ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಲು ಅಷ್ಟವಿನಾಯಕ ಮಂತ್ರಗಳು

Posted By: Jaya subramanya
Subscribe to Boldsky

ವಿನಾಯಕನು ಸರ್ವ ವಿಘ್ನಗಳನ್ನು ಪರಿಹರಿಸುವ ಅಭಯ ಹಸ್ತ ಎಂದೆನಿಸಿದ್ದಾನೆ. ಯಾವುದೇ ಕಾರ್ಯವನ್ನು ಆರಂಭಿಸುವ ಮುನ್ನ ವಿನಾಯಕನಿಗೆ ಪ್ರಥಮ ಪೂಜೆಯನ್ನು ನೆರವೇರಿಸಿ ನಂತರವೇ ಉಳಿದ ಕಾರ್ಯಗಳಿಗೆ ಚಾಲನೆಯನ್ನು ನೀಡುತ್ತಾರೆ. ವಿನಾಯಕನಿಗೆ ವಕ್ರತುಂಡ, ಏಕದಂತ, ವಿಘ್ನೇಶ, ಗಣಪತಿ, ಮೊದಲಾದ ಹಲವಾರು ಹೆಸರುಗಳಿವೆ. ಭಾರತದ ಮಹಾರಾಷ್ಟ್ರದಲ್ಲಿ ಗಣಪನಿಗೆ ಮೀಸಲಾಗಿ ಎಂಟು ಅಷ್ಟವಿನಾಯಕ ದೇಗುಲಗಳಿವೆ.  

ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ? 

ಇಲ್ಲಿನ ದೇವಾಲಯಗಳಲ್ಲಿರುವ ವಿನಾಯಕನ ಪ್ರತಿಮೆಯನ್ನು ಕೈಗಳಿಂದ ಕೆತ್ತಲಾಗಿಲ್ಲ. ಇವುಗಳು ಸ್ವಾಭಾವಿಕವಾಗಿ ಜನ್ಮತಾಳಿವೆ. ಅಂತೆಯೇ ಪ್ರತಿಯೊಂದು ವಿಗ್ರಹಗಳಲ್ಲಿರುವ ಸೊಂಡಿಲುಗಳು ಒಂದೇ ಆಕಾರದಲ್ಲಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ದಂತಕಥೆಯನ್ನು ಒಳಗೊಂಡಿದೆ.  ಧನ ಮದದ ಪ್ರತಿರೂಪ ಕುಬೇರನ ಸೊಕ್ಕಡಗಿಸಿದ ಬಾಲ ಗಣೇಶನ ಕಥಾನಕ 

ತಮ್ಮೆಲ್ಲಾ ಪಾಪಗಳಿಂದ ಮುಕ್ತಿಯನ್ನು ಪಡೆದುಕೊಂಡು ವಿನಾಯಕನ ಆಶೀರ್ವಾದವನ್ನು ಪಡೆದುಕೊಳ್ಳಲು ಜನರು ಈ ದೇಗುಲಗಳಿಗೆ ಭೇಟಿ ನೀಡುತ್ತಾರೆ. ಮೋರೇಶ್ವರದಿಂದ ಆರಂಭಗೊಂಡು ರಾಂಜಾಂಗಣ್‌ನಲ್ಲಿರುವ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಎಂಟು ವಿನಾಯಕನ ದೇವಸ್ಥಾನವನ್ನು ಭೇಟಿ ಮಾಡಬಹುದು....

ಶ್ರೀ ಅಷ್ಟವಿನಾಯಕ ವಂದನ

ಶ್ರೀ ಅಷ್ಟವಿನಾಯಕ ವಂದನ

ಇಂದಿನ ಲೇಖನದಲ್ಲಿ ವಿನಾಯಕನ ಅನುಗ್ರಹವನ್ನು ಪಡೆದುಕೊಳ್ಳಲು ನೆರವಾಗುವ ಶಕ್ತಿವಂತ ಮಂತ್ರಳನ್ನು ಇಲ್ಲಿ ನೀಡುತ್ತಿದ್ದೇವೆ.

ಗಣಪನ ಎಂಟು ವಿಧದ ರೂಪಕ್ಕೂ ಈ ಮಂತ್ರದಲ್ಲಿ ಅರ್ಥವನ್ನು ನೀಡಲಾಗಿದ್ದು ಮಂತ್ರ ಇಂತಿದೆ:

ಸ್ವಸ್ತಿ ಶ್ರೀ ಗಣನಾಯಕಂ ಗಜಮುಖ ಮೋರೇಶ್ವರ ಸಿದ್ಧಿದಂ ಬಲ್ಲಾಲಂ ಮುರುಡಂ

ವಿನಾಯಕ ಮಹಂ ಚಿಂತಾಮಣಿಂ ತೇವರಂ ಲೆನ್ಯಾದ್ರಿಂ ಗಿರಿಜಾತ್ಮಜಂ ಸುವರ್ದಂ

ವಿಘ್ನೇಶ್ವರ ಓಜಾಹರಂ ಗ್ರಾಮೇ ರಂಜನಾನ್ಮಕೇ ಗನಪತಿಹಿ

ಕುರ್ಯಾತ್ ಸದಾ ಮಂಗಲಂ

ಮೋರೇಶ್ವರ

ಮೋರೇಶ್ವರ

ನವಿಲಿನ ಮೇಲೆ ಕುಳಿತಿರುವ ಗಣಪ ಇಲ್ಲಿದ್ದಾರೆ. ಸಿಂಧು ಅಸುರನನ್ನು ಮಯೂರೇಶ್ವರನ ರೂಪದಲ್ಲಿ ಗಣಪನು ವಧಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

ಸೊಂಡಿಲಿನ ತುದಿಯು ಎಡಕ್ಕೆ ಮುಖ ಮಾಡಿದ್ದು ನಾಗರಹಾವು ಅದನ್ನು ರಕ್ಷಿಸುವಂತಿದೆ. ಗಣಪನ ಪತ್ನಿಯರಾದ ರಿದ್ಧಿ ಮತ್ತು ಬುದ್ಧಿ ಇಲ್ಲಿ ಗಣಪನೊಂದಿಗೆ ಪ್ರಸ್ತುತವಾಗಿದ್ದಾರೆ.

ದೇವಸ್ಥಾನದ ಪ್ರವೇಶಾಂಗಣದಲ್ಲಿ ನಂದಿಯ ಉಪಸ್ಥಿತಿ ಇದೆ. ಸಾಮಾನ್ಯವಾಗಿ ನಂದಿಯು ಶಿವನ ದೇವಳದಲ್ಲಿ ಮಾತ್ರವೇ ಕಾಣಬರುತ್ತದೆ.

ಆದರೆ ಗಣಪತಿಯ ಈ ದೇವಸ್ಥಾನದಲ್ಲಿ ಕೂಡ ನಂದಿಯ ಉಪಸ್ಥಿತಿ ಇದೆ ಎಂಬುದು ಸೋಜಿಗದ ಸಂಗತಿಯಾಗಿದೆ. ವಿಗ್ರಹವನ್ನು ಅತ್ತಿತ್ತ ಸರಿಸಲಾಗುವುದಿಲ್ಲ ಮತ್ತು ಅದು ಎಂದೆಂದಿಗೂ ಅಲ್ಲಿಯೇ ಇರುತ್ತದೆ. ಈ ಕೆಳಗಿನ ಮಂತ್ರಗಳಿಂದ

ಮೋರೇಶ್ವರನನ್ನು ಭಜಿಸಿ

ಓಂ ಮೋರೇಶ್ವರಾಯ ನಮಃ

ಸಿದ್ಧಾತಕ್

ಸಿದ್ಧಾತಕ್

ಮೂರು ಫೀಟ್ ಎತ್ತರದಲ್ಲಿ ಈ ವಿಗ್ರಹವಿದ್ದು ಉತ್ತರದ ಕಡೆ ಮುಖ ಮಾಡಿದೆ. ಸೊಂಡಿಲನ್ನು ಬಲಭಾಗಕ್ಕೆ ಸರಿಸಲಾಗಿದೆ. ಸಿದ್ಧಾತಕ್ ವಿನಾಯಕನ ವಿಶೇಷತೆ ಇದಾಗಿದೆ. ಈ ಗಣಪನ ವಿಗ್ರಹದಲ್ಲಿ ಹೊಟ್ಟೆಯು ತುಂಬಾ ಕಡಿಮೆ ಇದ್ದು ಇತರ ವಿಗ್ರಹಗಳಿಗೆ ಹೋಲಿಸಿದಾಗ ಭಿನ್ನತೆಯನ್ನು ಕಾಣಬಹುದಾಗಿದೆ. ಗಣಪನ ತೊಡೆಯ ಮೇಲೆ ರಿದ್ಧಿ ಮತ್ತು ಸಿದ್ಧಿ ಕುಳಿತಿದ್ದಾರೆ. ದೇವರಿಗೆ ಪ್ರದಕ್ಷಿಣೆಯನ್ನು ಹಾಕಲು ಬೆಟ್ಟದ ಮೇಲಿರುವ ದೇವಳಕ್ಕೆ ಹೋಗಬೇಕು. ಒಂದು ಪ್ರದಕ್ಷಿಣೆಯನ್ನು ಪೂರ್ತಿಯಾಗಿಸಲು 5 ಕಿ.ಮೀ ನಡೆಯಬೇಕು.ಭಗವಾನ್ ವಿಷ್ಣುವು ತಮ್ಮ ಮನದ ಅಭಿಲಾಶೆಯನ್ನು ಪೂರೈಸಿಕೊಳ್ಳಲು ಈ ಗಣಪನಿಗೆ ಪ್ರದಕ್ಷಿಣೆ ಹಾಕಿದ್ದರು ಎಂಬುದಾಗಿ ಪುರಾಣಗಳು ಹೇಳುತ್ತವೆ. ಈ ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಓಂ ಸಿದ್ಧಿವಿನಾಯಕಾಯ ನಮಃ ಎಂಬುದಾಗಿ ಹೇಳಿ.

ಬಲ್ಲಾಲೇಶ್ವರ

ಬಲ್ಲಾಲೇಶ್ವರ

ಗಣಪನು ಕಲ್ಲಿನ ಸಿಂಹಾಸನದ ಮೇಲೆ ಕುಳಿತಿದ್ದಾರೆ ಮತ್ತು ಪೂರ್ವ ಭಾಗಕ್ಕೆ ಸೊಂಡಿಲನ್ನು ಚಾಚಿದ್ದಾರೆ. ಹೊಕ್ಕುಳ ಮತ್ತು ಕಣ್ಣುಗಳಲ್ಲಿ ವಜ್ರವನ್ನು ಇರಿಸಲಾಗಿದೆ. ತನ್ನ ಮಹಾನ್ ಭಕ್ತ ಬಲ್ಲಾಳನ ಹೆಸರಿನಿಂದ ಈ ಗಣಪನು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.ಸಂಸ್ಕೃತ ಪದವಾದ ಶ್ರೀ ವಿನ್ಯಾಸದಲ್ಲಿ ದೇವಳದ ಆಕಾರವಿದ್ದು ದಕ್ಷಿಣಾಯಣ ಸಂದರ್ಭದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂಬ ಪ್ರತೀತಿ ಇದೆ. ಸೂರ್ಯನ ಕಿರಣವು ಗಣಪನ ವಿಗ್ರಹವನ್ನು ನೇರವಾಗಿ ಸ್ಪರ್ಶಿಸುತ್ತದೆ. ದೇವರನ್ನು ಒಲಿಸಕೊಳ್ಳುವ ಮಂತ್ರ

ಓಂ ಬಲ್ಲಾಲೇಶ್ವರಾಯ ನಮಃ

ವರದವಿನಾಯಕ

ವರದವಿನಾಯಕ

ಕೋಪ್ಲಿ ಸಮೀಪ ಈ ದೇವಸ್ಥಾನವಿದೆ. ನದೀ ತೀರದ ಬಳಿ ಈ ವಿಗ್ರಹವು ದೊರೆತಿದೆ ಎಂಬುದಾಗಿ ಹೇಳಲಾಗಿದೆ. ಇಲ್ಲೊಂದು ದೀಪವಿದ್ದು ಇದು 18 ನೆಯ ಶತಮಾನದಿಂದಲೂ ಬೆಳಗುತ್ತಿದೆ. ತಾವೇ ಪೂಜೆಯನ್ನು ನಡೆಸಬಹುದಾದ ದೇವಸ್ಥಾನ ಇದಾಗಿದೆ.ಮಕ್ಕಳಿಲ್ಲದ ದಂಪತಿಗಳು ಮಾಘ ಚತುರ್ದಶಿಯಂದು ತೆಂಗಿನಕಾಯಿಯನ್ನು ಪ್ರಸಾದ ರೂಪದಲ್ಲಿ ಪಡೆದುಕೊಂಡಲ್ಲಿ ಅವರಿಗೆ ಸಂತಾನವುಂಟಾಗುತ್ತದೆ ಎಂಬ ನಂಬಿಕೆ ಇದೆ. ವರದವಿನಾಯಕ ವಿಘ್ನೇಶ್ವರನ ಮಂತ್ರ ಈ ರೀತಿ ಇದೆ

ಓಂ ವರದವಿನಾಯಕಾಯ ನಮಃ

ಚಿಂತಾಮಣಿ

ಚಿಂತಾಮಣಿ

ತೀರು ಹಳ್ಳಿಯಲ್ಲಿ ಚಿಂತಾಮಣಿ ದೇವಸ್ಥಾನವಿದೆ. ಚಿಂತಾಮಣಿ ಸರೋವರವು ಈ ದೇವಳದ ಹಿಂಭಾಗದಲ್ಲಿದೆ. ಋಷಿ ಕಪಿಲನಿಗೆ ನೀಡಲು ಚಿಂತಾಮಣಿಯನ್ನು ಗಣಪನು ಗುಣದಿಂದ ಪಡೆದುಕೊಂಡಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ಋಷಿಯು ಗಣಪನ ಕುತ್ತಿಗೆಯಲ್ಲಿ ಈ ರತ್ನವನ್ನು ಇರಿಸಿದ್ದರು. ಪೂರ್ವಕ್ಕೆ ಮುಖಮಾಡಿರುವ ವಿನಾಯಕನು ಭಕ್ತದ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ದೂರಮಾಡುತ್ತಾರೆ. ಚಿಂತಾಮಣಿ ಗಣಪನನ್ನು ಒಲಿಸಿಕೊಳ್ಳುವ ಮಂತ್ರ ಇಲ್ಲಿದೆ

ಓಂ ಚಿಂತಾಮಣಿಯೇ ನಮಃ

ಗಿರಿಜಾತ್ಮಜ್

ಗಿರಿಜಾತ್ಮಜ್

ಬುದ್ಧನ ಗುಹೆಗಳಿರುವ ಪರ್ವತಗಳಲ್ಲಿ ಈ ದೇವಳವಿದೆ. ಈ ದೇವಸ್ಥಾನವನ್ನು ಏರಲು 307 ಮೆಟ್ಟಿಲುಗಳಿದ್ದು ಇಲ್ಲಿ ಕೋತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಒಂದೇ ಕಲ್ಲನ್ನು ಕೊರೆದು ಈ ದೇವಳವನ್ನು ನಿರ್ಮಿಸಲಾಗಿದ್ದು ಇದು ದಕ್ಷಿಣಕ್ಕೆ ಮುಖ ಮಾಡಿದೆ. ಮಾಘ ಚತುರ್ಥಿ ಮತ್ತು ಭಾದ್ರಪದ ಇಲ್ಲಿನ ಎರಡು ಅತಿದೊಡ್ಡ ಸಂಭ್ರಮಗಳಾಗಿದ್ದು ಗಿರಿಜಾತ್ಮಜನನ್ನು ಒಲಿಸಿಕೊಳ್ಳುವ ಮಂತ್ರ ಇದಾಗಿದೆ

ಓಂ ಗಿರಿಜಾತ್ಮಜಕಾಯ ನಮಃ

ಮಹಾಗಣಪತಿ

ಮಹಾಗಣಪತಿ

ರಾಂಜಾಂಗಣ್‌ನಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಎಂಟು, ಹತ್ತು, ಹನ್ನೆರಡು ಕೈಗಳನ್ನು ಈ ಗಣಪನು ಹೊಂದಿದ್ದಾರೆ. ತ್ರಿಪುರಾಸುರನನ್ನು ವಧಿಸುವ ಮೊದಲು ಶಿವನು ಇಲ್ಲಿ ಪ್ರಾರ್ಥಿಸಿದ್ದರು ಎಂಬುದಾಗಿ ನಂಬಲಾಗಿದೆ. ಪೂರ್ವಕ್ಕೆ ಮುಖ ಮಾಡಿರುವ ವಿಗ್ರಹವನ್ನು ನೆಲಮಾಳಿಗೆಯಲ್ಲಿ ಇರಿಸಲಾಗಿದೆ. ಇದು ಇಪ್ಪತ್ತು ಕೈಗಳು ಮತ್ತು ಹತ್ತು ಸೊಂಡಿಲುಗಳನ್ನು ಹೊಂದಿದೆ. ಮಹೋತ್ಕಟ ಎಂಬ ಹೆಸರನ್ನು ಈ ಗಣಪನ ವಿಗ್ರಹವು ಹೊಂದಿದೆ. ಮಹಾಗಣಪತಿಯ ಮಂತ್ರ ಇಲ್ಲಿದೆ.

ಓಂ ಮಹಾಗಣಪತಿಯೇ ನಮಃ

For Quick Alerts
ALLOW NOTIFICATIONS
For Daily Alerts

    English summary

    Ashtavinayaka Mantras For Prosperity

    The word 'Ashtavinayaka' is derived from two words. 'Ashta' means eight and 'Vinayaka' is a name of Lord Ganesha. The interesting fact about these eight temples is that the Ganesha idols in these temples were not sculpted by man.These were found as such in nature and are called 'Swayambhu'. Another thing to know is that none of the idols has their trunks shaped in the same way. Each temple has a legend associated with it.
    Story first published: Thursday, June 1, 2017, 8:28 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more