For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ- ಗೃಹ ಪ್ರವೇಶ ಮಾಡುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳು

By Jaya Subramanya
|

"ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು" ಎಂಬ ಗಾದೆ ಬಹುಶಃ ಎಲ್ಲರೂ ಕೇಳಿರುತ್ತಾರೆ. ಹೊಸ ಮನೆ ಕಟ್ಟುವುದಿರಲಿ ಅಥವಾ ಕೊಳ್ಳುವುದಿರಲಿ ಪ್ರತಿಯೊಬ್ಬರಲ್ಲಿಯೂ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಮನೆಯು ಅದರ ಮಾಲೀಕರಿಗೆ ಹೊಸ ಭರವಸೆ ಮತ್ತು ಆಕಾಂಕ್ಷೆಗಳನ್ನು ತರುವ ಮೂಲವಾಗಿ ಕಂಡು ಬರುತ್ತದೆ. ಇದಲ್ಲದೆ ಹೊಸ ಮನೆಯ ಗೃಹ ಪ್ರವೇಶವು ಅತ್ಯಂತ ಸಂಭ್ರಮ ಮತ್ತು ಸಡಗರದ ಜೊತೆಗೆ ಭಕ್ತಿ ಭಾವಗಳನ್ನು ಸಹ ಹೊಮ್ಮಿಸುತ್ತದೆ.

ಇಡೀ ವಿಶ್ವದಲ್ಲಿಯೇ ಹೊಸ ಮನೆಯ ಗೃಹ ಪ್ರವೇಶವು ಅವರವರ ಭಾವ-ಭಕ್ತಿ ಮತ್ತು ಧರ್ಮಗಳಿಗೆ ಅನುಸಾರವಾಗಿ ನೆರವೇರುತ್ತದೆ. ಇದು ಬಹುತೇಕ ಎಲ್ಲಾ ಸಂಸ್ಕೃತಿಗಳಲ್ಲೂ ಕಂಡು ಬರುತ್ತದೆ. ಮಾಲೀಕನು ಹೊಸ ಮನೆಗೆ ದೇವರ ಹೆಸರನ್ನು ಜಪಿಸುತ್ತ ಪ್ರವೇಶವನ್ನು ಮಾಡುತ್ತಾನೆ. ಇದರಿಂದ ಆ ಮನೆಯಲ್ಲಿ ಅದೃಷ್ಟ ಮತ್ತು ಐಶ್ವರ್ಯಗಳು ಸದಾ ನೆಲೆಸುತ್ತವೆ ಎಂಬ ನಂಬಿಕೆ ಅವರಿಗಿರುತ್ತದೆ. ಹಿಂದೂ ಧರ್ಮದಲ್ಲಿ ಗೃಹ ಪ್ರವೇಶವು ಒಬ್ಬ ವ್ಯಕ್ತಿಯ ವೈಯುಕ್ತಿಕ ಜೀವನದಲ್ಲಿ ಅತ್ಯಂತ ಮಹತ್ವದ ದಿನವಾಗಿರುತ್ತದೆ.

ಗೃಹ ಪ್ರವೇಶವು ಒಬ್ಬ ವ್ಯಕ್ತಿಯ ಕಷ್ಟಾರ್ಜಿತ ಹಣದಿಂದ ಬೆವರು ಸುರಿಸಿ, ಶ್ರಮ ಪಟ್ಟು, ಯಶಸ್ವಿಯಾಗಿ ಮನೆ ಕಟ್ಟಿ ಪೂರೈಸಿದನೆಂಬುದನ್ನು ಇತರರಿಗೆ ತೋರಿಸುವ ವಿಧಿಯಾಗಿರುತ್ತದೆ. ಗೃಹ ಪ್ರವೇಶದ ದಿನ ಕುಟುಂಬದ ಸದಸ್ಯರು ಆ ಮನೆಗೆ ಗೊತ್ತು ಪಡಿಸಿದ ಮುಹೂರ್ತದಲ್ಲಿ ದೇವರಿಗೆ ಪೂಜಾ ಕೈಂಕರ್ಯಗಳನ್ನು ಮಾಡಿ, ನಮ್ಮನ್ನು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ಮತ್ತು ಸಂಕಷ್ಟಗಳಿಂದ ಪಾರು ಮಾಡು ದೇವಾ ಎಂದು ಕೋರುತ್ತ ಮನೆಗೆ ಪ್ರವೇಶ ಮಾಡುತ್ತಾರೆ.

ಈ ಗೃಹ ಪ್ರವೇಶದ ವಿಧಿ ವಿಧಾನಗಳಲ್ಲಿ ಕೆಲವೊಂದು ವಿಧಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅದಕ್ಕೆ ತನ್ನದೇ ಆದ ಕ್ರಮಗಳು ಇವೆ. ಇಲ್ಲಿ ನಾವು ಹೊಸ ಮನೆಯನ್ನು ಪ್ರವೇಶಿಸುವ ನಮ್ಮ ಓದುಗರಿಗಾಗಿ ಅವುಗಳನ್ನು ನೀಡಿದ್ದೇವೆ ಓದಿ ತಿಳಿದುಕೊಳ್ಳಿ...

ದೋಷಗಳ ನಿವಾರಣೆಗೆ ಗೃಹಪ್ರವೇಶ ಮಾಡಬೇಕು

ದೋಷಗಳ ನಿವಾರಣೆಗೆ ಗೃಹಪ್ರವೇಶ ಮಾಡಬೇಕು

ನಾವು ಹೊಸ ಮನೆಗೆ ಕಾಲಿಟ್ಟಾಗ ಕೆಲವೊಂದು ವಾಸ್ತು ನಿಯಮಗಳನ್ನು ನಾವು ಪಾಲಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ದುಷ್ಟ ಋಣಾತ್ಮಕ ಅಂಶಗಳು ನಿವಾರಣೆಯಾಗುತ್ತದೆ.

ಮನೆ ಖಾಲಿಯಾಗಿರಬೇಕು

ಮನೆ ಖಾಲಿಯಾಗಿರಬೇಕು

ಮನೆ ಗೃಹಪ್ರವೇಶ ಮಾಡುವ ಸಂದರ್ಭದಲ್ಲಿ ಮನೆಯಲ್ಲಿ ಪೀಠೋಪಕರಣಗಳು ಹಾಗೂ ಇನ್ನಿತರ ಯಾವುದೇ ವಸ್ತುಗಳು ಇರಬಾರದು. ಮನೆ ಸಂಪೂರ್ಣ ಖಾಲಿಯಾಗಿರಬೇಕು.

ಮನೆಯ ಸದಸ್ಯರ ಉಪಸ್ಥಿತಿ

ಮನೆಯ ಸದಸ್ಯರ ಉಪಸ್ಥಿತಿ

ಮನೆಯನ್ನು ಪ್ರವೇಶಿಸುವಾಗ ನೀವು ಮಾತ್ರ ಪ್ರವೇಶ ಮಾಡದೇ ನಿಮ್ಮ ಸಂಗಾತಿ ಹಾಗೂ ಮನೆಯ ಇತರ ಸದಸ್ಯರ ಜೊತೆಗೂಡಿ ಮನೆಯನ್ನು ಪ್ರವೇಶಿಸಿ.

ಮನೆಯನ್ನು ಸಂಪೂರ್ಣ ಕಟ್ಟಿಯೇ ಗೃಹಪ್ರವೇಶ ನಡೆಸಬೇಕು

ಮನೆಯನ್ನು ಸಂಪೂರ್ಣ ಕಟ್ಟಿಯೇ ಗೃಹಪ್ರವೇಶ ನಡೆಸಬೇಕು

ಮನೆಯ ಕಟ್ಟಡವನ್ನು ಅರ್ಧಂಬರ್ಧ ಕಟ್ಟಿ ನಂತರ ಗೃಹಪ್ರವೇಶವನ್ನು ನಡೆಸಬೇಡಿ. ಸಂಪೂರ್ಣವಾಗಿ ಮನೆಯನ್ನು ನಿರ್ಮಿಸಿದ ನಂತರವೇ ಗೃಹಪ್ರವೇಶವನ್ನು ನಡೆಸಬೇಕಾಗುತ್ತದೆ.

ಆಹಾರ

ಆಹಾರ

ಆಹಾರವನ್ನು ಮನೆಯ ಅಡುಗೆಮನೆಯಲ್ಲಿಯೇ ತಯಾರಿಸಿ ನೀವು ಸೇವಿಸಬೇಕು. ಹೊರಗಡೆಯಿಂದ ಆಹಾರ ತಂದು ಅದನ್ನು ಸೇವಿಸುವುದು ಒಳ್ಳೆಯದಲ್ಲ.

ಮಾನಸಿಕ ಒತ್ತಡವಿರುವಾಗ ಗೃಹಪ್ರವೇಶ ನಡೆಸಬೇಡಿ

ಮಾನಸಿಕ ಒತ್ತಡವಿರುವಾಗ ಗೃಹಪ್ರವೇಶ ನಡೆಸಬೇಡಿ

ನಿಮ್ಮ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಎಂದಾದಲ್ಲಿ ಗೃಹಪ್ರವೇಶವನ್ನು ನಡೆಸದಿರುವುದು ಒಳಿತು. ನೀವು ದೈಹಿಕ ಮತ್ತು ಮಾನಸಿಕವಾಗಿ ಸ್ವಾಸ್ಥ್ಯವನ್ನು ಪಡೆದುಕೊಂಡ ನಂತರವೇ ಗೃಹಪ್ರವೇಶವನ್ನು ನಡೆಸಿ.

ಮದ್ಯಪಾನ ಮಾಡಿ ಮನೆಯನ್ನು ಪ್ರವೇಶಿಸಬೇಡಿ

ಮದ್ಯಪಾನ ಮಾಡಿ ಮನೆಯನ್ನು ಪ್ರವೇಶಿಸಬೇಡಿ

ನೀವು ಸ್ವಲ್ಪ ಸಮಯದ ಹಿಂದೆ ಕುಡಿದಿದ್ದಲ್ಲಿ ಮನೆಯನ್ನು ಪ್ರವೇಶಿಸುವ ಶುಭ ಕಾರ್ಯವನ್ನು ಮಾಡಬೇಡಿ. ಇದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ.

ದೇಹದ ಗಾಯವನ್ನು ಗುಣಪಡಿಸಿಕೊಳ್ಳಿ

ದೇಹದ ಗಾಯವನ್ನು ಗುಣಪಡಿಸಿಕೊಳ್ಳಿ

ನಿಮ್ಮ ಸಂಗಾತಿ ತಮ್ಮ ದೇಹದಲ್ಲಿ ಏನಾದರೂ ಗಾಯ ಮಾಡಿಕೊಂಡು ಮನೆಯನ್ನು ಪ್ರವೇಶಿಸುತ್ತಿದ್ದಲ್ಲಿ ಅದನ್ನು ತಡೆಯಿರಿ.ಗಾಯವು ಸಂಪೂರ್ಣವಾಗಿ ಗುಣಮುಖವಾದ ನಂತರವೇ ಗೃಹಪ್ರವೇಶವನ್ನು ನಡೆಸಿ.

ವಾಸ್ತು ಪೂಜೆ

ವಾಸ್ತು ಪೂಜೆ

ಮನೆಯ ಸದಸ್ಯರು ಮನೆಯೊಳಗೆ ಕಾಲಿಡುವ ಮುನ್ನ ಮನೆಯ ಹೊರಗೇ ನಡೆಸುವ ವಿಶೇಷ ಪೂಜೆಗೆ ವಾಸ್ತು ಪೂಜೆ ಅಥವಾ ವಾಸ್ತು ದೇವತೆ ಎಂದು ಕರೆಯುತ್ತಾರೆ. ಇದರಲ್ಲಿ ತಾಮ್ರದ ಪಾತ್ರೆಯೊಂದರಲ್ಲಿ ನೀರು ಹಾಕಿ ಅದರಲ್ಲಿ ನವಧಾನ್ಯಗಳು ಮತ್ತು ಒಂದು ರೂಪಾಯಿಯ ಪಾವಲಿಯೊಂದನ್ನು ಹಾಕಿಟ್ಟಿರಲಾಗುತ್ತದೆ. ಪಾತ್ರೆಯ ಮೇಲೆ ತೆಂಗಿನ ಕಾಯಿಯೊಂದನ್ನಿರಿಸಿ ಕೆಂಪು ಬಟ್ಟೆಯೊಂದನ್ನು ಹೊದಿಸಿ ಬಳಿಕ ಕೆಂಪು ದಾರದಿಂದ ಕಟ್ಟಲಾಗುತ್ತದೆ. ಈ ಕೆಂಪು ದಾರಕ್ಕೆ ಮೋಳಿ ಎಂದು ಕರೆಯುತ್ತಾರೆ. ಪಂಡಿತರು ಪೂಜೆಯನ್ನು ನಿರ್ವಹಿಸಿದ ಬಳಿಕ ಪತಿ ಪತ್ನಿಯರು ಈ ಪಾತ್ರೆಯನ್ನು ಜೊತೆಯಾಗಿ ಹಿಡಿದು ಮಂತ್ರಘೋಷಗಳ ನಡುವೆ ಬಲಗಾಲಿಟ್ಟು ಮನೆಯೊಳಗಡಿಯಿಡುತ್ತಾರೆ. ಬಳಿಕ ಮನೆಯೊಳಗಿನ ಹವನ (ಅಗ್ನಿಕುಂಡ) ದ ಬಳಿ ಇರಿಸುತ್ತಾರೆ.

ವಾಸ್ತು ಶಾಂತಿ

ವಾಸ್ತು ಶಾಂತಿ

ವಾಸ್ತು ಶಾಂತಿ ಅಥವಾ ಗೃಹಶಾಂತಿ ಎಂಬ ವಿಧಿಗೆ ಅಗ್ನಿಕುಂಡ ಅಥವಾ ಹವನದ ಅಗತ್ಯವಿದೆ. ಹವನವನ್ನು ಪೂಜಿಸುವ ಮೂಲಕ ಗ್ರಹಗಳ ಪ್ರಭಾವವನ್ನು ತಡೆಯಬಹುದಾಗಿದ್ದು ಮನೆಯಲ್ಲಿದ್ದ ಋಣಾತ್ಮಕ ಮತ್ತು ದುಷ್ಟ ಶಕ್ತಿಗಳನ್ನು ಹೊಡೆದೋಡಿಸಿ ಮನೆಯೊಳಗೆ ಶಾಂತಿಯುತ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತದೆ. ಪೂಜೆಯ ಎಲ್ಲಾ ವಿಧಿಗಳು ಸಂಪನ್ನಗೊಂಡ ಬಳಿಕ ಪಂಡಿತರಿಗೆ ಮೊದಲಾಗಿ ಔತಣವನ್ನು ನೀಡಲಾಗುತ್ತದೆ.ಬಳಿಕ ಈ ಎಲ್ಲಾ ವಿಧಿಗಳನ್ನು ನಿರ್ವಹಿಸಿದುದಕ್ಕಾಗಿ ದಕ್ಷಿಣೆ ಎಂಬ ಸೂಕ್ತ ಸಂಭಾವನೆ ನೀಡಲಾಗುತ್ತದೆ. ಇದರೊಂದಿಗೆ ಇತರ ಪೂಜೆಗಳಾದ ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ ಅಥವಾ ಲಕ್ಷ್ಮೀಪೂಜೆಗಳನ್ನೂ ನಡೆಸಬಹುದು. ಒಂದು ವೇಳೆ ಪಂಡಿತರು ಇದರಲ್ಲಿ ಯಾವುದಾದರೊಂದು ಪೂಜೆ ನಡೆಸಲು ಸಲಹೆ ನೀಡಿದರೆ ಅದನ್ನು ಪಾಲಿಸುವುದು ಒಳಿತು. ಆದರೆ ವಾಸ್ತುಪೂಜೆ ಮತ್ತು ವಾಸ್ತುಶಾಂತಿಯನ್ನು ಮಾತ್ರ ಕಡ್ಡಾಯವಾಗಿ ಆಚರಿಸಲೇಬೇಕು.

ಗಣಪತಿ ಹೋಮ

ಗಣಪತಿ ಹೋಮ

ಹೋಮ ಕುಂಡವನ್ನು ಹೊತ್ತಿಸಿ, ಅದರಲ್ಲಿ ಮೊದಲು ಗಣಪತಿಯನ್ನು ಆವಾಹಿಸಿ ಪೂಜೆ ಸಲ್ಲಿಸುತ್ತಾರೆ. ಗಣಪತಿಯು ಸರ್ವ ವಿಘ್ನಗಳ ನಿವಾರಕನೆಂದೇ ಖ್ಯಾತಿ ಪಡೆದಿರುವವನು. ಗೃಹ ಪ್ರವೇಶಕ್ಕೆ ಇರುವ ಸರ್ವ ವಿಘ್ನಗಳನ್ನು ನಿವಾರಿಸು ಎಂದು ದೇವರನ್ನು ಈ ಹೋಮದ ಮೂಲಕ ಕೇಳಿಕೊಳ್ಳಲಾಗುತ್ತದೆ.

English summary

Common Vaastu mistakes during House Warming Ceremony

Vaastu tells us that Whenever we step into a new house, we must take care of certain vaastu rules so that the negative energy left by previous residents do not impact us.Vaastu says that entering an empty house devoid of any basic furniture is not advisable. Basic wooden furniture actually helps balance energies.
X
Desktop Bottom Promotion