷ್ಮೀ ದೇವಿಯ ಫಲ ಎಂದರ್ಥ. ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸಲು ತೆಂಗಿನಕಾಯಿಯನ್ನು ಮನೆಯಲ್ಲಿ ಸದಾ ಇಡಬೇಕೆಂದು ಹೇಳುತ್ತಾರೆ. ಇದು ಲಕ್ಷ್ಮೀಯನ್ನು ಆಕರ್ಷಿಸುವ ಅತ್ಯಂತ ಪವಿತ್ರವಾದ ಫಲವೆಂದು ಪರಿಗಣಿಸಲ್ಪಟ್ಟಿದೆ. 

Rangoli

ಲಕ್ಷ್ಮೀ ದೇವಿಯ ಹೆಜ್ಜೆಗುರುತುಗಳು

ಲಕ್ಷ್ಮೀ ದೇವಿಯ ಬೆಳ್ಳಿಯ ಹೆಜ್ಜೆ ಗುರುತುಗಳನ್ನು ಮನೆಯಲ್ಲಿ ಇಡುವುದರಿಂದ ಆಕೆಯನ್ನು ಮನೆಗೆ ಆಕರ್ಷಿಸಬಹುದು. ಈ ಹೆಜ್ಜೆ ಗುರುತುಗಳನ್ನು ನೀವು ಹಣವಿಡುವ ದಿಕ್ಕಿಗೆ ಮುಖಮಾಡಿ ಇಡಿ. ಇದರಿಂದ ಅಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.

English summary

Different Ways To Attract Goddess Lakshmi This Diwali

Goddess Lakshmi in your house and make her stay there. This will ensure a continuous flow of wealth and prosperity.Goddess Lakshmi is the Goddess of wealth and prosperity. Lakshmi pooja is done on the day of Diwali to invoke the Goddess's blessings for the entire family. It is said that Goddess Lakshmi was born on the day of Diwali; hence, her pooja should be done on the night of Amavasya. She is said to bless her devotees with abundance of health, wealth and remove all the obstacles from their lives
Subscribe Newsletter