For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2021: ಮಾಧವನ ಬಗ್ಗೆ ನಿಮಗೆ ತಿಳಿದಿರದ 8 ವಿಶೇಷ ಸಂಗತಿಗಳು

|

ಹಿಂದೂ ಧರ್ಮದ ದೇವತೆಗಳಲ್ಲಿ ಕೃಷ್ಣನು ಒಬ್ಬನು. ತನ್ನ ಜನ್ಮದಿಂದಲೇ ಅನೇಕ ಇತಿಹಾಸ ಕಥೆಗಳನ್ನು ಸೃಷ್ಟಿಸುತ್ತಾ ಬಂದಿರುವ ಕೃಷ್ಣ ಪರಮಾತ್ಮನ ಲೀಲೆಯ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಸಾಮಾನ್ಯವಾಗಿ ಮಕ್ಕಳಿಗೂ ಸಹ ಕೃಷ್ಣನಿಗೆ ಸಂಬಂಧಿಸಿದ ಪುರಾಣ ಕಥೆಗಳು ತಿಳಿದಿರುತ್ತವೆ. ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಮಹಾಭಾರತದಲ್ಲಿ ಕೃಷ್ಣನ ಪಾತ್ರವು ಮಹತ್ವವಾದದ್ದು.

ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಟರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಶ್ರೀಕೃಷ್ಣ ಪರಮಾತ್ಮನು ಜನ್ಮವೆತ್ತಿ ಬಂದಿದ್ದನು ಎಂದು ಪುರಾಣ ಕಥೆಗಳು ಹೇಳುತ್ತವೆ. ಈ (2021) ಸಾಲಿನ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 30ರಂದು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ಮುಕುಂದನ ಕುರಿತ ಇನ್ನಷ್ಟು ಪೌರಾಣಿಕ ಅಚ್ಚರಿಯ ಸತ್ಯಸಂಗತಿಗಳನ್ನು ತಿಳಿಯೋಣ.

ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

Krishna

ತನ್ನ ಬಾಲ್ಯದಿಂದಲೇ ಜಗತ್ತು ಮೆಚ್ಚುವ ಕಾರ್ಯವನ್ನು ಮಾಡುತ್ತಾ ಬಂದಿರುವವನು ಮಹಾನ್ ದೇವ ಶ್ರೀಕೃಷ್ಣ. ಅದ್ಭುತ ಶಕ್ತಿಯೊಂದಿಗೆ ಪ್ರಪಂಚಕ್ಕೆ ನೀತಿವಂತರಾಗಿ ಬಾಳುವುದು ಹೇಗೆ? ಎನ್ನುವುದನ್ನು ಕಲಿಸಿಕೊಟ್ಟ ದೇವ ಅವನು. ಈ ಮಹಾನ್ ದೇವತೆಯ ಬಗ್ಗೆ ನಿಮಗೆ ತಿಳಿಯದೆ ಇರುವ ಅನೇಕ ವಿಶೇಷ ಸಂಗತಿಗಳಿರಬಹುದು. ಅಂತಹ 8 ಸಂಗತಿಗಳನ್ನು ನಿಮಗಾಗಿ ಪರಿಚಯಿಸಿಕೊಡುತ್ತಿದ್ದೇವೆ.

ಕೃಷ್ಣನ ಬಾಯಲ್ಲಿ ಸಂಪೂರ್ಣ ಬ್ರಹ್ಮಾಂಡದ ಚಿತ್ರಣ

ಕೃಷ್ಣನ ಬಾಯಲ್ಲಿ ಸಂಪೂರ್ಣ ಬ್ರಹ್ಮಾಂಡದ ಚಿತ್ರಣ

ಬಾಲ್ಯದಲ್ಲಿ ಇರುವಾಗ ಕೃಷ್ಣನು ಬಹಳ ಚೇಷ್ಟೆಯ ಬುದ್ಧಿಯನ್ನು ಹೊಂದಿದ್ದನು. ಅವನ ತುಂಟಾಟದ ಕಥೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವುದು ನಾವು ಕಾಣಬಹುದು. ಚಿಕ್ಕವನಿರುವಾಗ ಯಾವುದೇ ಕೆಟ್ಟ ಉದ್ದೇಶಗಳು ಅಥವಾ ಲಾಭದ ಚಿಂತನೆಗಳಿಲ್ಲದೆ ಕೇವಲ ಹುಡುಗಾಟಿಕೆಯಿಂದ ಅನೇಕ ತುಂಟಾಟಗಳನ್ನು ಮಾಡಿದ್ದನು. ಅವನ ಮುಗ್ಧತೆಯ ಕಥೆಗಳಲ್ಲಿ "ತಾಯಿಯು ಮಗನ ಬಾಯಲ್ಲಿ ಬ್ರಹ್ಮಾಂಡವನ್ನು ನೋಡಿರುವುದು"ಒಂದು.

"ಕೃಷ್ಣನು ಗೆಳೆಯರೊಂದಿಗೆ ಆಡುವಾಗ ಸಾಕಷ್ಟು ತುಂಟಾಟವನ್ನು ಆಡುತ್ತಿದ್ದನು. ಅವನು ಮಾಡುವ ಕೆಲವು ಚೇಷ್ಟೆಗಳನ್ನು ಅವನ ತಾಯಿಯಲ್ಲಿ ಹೇಳಿದರೆ ಸುಳ್ಳೆಂದು ಸಾಭೀತು ಪಡಿಸುತ್ತಿದ್ದನು. ಬಳಿಕ ತಾಯಿಯು ಸುಳ್ಳು ವಿಚಾರವೆಂದು ಸುಮ್ಮನಾಗುತ್ತಿದ್ದಳು. ಒಮ್ಮೆ ಕೃಷ್ಣನು ತನ್ನ ಗೆಳೆಯರೊಂದಿಗೆ ಮಣ್ಣಿನಲ್ಲಿ ಆಟವಾಡುತ್ತ ಕುಳಿತಿದ್ದನು. ಆಗ ಅಲ್ಲಿದ್ದ ಮಣ್ಣನ್ನೆಲ್ಲಾ ತೆಗೆದು ತಿನ್ನುತ್ತಾ ಕುಳಿತಿದ್ದನ್ನು. ಇದನ್ನು ಕಂಡ ಕೃಷ್ಣನ ಸ್ನೇಹಿತರು ತಾಯಿ ಯಶೋದೆಗೆ ದೂರಿದರು. ನಂಬದ ತಾಯಿಗೆ ಸಾಕ್ಷಿಯಾಗಿ ತೋರಿಸಲು ಕೃಷ್ಣ ಮಣ್ಣು ತಿನ್ನುತ್ತಿರುವ ಸ್ಥಳಕ್ಕೆ ಕರೆತಂದರು. ಆಗ ತಾಯಿ ಮಗನು ಮಣ್ಣು ತಿಂದಿರುವನಾ? ಎಂದು ಪರೀಕ್ಷಿಸಲು ಅವನ ಬಾಯನ್ನು ತೆರೆಯಿಸಿ ನೋಡಿದಳು. ಆಗ ತಾಯಿಗೆ ಆಶ್ಚರ್ಯವಾಯಿತು. ಮಗನ ಬಾಯಿಯ ಒಳಗೆ ಬ್ರಹ್ಮಾಂಡವೇ ಇರುವುದು ಕಂಡು ಆಶ್ಚರ್ಯ ಪಟ್ಟಳು. ಮಗನು ದೈವ ಶಕ್ತಿಯನ್ನು ಹೊಂದಿರುವನು ಎಂದು ಅರಿತಳು. ಆದರೆ ಈ ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡಿದ್ದರೆ ತಾಯಿಯ ರೂಪದಲ್ಲಿ ಪ್ರೀತಿಸುವುದಿಲ್ಲ ಎಂದು ಕೃಷ್ಣನು ದೈವಶಕ್ತಿಯಿಂದ ಆ ಘಟನೆಯು ಅವಳಿಗೆ ನೆನಪಾಗದೆ ಇರುವಂತೆ ಮಾಡಿದನು.

ಶ್ರೀಕೃಷ್ಣ, ಪತ್ನಿಯರು ಮತ್ತು ನಾರದ ಮುನಿ

ಶ್ರೀಕೃಷ್ಣ, ಪತ್ನಿಯರು ಮತ್ತು ನಾರದ ಮುನಿ

ಭಗವಾನ್ ಶ್ರೀಕೃಷ್ಣನು 16108 ಪತ್ನಿಯರನ್ನು ಹೊಂದಿದ್ದನು ಎನ್ನುವುದು ಎಲ್ಲರು ತಿಳಿದಿರುವ ವಿಚಾರ. ಅದರಲ್ಲಿ 8 ರಾಣಿಯರು ಅಷ್ಟಭಾರಿಗಳು ಎಂದು ಕರೆಯಲಾಗುತ್ತದೆ. ರುಕ್ಮಿಣಿ ಕೃಷ್ಣನ ಮೊದಲ ರಾಣಿ. ರುಕ್ಮಿಣಿಗೆ ಇಷ್ಟವಿರದ ರಾಜನೊಂದಿಗೆ ವಿವಾಹ ಮಾಡಲು ಅವಳ ತಂದೆ ಒತ್ತಾಯಿಸುತ್ತಿದ್ದನು. ರುಕ್ಮಿಣಿ ಕೃಷ್ಣನನ್ನು ಪ್ರೀತಿಸುತ್ತಿದ್ದಳು. ಹಾಗಾಗಿ ಕೃಷ್ಣ ರುಕ್ಮಿಣಿಯೊಂದಿಗೆ ಓಡಿಹೋಗಿ ವಿವಾಹವಾದನು ಎನ್ನಲಾಗುತ್ತದೆ.

ಒಮ್ಮೆ ನಾರದ ಮುನಿಯು ದ್ವಾರಕೆಗೆ ಬಂದಿದ್ದನು. ಕೃಷ್ಣನು ತನ್ನಂತೆಯೇ ಚೇಷ್ಟೆ ಮಾಡುವನು ಎಂದು ತಿಳಿದಿದ್ದನು. ಹಾಗಾಗಿಯೇ ಕೃಷ್ಣನಲ್ಲಿ ನಿನ್ನ ಒಬ್ಬ ಹೆಂಡತಿಯನ್ನು ನನಗೆ ಉಡುಗೊರೆಯಾಗಿ ಕೊಡು ಎಂದು ಕೇಳಿದನು. ಅದಕ್ಕೆ ಕೃಷ್ಣನು ಒಂದು ಶರತ್ತು ಇಟ್ಟನು. ನನ್ನ ಹೆಂಡತಿಯರಲ್ಲಿ ಯಾರಾದರೂ ಒಬ್ಬರು ಏಕಾಂಗಿಯಾಗಿರುವುದನ್ನು ಕಂಡರೆ ಅವಳನ್ನು ನೀನು ತೆಗೆದುಕೊಳ್ಳಬಹುದು ಎಂದು ಹೇಳಿದನು. ಅದನ್ನು ಒಪ್ಪಿಕೊಂಡ ನಾರದ ಮುನಿ ಕೃಷ್ಣನ ಹೆಂಡತಿಯರನ್ನು ನೋಡಲು ಹೋದನು. ಪ್ರತಿಯೊಬ್ಬರು ಕೃಷ್ಣನೊಂದಿಗೆ ಇರುವುದನ್ನು ಕಂಡನು. ಅದು ಒಂದೇ ಸಮಯದಲ್ಲಿ ಪ್ರತಿಯೊಬ್ಬರೊಂದಿಗೂ ಉಪಸ್ಥಿತನಿದ್ದನು. ಅದನ್ನು ಕಂಡ ನಾರದ ಮುನಿ ಇವನು ದೈವ ಶಕ್ತಿಯವನು. ಹಾಗೂ ದೈವ ಲೀಲೆ ಹೊಂದಿದವನು ಎಂದು ತಿಳಿದುಕೊಂಡನು.

ಗಾಂಧಾರಿಯ ಶಾಪ

ಗಾಂಧಾರಿಯ ಶಾಪ

ಮಹಾಭಾರತದ ಯುದ್ಧದ ನಂತರ ಕೃಷ್ಣ ಪರಮಾತ್ಮನು ಗಾಂಧಾರಿಗೆ ಸಾಂತ್ವನ ಮಾಡಲು ಕೌರವರ ರಾಜ್ಯಕ್ಕೆ ಹೋಗಿದ್ದನು. ಆಗ ಗಾಂಧಾರಿಯು ತನ್ನ ಕುಲ ನಾಶವಾಗಿದೆ ಎನ್ನುವುದನ್ನು ತಿಳಿದು, ಕೃಷ್ಣನ ಯಾದವ ಕುಲವು ಸಹ 36 ವರ್ಷಗಳ ನಂತರ ನಾಶವಾಗಲಿ ಎಂದು ಶಪಿಸಿದಳು. ಕೃಷ್ಣನು ತನ್ನ ಬಂಧುಗಳನ್ನು ಉಳಿಸಿಕೊಳ್ಳಲು ಯುದ್ಧವನ್ನು ನಿಲ್ಲಿಸಿ ಉಳಿಸಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಗಾಂಧಾರಿಯ ಮಾತಿಗೆ ತಥಾಸ್ತು ಎಂದನು. ಶಾಪವನ್ನು ಪಡೆದು ಇಡೀ ವಂಶ ಪಾಪಿಗಳಾಗಿದ್ದಾರೆ. ಹಾಗಾಗಿ ಅವರ ನಾಶ ಪ್ರಸಕ್ತವಾದದ್ದು ಎಂದು ತಿಳಿದನು.

ಗಾಂಧಾರಿ ಶಾಪ; ಶ್ರೀಕೃಷ್ಣಾವತಾರದ ಪರಿಸಮಾಪ್ತಿ ಹೇಗೆ?

ಕೃಷ್ಣ ಮತ್ತು ಶಿಶುಪಾಲ್

ಕೃಷ್ಣ ಮತ್ತು ಶಿಶುಪಾಲ್

ಶಿಶುಪಾಲನು ಆ ಕಾಲದ ಪ್ರಸಿದ್ಧ ಮತ್ತು ದುಷ್ಟ ರಾಜನಾಗಿದ್ದನು. ಅವನನ್ನು ಕೊಲ್ಲಲು ನಿರ್ಧರಿಸಿದ್ದನು. ಇದನ್ನು ತಿಳಿದ ಶಶುಪಾಲನ ತಾಯಿ ಕೃಷ್ಣನಲ್ಲಿ ಆತನ ತಪ್ಪಿಗೆ ಕ್ಷಮೆಯನ್ನು ಯಾಚಿಸಿದಳು. ಜೊತೆಗೆ ನೂರು ತಪ್ಪು ಮಾಡುವವರೆಗೆ ಕ್ಷಮಿಸಬೇಕು ಎಂದು ಕೇಳಿಕೊಂಡಳು. ಹಾಗಾಗಿ ಅವನ ನೂರು ತಪ್ಪುಗಳನ್ನು ಕ್ಷಮಿಸಲಾಯಿತು. ನೂರಾ ಒಂದನೇ ತಪ್ಪನ್ನು ಮಾಡಿದಾಗ ಕೃಷ್ಣನು ಅವನನ್ನು ಕೊಂದನು ಎಂದು ಹೇಳಲಾಗುವುದು. ಶಿಶುಪಾಲ ಮತ್ತು ದಂತವಕ್ರ ಇಬ್ಬರು ವಿಷ್ಣುವಿನ ದ್ವಾರಪಾಲಕರಾಗಿದ್ದರು. ಇವರು ಶಾಪದಿಂದಾಗಿ ಮಾನವರಾಗಿ ಜನಿಸಿದ್ದರು. ನಂತರ ದೇವನಿಂದಲೇ ಕೊಲ್ಲಲ್ಪಟ್ಟರು.

ಕೃಷ್ಣ ಮತ್ತು ದ್ರೌಪದಿ

ಕೃಷ್ಣ ಮತ್ತು ದ್ರೌಪದಿ

ಮಹಾಭಾರತದಲ್ಲಿ ದ್ರೌಪದಿ ಮತ್ತು ಕೃಷ್ಣನು ಸಹೋದರ-ಸಹೋದರಿಯರು ಎಂದು ವರ್ಣಿಸಲಾಗುತ್ತದೆ. ದ್ರೌಪದಿಯು ಪಾರ್ವತಿ ದೇವಿಯ ಅವತಾರ ಎಂದು ನಂಬಲಾಗಿದೆ. ಕೃಷ್ಣನು ವಿಷ್ಣುವಿನ ಅವತಾರ ಎಂದು ಹೇಳಲಾಗುವುದು. ವಿಷ್ಣು ಮತ್ತು ಪಾರ್ವತಿಯು ಸಹೋದರ ಹಾಗೂ ಸಹೋದರಿಯರು.

ಕೃಷ್ಣ ಜನ್ಮಾಷ್ಟಮಿ 2019: ದಿನಾಂಕ, ಸಮಯ, ಮಹತ್ವ

ಕೃಷ್ಣನು ಏಕಲವ್ಯನಿಗೆ ಆಶೀರ್ವದಿಸಿದ್ದರು

ಕೃಷ್ಣನು ಏಕಲವ್ಯನಿಗೆ ಆಶೀರ್ವದಿಸಿದ್ದರು

ಏಕಲವ್ಯನು ತನ್ನ ಹೆಬ್ಬೆರಳನ್ನು ದ್ರೋಣಾಚಾರ್ಯರಿಗೆ ಬಲಿಕೊಟ್ಟಾಗ, ಕೃಷ್ಣನು ಅವನಿಗೆ ದೃಷ್ಟದ್ಯುಮ್ನ ನಾಗಿ ಜನಿಸು ಎಂದು ಆಶೀರ್ವದಿಸಿದ್ದನು. ಅಂತೆಯೇ ಯಜ್ಞದ ಬೆಂಕಿಯಿಂದ ಹುಟ್ಟಿ ಬಂದ ದೃಷ್ಟದ್ಯುಮ್ನ ಮಹಾಭಾರತದಲ್ಲಿ ದ್ರೋಣಾಚಾರ್ಯನನ್ನು ಕೊಂದನು ಎನ್ನಲಾಗುತ್ತದೆ.

ಜೈನ ಧರ್ಮದಲ್ಲಿ ಕೃಷ್ಣ

ಜೈನ ಧರ್ಮದಲ್ಲಿ ಕೃಷ್ಣ

ಜೈನ ಸಾಹಿತ್ಯದಲ್ಲಿ ಕೃಷ್ಣನ ಉಲ್ಲೇಖ ಇರುವುದನ್ನು ಕಾಣಬಹುದು. ತ್ರಿಮೂರ್ತಿಗಳಲ್ಲಿ ಒಬ್ಬನು ಎಂದು ಹೇಳಲಾಗಿದೆ. ಅವನೇ ನಾಯಕ ವಾಸುದೇವ ಎಂದು ವರ್ಣಿಸಲಾಗಿದೆ.

ಬೌದ್ಧ ಧರ್ಮದಲ್ಲಿ ಕೃಷ್ಣ

ಬೌದ್ಧ ಧರ್ಮದಲ್ಲಿ ಕೃಷ್ಣ

ಬೌದ್ಧರ ಪವಿತ್ರ ಸಾಹಿತ್ಯವಾದ ವೈಭವ್ ಜಾತಕದಲ್ಲಿ ಉಲ್ಲೇಖವಿದೆ. ಕೃಷ್ಣನು ತನ್ನ ದುಷ್ಟ ಸೋದರ ಮಾವ ಕಂಸನನ್ನು ಕೊಂದ ರಾಜಕುಮಾರ ಎಂದು ಹೇಳಲಾಗಿದೆ.

English summary

Krishna Janmashtami 2021: 8 Interesting & Lesser Known Facts About Lord Krishna

Though he is one of the most popular Hindu deities, there are many interesting and lesser known facts about Lord Krishna. He says in the Mahabharata that all past, present and future, and the good and evil are his own forms only. He held he whole universe inside him. It is also said that Gandhari cursed him that his clan would get perished after thirty six years.
X
Desktop Bottom Promotion