Just In
- 9 hrs ago
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- 12 hrs ago
ಚಾಣಕ್ಯ ಪ್ರಕಾರ ನಿಜವಾದ ಫ್ರೆಂಡ್ ಅಂತ ಗುರುತಿಸುವುದು ಹೇಗೆ ಗೊತ್ತಾ?
- 13 hrs ago
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಮನೆಯಲ್ಲಿ ಹೆಣ್ಮಕ್ಕಳಿದ್ದರೆ ಈ ಯೋಜನೆಗಳ ಬಗ್ಗೆ ತಿಳಿದಿರಲಿ
- 17 hrs ago
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
Don't Miss
- News
ಮೋದಿ ಸಾಕ್ಷ್ಯಚಿತ್ರ ವೀಕ್ಷಿಸುತ್ತಿದ್ದ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ
- Movies
Pathaan Movie Release Live: 'ಪಠಾಣ್' ಸಿನಿಮಾ ಬಿಡುಗಡೆ, ವಿಶೇಷತೆಗಳೇನು?
- Automobiles
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
- Sports
Ranji Trophy: ಕರ್ನಾಟಕ ಮಾರಕ ಬೌಲಿಂಗ್ : 164 ರನ್ಗಳಿಗೆ ಜಾರ್ಖಂಡ್ ಆಲೌಟ್
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
ಹಿಂದೂ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳು ಆಷಾಢ ಮಾಸ ಅಥವಾ ಶೂನ್ಯ ಮಾಸ. ವೈದಿಕ ಜ್ಯೋತಿಷದ ಪ್ರಕಾರ ಈ ಮಾಸವು ಮಿಥುನ ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಈ ಮಾಸ ಅಶುಭವೆಂದು ಪರಿಗಣಿಸಲಾಗುತ್ತದೆ. ಮಳೆಗಾಲವನ್ನು ಒಳಗೊಂಡಿರುವ ಎರಡು ತಿಂಗಳುಗಳಲ್ಲಿ ಇದು ಮೊದಲನೆಯ ಮಾಸ.
2022ನೇ ಸಾಲಿನಲ್ಲಿ ಆಷಾಢ ಮಾಸ ಜೂನ್ 30ರಂದು ಆರಂಭವಾಗಿ ಜುಲೈ 28ರಂದು ಕೊನೆಗೊಳ್ಳುತ್ತದೆ. ಹಿಂದೂ ಪದ್ಧತಿಯ ಪ್ರಕಾರ ಈ ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದೇ ಇಲ್ಲ. ಯಾವುದೇ ಶುಭ ಕಾರ್ಯಗಳಿದ್ದರೂ ಅದನ್ನು ಮುಂದಿನ ಮಾಸಕ್ಕೆ ಮುಂದೂಡಲ್ಪಡುತ್ತವೆ.
ಅದರಲ್ಲೂ ಆಷಾಢದಲ್ಲಿ ಗರ್ಭವತಿಯಾಗುವುದು ಅಥವಾ ಮಗು ಜನಿಸುವುದು ಆಶುಭ ಎಂದೇ ನಂಬಲಾಗಿದೆ. ಅದರೆ ಇದಕ್ಕೆ ವೈಜ್ಞಾನಿಕ ಕಾರಣ ಬಹುತೇಕರಿಗೆ ಗೊತ್ತಿಲ್ಲ.
ನಾವಿಂದು ಆಷಾಢದಲ್ಲಿ ಏಕೆ ಶುಭ ಕಾರ್ಯ ಮಾಡುವುದಿಲ್ಲ, ಈ ಮಾಸದಲ್ಲಿ ಗರ್ಭವತಿಯಾಗುವುದು ಆಥವಾ ಮಗು ಜನಿಸುವುದು ಏಕೆ ಅಶುಭ ಎಂಬ ವೈಜ್ಞಾನಿಕ ಕಾರಣವನ್ನು ನಿಮಗೆ ತಿಳಿಸಿಕೊಡಲಿದ್ದೇವೆ:

ಅಷಾಢದಲ್ಲಿ ಗರ್ಭಧರಿಸುವಂತಿಲ್ಲ ಏಕೆ?
ಆಷಾಢದಲ್ಲಿ ಗರ್ಭಧಾರಣೆಯಾದರೆ, ಮಗುವಿನ ಜನನವು 9 ತಿಂಗಳ ನಂತರ ಅಂದರೆ ಚೈತ್ರ ಮಾಸದಲ್ಲಿ (ಏಪ್ರಿಲ್‌ನಲ್ಲಿ) ಅಂದರೆ ಸುಡುವ ಬಿಸಿಲು ಮತ್ತು ಶುಷ್ಕ ವಾತಾವರಣವಿರುವ ಬಿಸಿ ಋತುವಿನಲ್ಲಿ ಹುಟ್ಟುತ್ತದೆ. ಅಂತಹ ವಾತಾವರಣದಲ್ಲಿ ನವಜಾತ ಶಿಶುಗಳು ಬಿಸಿಲಿನ ಧಗೆಗೆ ಇನ್ನಷ್ಟು ಬಳಲಬಹುದು ಮತ್ತು ರೋಗಗಳಿಗೆ ಗುರಿಯಾಗುತ್ತದೆ, ಏಕೆಂದರೆ ಬೇಸಿಗೆಯಲ್ಲಿ ಗಾಳಿಯಿಂದ ಹರಡುವ ಅನೇಕ ರೋಗಗಳ ಕಾಲವಾಗಿದೆ. ಆದ್ದರಿಂದ ದಂಪತಿಗಳು ಈ ಮಾಸದಲ್ಲಿ ಸೇರಬಾರದು ಎಂದು ಹೇಳಲಾಗುತ್ತದೆ.

ಕೃಷಿ ಕೆಲಸದಲ್ಲಿ ನಿರತರಾಗುತ್ತಿದ್ದ ರೈತ ಕುಟುಂಬಗಳು
ಭಾರತ ಕೃಷಿಕರ ದೇಶ. ಆಷಾಢವನ್ನು ಕೃಷಿಕರ ಕಾಲ ಎನ್ನಲಾಗುತ್ತದೆ. ಭಾರತೀಯ ಸಮಾಜವು ಈ ಮಾಸವನ್ನು ತಟಸ್ಥ ತಿಂಗಳು ಎಂದು ಸಹ ಪರಿಗಣಿಸಲಾಗುತ್ತದೆ, ಏಕೆಂದರೆ ಇದು ಮಳೆಗಾಲದ ಆರಂಭವಾಗಿದೆ ಮತ್ತು ಮೊದಲ ಮಳೆಯ ನಂತರ ಬಿತ್ತನೆ ಪ್ರಾರಂಭಿಸುವ ಸಮಯವಿದು. ಎಲ್ಲ ಕೃಷಿಕ ಕುಟುಂಬಗಳು ಈ ಕಾಲದಲ್ಲಿ ಕೃಷಿ ಚಟುವಟಿಕಗಳಲ್ಲಿ ಹೆಚ್ಚು ನಿರತರಾಗಿರುತ್ತಾರೆ, ಈ ಸಮಯದಲ್ಲಿ ಮದುವೆ ಎಂದರೆ ಅದು ಕೆಲಸಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಮದುವೆಗಳನ್ನು ಮಾಡುತ್ತಿರಲಿಲ್ಲ. ಇದೇ ಕಾರಣದಿಂದ ನವವಿವಾಹಿತ ದಂಪತಿಗಳು ಸೇರುವುದನ್ನು ಸಹ ಮುಂದೂಡಲಾಗುತ್ತದೆ ಮತ್ತು ಆಷಾಢ ಮಾಸದಲ್ಲಿ ಮದುವೆಗಳನ್ನು ಸಹ ಮಾಡಲಾಗುವುದಿಲ್ಲ. ಅಲ್ಲದೆ ಜಿಟಿಜಿಟಿ ಮಳೆಯಿಂದ ಶುಭ ಕಾರ್ಯಗಳಿಗೆ ಹೋಗಲು ಸಮಸ್ಯೆಯಾಗಬಹುದು ಎಂಬುದು ಸಹ ಒಂದು ಕಾರಣವಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ ಅಶುಭ ಏಕೆ?
ಆಷಾಢ ಮಾಸದ ಗರ್ಭಧಾರಣೆಯು ಚೈತ್ರದಲ್ಲಿ ಮಗುವಿನ ಜನನಕ್ಕೆ ಕಾರಣವಾಗುತ್ತದೆ, ಈ ಸಮಯದಲ್ಲಿ ಸೂರ್ಯನು ಮೇಷರಾಶಿಯನ್ನು ಆಕ್ರಮಿಸಿಕೊಂಡಾಗ ಮತ್ತು ಉತ್ತುಂಗದಲ್ಲಿರುತ್ತಾನೆ. ಸಾಮಾನ್ಯವಾಗಿ, ಆಂತರಿಕ ಗ್ರಹಗಳು - ಬುಧ ಮತ್ತು ಶುಕ್ರವು ಸೂರ್ಯನಿಗೆ ಬಹಳ ಹತ್ತಿರದಲ್ಲಿರುತ್ತದೆ ಮತ್ತು ಮೀನ/ಮೇಷ/ವೃಷಭ ರಾಶಿಯಲ್ಲಿರಬಹುದು. ಮೀನ ರಾಶಿಯಲ್ಲಿ ಶುಕ್ರನು ಉತ್ಕೃಷ್ಟನಾಗಿರುತ್ತಾನೆ ಮತ್ತು ಬುಧನು ದುರ್ಬಲನಾಗಿರುತ್ತಾನೆ.
ಯಾರೇ ಆದರೂ ಮಗು ಜನಿಸಿದಾಗ ಜಾತಕದಲ್ಲಿ ಉತ್ಕೃಷ್ಟವಾದ ಸೂರ್ಯ ಮತ್ತು ಶುಕ್ರನನ್ನು ಬಯಸುತ್ತಾನೆ, ಏಕೆಂದರೆ ಈ ಸಂಯೋಜನೆಯ ಅಡಿಯಲ್ಲಿ ಹುಟ್ಟುವವರು ಪ್ರಸಿದ್ಧ ವ್ಯಕ್ತಿಗಳಾಗುತ್ತಾರೆ ಎಂಬ ನಂಬಿಕ ಇದೆ. ಆದ್ದರಿಂದ ಆಷಾಢದಲ್ಲಿ ಗರ್ಭವತಿಯಾದರೆ ಚೈತ್ರ ಮಾಸದಲ್ಲಿ ಮಗುವನ್ನು ನಿರೀಕ್ಷಿಸಬಹುದು. ಆದರೆ ಈ ಸಮಯದಲ್ಲಿ ಬುದ್ಧಿವಂತ ಗ್ರಹ ಬುಧವು ದೌರ್ಬಲ್ಯದಲ್ಲಿರುತ್ತದೆ. ಇದನ್ನು ಯಾರೂ ಅಪೇಕ್ಷಿಸುವುದಿಲ್ಲ ಏಕೆಂದರೆ ಅದು ಮಗುವಿನ ಬುದ್ಧಿವಂತಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಬಹುಶಃ ಜನರು ತಮ್ಮ ಮಗು ದುರ್ಬಲವಾಗುವುದನ್ನು ತಪ್ಪಿಸಲು ಈ ಸಮಯದಲ್ಲಿ ಗರ್ಭವತಿಯಾಗುವುದನ್ನು ಮುಂದೂಡುತ್ತಾರೆ.

ಆಷಾಢದಲ್ಲಿ ಮೆಂಹೆಂದಿ ಹಚ್ಚುತ್ತಾರೆ ಏಕೆ?
ಭಾರತದ ಅನೇಕ ಸ್ಥಳಗಳಲ್ಲಿ ಆಷಾಢ ಮಾಸದಲ್ಲಿ ಜನರು ತಮ್ಮ ಕೈ ಮತ್ತು ಪಾದಗಳಿಗೆ ಮೆಹಂದಿ ವಿನ್ಯಾಸಗಳನ್ನು ಅನ್ವಯಿಸುತ್ತಾರೆ. ಈ ತಿಂಗಳಲ್ಲಿ (ಜೂನ್ - ಜುಲೈ) ಸಂಭವಿಸಬಹುದಾದ ಹವಾಮಾನ ಬದಲಾವಣೆಗಳ ಪರಿಣಾಮಗಳನ್ನು ತೊಡೆದುಹಾಕುವುದು ಮೆಂಹೆಂದಿ ಹಚ್ಚುವ ಹಿಂದಿರುವ ಮುಖ್ಯ ಕಾರಣ.

ಪೂಜೆ ಹಾಗೂ ವ್ರತಗಳಿಗೆ ಇದೇ ಶುಭ ಸಮಯ
ಆಷಾಢ ಮಾಸದ ಶುಭ ಕಾರ್ಯಕ್ರಮಗಳಿಗೆ ಅಶುಭವಾಗಿದ್ದರೂ ಪೂಜೆ, ವ್ರತಕ್ಕೆ ತುಂಬಾ ಶುಭ. ಪುರಿ ಜಗನ್ನಾಥ ದೇವಸ್ಥಾನದಲ್ಲಿ ರಥಯಾತ್ರೆ ಮತ್ತು ಪಂಢರಪುರ ವಿಟ್ಲ ದೇವಸ್ಥಾನದಲ್ಲಿ ಪಾಲ್ಕಿ ಯಾತ್ರೆಯನ್ನು ಆಷಾಢ ಮಾಸದಲ್ಲಿ ಆಚರಿಸಲಾಗುತ್ತದೆ. ಚಾತುರ್ಮಾಸ ವ್ರತವು ಈ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ‘ವೈಖಾನಸ ಸಂಹಿತೆ'ಯಂತೆ ಆಷಾಢ ಮಾಸದಲ್ಲಿ ಆರಂಭವಾಗುವ ದಕ್ಷಿಣಾಯನದಲ್ಲಿ ಸಪ್ತಮಾತೃಕಾ ಶಕ್ತಿ ದೇವತೆಗಳಾದ, ಭೈರವ, ವರಾಹ, ನರಸಿಂಹ, ಮಹಿಷಾಸುರ ಮರ್ಧಿನಿ, ದುರ್ಗಾ ದೇವಿಯನ್ನು ಭಕ್ತರು ಪೂಜಿಸಬೇಕು.