Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಏಪ್ರಿಲ್ ತಿಂಗಳು: ಸಾಲು-ಸಾಲು ಹಬ್ಬ ಬರಲಿದೆ! ಯಾವ ದಿನಕ್ಕೆ ಏನು ವಿಶೇಷತೆ ಇದೆ?

ಹಿಂದೂ ಸಂಪ್ರದಾಯದಲ್ಲಿ ವ್ರತ ಮತ್ತು ಹಬ್ಬಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಪ್ರತಿ ತಿಂಗಳು ಹಿಂದೂ ಕ್ಯಾಲೆಂಡರ್‌ನಲ್ಲಿ ಕೆಲವೊಂದು ಮಹತ್ತದರ ದಿನಗಳನ್ನು ಪೂಜನೀಯವಾಗಿ ಕಾಣಲಾಗುತ್ತದೆ. ಈ ದಿನ ಹಿಂದೂಗಳು ಶ್ರದ್ಧೆ ಭಕ್ತಿಯಿಂದ ವೃತ ಉಪವಾಸಗಳನ್ನು ನಡೆಸಿ ದೇವತಾ ಕಾರ್ಯಗಳನ್ನು ಮಾಡುತ್ತಾರೆ.
ಅದೇ ರೀತಿ ಈ ತಿಂಗಳು ಕೂಡ ಕೆಲವೊಂದು ಹಬ್ಬ ಹರಿದಿನಗಳಿದ್ದು ಆ ದಿನಗಳು ಯಾವುವು ಎಂಬುದನ್ನು ನೋಡೋಣ. ಈ ದಿನಗಳು ಹೆಚ್ಚು ಪವಿತ್ರ ಮತ್ತು ಮಹತ್ವಪೂರ್ಣ ಎಂದೆನಿಸಿದ್ದು ಹಿಂದೂಗಳು ಶ್ರದ್ಧೆಯಿಂದ ಸ್ನಾನಾದಿಗಳನ್ನು ಮಾಡಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಪುನಸ್ಕಾರಗಳನ್ನು ನಡೆಸಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಹಾಗಿದ್ದರೆ ಈ ಮಾಸದಲ್ಲಿ ಬರುವ ಪವಿತ್ರ ಮಹತ್ವಪೂರ್ಣ ದಿನಗಳು ಯಾವುವು ಎಂಬುದನ್ನು ಕಂಡುಕೊಳ್ಳೋಣ....

ಏಪ್ರಿಲ್ 3: ಸಂಕಷ್ಟ ಚತುರ್ಥಿ
ಸಂಕಷ್ಟ ಚತುರ್ಥಿ ಈ ದಿನವಾಗಿದ್ದು ಗಣೇಶನಿಗೆ ಈ ದಿನವನ್ನು ಅರ್ಪಿಸಲಾಗಿದೆ. ಈ ದಿನ ಜನರು ದೇವರಿಗೆ ಉಪವಾಸವನ್ನು ಕೈಗೊಳ್ಳುತ್ತಾರೆ ಮತ್ತು ಚಂದ್ರನ ದರ್ಶನವನ್ನು ಮಾಡಿ ಫಲಾಹಾರವನ್ನು ಸೇವಿಸುತ್ತಾರೆ. ವೈಶಾಖ ಮಾಸದ ಕೃಷ್ಣ ಪಕ್ಷದ ನಾಲ್ಕನೇ ದಿನ ಸಂಕಷ್ಟಿ ಬರುತ್ತದೆ.
ಸಂಕಷ್ಟ ಚತುರ್ಥಿ ವ್ರತದ ಮಹತ್ವ ಹಾಗೂ ಏಕೆ ಕೈಗೊಳ್ಳಬೇಕು?

ಏಪ್ರಿಲ್ 7: ಕಾಳಾಷ್ಟಮಿ
ಕಾಳಾಷ್ಟಮಿಯನ್ನು ಕಾಲಭೈರವ ಶಿವನಿಗೆ ಅರ್ಪಿಸಲಾಗಿದೆ. ಅಸುರ ರಾಜ ಮಹಾಬಲಿಯನ್ನು ವಧಿಸಲು ಶಿವನು ಈ ರೂಪವನ್ನು ತಾಳುತ್ತಾರೆ. ಏಪ್ರಿಲ್ ಅಥವಾ ಮೇ ತಿಂಗಳ ಎಂಟನೇ ದಿನ ಈ ದಿನ ಬರುತ್ತದೆ. ಈ ವರ್ಷ ಏಪ್ರಿಲ್ 7 ರಂದು ಕಾಳಾಷ್ಟಮಿ ಬಂದಿದೆ. ಮಧ್ಯರಾತ್ರಿಯಂದು ಕಾಲಭೈರವನನ್ನು ಪೂಜಿಸಲಾಗುತ್ತದೆ. ಈ ದಿನ ಜನರು ವೃತವನ್ನು ಕೈಗೊಳ್ಳುತ್ತಾರೆ.

ಏಪ್ರಿಲ್ 12: ವರುದಿನಿ
ವೈಶಾಖ ಮಾಸದ ಕೃಷ್ಣ ಪಕ್ಷದಂದು ಈ ದಿನ ಬರುತ್ತದೆ. ಏಪ್ರಿಲ್ ಅಥವಾ ಮೇ ಮಾಸದ ಜೊತೆಗೂಡಿ ಈ ದಿನ ಬರುತ್ತದೆ. ವಿಷ್ಣುವಿನ ವಾಮನ ರೂಪವನ್ನು ಈ ದಿನ ಪೂಜಿಸಲಾಗುತ್ತದೆ. ಏಪ್ರಿಲ್ 12 ರಂದು ಈ ಪವಿತ್ರ ದಿನ ಬಂದಿದೆ. ಭಕ್ತರ ಪಾಪ ಕೂಪವನ್ನು ತಡೆಯಲು ಈ ದಿನ ವ್ರತವನ್ನು ಕೈಗೊಳ್ಳುವುದು ಒಳಿತು ಎಂಬುದು ನಂಬಿಕೆಯಾಗಿದೆ. ಈ ದಿನ ದಾನ ಧರ್ಮಾದಿಗಳನ್ನು ಮಾಡುವುದು ಒಳ್ಳೆಯದು ಎಂದು ಭಾವಿಸಲಾಗಿದೆ.

ಏಪ್ರಿಲ್ 16: ಸೋಮಾವತೀಯ ಅಮವಾಸ್ಯೆ
ಸೋಮವಾರ ಅಮವಾಸ್ಯೆ ಬಂದಲ್ಲಿ ಅದನ್ನು ಸೋಮಾವತೀಯ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಏಪ್ರಿಲ್ 16 ರಂದು ಈ ಪವಿತ್ರ ದಿನ ಬಂದಿದೆ. ಪವಿತ್ರ ನದಿಯಲ್ಲಿ ಜನರು ಈ ದಿನ ಸ್ನಾನ ಮಾಡುತ್ತಾರೆ. ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಸುಮಂಗಲಿಯರು ಈ ದಿನ ಉಪವಾಸವನ್ನು ಮಾಡುತ್ತಾರೆ. ಪಿತೃ ದೋಷದ ಪರಿಹಾರವನ್ನು ಈ ದಿನ ಸೂಚಿಸುತ್ತದೆ. ದಾನ ಧರ್ಮಾದಿಗಳನ್ನು ಈ ದಿನ ಮಾಡುವುದು ಒಳ್ಳೆಯದು. ಸೂರ್ಯ ದೇವರನ್ನು ಈ ದಿನ ಪೂಜಿಸುವುದು ಬಡತನವನ್ನು ನಿವಾರಿಸುತ್ತದೆ. ಮೌನ ವೃತಕ್ಕೆ ಕೂಡ ಈ ದಿನ ಒಳಿತಾದುದು. ಆಲದ ಮರವನ್ನು ಈ ದಿನ ಪೂಜಿಸಲಾಗುತ್ತದೆ.

ಏಪ್ರಿಲ್ 18: ಅಕ್ಷಯ ತೃತೀಯ
ಹಿಂದೂಗಳಿಗೆ ಮತ್ತು ಜೈನರಿಗೆ ಈ ದಿನ ಪವಿತ್ರವಾದುದು. ಭಗವಾನ್ ಗಣೇಶ ಮತ್ತು ವೇದವ್ಯಾಸರು ಈ ದಿನ ಮಹಾಭಾರತವನ್ನು ಬರೆದಿದ್ದಾರೆ. ಭಗವಾನ್ ಪರಶುರಾಮ ಕೂಡ ಈ ದಿನ ಹುಟ್ಟಿದ್ದರು ಎಂಬುದಾಗಿ ಹೇಳಲಾಗುತ್ತದೆ. ಜೈನ ತೀರ್ಥಂಕರ ವೃಷಭ ದೇವ ಈ ದಿನ ಮೂರು ತಿಂಗಳ ತಮ್ಮ ಸುದೀರ್ಘ ಉಪವಾಸವನ್ನು ಮುಗಿಸಿದ ದಿನವಾಗಿದೆ.

ಏಪ್ರಿಲ್ 22: ಗಂಗ ಸಪ್ತಮಿ
ಸ್ಕಂದಪುರಾಣ ಮತ್ತು ವಾಲ್ಮೀಕಿ ರಾಮಾಯಣದಲ್ಲಿ ಗಂಗ ಜಯಂತಿಯ ಬಗ್ಗೆ ಉಲ್ಲೇಖಿಸಲಾಗಿದೆ. ಗಂಗೆಯ ಜನ್ಮ ದಿನ ಉಂಟಾಗಿದೆ. ಈ ದಿನ ಗಂಗಾ ಸ್ನಾನ ಮಾಡುವುದು ಪವಿತ್ರವಾದುದು. ಗಂಗಾ ಘಾಟ್‌ನಲ್ಲಿ ಪೂಜೆಯನ್ನು ನಡೆಸುವುದು ಕೂಡ ಮಹತ್ವದ್ದಾಗಿದೆ. ಈ ದಿನ ಎಲ್ಲಾ ಪಾಪಗಳು ವಿನಾಶಗೊಳ್ಳುತ್ತದೆ. ಪ್ರತೀ ವರ್ಷ ತೃತೀಯದಂದು ವೈಶಾಖ ಮಾಸದ ಶುಕ್ಲ ಪಕ್ಷದಂದು ದೀನ ಬರುತ್ತದೆ.

ಏಪ್ರಿಲ್ 24: ಸೀತಾ ನವಮಿ
ಆಂಧ್ರಪ್ರದೇಶ ಭದ್ರಾಚಲಂ ಅಯೋಧ್ಯೆಯಲ್ಲಿ ಈ ದಿನವನ್ನು ಹೆಚ್ಚು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ತಮಿಳುನಾಡಿನ ರಾಮೇಶ್ವರ ಮತ್ತು ಬಿಹಾರದ ಸೀತಾಸಮಹಿತದಲ್ಲಿ ಸೀತಾ ನವಮಿಯನ್ನು ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಈ ದಿನ ಉಪವಾಸ ಕೈಗೊಳ್ಳುತ್ತಾರೆ. ಗದ್ದೆಯನ್ನು ಊಳುತ್ತಿದ್ದಾಗ ಈ ದಿನ ಜನಕನಿಗೆ ಸೀತಾಮಾತೆಯು ಕುಂಭದಲ್ಲಿ ಮಲಗಿದ ಭಂಗಿಯಲ್ಲಿ ದೊರೆತಿದ್ದು ಎಂದು ಹೇಳಲಾಗಿದೆ. ರಾಜ ಜನಕನು ಸೀತೆಯನ್ನು ದತ್ತು ತೆಗೆದುಕೊಳ್ಳುತ್ತಾರೆ. ಸೀತೆಗೆ ಜಾನಕಿ ಎಂದೂ ಕರೆಯಲಾಗುತ್ತದೆ.

ಏಪ್ರಿಲ್ 26: ಮೋಹಿನಿ ಏಕಾದಶಿ
ಸೂರ್ಯ ಪುರಾಣದಲ್ಲಿ ಈ ದಿನದ ಮಹತ್ವದ ಬಗ್ಗೆ ತಿಳಿಸಲಾಗಿದೆ. ಕೃಷ್ಣನು ಯುಧಿಷ್ಟಿರನಿಗೆ ಈ ದಿನದ ಮಹತ್ವದ ಬಗ್ಗೆ ತಿಳಿಸುತ್ತಾರೆ. ಸೀತಾ ಮಾತೆಯ ಬೇರ್ಪಡುವಿಕೆಯಿಂದ ಉಂಟಾದ ದುಃಖವನ್ನು ಮರೆಯಲು ಗುರು ವಸಿಷ್ಟರು ರಾಮನಿಗೆ ಈ ದಿನ ಉಪವಾಸವನ್ನು ಕೈಗೊಳ್ಳಲು ತಿಳಿಸುತ್ತಾರೆ.ವಿಷ್ಣುವಿನ ಸ್ತ್ರೀ ಅವತಾರಕ್ಕೆ ಈ ದಿನ ಮಹತ್ವವನ್ನು ನೀಡಲಾಗಿದೆ. ದೇವತೆಗಳು ಮತ್ತು ಅಸುರರ ನಡುವೆ ಅಮೃತಕ್ಕಾಗಿ ಕಲಹ ನಡೆಯುತ್ತಿದ್ದಾಗ ವಿಷ್ಣುವು ಮೋಹಿನಿಯ ರೂಪವನ್ನು ಧರಿಸಿ ಅಮೃತವನ್ನು ಸಮಾನವಾಗಿ ಹಂಚುವ ಕಾರ್ಯವನ್ನು ನಡೆಸುತ್ತಾರೆ.

ಏಪ್ರಿಲ್ 28: ನರಸಿಂಹ ಜಯಂತಿ
ವಿಷ್ಣುವಿನ ನರಸಿಂಹ ಅವತಾರಕ್ಕೆ ಈ ದಿನ ಮುಡಿಪಾಗಿಡಲಾಗಿದೆ. ಅಸುರ ರಾಜ ಹಿರಣ್ಯಕಶಿಪುವನ್ನು ಕೊಲ್ಲಲು ವಿಷ್ಣುವು ನರಸಿಂಹ ಅವತಾರವನ್ನು ತಾಳುತ್ತಾರೆ. ವೈಶಾಖ ಮಾಸದ ಹದಿನಾಲ್ಕನೇ ದಿನ ನರಸಿಂಹ ಜಯಂತಿ ಬರುತ್ತದೆ. ಈ ಮಾಸ 28 ರಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ ಮತ್ತು ವಿಷ್ಣುವಿಗೆ ವಿಶೇಷ ಪೂಜೆ ಭಜನೆಗಳನ್ನು ನಡೆಸುತ್ತಾರೆ. ಏಕಾದಶಿ ವೃತದಂತೆ ಈ ದಿನ ನಡೆಸುವ ವ್ರತ ಕೂಡ ಮಹತ್ವದ್ದಾಗಿದೆ.



Click it and Unblock the Notifications











