Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಷ್ಟ ಕಾರ್ಪಣ್ಯ ನಿವಾರಿಸುವ ಶಕ್ತಿ ಈ ಮಂತ್ರದಲ್ಲಿದೆ-ನಿತ್ಯ ಪಠಿಸಿ
ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಸ್ಥಾನ ಮಹತ್ವವಾದದ್ದು. ಸೂರ್ಯ ಯಾವ ಸ್ಥಾನದಲ್ಲಿ ಇದ್ದಾನೆ? ಎಷ್ಟು ಪರಿಣಾಮಕಾರಿ ಎನ್ನುವುದನ್ನು ಕುಂಡಲಿ ಬಿಚ್ಚಿಡುತ್ತದೆ. ಪುರಾಣದ ಪ್ರಕಾರ ಸೂರ್ಯನು ಕಶ್ಯಪ ಮಹರ್ಷಿ ಮತ್ತು ಅದಿತಿ ದೇವಿಯ ಮಗ ಎಂದು ಹೇಳಲಾಗುತ್ತದೆ. ತಾಯಿ ಅದಿತಿಯ ನಂತರ ಸೂರ್ಯನಿಗೆ ಆದಿತ್ಯ ಎಂದು ಕರೆಯುತ್ತಿದ್ದರು ಎನ್ನಲಾಗುತ್ತದೆ. ನಿತ್ಯವೂ ಸೂರ್ಯನ ಆರಾಧನೆ ಹಾಗೂ ಶ್ಲೋಕಗಳನ್ನು ಪಠಿಸಿದರೆ ಐಶ್ವರ್ಯ, ಗೌರವ, ದೀರ್ಘಾಯುಷ್ಯ ಮತ್ತು ಯಶಸ್ಸನ್ನು ಹೊಂದಬಹುದು.
ಸೂರ್ಯೋದಯದ ಸಮಯದಲ್ಲಿ ಸೂರ್ಯನ ಆರಾಧನೆ ಹಾಗೂ ಜಪ-ತಪಗಳು ನಡೆದರೆ, ಸೂರ್ಯನು ಆಶೀರ್ವದಿಸುತ್ತಾನೆ. ಅವನ ಕೃಪೆಗೆ ಒಳಗಾದರೆ ಜೀವನದಲ್ಲಿ ಸದಾ ಸುಖಿಯಾಗಿರಬಹುದು ಎನ್ನಲಾಗುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಶ್ಲೋಕ ಮತ್ತು ಮಂತ್ರವನ್ನು ಪಠಿಸುವ ಅಧಿಕಾರವಿದೆ. ಮಂತ್ರಗಳನ್ನು ಹೇಳುವಾಗ ಶಬ್ದಗಳ ಉಚ್ಚಾರ ಸರಿಯಾಗಿರಬೇಕಷ್ಟೆ. ಪಠಿಸುವ ಮಾರ್ಗ ಸರಿಯಾಗಿದ್ದರೆ, ಮಾನಸಿಕ ಹಾಗೂ ದೈಹಿಕವಾಗಿ ಸಕಾರಾತ್ಮಕ ಶಕ್ತಿಯು ನಮ್ಮನ್ನು ಕಾಪಾಡುವುದು....

ಗಾಯತ್ರಿ ಮಂತ್ರದ ಸ್ಮರಣೆ
ಅಗ್ನಿ ಪುರಾಣದ ಪ್ರಕಾರ, ಸೂರ್ಯೋದಯದ ಸಂದರ್ಭದಲ್ಲಿ ಸೂರ್ಯನಿಗೆ ಗಾಯತ್ರಿ ಮಂತ್ರವನ್ನು ಜಪಿಸುತ್ತಾ, ಅಘ್ರ್ಯ ನೀಡಿದರೆ ಉತ್ತಮ ಪರಿಣಾಮವನ್ನು ಹೊಂದಬಹುದು. ಹೀಗೆ ಮಾಡುವುದರಿಂದ ಜೀವನದಲ್ಲಿ ಉತ್ತಮ ಅದೃಷ್ಟಗಳನ್ನು ಅನುಭವಿಸಬಹುದು.
ಜೀವನದ ಎಲ್ಲಾ ಕಷ್ಟ-ನೋವು ನಿವಾರಿಸುವ- ಗಾಯತ್ರಿ ಮಂತ್ರ
ದುಃಖ ನಿರ್ಮೂಲನೆ
ನಿತ್ಯವೂ ಸೂರ್ಯೋದಯದ ಸಂದರ್ಭದಲ್ಲಿ ಗಾಯತ್ರಿ ಮಂತ್ರದ ಜೊತೆಗೆ ಅಘ್ರ್ಯ ನೀಡಿದರೆ, ಜೀವನದ ಎಲ್ಲಾ ದುಃಖಗಳು ನಿವಾರಣೆಯಾಗುವುದು. ಜೊತೆಗೆ ಮಾನಸಿಕ ಶಾಂತಿ ಹೆಚ್ಚುವುದು.

ಸೂರ್ಯನೇ ಜೀವ ಶಕ್ತಿ
ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಸೂರ್ಯನೇ ಮಹಾನ್ ಶಕ್ತಿ. ಇವನ ಆರಾಧನೆ ಮತ್ತು ಮಂತ್ರಗಳನ್ನು ಹೇಳುವುದರಿಂದ ಜೀವನದಲ್ಲಿ ಎಲ್ಲಾ ಬಗೆಯ ಗೌರವ ಹಾಗೂ ಸಂಪತ್ತು ಲಭ್ಯವಾಗುವುದು.

ಗಾಯತ್ರಿ ಮಂತ್ರ ನಿಮಗಾಗಿ
ಓಂ
ಭೂರ್ಭುವಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್.

ಗಾಯತ್ರಿ ಮಹಾಮ೦ತ್ರದ ಭಾವಾರ್ಥ
ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಜಪ ಮಾಡುವ ವಿಧಾನ: "ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ" ಎಂದು ಹೇಳುತ್ತಾ ನಿಧಾನವಾಗಿ ಪ್ರಾಣವಾಯುವನ್ನು ಒಳಗೆಳೆದುಕೊಳ್ಳಬೇಕು. ಆಮೇಲೆ ಪ್ರಾಣವಾಯುವನ್ನು ನಿಧಾನವಾಗಿ ಹೊರಬಿಡುತ್ತಾ "ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್" ಮಂತ್ರ ಜಪಿಸಬೇಕು.



Click it and Unblock the Notifications
