For Quick Alerts
ALLOW NOTIFICATIONS  
For Daily Alerts

ದೀಪಾವಳಿ ಧನತ್ರಯೋದಶಿ 2019: ಇಂದು ಇಂತಹ ವಸ್ತುಗಳನ್ನು ಖರೀದಿಸಲು ಮರೆಯದಿರಿ!

|
Deepavali 2019 : ದೀಪಾವಳಿ ಹಬ್ಬದ ದಿನ ಮನೆಗೆ ತರಬೇಕಾದ ವಸ್ತುಗಳು | ಈ ದಿನ ನೀಡಬಾರದ ಉಡುಗೊರೆಗಳು

ದೀಪಾವಳಿ ಹಬ್ಬದ ಸಡಗರ ಹಾಗೂ ಸಂಭ್ರಮಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ನರಕ ಚತುರ್ದಶಿಯಿಂದ ಆರಂಭವಾಗುವ ಈ ಹಬ್ಬವು ಗೋ ಪೂಜೆ, ಲಕ್ಷ್ಮಿಪೂಜೆ ಸೇರಿದಂತೆ ವಿಶೇಷ ಆಚರಣೆಗಳ ಮೂಲಕ ಹಬ್ಬದ ಸಡಗರವನ್ನು ಅನುಭವಿಸಲಾಗುವುದು. ಐದು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಲಕ್ಷ್ಮಿ ದೇವಿ ಸಿರಿ-ಸಂಪತ್ತನ್ನು ತಂದುಕೊಡುವಳು ಎನ್ನುವ ನಂಬಿಕೆಯಿದೆ.

ಈ ವರ್ಷ 2019ರಲ್ಲಿ ದೀಪಾವಳಿ ಹಬ್ಬವು 25ರಿಂದ ಆರಂಭವಾಗಿ 29ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 25ರಂದು ಧನತ್ರಯೋದಶಿಯ ಮೂಲಕ ದೀಪಾವಳಿಯ ಸಡಗರ ಸಂಭ್ರಮ ಎಲ್ಲರ ಮನೆಗಳಲ್ಲೂ ಮನೆಮಾಡುತ್ತದೆ.

ಪುರಾತನ ಸಂಪ್ರದಾಯಗಳ ಪ್ರಕಾರ ದೀಪಾವಳಿ ಹಬ್ಬಕ್ಕೆ ಮನೆಯನ್ನು ಬಿಳಿ ಬಣ್ಣದಿಂದ ಅಲಂಕರಿಸುವುದು, ದೀಪಗಳನ್ನು ಅಲಂಕರಿಸಿ ಇಡುವುದು, ಸಿಹಿಯನ್ನು ತಯಾರಿಸುವುದು ಹೀಗೆ ವಿಶೇಷ ತಯಾರಿಯ ಮೂಲಕ ಹಬ್ಬದ ಸ್ವಾಗತ ಮಾಡಲಾಗುತ್ತಿತ್ತು. ಇಂದು ಹಬ್ಬದ ಆಚರಣೆಯಲ್ಲಿ ಕೆಲವು ನಿಯಮಗಳನ್ನು ಕೈಬಿಟ್ಟಿದ್ದರೂ ಸಹ ಹಬ್ಬದ ಅರ್ಥ, ಆಚರಣೆ ಹಾಗೂ ಸಂಭ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎನ್ನಬಹುದು.

ದೀಪಾವಳಿ ಎನ್ನುವ ಪವಿತ್ರ ಹಬ್ಬದಲ್ಲಿ ಕೈಗೊಳ್ಳುವ ಕೆಲಸ ಕಾರ್ಯಗಳು ಶುಭವನ್ನು ತಂದುಕೊಡುತ್ತದೆ ಎನ್ನಲಾಗುವುದು. ಹಾಗಾಗಿಯೇ ಅನೇಕರು ಹೊಸ ಕೆಲಸ ಕಾರ್ಯದ ಆರಂಭವನ್ನು ದೀಪಾವಳಿ ಹಬ್ಬದಂದೇ ಆರಂಭಿಸುತ್ತಾರೆ. ಅಲ್ಲದೆ ಈ ಹಬ್ಬದಲ್ಲಿ ಲಕ್ಷ್ಮಿ ದೇವಿಗೆ ಇಷ್ಟವಾಗುವಂತೆ ಪೂಜೆ-ಪುನಸ್ಕಾರ ಹಾಗೂ ಸಿಹಿತಿಂಡಿಗಳ ನೈವೇದ್ಯಗಳನ್ನು ಮಾಡಲಾಗುವುದು.

ಆಧುನಿಕತೆ ಹೆಚ್ಚುತ್ತಿದ್ದಂತೆ ಕೆಲವು ಸಂಪ್ರದಾಯ ರೂಢಿಗಳನ್ನು ನಾವು ಮರೆಯುತ್ತಾ ಬಂದಿರುವುದು ಸತ್ಯ. ಇಂತಹ ಒಂದು ಸಂಭ್ರಮದ ಹಬ್ಬದಲ್ಲಿ ಹಿಂದಿನ ಜನಾಂಗದವರು ಕೆಲವು ವಿಶೇಷ ರೂಢಿಗಳನ್ನು ಹೊಂದಿದ್ದರು. ಅವು ಜೀವನಕ್ಕೆ ಹೆಚ್ಚು ಅನುಕೂಲತೆಯನ್ನು ತಂದುಕೊಡುತ್ತಿದ್ದವು ಎನ್ನಲಾಗುತ್ತದೆ. ಅಂತಹ ರೂಢಿಯಲ್ಲಿ ವಿಶೇಷ ವಸ್ತುಗಳ ಖರೀದಿಯು ಒಂದು.

ಹೌದು, ದೀಪಾವಳಿಯ ಆರಂಭದ ದಿನದ ಅಂದರೆ ಧನತ್ರಯೋದಶಿ ಹಬ್ಬದಂದು ಕೆಲವು ವಸ್ತುಗಳನ್ನು ಖರೀದಿಸಿದರೆ ನಮ್ಮ ಸಂಪತ್ತು ಸಮೃದ್ಧವಾಗುವುದು ಎನ್ನಲಾಗುತ್ತದೆ. ಈ ವಿಷಯಗಳ ಬಗ್ಗೆ ಇನ್ನಷ್ಟು ತಿಳಿಯಬೇಕು ಅಥವಾ ಖರೀದಿಸಬೇಕಾದ ಸಾಂಪ್ರದಾಯಿಕ ವಸ್ತುಗಳು ಯಾವವು? ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಿ..

ಇಷ್ಟಕ್ಕೆ ಅನುಗುಣವಾಗಿ ಬೆಳ್ಳಿ ಅಥವಾ ಚಿನ್ನವನ್ನು ಖರೀದಿಸಿ

ಇಷ್ಟಕ್ಕೆ ಅನುಗುಣವಾಗಿ ಬೆಳ್ಳಿ ಅಥವಾ ಚಿನ್ನವನ್ನು ಖರೀದಿಸಿ

ಧನತ್ರಯೋದಶಿ ಹಬ್ಬದಲ್ಲಿ ಬೆಳ್ಳಿ ಅಥವಾ ಚಿನ್ನವನ್ನು ಖರೀದಿಸಿದರೆ ಸಂಪತ್ತು ಮನೆಯಲ್ಲಿ ತುಂಬುವುದು. ಅನುಕೂಲವಿರುವವರು ಆರತಿಯ ಚಮಚವನ್ನು ಖರೀದಿಸಬೇಕು. ಅದರಲ್ಲಿಯೇ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ನಂತರ ಸುರಕ್ಷಿತವಾಗಿ ಇಡಬೇಕು. ನಿಯಮಿತವಾಗಿ ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಅದನ್ನು ಬಳಸಿ ಆರತಿ ಬೆಳಗಬೇಕು ಎನ್ನಲಾಗುವುದು. ಹೀಗೆ ಮಾಡುವುದರಿಂದ ಸಂಪತ್ತು ದ್ವಿಗುಣವಾಗುವುದು ಎನ್ನುವ ನಂಬಿಕೆಯಿದೆ.

Most Read:2018ರ ದೀಪಾವಳಿ: ದಿನಾಂಕ ಹಾಗೂ ಲಕ್ಷ್ಮೀ ಪೂಜೆಯ ಮುಹೂರ್ತ ಸಮಯ

ಧನಿಯಾ(ಕೊತ್ತಂಬರಿ) ಬೀಜ ಖರೀದಿಸಿ

ಧನಿಯಾ(ಕೊತ್ತಂಬರಿ) ಬೀಜ ಖರೀದಿಸಿ

ಧನತ್ರಯೋದಶಿ ಹಬ್ಬದಂದು ಧನಿಯಾ ಬೀಜ/ಕೊತ್ತಂಬರಿ ಬೀಜವನ್ನು ಖರೀದಿಸಿ. ಈ ಬೀಜವನ್ನು ಸಂಪತ್ತಿನ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ಪೂಜೆಯ ಸಮಯದಲ್ಲಿ ಈ ಬೀಜವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ ಪೂಜೆ ಗೈಯಬೇಕು. ಬಳಿಕ ಅದರಲ್ಲಿ ಕೆಲವು ಬೀಜಗಳನ್ನು ಮನೆಯ ಹಿತ್ತಲಲ್ಲಿ ಅಥವಾ ಮಣ್ಣಿನ ಮಡಿಕೆಯಲ್ಲಿ ಹಾಕಿ ಬಿತ್ತಬೇಕು. ಉಳಿದ ಬೀಜಗಳನ್ನು ಗೋಮತಿ ಚಕ್ರ ಅಥವಾ ಕವಡೆಯಲ್ಲಿ ಹಾಕಿ ಹಣ ಇಡುವ ಸ್ಥಳ/ತ್ರಿಜೋರಿಯಲ್ಲಿ ಇಡಿ. ಸಂಪತ್ತು ದ್ವಿಗುಣವಾಗುವುದು.

Most Read:ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಹಿಂದಿನ ಕಾರಣಗಳು

ಸೋಲಾ ಶೃಂಗಾರ್ ಅಥವಾ ಸಿಂಧೂರಿನ ಕೆಂಪು ಸೀರೆ

ಸೋಲಾ ಶೃಂಗಾರ್ ಅಥವಾ ಸಿಂಧೂರಿನ ಕೆಂಪು ಸೀರೆ

ಹಬ್ಬದ ದಿನ ಸೋಲಾ ಶೃಂಗಾರ್ ಅಥವಾ ಸಿಂಧೂರಿನ ಕೆಂಪು ಸೀರೆಯನ್ನು ಖರೀದಿಸಿ, ವಿವಾಹಿತ ಸ್ತ್ರೀಗೆ ಉಡುಗೊರೆಯಾಗಿ ನೀಡಬೇಕು. ಇದು ಲಕ್ಷ್ಮಿ ದೇವಿಗೆ ಸಂತೋಷ ಹಾಗೂ ಸಮಾಧಾನವನ್ನು ನೀಡುವುದು. ವಿವಾಹಿತ ಮಹಿಳೆಯರಿಲ್ಲದೆ ಇದ್ದರೆ ಅವಿವಾಹಿತ ಮಹಿಳೆಯರಿಗೆ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಹೀಗೆ ಮಾಡುವುದರ ಮೂಲಕ ದೇವಿಯ ಆಶೀರ್ವಾದ ಪಡೆದುಕೊಳ್ಳಬಹುದು.

ಗಾಜು ಮತ್ತು ಅಲ್ಯುಮಿನಿಯಂ ಖರೀದಿಸದಿರಿ

ಗಾಜು ಮತ್ತು ಅಲ್ಯುಮಿನಿಯಂ ಖರೀದಿಸದಿರಿ

ಈ ಹಬ್ಬದ ಸಂದರ್ಭದಲ್ಲಿ ಹೊಸ ವಸ್ತುಗಳ ಖರೀದಿಸಲು ನಿಮಗೆ ಕಷ್ಟವಾದರೆ ಚಿಂತಿಸುವ ಅಗತ್ಯವಿಲ್ಲ. ಅದರಿಂದ ಯಾವುದೇ ತೊಂದರೆ ಉಂಟಾಗದು. ಆದರೆ ಅಲ್ಯೂಮಿನಿಯಂ ಅಥವಾ ಗಾಜಿನಿಂದ ಮಾಡಿದ ವಸ್ತುಗಳ ಖರೀದಿಯನ್ನು ಮಾಡದಿರಿ. ಇದು ರಾಹುವಿಗೆ ಸಂಬಂಧಿಸಿದ ವಸ್ತು ಎನ್ನಲಾಗುತ್ತದೆ. ಮನೆಗೆ ಲಕ್ಷ್ಮಿ ದೇವಿಯ ಆಹ್ವಾನ ಮಾಡುವ ಮುಂಚೆ ಇಂತಹ ವಸ್ತುಗಳ ಆಗಮನ ಆಗಬಾರದು.

English summary

Dhanteras 2019 special: don't forget to buy these important things!

Diwali festivities are just a week away from now; and as believed that Goddess Lakshmi comes home on these days, which will start this year with Dhanteras on November 5, Narak Chaudas on November 6, Diwali on November 7, Govardhan Puja on November 8, and Bhai Dooj on November 9. In this 5-day long festivity, devotees gear up for her the reception of the Goddess of wealth.
X
Desktop Bottom Promotion