Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಿಂದೂ ಧರ್ಮದಲ್ಲಿ ಇವರು 'ಕೋಪಿಷ್ಠ ದೇವರು' ಎಂದೇ ಪ್ರಸಿದ್ಧಿ!
ಹಿಂದೂ ಧರ್ಮದಲ್ಲಿ ಕೆಲವು ದೇವರುಗಳು ಶಾಂತ ಮೂರ್ತಿಗಳಾದರೆ ಇನ್ನು ಕೆಲವರು ದೇವರುಗಳಿಗೆ ಕೋಪ ಜಾಸ್ತಿ. ಇಂತಹ ದೇವರುಗಳು ಕೋಪದಲ್ಲಿದ್ದಾಗ ನಿಮ್ಮ ಯಾವುದೇ ಪೂಜೆ, ಪುರಸ್ಕಾರಗಳು, ಭಕ್ತಿಯೂ ನಡೆಯಲ್ಲ...!
ಸಾವಿರಾರು ವರ್ಷಗಳಿಂದಲೂ ಇರುವಂತಹ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತವೆ ಪುರಾಣಗಳು. ಕೆಲವು ದೇವರುಗಳು ಭಕ್ತರ ಭಕ್ತಿಗೆ ಬೇಗನೆ ಒಲಿದರೆ ಇನ್ನು ಕೆಲವು ದೇವರುಗಳನ್ನು ಒಲಿಸಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ಜಗತ್ತಿನ 'ಚಿತ್ತವನ್ನೇ ಕೆದಕುವ' ಹಿಂದೂ ಧರ್ಮದ ಆಚಾರ-ವಿಚಾರ
ಹಿಂದೂ ಧರ್ಮದಲ್ಲಿ ಕೆಲವು ದೇವರುಗಳು ಶಾಂತ ಮೂರ್ತಿಗಳಾದರೆ ಇನ್ನು ಕೆಲವರು ದೇವರುಗಳಿಗೆ ಕೋಪ ಜಾಸ್ತಿ. ಇಂತಹ ದೇವರುಗಳು ಕೋಪದಲ್ಲಿದ್ದಾಗ ನಿಮ್ಮ ಯಾವುದೇ ಪೂಜೆ, ಪುರಸ್ಕಾರಗಳು, ಭಕ್ತಿಯೂ ನಡೆಯಲ್ಲ. ಆದರೆ ಶಾಂತ ಸ್ವರೂಪಕ್ಕೆ ಬಂದಾಗ ನಿಮ್ಮ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾಗುತ್ತದೆ. ಹಿಂದೂ ಧರ್ಮದಲ್ಲಿ ಇರುವಂತಹ ಕೋಪಿಷ್ಠ ದೇವರುಗಳು ಯಾರು ಎಂದು ನಾವು ತಿಳಿದುಕೊಳ್ಳುವ...

ಕಾಳಿಮಾತೆ
ಕಾಳಿಮಾತೆಯನ್ನು ಹಿಂದೂಗಳು ಹೆಚ್ಚಾಗಿ ಪೂಜಿಸುತ್ತಾರೆ. ಕಾಳಿಯು ದುಷ್ಟರನ್ನು ನಾಶ ಮಾಡಿ ಭಕ್ತರಿಗೆ ಸುಖವನ್ನು ನೀಡುತ್ತಾಳೆ. ಈಕೆ ಶಿವನ ಮಡದಿ. ಆಕೆಯನ್ನು ಸಾವಿನ ದೇವತೆಯೆಂದು ಪರಿಗಣಿಸಲಾಗಿದೆ. ಕಾಳಿಯ ಅವತಾರವು ಪ್ರಾಣಿಯೊಂದರ ಚರ್ಮವನ್ನು ಸುತ್ತಿಕೊಂಡು ಕೈಯಲ್ಲಿ ತಲೆಬುರುಡೆಯನ್ನು ಇಟ್ಟುಕೊಂಡಿದ್ದಾಳೆ.

ಕಾಳಿಮಾತೆ
ಜನರ ದುಷ್ಟ ಕೃತ್ಯಗಳಿಂದ ಕೋಪಗೊಳ್ಳುವ ಆಕೆ ಇದನ್ನು ಧ್ವಂಸ ಮಾಡಿಬಿಡುತ್ತಾಳೆ. ಇದರಿಂದಾಗಿ ಡಕಾಯಿತರು ಕಾಳಿಯನ್ನು ಪೂಜಿಸುತ್ತಾರೆ. ಕಾಳಿ ಮಾತೆಯನ್ನು ಪೂಜಿಸಿದರೆ ತಮ್ಮ ದುಷ್ಕೃತ್ಯಗಳನ್ನು ಆಕೆ ಕ್ಷಮಿಸುತ್ತಾಳೆ ಎನ್ನುವ ನಂಬಿಕೆ ಅವರದ್ದಾಗಿದೆ. ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?

ಶಿವ
ಒಳ್ಳೆಯ ಪತಿಯಲ್ಲಿರುವ ಮೂರ್ತಿರೂಪವೇ ಶಿವನೆಂದು ಪರಿಗಣಿಸಲಾಗಿದೆ. ಶಿವನನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ. ಆದರೆ ಆತನಿಗೆ ಕೋಪ ಬಂದಾಗ ತಾಂಡವ ನೃತ್ಯ ಮಾಡುತ್ತಾನೆ. ಹಿಂದೂ ಪುರಾಣಗಳ ಪ್ರಕಾರ ಶಿವನಿಗೆ ಹೆಚ್ಚು ಕೋಪ ಬಂದಾಗ ಆತ ತನ್ನ ಮೂರನೇ ಕಣ್ಣನ್ನು ತೆರೆದು ಎಲ್ಲವನ್ನೂ ಧ್ವಂಸ ಮಾಡಿಬಿಡುತ್ತಾನೆ.ಮುಕ್ಕಣ್ಣ ಶಿವನ ಮೂರನೆಯ ಕಣ್ಣಿನ ರೋಚಕ ಕಹಾನಿ...

ದುರ್ಗೆ
ದುರ್ಗೆಯನ್ನು ಹಿಂದೂ ಧರ್ಮದಲ್ಲಿ ಮಾತೆಯೆಂದು ಪೂಜಿಸಲಾಗುತ್ತದೆ. ಮಹಿಷಾಸುರನನ್ನು ಕೊಂದಿರುವ ಕಾರಣದಿಂದಾಗಿ ಆಕೆಯನ್ನು ಮಹಿಷಾಸುರ ಮರ್ದಿನಿ ಎಂದು ಕರೆಯಲಾಗುತ್ತದೆ. ದುರ್ಗೆ ಶಕ್ತಿಯ ಸಂಕೇತ. ಹತ್ತು ಕೈಗಳು ಇರುವಂತಹ ದುರ್ಗೆಯ ಪ್ರತಿಯೊಂದು ಕೈಯಲ್ಲಿ ಒಂದೊಂದು ರೀತಿಯ ಆಯುಧಗಳಿವೆ. ಮಹಿಳೆಯ ಶಕ್ತಿ ಮತ್ತು ಕ್ರೋಧವನ್ನು ದುರ್ಗೆಯೆಂದು ಪರಿಗಣಿಸಲಾಗಿದೆ.

ಶನಿ ದೇವರು
ಅತ್ಯಂತ ವೇಗವಾಗಿ ಕೋಪಗೊಳ್ಳುವ ದೇವರೆಂದರೆ ಅದು ಶನಿ ದೇವರು. ಇದರಿಂದಾಗಿ ಪ್ರತಿಯೊಬ್ಬರೂ ಶನಿದೇವರನ್ನು ಪೂಜಿಸಿ ಆಶೀರ್ವಾದ ಪಡೆಯಲು ಬಯಸುತ್ತಾರೆ. ಶನಿದೇವರ ಕೋಪಕ್ಕೆ ತುತ್ತಾಗಲು ಯಾರು ಬಯಸುವುದಿಲ್ಲ. ಶನಿ ದೇವರು ಆಶೀರ್ವದಿಸಿದರೆ ಅವರು ಹೆಚ್ಚಿನ ಸುಖವನ್ನು ಪಡೆಯುತ್ತಾರೆ. ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?

ಶನಿ ದೇವರು
ಇದೇ ವೇಳೆ ಅವರ ಮೇಲೆ ಶನಿ ದೇವರು ಕೋಪಗೊಂಡರೆ ಎಲ್ಲವೂ ನಿರ್ನಾಮವಾಗುತ್ತದೆ. ಶನಿ ದೇವರನ್ನು ಕಡುನೀಲಿ ಬಣ್ಣವೆಂದು ಹೇಳಲಾಗುತ್ತದೆ. ಪ್ರತಿಯೊಂದು ಜ್ಯೋತಿಷ್ಯಶಾಸ್ತ್ರದ ಮೇಲೆ ಶನಿ ದೇವರ ಪ್ರಭಾವವಿರುತ್ತದೆ.



Click it and Unblock the Notifications
