For Quick Alerts
ALLOW NOTIFICATIONS  
For Daily Alerts

ಹೋಳಿ 2019: ಜೀವನದಲ್ಲಿ ಸುಖ ಹಾಗೂ ಸಮೃದ್ಧಿಗೆ ಜ್ಯೋತಿಷ್ಯದ ಸಲಹೆಗಳು

|

ಜೀವನದಲ್ಲಿ ಯಾವಾಗಲೂ ಶಾಂತಿ ಹಾಗೂ ಸಮೃದ್ಧಿ ನೆಲೆಸಿದ್ದರೆ ಆಗ ನಾವು ತುಂಬಾ ಸಂತೋಷವಾಗಿ ಬಾಳಬಹುದು. ಇಲ್ಲವಾದಲ್ಲಿ ಜೀವನ ಎನ್ನುವುದು ತುಂಬಾ ಯಾತನಮಯವಾಗುವುದು. ಇದರಿಂದ ಪ್ರತಿಯೊಬ್ಬರಿಗೂ ಜೀವನದಲ್ಲಿ ಶಾಂತಿ ಹಾಗೂ ಸಮೃದ್ಧಿಯು ಬೇಕಾಗಿರುವುದು. ಕೆಲವರಿಗೆ ಇದು ದೈವದತ್ತವಾಗಿ ಲಭ್ಯವಾದರೆ, ಇನ್ನು ಕೆಲವರು ತುಂಬಾ ಶ್ರಮ ವಹಿಸಿ, ಕಷ್ಟಪಟ್ಟು ಪಡೆಯುವರು. ಇಲ್ಲಿ ನಾವು ಹೋಳಿ ದಿನದಂದು ಜ್ಯೋತಿಷ್ಯಶಾಸ್ತ್ರದಿಂದ ತಿಳಿದುಕೊಂಡು ಜೀವನದಲ್ಲಿ ಸುಖ ಹಾಗೂ ಸಮೃದ್ಧಿ ಹೇಗೆ ಪಡೆಯುವುದು ಎಂದು ಹೇಳಿಕೊಡಲಿದ್ದೇವೆ. ಈ ಸರಳ ಜ್ಯೋತಿಷ್ಯದ ಸಲಹೆಗಳನ್ನು ನೀವು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ಜೀವನದಲ್ಲಿ ಶಾಂತಿ ಹಾಗೂ ಸಮೃದ್ಧಿ ಪಡೆಯಲಿದ್ದೀರಿ. ಆ ಸಲಹೆಗಳು ಏನು ಎಂದು ನೀವು ತಿಳಿಯಲು ಮುಂದಾಗಿ...

ಸಮೃದ್ಧಿ ಪಡೆಯಬೇಕಾದರೆ

ಸಮೃದ್ಧಿ ಪಡೆಯಬೇಕಾದರೆ

ಸಮೃದ್ಧಿ ಪಡೆಯಬೇಕಾದರೆ ನೀವು ಹೋಳಿ ದಿನದಂದು ಚಂದ್ರ ದೇವರನ್ನು ಪೂಜಿಸಬೇಕು. ಬೆಳ್ಳಿ ತಟ್ಟೆ ಅಥವಾ ಬಿಳಿ ಲೋಹದಿಂದ ಮಾಡಿರುವಂತಹ ಯಾವುದೇ ತಟ್ಟೆ ತೆಗೆದುಕೊಳ್ಳಿ. ಇದರಲ್ಲಿ ನೀವು ಒಣ ಖರ್ಜೂರ ಮತ್ತು ನರಿ ಬೀಜಗಳು(ಮಖನ)ವನ್ನು ಇಟ್ಟುಕೊಳ್ಳಿ. ಒಂದು ದೀಪ ಬೆಳಗಿಸಿ ಇದರಲ್ಲಿ ಇಟ್ಟುಕೊಂಡು, ಅದರ ಬಳಿಕ ಚಂದ್ರ ದೇವರಿಗೆ ಹಾಲಿನಿಂದ ಅಭಿಷೇಕ ಮಾಡಿ. ಅಗರಬತ್ತಿ ಹಚ್ಚಿಕೊಂಡು ಪ್ರಾರ್ಥಿಸಿ. ನೀವು ನೈವೇದ್ಯವಾಗಿ ಬಿಳಿ ಸಿಹಿ ಅಥವಾ ಪಾಯಸವನ್ನು ಅರ್ಪಿಸಬಹುದು. ಚಂದ್ರ ದೇವರಲ್ಲಿ ನೀವು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿ.

Most Read: ಹೋಳಿ 2019: ಯಾವ್ಯಾವ ರಾಶಿಚಕ್ರದವರು ಯಾವ ಬಣ್ಣದಲ್ಲಿ ಹೋಳಿ ಆಚರಿಸಬೇಕು?

ಸಾಲಗಾರರಿಂದ ಹಣ ಬರುವಂತೆ ಮಾಡಲು

ಸಾಲಗಾರರಿಂದ ಹಣ ಬರುವಂತೆ ಮಾಡಲು

ನೀವು ಯಾರಿಗಾದರೂ ನೀಡಿರುವಂತಹ ಹಣವನ್ನು ಮರಳಿ ಪಡೆಯಲು ತುಂಬಾ ಕಷ್ಟಪಡುತ್ತಿದ್ದೀರಾ? ಹಾಗಾದರೆ ನೀವು ದಾಳಿಂಬೆ ಮರದ ಒಣಗಿದ ರೆಂಬೆ ತೆಗೆದುಕೊಳ್ಳಿ. ನಿಮ್ಮಿಂದ ಯಾರು ಹಣ ಪಡೆದಿದ್ದಾರೆ ಅವರ ಹೆಸರನ್ನು ಈ ರೆಂಬೆಯಿಂದ ಬರೆಯಿರಿ. ಇದನ್ನು ಹೋಳಿಕ ದಹನದ ವೇಳೆ ಬೆಂಕಿಗೆ ಹಾಕಿ. ಇದರಿಂದಾಗಿ ನೀವು ಸಾಲ ನೀಡಿರುವಂತಹ ಹಣವು ಮರಳಿ ಪಡೆಯಲು ನೆರವಾಗುವುದು ಎಂದು ನಂಬಲಾಗಿದೆ.

ಅತಿಯಾದ ಖರ್ಚು ಕಡಿಮೆ ಮಾಡಲು

ಅತಿಯಾದ ಖರ್ಚು ಕಡಿಮೆ ಮಾಡಲು

ಹೋಳಿಕ ದಹನ ಮಾಡಿದ ಬಳಿಕ ನೀವು ಇದರ ಭಸ್ಮವನ್ನು ಸ್ವಲ್ಪ ತೆಗೆದುಕೊಳ್ಳಿ. ಇದನ್ನು ಕೆಂಪು ಬಟ್ಟೆಯಲ್ಲಿ ಹಾಗೆ ಕಟ್ಟಿಕೊಳ್ಳಿ. ಈ ಬಟ್ಟೆಯನ್ನು ಹಣದ ಪೆಟ್ಟಿಗೆ ಅಥವಾ ನಿಮ್ಮ ಪರ್ಸ್ ನಲ್ಲಿ ಇಡಿ. ಇದರಿಂದಾಗಿ ಮನೆಯಿಂದ ಹಣವು ಹೊರಗೆ ಹರಿದು ಹೋಗುವುದು ತಪ್ಪುವುದು.

ಮನೆಯಿಂದ ನಕಾರಾತ್ಮಕತೆ ದೂರ ಓಡಿಸಲು

ಮನೆಯಿಂದ ನಕಾರಾತ್ಮಕತೆ ದೂರ ಓಡಿಸಲು

ಹೋಳಿಕ ದಹನದ ದಿನದಂದು ನೀವು ಸ್ವಲ್ಪ ಕೆಂಪು ಬಣ್ಣವನ್ನು ಮನೆಯ ಮುಖ್ಯ ಬಾಗಿಲಿನ ಬಳಿಯಲ್ಲಿ ಹಾಕಿ. ನಾಲ್ಕು ಬತ್ತಿಗಳು ಬೆಳಗುವಂತಹ ಎರಡು ದೀನಗಳನ್ನು ಹಚ್ಚಿಡಿ. ಇದನ್ನು ಬಾಗಿಲಿನ ಎರಡು ಬದಿಯಲ್ಲಿ ಇಟ್ಟುಬಿಡಿ. ಇದರಲ್ಲಿನ ಎಣ್ಣೆ/ ತುಪ್ಪವು ಖಾಲಿಯಾದ ಬಳಿಕ ಈ ದೀಪಗಳನ್ನು ನೀವು ಹೋಳಿಕ ದಹನಕ್ಕೆ ಹಾಕಿಬಿಡಿ. ಇದು ಮನೆಯಲ್ಲಿ ಇರುವ ನಕರಾತ್ಮಕತೆ ದೂರ ಮಾಡುವುದು.

ಆರ್ಥಿಕ ಸ್ಥಿರತೆ ಕಾಪಾಡಲು

ಆರ್ಥಿಕ ಸ್ಥಿರತೆ ಕಾಪಾಡಲು

ಒಂದು ಕೆಂಪು ಬಟ್ಟೆ ತೆಗೆದುಕೊಳ್ಳಿ. ಈಗ ಒಂದು ಮುತ್ತು, ಒಂದು ಶಂಖ ಮತ್ತು ಒಂದು ಬೆಳ್ಳಿ ನಾಣ್ಯವನ್ನು ಕೆಂಪು ಬಣ್ಣದೊಂದಿಗೆ ಹಾಕಿ ಮತ್ತು ಇದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸರಿಯಾಗಿ ಕಟ್ಟಿಕೊಳ್ಳಿ. ಇದನ್ನು ನಿಮ್ಮ ಹಣದ ಪೆಟ್ಟಿಗೆ ಅಥವಾ ಕಪಾಟಿನಲ್ಲಿ ಇಟ್ಟುಬಿಡಿ.

Most Read: ಹೋಳಿ 2019: ಹೋಳಿ ಹಬ್ಬದ ದಿನಾಂಕ ಹಾಗೂ ಪೂಜೆಯ ಮುಹೂರ್ತ

ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು

ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು

ಹೋಳಿ ದಿನದಂದು ನೀವು ಪೂರ್ವಕ್ಕೆ ಮುಖ ಮಾಡಿಕೊಂಡು, ಪದ್ಮಾಸನ ಹಾಕಿ, ಪೂಜೆ ವೇಳೆ ಬಳಸುವ ಬಟ್ಟೆ ಮೇಲೆ ಕುಳಿತುಕೊಳ್ಳಿ. ಏಳು ಕವಡೆ ಮತ್ತು ಒಂದು ಶಂಖ ತೆಗೆದುಕೊಳ್ಳಿ. ಇದನ್ನು ನೀವು ಕೆಂಪು ಬೇಳೆ ಮೇಲೆ ಇಟ್ಟುಬಿಡಿ. ಹವಳದ ಮಣಿಗಳು ಅಥವಾ ತುಳಸಿ ಮಣಿ ತೆಗೆದುಕೊಂಡು 108 ಸಲ ಈ ಕೆಳಗಿನ ಮಂತ್ರವನ್ನು ಪಠಿಸಬೇಕು.

ಓಂ ಗಮ್ ಗಣಪತಾಯೇ ನಮಃ

ನಿಮ್ಮ ಮಂತ್ರವನ್ನು ಪೂರ್ತಿಗೊಳಿಸಿದ ಬಳಿಕ ಈ ಎಲ್ಲಾ ವಸ್ತುಗಳನ್ನು ಒಂದು ಶುದ್ಧವಾದ ಜಾಗದಲ್ಲಿ ಹೊಂಡ ತೆಗೆದು ಅದರಲ್ಲಿ ಹಾಕಿ ಮಣ್ಣು ಮುಚ್ಚಿ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಮರಳಿ ಬರುವುದು.

English summary

Astro Tips For Holi 2019

Every festival brings with it an auspicious time when we can offer prayers to and please the deities. And it makes the day luckier when adopting some astrological tips might fulfil some of our most desired wishes. Holi, will be celebrated on 21 March this year, and there are some tips that astrologists recommend for this Holi.
X
Desktop Bottom Promotion