Latest Updates
-
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು
ಹೋಳಿ ಆಚರಣೆ ಬರೀ ಬಣ್ಣದ ಹಬ್ಬ ಮಾತ್ರವಲ್ಲ!
ಬಣ್ಣದ ಓಕುಳಿಯ ಹಬ್ಬದಲ್ಲಿ ಇತರ ಹಬ್ಬದಲ್ಲಿ ಮಾಡುವಂತೆ ಯಾವುದೇ ವಿಶೇಷ ಪೂಜೆ, ಉಪವಾಸ ಅಂತ ಮಾಡುವುದಿಲ್ಲ. ಆದರೆ ಈ ಹಬ್ಬ ಬರೀ ಸಂತೋಷಕ್ಕಾಗಿ ಆಚರಿಸುವ ಹಬ್ಬವಲ್ಲ! ಈ ಹಬ್ಬದಲ್ಲಿ ಎರಡು ಮುಖ್ಯವಾದ ಆಚರಣೆಗಳಿವೆ. ಮೊದಲಿನದು ಹೋಲಿಕಾ ದಹನ್ ( ದುಷ್ಟರ ದಹನ), ಎರಡನೇಯದು ಬಣ್ಣದಲ್ಲಿ ಆಟ ಆಡುವುದು.
ಹೋಳಿ ಹಬ್ಬದ ವಿಶೇಷತೆ
ಹೋಳಿ ಹಬ್ಬದಂದು ಒಂದು ವಾರದ ಮೊದಲೇ ಮಕ್ಕಳನ್ನು ಕಳುಹಿಸಿ ರಸ್ತೆ ಹಾಗೂ ಪಾರ್ಕ್ ನಲ್ಲಿ ಬಿದ್ದಂತಹ ಮರದ ಕಡ್ಡಿಗಳನ್ನು ತರಿಸಿಡುತ್ತಾರೆ. ಇವುಗಳನ್ನು ಹೋಳಿ ಹಬ್ಬದ ಹಿಂದಿನ ದಿನ ಇವುಗಳಿಗೆ ಬೆಂಕಿ ಕೊಟ್ಟು ಭಸ್ಮ ಮಾಡಲಾಗುವುದು. ಇದನ್ನು ಹೋಲಿಕಾ ದಹನ್ ಎನ್ನುತ್ತಾರೆ.

ಹೋಲಿಕಾ ದಹನ್ ಆಚರಣೆಯ ಕತೆ
ಹಿರಣ್ಯಾ ಕಶಿಪು ರಾಜ ನಾನೇ ದೇವರು ಎಂದು ಮೆರೆಯುತ್ತಿದ್ದ. ಆದರೆ ಅವನ ಮಗ ಪ್ರಹ್ಲಾದ ನಾರಾಯಣ ದೇವರನ್ನು ಪೂಜಿಸುತ್ತಿದ್ದ. ಇದ ರಾಜನಿಗೆ ಇಷ್ಟವಾಗಲಿಲ್ಲ, ನಾರಾಯಣನನ್ನು ಪೂಜಿಸುವ ತನ್ನ ಮಗನನ್ನು ಕೊಲ್ಲಲು ತನ್ನ ತಂಗಿಯಾದ ಹೋಲಿಕಾಳ ಹತ್ತಿರ ಮಗನನ್ನುಎತ್ತಿಕೊಂಡು ಬೆಂಕಿಯಲ್ಲಿ ಕೂರಲು ಹೇಳುತ್ತಾನೆ. ಹೋಲಿಕಾ ಬೆಂಕಿ ಅವಳನ್ನು ಸುಡದಿರುವ ವರವನ್ನು ಪಡೆದಿರುತ್ತಾಳೆ. ಆದರೆ ಹೋಲಿಕಾ ದುಷ್ಟ ಮಾರ್ಗದಲ್ಲಿ ನಡೆದುಕೊಂಡಿದ್ದರಿಂದ ಅವಳು ಸುಟ್ಟು ಹೋಗುತ್ತಾಳೆ, ಪ್ರಹ್ಲಾದ ಸ್ವಲ್ಪವೂ ಹಾನಿಯಾಗದೆ ಬೆಂಕಿಯಿಂದ ಎದ್ದು ಬರುತ್ತಾನೆ. ಆದ್ದರಿಂದ ಹೋಲಿಕಾ ದಹನ್ ಬೆಂಕಿ ದುಷ್ಟರನ್ನು ಸುಡುತ್ತದೆ ಅನ್ನುವುದರ ಸಂಕೇತವಾಗಿದೆ.
ರಾಧಾ ಮತ್ತು ಕೃಷ್ಣಾ
ಈ ಹಬ್ಬದಲ್ಲಿ ರಾಧಾ ಮತ್ತು ಕೃಷ್ಣನನ್ನು ಪೂಜಿಸಲಾಗುವುದು. ಇವರ ಬಗ್ಗೆ ಹೇಳುವ ಕತೆಯಲ್ಲಿ ಮೊದಲು ಕೃಷ್ಣಾ ಮತ್ತು ರಾಧೆ ಹಾಲಿನಲ್ಲಿ ಸ್ನಾನ ಮಾಡುತ್ತಾರೆ. ನಂತರ ನೀಲಿ ಬಣ್ಣದಲ್ಲಿ ಮುಳುಗುತ್ತಾರೆ. ಬಿಳಿ ಬಣ್ಣದ ರಾಧೆಯನ್ನು ನೀಲಿ ಬಣ್ಣದಲ್ಲಿ ಮುಳುಗಿಸಬೇಕೆಂದು ಅನಿಸಿ ಕೃಷ್ಣಾ ಅವಳ ಮೇಲೆ ಬಣ್ಣ ಎರಚಿದ ಎಂದು ಹೇಳಲಾಗುತ್ತಿದೆ.
ಭಾಂಗ್
ಭಾಂಗ್ ಅನ್ನು ಹೋಳಿ ಹಬ್ಬದ ಸಮಯದಲ್ಲಿ ಕುಡಿಯುವ ಪದ್ಧತಿ ಇದೆ. ಈ ಹೋಳಿ ಪಾನೀಯಾಕ್ಕೆ ಹಾಲು ಹಾಗೂ ಡ್ರೈ ಫ್ರೂಟ್ಸ್ ಸೇರಿಸಿ ಕುಡಿಯಲಾಗುವುದು. ಇದು ಹೋಳಿಯಲ್ಲಿ ಕುಣಿದು ಕುಪ್ಪಳಿಸುವಂತೆ ನಮ್ಮನ್ನು ಉತ್ತೇಜಿಸುತ್ತದೆ.
ಕಾಮದೇವನ ಪೂಜೆ
ಉತ್ತರ ಭಾರತದಲ್ಲಿ ಹೋಳಿಗೆ ಕಾಮದೇವನ ಪೂಜೆ ಮಾಡಲಾಗುವುದು.



Click it and Unblock the Notifications