ಸಂಕಷ್ಟ ಚತುರ್ಥಿ ವ್ರತದ ಮಹತ್ವ ಹಾಗೂ ಏಕೆ ಕೈಗೊಳ್ಳಬೇಕು?

Posted By: Deepu
Subscribe to Boldsky

ನಿಮ್ಮ ಮನದ ಇಷ್ಟವನ್ನು ಪೂರೈಸುವ ಸಲುವಾಗಿ ಭಗವಂತನಿಗೆ ಬೇರೆ ಬೇರೆ ವ್ರತ ಗಳನ್ನು ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಈ ವ್ರತವನ್ನು ಆಚರಿಸುವ ಸಂದರ್ಭದಲ್ಲಿ ಭಕ್ತರು ಆಹಾರ ಪಾನೀಯಗಳನ್ನು ತೆಗೆದುಕೊಳ್ಳದೆಯೇ ಕೇವಲ ಒಂದು ಹೊತ್ತು ಆಹಾರವನ್ನು ಸೇವಿಸಿ ಆ ದಿನವನ್ನು ಭಗವಂತನಿಗೆ ಮುಡಿಪಾಗಿಡುತ್ತಾರೆ. ಹೀಗೆ ಮಾಡುವುದರಿಂದ ನಮ್ಮ ಮನದ ಇಷ್ಟವನ್ನು ಭಗವಂತ ನಡೆಸಿಕೊಡುತ್ತಾರೆ ಎಂಬ ನಂಬಿಕೆ ಇರುತ್ತದೆ ಮತ್ತು ವ್ರತವನ್ನು ನಿರ್ವಹಿಸುವಾಗ ನಮಗೆ ಗೊತ್ತಿಲ್ಲದಂತೆಯೇ ಅದಮ್ಯ ಚೇತನವೊಂದು ನಮಗೆ ಶಕ್ತಿಯನ್ನು ನೀಡುತ್ತಿರುತ್ತದೆ.

ಇಂದಿನ ಲೇಖನದಲ್ಲಿ ವಿಶೇಷವಾಗಿ ಗಣಪನಿಗೆ ಮುಡಿಪಾಗಿರುವ ಸಂಕಷ್ಟಿ ವ್ರತದ ಬಗ್ಗೆ ಕೆಲವೊಂದು ಆಸಕ್ತಿಕರ ಮಾಹಿತಿಗಳನ್ನು ನಿಮಗೆ ತಿಳಿಸುತ್ತಿದ್ದೇವೆ. ಹಿಂದೂ ಧರ್ಮದಲ್ಲಿ ಪ್ರತಿ ಮಾಸವು ಬರುವ ಈ ವ್ರತ ವು ಚತುರ್ಥಿ ಹೆಸರಲ್ಲಿ ಈ ವ್ರತ ವನ್ನು ಕರೆಯಲಾಗುತ್ತದೆ. ಮಂಗಳವಾರದಂದು ಬರುವ ಈ ಸಂಕಷ್ಟಿಯನ್ನು ಅಂಗಾರಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನ ವಿಶೇಷವಾಗಿ ಗಣೇಶನ ಭಕ್ತರು ಈ ಉಪವಾಸವನ್ನು ಕೈಗೊಳ್ಳುತ್ತಾರೆ. ಈ ದಿನ ವಿಕಟ ಸಂಕಷ್ಟಿ ಚತುರ್ಥಿ ವ್ರತವನ್ನು ಕೈಗೊಳ್ಳಲಾಗುತ್ತದೆ...

ಈ ದಿನಕ್ಕಾಗಿ ಮುಹೂರ್ತ

ಈ ದಿನಕ್ಕಾಗಿ ಮುಹೂರ್ತ

3 ನೇ ಏಪ್ರಿಲ್ 2018 ರಂದು 16. 43 ಗಂಟೆಗಳಲ್ಲಿ ಈ ವ್ರತಕ್ಕೆ ಮುಹೂರ್ತವನ್ನು ನಿರ್ಧರಿಸಲಾಗುತ್ತದೆ. ಇದು ಕೊನೆಗೊಳ್ಳುವ ಸಮಯ 17:43 ಆಗಿದೆ.

ಅಂಗಾರಕ ಸಂಕಷ್ಟಿಯಂದು ಚಂದ್ರನು ಉದಯಗೊಂಡು 21.12 ಕ್ಕೆ ಅಸ್ತಮಿಸುತ್ತಾನೆ

ಈ ದಿನ ಗಣೇಶನನ್ನು ವಿಕಟ ಮಹಾ ಗಣಪತಿ ಹೆಸರಿನಲ್ಲಿ ಪೂಜಿಸಲಾಗುತ್ತದೆ

ಪೀಠ - ವಿನಾಯಕ ಪೀಠವಾಗಿದೆ

ವಿಕಟ ಸಂಕಷ್ಟಿ ವ್ರತವನ್ನು ಕೈಗೊಳ್ಳುವುದು ಹೇಗೆ?

ವಿಕಟ ಸಂಕಷ್ಟಿ ವ್ರತವನ್ನು ಕೈಗೊಳ್ಳುವುದು ಹೇಗೆ?

ಎಲ್ಲಾ ಸಂಕಷ್ಟಿ ವ್ರತದಂತೆ ಗಣೇಶನನ್ನು ಭಕ್ತರು ಪೂಜಿಸಿ ದಿನಪೂರ್ತಿ ವ್ರತ ವನ್ನು ಕೈಗೊಳ್ಳುತ್ತಾರೆ. ಚಂದ್ರನು ಅಸ್ತಮಿಸಿದ ನಂತರ ಸ್ನಾನ ಮಾಡಿ ವ್ರತ ವನ್ನು ಮುರಿಯುತ್ತಾರೆ.

ವಿಕಟ ಸಂಕಷ್ಟಿಯಂದು ಸಂಜೆ ಸ್ನಾನವನ್ನು ವ್ರತ ಧಾರಿಗಳು ಕೈಗೊಳ್ಳುತ್ತಾರೆ. ನದಿ ಇಲ್ಲವೇ ಕೆರೆಯ ನೀರಿನಿಂದ ಸ್ನಾನವನ್ನು ಮಾಡಬೇಕಾಗುತ್ತದೆ. ಮನೆಯಲ್ಲಿಯೇ ಸ್ನಾನ ಮಾಡುತ್ತೀರಿ ಎಂದಾದಲ್ಲಿ ದೇವರಿಗೆ ಪ್ರಾರ್ಥನೆಯನ್ನು ಮಾಡಿ ನಂತರ ಸ್ನಾನ ಮಾಡಬೇಕಾಗುತ್ತದೆ.

ಸ್ವಚ್ಛವಾದ ಸ್ಥಳವನ್ನು ಆರಿಸಿಕೊಳ್ಳಿ

ಸ್ವಚ್ಛವಾದ ಸ್ಥಳವನ್ನು ಆರಿಸಿಕೊಳ್ಳಿ

ಗಣೇಶನನ್ನು ಪೂಜಿಸಲು ಸ್ವಚ್ಛವಾದ ಸ್ಥಳವನ್ನು ಆರಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ಪೂಜಾ ಕೊಠಡಿ ಇದ್ದಲ್ಲಿ ಅದನ್ನು ಶುಚಿ ಮಾಡಿ. ಮಧ್ಯದಲ್ಲಿ ಗಣಪತಿಯ ಮೂರ್ತಿಯನ್ನು ಇರಿಸಿ.

ದೇವರಿಗೆ ಬಟ್ಟೆಯಿಂದ ಹೂಗಳಿಂದ ಅಲಂಕಾರವನ್ನು ಮಾಡಿ...

ದೇವರಿಗೆ ಬಟ್ಟೆಯಿಂದ ಹೂಗಳಿಂದ ಅಲಂಕಾರವನ್ನು ಮಾಡಿ...

21 ದಳದ ಕದಿರನ್ನು ದೇವರಿಗೆ ಅರ್ಪಿಸಿ ಅಂತೆಯೇ ಗಣೇಶನ ನಾಮಸ್ಮರಣೆ ಮಾಡಿ

ದೇವರಿಗೆ ಆರತಿಯನ್ನು ಬೆಳಗಿ

ಪೂಜೆಗೆ ನೈವೇದ್ಯವನ್ನು ನೀವು ತಯಾರಿಸಿದ್ದಲ್ಲಿ ಅದನ್ನು ದೇವರಿಗೆ ಅರ್ಪಿಸಿ.

ಬಡವರಿಗೆ ಊಟವನ್ನು ಹಾಕುವುದು ಉಚಿತವಾದುದು.

ಅಂಗಾರಕ ಚತುರ್ಥಿ ವ್ರತ ಕಥೆಯನ್ನು ಓದಿ

ಪೂಜೆಯಲ್ಲಿ ಪಾಲ್ಗೊಂಡವರಿಗೆ ಪ್ರಸಾದವನ್ನು ಹಂಚಿ

ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿ ವ್ರತ

ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿ ವ್ರತ

ಕೆಲವು ಭಕ್ತರು ದೇವಸ್ಥಾನಕ್ಕೆ ಹೋಗಿ ವ್ರತ ವನ್ನು ಕೈಗೊಳ್ಳುತ್ತಾರೆ. ಅಲ್ಲಿನ ಅರ್ಚಕರು ವಿಶೇಷ ಪೂಜೆಯನ್ನು ನಡೆಸುತ್ತಾರೆ. ಅಂತೆಯೇ ಗಣೇಶನ ವಿಗ್ರಹಕ್ಕೆ ಅಭಿಷೇಕವನ್ನು ಕೈಗೊಳ್ಳುತ್ತಾರೆ. ಈ ದಿನಂದು ಅರ್ಥ್ವ್ಯ ಶೀಶ್ರ್‌ ಮತ್ತು ಗಣೇಶ ಅಷ್ಟೋತ್ತರವನ್ನು ಭಕ್ತರು ಪಠಿಸುತ್ತಾರೆ. ನೀವು ದೇವಸ್ಥಾನದಲ್ಲಿ ಕುಳಿತುಕೊಂಡು ಈ ಮಂತ್ರವನ್ನು ಪಠಿಸಿ ದೇವರನ್ನು ಪ್ರೀತ್ಯರ್ಥಗೊಳಿಸಬಹುದು.

ಸಂಕಷ್ಟಿಯನ್ನು ಮಾಡುವ ಉದ್ದೇಶವೇನು

ಸಂಕಷ್ಟಿಯನ್ನು ಮಾಡುವ ಉದ್ದೇಶವೇನು

ಈ ದಿನ ಬಹಳ ವಿಶೇಷವಾಗಿದ್ದು ವರ್ಷದಲ್ಲಿ ಎರಡು ಬಾರಿ ಮಾತ್ರ ಅಂಗಾರಕ ಸಂಕಷ್ಟಿ ಬರುತ್ತದೆ. 2018 ನೇ ವರ್ಷದಲ್ಲಿ ಅಂಗಾರಕಿ ಸಂಕಷ್ಟಿಯು ಮೂರು ಬಾರಿ ಬರುತ್ತದೆ. ಆದ್ದರಿಂದ ಈ ವರ್ಷ ಬಹಳ ಶ್ರೇಷ್ಠವಾಗಿದೆ.

ಅಂಗಾರಕಿ ಸಂಕಷ್ಟಿ ವ್ರತ ಬಹಳ ಪವಿತ್ರವಾದುದು

ಅಂಗಾರಕಿ ಸಂಕಷ್ಟಿ ವ್ರತ ಬಹಳ ಪವಿತ್ರವಾದುದು

ಅಂಗಾರಕಿ ಸಂಕುಷ್ಟಿ ವ್ರತವು ಇತರ ಎಲ್ಲಾ ಸಂಕಷ್ಟಿ ಚತುರ್ಥಿಗಿಂತಲೂ ಬಹಳ ಶ್ರೇಷ್ಠವಾದುದಾಗಿದೆ. ವರ್ಷದಲ್ಲಿ ಬರುವ ಇತರ ಸಂಕಷ್ಟಿ ಚತುರ್ಥಿಯನ್ನು ಮಾಡುವ ಅದೇ ಪೂಜಾ ಫಲವನ್ನು ಒಂದು ಅಂಗಾರಕ ಸಂಕಷ್ಟಿಯಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.

English summary

Vikata Sankashti Vrat/Chaturthi

Every month in the lunar calendar followed by the Hindu community has two Chaturthi dates - one in each fortnight. The Chaturthi that comes after the full moon or the Pournami is known as Sankashti Chaturthi and the one that comes after the Amavasya is called the Vinayaka Chaturthi.Vikata Sankashti Vrat/Chaturthi
Story first published: Tuesday, April 3, 2018, 18:13 [IST]