For Quick Alerts
ALLOW NOTIFICATIONS  
For Daily Alerts

  ಕಲರ್‌ಫುಲ್ ಲೈಫ್: ಅದೃಷ್ಟವನ್ನೇ ಖುಲಾಯಿಸುವ 7 ಬಣ್ಣಗಳು!

  By Deepu
  |

  ಹಿಂದೂ ಸಂಸ್ಕೃತಿಯಲ್ಲಿ ಜ್ಯೋತಿಷ್ಯಕ್ಕೆ ಹೆಚ್ಚಿನ ಮಹತ್ವನ್ನು ನೀಡಲಾಗುತ್ತದೆ. ಯಾವುದೇ ಕಾರ್ಯಕ್ರಮವಾಗಲಿ ಅಥವಾ ಹುಟ್ಟು, ಸಾವು ಹೀಗೆ ಏನೇ ಸಂಭವಿಸಿದರೂ ಪಂಚಾಂಗ ನೋಡಿಕೊಂಡು ಅದರಿಂದ ಒಳ್ಳೆಯದೇ ಅಥವಾ ಕೆಟ್ಟದಾಗುತ್ತದೆಯಾ ಎಂದು ನೋಡಿಕೊಳ್ಳುತ್ತಾರೆ. ಇದೆಲ್ಲವೂ ಅವರ, ನಂಬಿಕೆ ಮೇಲೆ ನಿರ್ಧಾರವಾಗಿರುತ್ತದೆ.  ಹಿಂದೂ ಧರ್ಮದ ವಿಧಿವಿಧಾನಗಳು-ವಿಜ್ಞಾನ ಲೋಕಕ್ಕೇ ಸವಾಲು!  

  ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಸ್ತು, ಬಣ್ಣವು ಹಿಂದೂಗಳಿಗೆ ತುಂಬಾ ಪವಿತ್ರವಾಗಿರುತ್ತದೆ. ಆಗಸದಲ್ಲಿ ಮೂಡುವಂತಹ ಕಾಮಣಬಿಲ್ಲಿನಂತೆ, ಹಿಂದೂ ಧರ್ಮದಲ್ಲಿಯೂ ಕೂಡ ಏಳು ಬಣ್ಣಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದರಲ್ಲೂ ಆಯಾಯ ದಿನಕ್ಕೆ ತಕ್ಕಂತೆ ಇಲ್ಲಿ ಬಣ್ಣಗಳ ಮಹತ್ವನ್ನು ತಿಳಿಸಲಾಗಿದೆ. ಇದನ್ನು ತಿಳಿದುಕೊಂಡು ನೀವು ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದು!, ಅಚ್ಚರಿವಾಯಿತೇ? ಮುಂದೆ ಓದಿ...

  ಸೋಮವಾರ ಬಿಳಿ ಬಣ್ಣ

  ಸೋಮವಾರ ಬಿಳಿ ಬಣ್ಣ

  ಸೋಮವಾರವು ಚಂದ್ರನಿಗೆ ಅರ್ಪಿತವಾಗಿರುವ ಕಾರಣದಿಂದಾಗಿ ಚಂದ್ರನ ಬಿಳಿ ಬಣ್ಣವು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ದಿನ ಬಿಳಿ ಬಟ್ಟೆಯನ್ನು ಧರಿಸಿದರೆ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಬಿಳಿ ಬಣ್ಣದೊಂದಿಗೆ ಬಿಳಿಯಾಗಿರುವ ಮುತ್ತು, ವಜ್ರದ ಆಭರಣ ಧರಿಸಬಹುದು.

  ಮಂಗಳವಾರ ಕೆಂಪು

  ಮಂಗಳವಾರ ಕೆಂಪು

  ಕೆಂಪು ಪಟ್ಟಿಗಳು ಇರುವಂತಹ ಬಟ್ಟೆಯನ್ನು ಧರಿಸಿ. ಕೆಂಪು ಕಲ್ಲಿನ ಆಭರಣಗಳಾದ ಮಾಣಿಕ್ಯ ಮತ್ತು ಹವಳಗಳನ್ನು ಧರಿಸಿ.

  ಬುಧವಾರಕ್ಕೆ ಹಸಿರು

  ಬುಧವಾರಕ್ಕೆ ಹಸಿರು

  ಬುಧವಾರ ಹಸಿರು ಬಣ್ಣ ಪಾರುಪತ್ಯ ಮೆರೆಯುತ್ತದೆ. ಹಸಿರು ಬಣ್ಣದ ಬಟ್ಟೆಗಳು ಮತ್ತು ಹಸಿರು ಕಲ್ಲಿನ ಆಭರಣಗಳಾದ ಪಚ್ಚೆಗಳು, ರತ್ನವರ್ಣ ಮತ್ತು ಪಚ್ಚೆ ಮಣಿ ಧರಿಸಬಹುದು.

  ಗುರುವಾರ ಹಳದಿ

  ಗುರುವಾರ ಹಳದಿ

  ಗುರುವಾರ ಬಂಗಾರದ ಆಭರಣಗಳು ಮತ್ತು ಬಂಗಾರದ ಬಣ್ಣದ ಬಟ್ಟೆಗಳನ್ನು ಧರಿಸಿ.

  ಶುಕ್ರವಾರ ಗುಲಾಬಿ

  ಶುಕ್ರವಾರ ಗುಲಾಬಿ

  ಶುಕ್ರವಾರ ಗುಲಾಬಿ ಬಣ್ಣದ ಬಟ್ಟೆಗಳು, ಗುಲಾಬಿ ಬಣ್ಣದ ಆಭರಣಗಳು, ಮಾಣಿಕ್ಯ ಮತ್ತು ಗಾರ್ನೆಟ್‌ಗಳನ್ನು ಬಳಸಿ.

  ಶನಿವಾರ ಕಪ್ಪು

  ಶನಿವಾರ ಕಪ್ಪು

  ಶನಿವಾರದಂದು ಪ್ರತಿಯೊಂದು ಕಪ್ಪಗಿರುವುದು ಕೆಲಸ ಮಾಡುವುದು. ನೀಲಿ ಮತ್ತು ಕೆನ್ನೇರಳೆಯಂತಹ ಆಭರಣಗಳಾದ ನೀಲಮಣಿ, ಅಮೆಥಿಸ್ಟ್ ನಂತಹ ಕಪ್ಪು ನೇರಳೆ ಆಭರಣಗಳು ಅದ್ಭುತವಾಗಿರುತ್ತದೆ.

  ಭಾನುವಾರ ಸೂರ್ಯನ ಬಣ್ಣ

  ಭಾನುವಾರ ಸೂರ್ಯನ ಬಣ್ಣ

  ಈ ದಿನವು ಸೂರ್ಯನಿಗೆ ಮೀಸಲಾಗಿಡಲಾಗಿದೆ. ಶತ್ರುಗಳು, ವಿಷಕಾರಿಯಾದ ವಸ್ತುಗಳಿಂದ ಶೀಘ್ರ ಫಲಿತಾಂಶಕ್ಕಾಗಿ ಕಿತ್ತಳೆ ಬಣ್ಣ ಬಳಸಿ. ಕಿತ್ತಳೆ ಬಣ್ಣದ ಬಟ್ಟೆ ಮತ್ತು ಆಭರಣ ಧರಿಸಿದರೆ ತುಂಬಾ ಒಳ್ಳೆಯದು.

  ಆಯಾಯ ದಿನ ಪೂಜಿಸಬೇಕಾದ ದೇವರುಗಳು

  ಆಯಾಯ ದಿನ ಪೂಜಿಸಬೇಕಾದ ದೇವರುಗಳು

  ಮೇಲೆ ಹೇಳಿದಂತೆ ಆಯಾಯ ದಿನಕ್ಕೆ ಹೇಳಿದಂತಹ ಬಣ್ಣಗಳನ್ನು ಆ ದಿನ ಪೂಜಿಸುವ ದೇವರಿಗೆ ಅನುಗುಣವಾಗಿದೆ. ಯಾವ ದಿನ ಯಾವ ದೇವರನ್ನು ಪೂಜಿಸಬೇಕೆಂದು ನೋಡುವ.

  ಸೋಮವಾರ: ಚಂದ್ರ

  ಮಂಗಳವಾರ: ಮಂಗಳ

  ಬುಧವಾರ: ಬುದ್ಧ

  ಗುರುವಾರ: ಬೃಹಸ್ಪತಿ

  ಶುಕ್ರವಾರ: ಶುಕ್ರ

  ಶನಿವಾರ: ಶನಿ

  ಭಾನುವಾರ: ಸೂರ್ಯ ಯಾವ ದಿನಗಳಂದು ಯಾವ್ಯಾವ ದೇವರನ್ನು ಆರಾಧಿಸಬೇಕು?

   

  English summary

  Auspicious colours for each day of week

  In Hindu tradition, especially in north India, different colours are considered auspicious for different weekdays. These colours are also used to propitiate the planets ruling the particular day. People usually wear clothes of the lucky colour on the day.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more