For Quick Alerts
ALLOW NOTIFICATIONS  
For Daily Alerts

ಉಪ್ಪಿನ ಸತ್ಯಾಗ್ರಹ ಆರಂಭವಾದ ದಿನಕ್ಕೆ ಇಂದಿಗೆ 75 ವರ್ಷ: ಈ ಕುರಿತಾದ ಆಸಕ್ತಿದಾಯಕ ಸಂಗತಿಗಳು

|

ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ್ ನಡೆಸಿದ ಅಹಿಂಸಾತ್ಮಕ ಉಪ್ಪಿನ ಚಳುವಳಿಗೆ ಇಂದಿಗೆ ೭೫ ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಐತಿಹಾಸಿಕ ಘಟನೆಯನ್ನು ಮೆಲುಕು ಹಾಕುವ ಕಾರ್ಯವನ್ನು ಈ ಲೇಖನದ ಮೂಲಕ ಮಾಡಿದ್ದೇವೆ.

ಉಪ್ಪಿನ ಉತ್ಪಾದನೆಯಲ್ಲಿ ಬ್ರಿಟಿಷ್ ಏಕಸ್ವಾಮ್ಯದ ವಿರುದ್ಧ ದಂಡಿ ಮಾರ್ಚ್ ಅಥವಾ ದಾಂಡಿ ಸತ್ಯಾಗ್ರಹವನ್ನು ಮಾರ್ಚ್ 12, 1930 ರಂದು ಮಹಾತ್ಮ ಗಾಂಧಿ ಪ್ರಾರಂಭಿಸಿದರು. ಇವರು ಐತಿಹಾಸಿಕ ದಂಡಿ ಮಾರ್ಚ್ ಅನ್ನು ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಆಶ್ರಮದಿಂದ ಉಪ್ಪು ತಯಾರಿಸುವ ಕರಾವಳಿ ತೀರದ ದಂಡಿ ಗ್ರಾಮದವರೆಗೂ ಮುನ್ನಡೆಸಿದರು. ಈ ದಂಡಿ ತಲುಪಲು ಅವನರಿಗೆ 24 ದಿನಗಳು ಬೇಕಾಯಿತು. ಕೇವಲ ೭೮ ಸ್ವಯಂ ಸೇವಕರೊಂದಿಗೆ ಆರಂಭವಾದ ಈ ಚಳುವಳಿಯಲ್ಲಿ ದಾರಿಯುದ್ದಕ್ಕೂ ಸಾವಿರಾರು ಜನರು ಸೇರಿಕೊಂಡರು. ಉಪ್ಪಿನ ಕಾನೂನುಗಳ ವಿರುದ್ಧ ಕಾನೂನು ಅಸಹಕಾರ ಚಳವಳಿಯಲ್ಲಿ ಈ ಚಳುವಳಿ ಮಹತ್ವದ ಪಾತ್ರ ವಹಿಸಿದೆ.

ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಕೋಲಾಹಲವನ್ನು ಸೃಷ್ಟಿಸಿದ ಈ ಐತಿಹಾಸಿಕ ಚಳವಳಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.

75 Years Of Dandi March: Things That You Must Know About This Historic Movement In Kannada

1. ದಂಡಿ ಮಾರ್ಚ್ ಮಾರ್ಚ್ 12 ರಂದು ಪ್ರಾರಂಭವಾಯಿತು ಮತ್ತು ಏಪ್ರಿಲ್ 6, 1930 ರಂದು ಅಂದ್ರೆ 24 ದಿನಗಳ ನಂತರ ಕೊನೆಗೊಂಡಿತು. ಇದು 4 ಜಿಲ್ಲೆಗಳು ಮತ್ತು 48 ಗ್ರಾಮಗಳ ಮೂಲಕ ಗಾಂಧೀಜಿಯವರ ಸಬರಮತಿ ಆಶ್ರಮದಿಂದ ದಂಡಿಗೆ ಹಾದುಹೋಯಿತು.

2. ಬ್ರಿಟಿಷ್ ಆಡಳಿತವು ಪರಿಚಯಿಸಿದ ಉಪ್ಪಿನ ಕಾನೂನನ್ನು ವಿರೋಧಿಸುವ ಸಲುವಾಗಿ ಮಹಾತ್ಮ ಗಾಂಧಿಯವರು ಈ ಮೆರವಣಿಗೆಯನ್ನು ನಡೆಸಿದರು. ಈ ಕಾನೂನಿನ ಪ್ರಕಾರ, ಭಾರತೀಯರಿಗೆ ಉಪ್ಪು ಉತ್ಪಾದನೆ ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಬ್ರಿಟಿಷರು ಉಪ್ಪಿನ ತಯಾರಿಕೆಯ ಮೇಲೆ ಏಕಸ್ವಾಮ್ಯವನ್ನು ಚಲಾಯಿಸುವುದಲ್ಲದೆ, ಭಾರಿ ಉಪ್ಪು ತೆರಿಗೆಯನ್ನೂ ವಿಧಿಸಿದ್ದರು. ಆದರೆ, ಗಾಂಧೀಜಿ ದಂಡಿ ಸಮುದ್ರ ತೀರದಲ್ಲಿ ಉಪ್ಪನ್ನು ಉತ್ಪಾದಿಸುವ ಮೂಲಕ ಈ ಕಾನೂನನ್ನು ಮುರಿದರು.

3. ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿಕೊಂಡರು ಮತ್ತು ವ್ಯಾಪಕವಾದ ಮಾಧ್ಯಮ ಪ್ರಸಾರದ ಮೂಲಕ ಭಾರತೀಯ ಸ್ವಾತಂತ್ರ್ಯ ಚಳವಳಿಯತ್ತ ವಿಶ್ವದ ಗಮನ ಸೆಳೆದರು.

4. ಮೇ 4, 1930 ರಂದು ಮಧ್ಯರಾತ್ರಿಯಲ್ಲಿ ಅಕ್ರಮವಾಗಿ ಉಪ್ಪು ಉತ್ಪಾದಿಸಿದ್ದಕ್ಕಾಗಿ ಗಾಂಧೀಜಿ ಅವರನ್ನು ಬಂಧಿಸಲಾಯಿತು.

5. ಉಪ್ಪು ತೆರಿಗೆ ವಿರುದ್ಧದ ಆಂದೋಲನವನ್ನು ಸುಮಾರು ಒಂದು ವರ್ಷ ಮುಂದುವರೆಸಲಾಯಿತು ಮತ್ತು ಸುಮಾರು 60,000 ಭಾರತೀಯರನ್ನು ಜೈಲಿಗೆ ಹಾಕಲಾಯಿತು.

6. ಉಪ್ಪು ಸತ್ಯಾಗ್ರಹವು ಬ್ರಿಟಿಷರ ಬಟ್ಟೆ ಮತ್ತು ಸರಕುಗಳನ್ನು ಬಹಿಷ್ಕರಿಸಲು ಕಾರಣವಾಯಿತು.

7. ಭಾರತೀಯರು ಭೂ ಆದಾಯ, ಚೌಕಿದಾರ್ ತೆರಿಗೆ ಮತ್ತು ಇತರವುಗಳನ್ನು ಒಳಗೊಂಡಂತೆ ಇತರ ಕಾನೂನುಗಳನ್ನು ವಿರೋಧಿಸಲು ಪ್ರಾರಂಭಿಸಿದರು.

8. 1920-22ರ ಅಸಹಕಾರ ಚಳವಳಿಯ ನಂತರ ಬ್ರಿಟಿಷರಿಗೆ ಸವಾಲು ಮಾಡುವಲ್ಲಿ ಈ ಮೆರವಣಿಗೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಇದು ಜನವರಿ 26, 1930 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ ಘೋಷಣೆಯನ್ನು ನೇರವಾಗಿ ಅನುಸರಿಸಿತು.

English summary

75 Years Of Dandi March: Things That You Must Know About This Historic Movement In Kannada

Here we told about 75 Years of Dandi March: Things that you must know about this historic movement in kannada, read on
X
Desktop Bottom Promotion