Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 11 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ರುದ್ರಾಕ್ಷಿ ಧಾರಣೆಯಿಂದ ಮಾಡಬಯಸುವ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರುವವು
ಗ್ರಹಗತಿಗಳ ದೋಷದಿಂದ ಉಂಟಾಗಬಹುದಾದ ಕೆಟ್ಟ ಪರಿಣಾಮಗಳನ್ನು ತಡೆಯುವ ಶಕ್ತಿ ರುದ್ರಾಕ್ಷಿಯಲ್ಲಿದೆ. ರುದ್ರಾಕ್ಷಿ ಧಾರಣೆ ಮಾಡಿದ ವ್ಯಕ್ತಿಯ ಆತ್ಮವಿಶ್ವಾಸ ವೃದ್ಧಿಸಿ ಆತನು ಮಾಡಬಯಸುವ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರುವವು ಎನ್ನಲಾಗಿದೆ. ಹೀಗಾಗಿ ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ರುದ್ರಾಕ್ಷಿಗೆ ಅತಿ ಮಹತ್ವದ ಸ್ಥಾನವಿದೆ. ರುದ್ರಾಕ್ಷಿಗಳನ್ನು ಏಕಮುಖಿ, ದ್ವಿಮುಖಿ, ತ್ರಿಮುಖಿ ಎಂದು ಹಲವಾರು ರೀತಿಯಲ್ಲಿ ವಿಂಗಡಿಸಲಾಗಿದೆ. ಪ್ರತಿಯೊಂದು ರೀತಿಯ ರುದ್ರಾಕ್ಷಿಗೂ ಅದರದೇ ಆದ ವಿಶಿಷ್ಟ ಶಕ್ತಿ ಇದೆ ಹಾಗೂ ಅದನ್ನು ಧರಿಸಿದವರಿಗೆ ಈ ವಿಶಿಷ್ಟ ಶಕ್ತಿಯ ಲಾಭ ದೊರಕುತ್ತದೆ. ಹಾಗಾದರೆ ಎಷ್ಟು ಮುಖದ ರುದ್ರಾಕ್ಷಿ ಧಾರಣೆ ನಿಮಗೆ ಸೂಕ್ತ? ಅವುಗಳ ವಿಶೇಷತೆಗಳೇನು ಎಂಬ ಬಗ್ಗೆ ಒಂದೊಂದಾಗಿ ತಿಳಿಯೋಣ.....

ಏಕಮುಖಿ ರುದ್ರಾಕ್ಷಿ
ಏಕಮುಖದ ರುದ್ರಾಕ್ಷಿಯು ಅತಿ ವಿರಳವಾಗಿ ಸಿಗುವಂಥದಾಗಿದ್ದು ಇದನ್ನು ಅತ್ಯಂತ ಪವಿತ್ರವಾದ ರುದ್ರಾಕ್ಷಿ ಎಂದು ಪರಿಗಣಿಸಲಾಗಿದೆ. ಇದರ ಅಧಿಪತಿ ದೇವರು ಶಿವನಾಗಿದ್ದು, ಅಧಿಪತಿ ಗ್ರಹ ಸೂರ್ಯನಾಗಿದ್ದಾನೆ. ಇದು ಅತ್ಯಂತ ದುಬಾರಿ ಬೆಲೆ ಹೊಂದಿದ್ದು, ವೃತ್ತಾಕಾರ ಹಾಗೂ ಚಂದ್ರಾಕಾರ ಹೀಗೆ ಎರಡು ಬಗೆಗಳಲ್ಲಿ ಇದು ಸಿಗುತ್ತದೆ. ಏಕಮುಖಿ ರುದ್ರಾಕ್ಷಿ ಧರಿಸಿದವರಿಗೆ ಶಿವ ಹಾಗೂ ಮಹಾಲಕ್ಷ್ಮಿ ದೇವಿ ಇಬ್ಬರದೂ ಆಶೀರ್ವಾದ ಲಭಿಸುತ್ತದೆ ಎಂಬ ನಂಬಿಕೆ ಇದೆ. ಇದನ್ನು ಧರಿಸುವುದರಿಂದ ಮನಸ್ಸಿನ ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತವೆ. ಕೆಟ್ಟ ಚಟಗಳಿಂದ ಹೊರಬರಲು ಯತ್ನಿಸುತ್ತಿರುವವರು ಏಕಮುಖಿ ರುದ್ರಾಕ್ಷಿ ಧರಿಸಿದರೆ ಲಾಭವಾಗುತ್ತದೆ.

ಎರಡು ಮುಖಿ ರುದ್ರಾಕ್ಷಿ
ಎರಡು ಮುಖದ ರುದ್ರಾಕ್ಷಿಯು ಅರ್ಧನಾರೀಶ್ವರನ ಪ್ರತಿರೂಪವಾಗಿದೆ. ಇದರ ಅಧಿಪತಿ ದೇವರು ಅರ್ಧನಾರೀಶ್ವರ ಹಾಗೂ ಹಾಗೂ ಅಧಿಪತಿ ಗ್ರಹ ಚಂದ್ರನಾಗಿದ್ದಾನೆ. ಇದರ ಧಾರಣೆಯಿಂದ ಕುಟುಂಬದಲ್ಲಿ ಸಾಮರಸ್ಯ ಬೆಳೆದು ಕಲಹಗಳು ದೂರವಾಗುತ್ತವೆ. ವಿವಾಹವಾಗದವರು ಧರಿಸಿದಲ್ಲಿ ಬೇಗನೆ ಕಂಕಣ ಬಲ ಕೂಡಿ ಬರುತ್ತದೆ. ಗೋಹತ್ಯೆಯಂಥ ಮಹಾಪಾಪವನ್ನು ಸಹ ನಿವಾರಿಸುವ ಶಕ್ತಿ ದ್ವಿಮುಖಿ ರುದ್ರಾಕ್ಷಿಗೆ ಇದೆ.

ತ್ರಿಮುಖಿ ರುದ್ರಾಕ್ಷಿ
ತ್ರಿಮುಖಿ ರುದ್ರಾಕ್ಷಿಯು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರನ್ನು ಸೂಚಿಸುತ್ತದೆ. ಇದರ ಅಧಿಪತಿ ದೇವರು ಅಗ್ನಿ ದೇವರಾಗಿದ್ದು ಅಧಿಪತಿ ಗ್ರಹ ಮಂಗಳನಾಗಿರುವನು. ಆತ್ಮವಿಶ್ವಾಸ ಕೊರತೆ, ಮಾನಸಿಕ ಒತ್ತಡ ಮುಂತಾದ ಸಮಸ್ಯೆಗಳಿರುವವರು ಇದನ್ನು ಬಳಸಿದಲ್ಲಿ ಸಮಸ್ಯೆಗಳು ದೂರವಾಗುತ್ತವೆ. ಇದರ ಧಾರಣೆಯಿಂದ ಆಲಸ್ಯತನ ದೂರವಾಗಿ ಜೀವನದಲ್ಲಿ ಚೈತನ್ಯಶೀಲತೆ ಉಂಟಾಗುತ್ತದೆ. ಸೂರ್ಯ ಹಾಗೂ ಮಂಗಳ ಗ್ರಹದ ದೋಷದಿಂದ ಉಂಟಾಗಬಹುದಾದ ಕೆಟ್ಟ ಪರಿಣಾಮಗಳನ್ನು ಇದು ತಡೆಯುತ್ತದೆ.

ನಾಲ್ಕು ಮುಖದ ರುದ್ರಾಕ್ಷಿ
ನಾಲ್ಕು ಮುಖದ ರುದ್ರಾಕ್ಷಿಯು ಬಹಳಷ್ಟು ಜನರ ಮೆಚ್ಚುಗೆ ಗಳಿಸಿದೆ. ಬ್ರಹ್ಮ ದೇವರು ಇದರ ಅಧಿಪತಿ ದೇವನಾಗಿದ್ದು ಬುಧ ಗ್ರಹನು ಅಧಿಪತಿ ಗ್ರಹನಾಗಿದ್ದಾನೆ. ಈ ರುದ್ರಾಕ್ಷಿಯು ನಾಲ್ಕು ವೇದಗಳನ್ನು ಸೂಚಿಸುತ್ತದೆ. ಇದರ ಧಾರಣೆಯಿಂದ ಬುದ್ಧಿಶಕ್ತಿ ವೃದ್ಧಿಸುತ್ತದೆ ಹಾಗೂ ಸರಸ್ವತಿ ದೇವಿಯ ಅನುಗ್ರಹ ದೊರಕುತ್ತದೆ. ಜ್ಞಾಪಕ ಶಕ್ತಿ ಕೊರತೆ ಹಾಗೂ ಇನ್ನಿತರ ಮಾನಸಿಕ ಸಮಸ್ಯೆಗಳನ್ನು ಕಡಿಮೆ ಶಕ್ತಿ ಇದಕ್ಕೆ ಇದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದನ್ನು ಧರಿಸುವುದು ಸೂಕ್ತವಾಗಿದೆ. ಬುಧ ಹಾಗೂ ಗುರು ಗ್ರಹದ ದೋಷಗಳನ್ನು ಇದು ತಡೆಗಟ್ಟುತ್ತದೆ.
Most Read: ದಯವಿಟ್ಟು ನವದಂಪತಿಗಳ ಬಳಿ 'ಮಗು ಯಾವಾಗ' ಎಂದು ಮಾತ್ರ ಕೇಳಬೇಡಿ!!

ಪಂಚಮುಖಿ ರುದ್ರಾಕ್ಷಿ
ಪಂಚಮುಖಿ ರುದ್ರಾಕ್ಷಿಯು ಬಹುತೇಕ ಜನತೆಯ ಸಾಮಾನ್ಯ ಆಯ್ಕೆಯಾಗಿದೆ. ಇದು ಬ್ರಹ್ಮಾಂಡದ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಹಾಗೂ ಭೂಮಿಯನ್ನು ಪ್ರತಿನಿಧಿಸುತ್ತದೆ. ಕಾಲಾಗ್ನಿ ರುದ್ರನು ಇದರ ಅಧಿಪತಿ ದೇವನಾಗಿದ್ದು ಗುರು ಗ್ರಹನು ಅಧಿಪತಿ ಗ್ರಹನಾಗಿರುವನು. ಇದರ ಧಾರಣೆಯಿಂದ ಪಿತ್ತ ಸಮಸ್ಯೆ, ಮೂಲವ್ಯಾಧಿ, ಸ್ತನ ಸಮಸ್ಯೆಗಳು ದೂರವಾಗುತ್ತವೆ. ಗುರು ಗ್ರಹದ ದೋಷಗಳನ್ನು ಇದು ತಡೆಗಟ್ಟುತ್ತದೆ.

ಆರು ಮುಖದ ರುದ್ರಾಕ್ಷಿ
ಶಿವನ ಸುಪುತ್ರನಾದ ಕಾರ್ತಿಕೇಯನು ಆರು ಮುಖದ ರುದ್ರಾಕ್ಷಿ ಅಧಿಪತಿ ದೇವನಾಗಿದ್ದಾನೆ ಹಾಗೂ ಶುಕ್ರನು ಇದರ ಅಧಿಪತಿ ಗ್ರಹನಾಗಿರುವನು. ಇದರ ಧಾರಣೆಯಿಂದ ಸಿಟ್ಟು, ಹೊಟ್ಟೆಕಿಚ್ಚು ಹಾಗೂ ಮಾನಸಿಕ ಉದ್ವೇಗಗಳು ಕಡಿಮೆಯಾಗುತ್ತವೆ. ದೇಹದ ಆರೋಗ್ಯವನ್ನು ಸುಧಾರಿಸುವ ಶಕ್ತಿ ಇದಕ್ಕಿದೆ. ಜೀವನದಲ್ಲಿ ಮಾಡಿರುವ ಸಕಲ ಪಾಪಗಳನ್ನು ತೊಡೆದು ಹಾಕುವ ಸಾಮರ್ಥ್ಯ ಇದಕ್ಕಿದೆ. ಲೈಂಗಿಕ ಸಮಸ್ಯೆ, ಬಾಯಿ ರೋಗ, ಮೂತ್ರಕೋಶ ಸಮಸ್ಯೆ, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಅಜೀರ್ಣತೆ, ಗಂಟಲು ಸೋಂಕು, ಸಂಧಿವಾತ ಮುಂತಾದ ರೋಗಗಳನ್ನು ನಿವಾರಿಸುತ್ತದೆ. ಶುಕ್ರ ಹಾಗೂ ಮಂಗಳನಿಂದ ಉಂಟಾಗಬಹುದಾದ ಕೆಟ್ಟ ಪರಿಣಾಮಗಳನ್ನು ಇದು ತಡೆಗಟ್ಟುತ್ತದೆ.

ಏಳು ಮುಖದ ರುದ್ರಾಕ್ಷಿ
ಏಳು ಮುಖದ ರುದ್ರಾಕ್ಷಿಯು ಅತಿ ಪವಿತ್ರ ರುದ್ರಾಕ್ಷಿಗಳಲ್ಲೊಂದಾಗಿದೆ. ಮಹಾಲಕ್ಷ್ಮಿ ದೇವಿಯು ಇದರ ಅಧಿಪತಿ ದೇವತೆಯಾಗಿದ್ದು ಶನಿ ಗ್ರಹನು ಅಧಿಪತಿ ಗ್ರಹನಾಗಿದ್ದಾನೆ. ಇದು ಏಳು ಪವಿತ್ರ ನದಿಗಳನ್ನು ಪ್ರತಿನಿಧಿಸುತ್ತದೆ. ಇದರ ಧಾರಣೆಯಿಂದ ಸಂಪತ್ತು ಹಾಗೂ ಆರೋಗ್ಯ ವೃದ್ಧಿಯಾಗುತ್ತವೆ. ಇದನ್ನು ಧರಿಸಿದವರು ವಿಷಪ್ರಾಶನ ಬಾಧೆಯಿಂದ ಪಾರಾಗುವರು. ಪಾಪಗಳನ್ನು ನಿವಾರಿಸು ಶಕ್ತಿ ಇರುವ ಇದರ ಧಾರಣೆಯಿಂದ ಶತ್ರುಗಳು ಶರಣಾಗಿ, ಕೋರ್ಟ ಕೇಸ್‌ಗಳಲ್ಲಿ ಜಯ ಲಭಿಸುವುದು. ಲೈಂಗಿಕ ಸಮಸ್ಯೆ ಹಾಗೂ ಹೃದಯ ವಿಕಾರದ ಸಮಸ್ಯೆಗಳನ್ನು ಪರಿಹರಿಸುವ ಇದು ಶನಿ ಗ್ರಹದ ಕೆಟ್ಟ ಪರಿಣಾಮಗಳನ್ನು ತಡೆಗಟ್ಟುತ್ತದೆ.
Most Read: ಜ್ಯೋತಿಷ್ಯಶಾಸ್ತ್ರ: ನಿಮಗೆ ಸರ್ಕಾರಿ ಕೆಲ್ಸ ಬೇಕಂದ್ರೆ ತಪ್ಪದೇ ಹೀಗೆ ಮಾಡಿ...

ಎಂಟು ಮುಖದ ರುದ್ರಾಕ್ಷಿ
ಎಂಟು ಮುಖದ ರುದ್ರಾಕ್ಷಿಯು ಬಹುತೇಕ ಎಲ್ಲರಿಗೂ ಅದೃಷ್ಟ ತರುವಂಥದ್ದಾಗಿದೆ. ಶ್ರೀ ಗಣೇಶನು ಇದರ ಅಧಿಪತಿ ದೇವನಾಗಿದ್ದು ರಾಹು ಅಧಿಪತಿ ಗ್ರಹನಾಗಿರುವನು. ಇದು ಅಷ್ಟ ದಿಕ್ಕುಗಳನ್ನು ಹಾಗೂ ಅಷ್ಟ ಪ್ರಕಾರದ ಸಿದ್ಧಿಗಳನ್ನು ಪ್ರತಿನಿಧಿಸುತ್ತದೆ. ಇದನ್ನು ಧರಿಸುವುದರಿಂದ ಬುದ್ಧಿಶಕ್ತಿ ಹೆಚ್ಚಳಗೊಂಡು ಜೀವನದಲ್ಲಿ ಹೆಸರು, ಹಣ, ಖ್ಯಾತಿ ಬರುತ್ತವೆ. ಇದು ಯಶಸ್ಸಿನ ದಾರಿಗೆ ಅಡ್ಡವಾಗಿರುವ ಅಡೆತಡೆಗಳನ್ನು ನಿವಾರಿಸಬಲ್ಲದು. ನರ ದೌರ್ಬಲ್ಯ, ಪ್ರೊಸ್ಟೇಟ್ ಗ್ರಂಥಿ, ಶ್ವಾಸಕೋಶದ ಸಮಸ್ಯೆಗಳನ್ನು ಇದು ಹೋಗಲಾಡಿಸಬಲ್ಲದು. ಶನಿ ಹಾಗೂ ರಾಹುವಿನ ಕೆಟ್ಟ ದೃಷ್ಟಿಯಿಂದ ಪಾರಾಗಲು ಇದು ಸಹಕಾರಿಯಾಗಿದೆ.

ಒಂಭತ್ತು ಮುಖದ ರುದ್ರಾಕ್ಷಿ
ಇದೊಂದು ಅತಿ ವಿರಳವಾದ ರುದ್ರಾಕ್ಷಿಯಾಗಿದೆ. ಮಾ ದುರ್ಗೆಯು ಇದರ ಅಧಿಪತಿ ದೇವತೆಯಾಗಿದ್ದು ಕೇತು ಇದರ ಅಧಿಪತಿ ಗ್ರಹನಾಗಿರುವನು. ನವದುರ್ಗೆಯರಾದ ಶಿಲಾಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿಯರನ್ನು ಈ ರುದ್ರಾಕ್ಷಿ ಪ್ರತಿನಿಧಿಸುತ್ತದೆ. ಜಾತಕದಲ್ಲಿರುವ ಎಲ್ಲ ಒಂಭತ್ತು ಗ್ರಹ ದೇವರನ್ನು ಇದು ಸಂತೃಪ್ತಿಪಡಿಸುತ್ತದೆ. ಒತ್ತಡದಿಂದ ಬಿಡುಗಡೆ ಮಾಡಿ ಆಕಸ್ಮಿಕ ಸಾವನ್ನು ತಪ್ಪಿಸುವ ಶಕ್ತಿ ಇದಕ್ಕೆ ಇದೆ. ಜೀವನದಲ್ಲಿ ಎದುರಾಗಬಹುದಾದ ಎಲ್ಲ ಸಮಸ್ಯೆ ಹಾಗೂ ಅಡ್ಡಿಗಳನ್ನು ನಿವಾರಿಸಿ ಯಶಸ್ಸಿಗೆ ಈ ರುದ್ರಾಕ್ಷಿ ಸಹಾಯ ಮಾಡುತ್ತದೆ. ಮೆದುಳು, ಲೈಂಗಿಕ ಸಮಸ್ಯೆ, ಕಣ್ಣು ಮುಂತಾದುವುಗಳ ಸಮಸ್ಯೆಗಳನ್ನು ನಿವಾರಿಸಬಲ್ಲದು. ರಾಹು ಹಾಗೂ ಕೇತುವಿನ ಕೆಟ್ಟ ದೃಷ್ಟಿಯಿಂದ ಪಾರಾಗಲು ಈ ರುದ್ರಾಕ್ಷಿ ಧಾರಣೆ ಉತ್ತಮವಾಗಿದೆ.

ಹತ್ತು ಮುಖದ ರುದ್ರಾಕ್ಷಿ
ಹತ್ತು ಮುಖದ ರುದ್ರಾಕ್ಷಿ ಅತಿ ವಿಶಿಷ್ಟ ರುದ್ರಾಕ್ಷಿಗಳಲ್ಲೊಂದಾಗಿದ್ದು ಲಕ್ಷ್ಮಿ ನಾರಾಯಣ ದೇವರನ್ನು ಸೂಚಿಸುತ್ತದೆ. ವಿಷ್ಣುವಿನ ಎಲ್ಲ ಹತ್ತು ಅವತಾರಗಳನ್ನು ಸಹ ಇದು ಪ್ರತಿನಿಧಿಸುತ್ತದೆ. ಜೀವನದಲ್ಲಿ ಅತಿಯಾದ ಕಷ್ಟಗಳು ಎದುರಾದಾಗ ಇದನ್ನು ಧರಿಸಿದರೆ ಮಾನಸಿಕ ಶಾಂತಿಯನ್ನು ದಯಪಾಲಿಸಿ ಎಲ್ಲ ಕಷ್ಟಗಳನ್ನು ದೂರ ಮಾಡುತ್ತದೆ. ಎಲ್ಲ 9 ಗ್ರಹಗಳ ಕೆಟ್ಟ ದೃಷ್ಟಿಯಿಂದ ಪಾರಾಗಲು ಇದು ಸೂಕ್ತವಾಗಿದೆ. ಇದನ್ನು ಧರಿಸಿದಲ್ಲಿ ಮಾಟ ಮಾಡುವುದು, ಆಕಸ್ಮಿಕ ಸಾವು, ಅಪಘಾತ ಹಾಗೂ ದೆವ್ವದ ಪೀಡೆಗಳಿಂದ ಪಾರಾಗಬಹುದು. ಭೂತ ಪ್ರೇತದ ಭಯವನ್ನು ದೂರಮಾಡಿ ಶತ್ರುಗಳ ಕಾಟವನ್ನು ತೊಡೆದು ಹಾಕುವುದು. ಪುತ್ರಸಂತಾನ ಒದಗಿಸುವ ಶಕ್ತಿ ಇರುವ ಈ ರುದ್ರಾಕ್ಷಿಯ ಧಾರಣೆಯಿಂದ ರಾತ್ರಿ ನಿದ್ರಾಹೀನತೆ, ಆಯಾಸ ಹಾಗೂ ಅತಿಯಾದ ರಕ್ತದೊತ್ತಡವನ್ನು ಉಪಶಮನಗೊಳಿಸುತ್ತದೆ.

ಹನ್ನೊಂದು ಮುಖದ ರುದ್ರಾಕ್ಷಿ
ಆಧ್ಯಾತ್ಮಿಕವಾಗಿ ಹನ್ನೊಂದು ಮುಖದ ರುದ್ರಾಕ್ಷಿಯು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಹನುಮಂತನು ಇದರ ಅಧಿಪತಿ ದೇವನಾಗಿರುವನು. ಇದು ಹನ್ನೊಂದು ರುದ್ರರು ಅಥವಾ ಶಿವನ ರೂಪಗಳನ್ನೇ ಪ್ರತಿಬಿಂಬಿಸುತ್ತದೆ. ಇದನ್ನು ಧಾರಣೆ ಮಾಡಿದಲ್ಲಿ ಶತ್ರುಗಳ ನಾಶವಾಗಿ ಉತ್ತಮ ಆರೋಗ್ಯ ಹಾಗೂ ಯಶಸ್ಸು ದೊರಕುತ್ತದೆ. ಆಯುಷ್ಯವನ್ನು ವೃದ್ಧಿಸಿ ಎಲ್ಲದರಲ್ಲೂ ಜಯ ಸಿಗಲು ಇದು ಸಹಕಾರಿಯಾಗಿದೆ. ಅಧಿಕ ರಕ್ತದೊತ್ತಡ, ಹೃದಯ ಬೇನೆ, ಡಯಾಬಿಟೀಸ್ ಮುಂತಾದ ರೋಗಗಳ ನಿವಾರಣೆಗೆ ಇದು ಸಹಕಾರಿಯಾಗಿದೆ. ಏಕಾಗ್ರತೆ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಇದು ಎಲ್ಲ ಗ್ರಹಗಳ ಕೆಟ್ಟ ದೃಷ್ಟಿಯಿಂದ ಕಾಪಾಡುತ್ತದೆ.
Most Read: ಬಡತನ ನಿವಾರಣೆ ಮಾಡಲು ಕೃಷ್ಣನ ಈ ಐದು ಸಂದೇಶಗಳನ್ನು ಪಾಲಿಸಿ

ಹನ್ನೆರಡು ಮುಖದ ರುದ್ರಾಕ್ಷಿ
ಹನ್ನೆರಡು ಮುಖದ ರುದ್ರಾಕ್ಷಿಯು ಕೆಲವು ವಿಶಿಷ್ಟ ಗುಣಗಳನ್ನು ಹೊಂದಿದೆ. ಸೂರ್ಯ ದೇವನು ಇದರ ಅಧಿಪತಿ ದೈವನಾಗಿರುವನು. ಸೂರ್ಯನ ೧೨ ಅವತಾರಗಳಾದ ಹನ್ನೆರಡು ಆದಿತ್ಯರನ್ನು ಇದು ಸೂಚಿಸುತ್ತದೆ. ಜೀವನದಲ್ಲಿ ಖ್ಯಾತಿ, ಪ್ರಭಾವಗಳನ್ನು ಇದು ಹೆಚ್ಚಿಸುತ್ತದೆ. ಭಯವನ್ನು ದೂರಗೊಳಿಸಿ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಇದು ಹೆಚ್ಚಿಸುತ್ತದೆ. ಮಾಟದಿಂದಾದ ದೋಷ ಹಾಗೂ ವಾಸ್ತು ದೋಷಗಳನ್ನು ನಿವಾರಿಸಲು ಇದು ಸೂಕ್ತವಾಗಿದೆ. ಹೃದಯ ನಾಳಗಳ ದೋಷ, ಕಣ್ಣು, ಚರ್ಮದ ಸಮಸ್ಯೆ, ರಾತ್ರಿ ಕುರುಡುತನ, ಕಿಡ್ನಿ ಕಲ್ಲು ಮುಂತಾದ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇದಕ್ಕೆ ಇದೆ. ಸೂರ್ಯನ ಕೆಟ್ಟ ದೃಷ್ಟಿಯ ಪರಿಣಾಮಗಳನ್ನು ಇದು ದೂರ ಮಾಡುತ್ತದೆ. ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಮುಖಂಡರಿಗೆ ಈ ರುದ್ರಾಕ್ಷಿ ಉತ್ತಮವಾಗಿದೆ.

ಹದಿಮೂರು ಮುಖದ ರುದ್ರಾಕ್ಷಿ
ಇಂದ್ರದೇವನು ಹದಿಮೂರು ಮುಖದ ರುದ್ರಾಕ್ಷಿಯ ಅಧಿಪತಿ ದೇವರಾಗಿದ್ದು, ಶುಕ್ರನು ಇದರ ಅಧಿಪತಿ ಗ್ರಹನಾಗಿರುವನು. ಅತ್ಯಂತ ಪವಿತ್ರವಾದ ಹದಿಮೂರು ಮುಖದ ರುದ್ರಾಕ್ಷಿ ಧಾರಣೆಯಿಂದ ಜಾಣ್ಮೆ ಹಾಗೂ ಆತ್ಮವಿಶ್ವಾಸಗಳು ಹೆಚ್ಚಾಗುತ್ತವೆ. ಕುಟುಂಬದಲ್ಲಿ ನೆಮ್ಮದಿ ಬಯಸುವವರು ಇದನ್ನು ಧರಿಸುವುದು ಸೂಕ್ತ. ಸಂಶೋಧಕರು ಹಾಗೂ ಔಷಧ ವಿಜ್ಞಾನದಲ್ಲಿ ತೊಡಗಿರುವವರು ಈ ರುದ್ರಾಕ್ಷಿ ಧಾರಣೆ ಮಾಡಬೇಕು. ಮಾನಸಿಕ ಸಮಸ್ಯೆ, ಲೈಂಗಿಕ ಸಮಸ್ಯೆ, ಉದರ ಸಮಸ್ಯೆ, ಸಂಧಿವಾತ ಮತ್ತು ಥೈರಾಯ್ಡ್ ಸಮಸ್ಯೆಗಳನ್ನು ಇದು ದೂರ ಮಾಡಬಲ್ಲದು. ಮುಖಂಡರು, ಚಿತ್ರನಟರು, ರಾಜಕಾರಣಿಗಳು, ಮಾರ್ಕೆಟಿಂಗ್ ವೃತ್ತಿಯಲ್ಲಿರುವವರು, ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಈ ರುದ್ರಾಕ್ಷಿ ಅತ್ಯಂತ ಉಪಯುಕ್ತವಾಗಿದೆ.

ಹದಿನಾಲ್ಕು ಮುಖದ ರುದ್ರಾಕ್ಷಿ
ಹದಿನಾಲ್ಕು ಮುಖದ ರುದ್ರಾಕ್ಷಿಯು ಹನುಮಾನ ದೇವರಿಂದ ಆಳಲ್ಪಡುತ್ತದೆ. ಶನಿಯು ಇದರ ಅಧಿಪತಿ ಗ್ರಹನಾಗಿರುವನು. ಇದರ ಧಾರಣೆಯಿಂದ ವಿಚಾರಶಕ್ತಿ ಹೆಚ್ಚಳಗೊಂಡು ಜೀವನದಲ್ಲಿ ಬಯಸಿದ ಎಲ್ಲ ಕನಸುಗಳು ಈಡೇರುವವು. ಶಿವನ ಮೂರನೇ ಕಣ್ಣಿನಿಂದ ಈ ರುದ್ರಾಕ್ಷಿ ಉದ್ಭವಿಸಿದ್ದರಿಂದ ಇದು ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಸ್ಮರಣ ಶಕ್ತಿ ಕುಂದುವಿಕೆ, ಉದರ ಸಮಸ್ಯೆ, ಕಣ್ಣಿನ ಸಮಸ್ಯೆ ಹಾಗೂ ಬೆನ್ನು ಹುರಿಯ ಸಮಸ್ಯೆಗಳನ್ನು ಇದು ನಿವಾರಿಸಬಲ್ಲದು. ಕುಟುಂಬದಲ್ಲಿನ ಕಲಹಗಳನ್ನು ನಿವಾರಿಸಿ ಸುಖ ಸಂತೋಷಗಳನ್ನು ಉಂಟುಮಾಡುತ್ತದೆ. ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು, ಆಮದು ರಫ್ತು ವ್ಯವಹಾರದಲ್ಲಿರುವವರು ಇದನ್ನು ಧರಿಸಬೇಕು. ಶನಿ ಗ್ರಹದ ವಕ್ರ ದೃಷ್ಟಿಯ ಪರಿಣಾಮವನ್ನು ಇದು ನಿವಾರಿಸುತ್ತದೆ.