For Quick Alerts
ALLOW NOTIFICATIONS  
For Daily Alerts

ಶಿವಪೂಜೆಯಲ್ಲಿ ಈ 7 ಎಲೆಗಳನ್ನು ಅರ್ಪಿಸಿದರೆ ಇಷ್ಟಾರ್ಥ ನೆರವೇರುವುದು

|

ಮುಕ್ಕಣ್ಣ ಶಿವ ನಂಬಿದ ಭಕ್ತರನ್ನು ಸದಾ ಪೊರೆಯುತ್ತಾನೆ, ನಂಬಿ ಬಂದವರನ್ನು ಆತ ಎಮದಿಗೂ ಕೈ ಬಿಡಲ್ಲ ಎಂಬುವುದು ಆತನ ಭಕ್ತರ ಅಚಲ ನಂಬಿಕೆ. ಆತನನ್ನು ಭಕ್ತಿಯಿಂದ ಪೂಜಿಸಿದರೆ ನೋವು, ಕಷ್ಟ, ಬಡತನ ಎಲ್ಲವೂ ನೀಗಿ ಬದುಕಿನಲ್ಲಿ ಸಂತೋಷ, ನೆಮ್ಮದಿ ನೆಲೆಸುವುದು.

Maha Shivaratri

ಶಿವನು ಆಡಂಬರದ ಪೂಜೆಗಿಂತ ಭಕ್ತಿಗೆ ಒಲಿಯುತ್ತಾನೆ. ಶಿವ ತನ್ನ ಭಕ್ತಿಗೆ ಹೇಗೆ ಒಲಿಯುತ್ತಾನೆ ಎಂದು ಹೇಳುವ ಅನೇಕ ಕತೆಗಳಿವೆ. ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯವಾಗಿ ಮಾಂಸವನ್ನು ಅರ್ಪಿಸಿರುವ ಕತೆಗಳನ್ನು ಕೇಳಿದ್ದೇವೆ, ಶಿವನಿಗೆ ಭಕ್ತಿಯಿಂದ ಪೂಜೆ ಮಾಡಿದರೆ ಅವನ ಕೃಪೆಗೆ ಪಾತ್ರರಾಗಬಹುದು. ಶಿವ ಪೂಜೆ ಮಾಡುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸಲಾಗುವುದು. ಶಿವನಿಗೆ ಹುಗಳ ಜೊತೆಗೆ ಕೆಲವೊಂದು ಎಲೆಗಳನ್ನು ಅರ್ಪಿಸಲಾಗುವುದು. ಅದರಲ್ಲೂ ಬಿಲ್ವ ಪತ್ರೆ ಎಲೆಗಳೆಂದರೆ ಶಿವನಿಗೆ ಪ್ರಾಣ, ಹಾಗಂತ ತುಳಸಿ ಎಲೆಯನ್ನು ಶಿವ ಪೂಜೆಯಲ್ಲಿ ಬಳಸುವುದಿಲ್ಲ.

ಇಲ್ಲಿ ನಾವು ಶಿವಪೂಜೆಗೆ ಯಾವ ಬಗೆಯ ಎಲೆಗಳನ್ನುಅರ್ಪಿಸಿದರೆ ಶಿವ ತೃಪ್ತಿ ಪಡುತ್ತಾನೆ ಎಂದು ಹೇಳಿದ್ದೇವೆ ನೋಡಿ:

ಬಿಲ್ವ ಪತ್ರೆ

ಬಿಲ್ವ ಪತ್ರೆ

ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾದ ಎಲೆಯೆಂದು ಪರಿಗಣಿಸಲ್ಪಟ್ಟಿದೆ. ಶಿವನಿಗೆ ಒಂದು ಬಿಲ್ವಪತ್ರೆಯನ್ನು ಅರ್ಪಿಸಿ ನಾವು ಏನು ಕೇಳುತ್ತೇವೆಯೋ, ಅದನ್ನು ನೆರವೇರಿಸುತ್ತಾನೆ ಎಂಬ ಮಾತಿದೆ. ಬಿಲ್ವ ಪತ್ರೆಯು ಮೂರು ಎಲೆಗಳನ್ನು ಹೊಂದಿರುವ ಒಂದು ಗೊಂಚಲಿನಂತೆ ಕಾಣಿಸುತ್ತದೆ. ಇದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ ಎಂಬ ಮಾತಿದೆ. ಜೊತೆಗೆ ಇದು ಶಿವನಿಗೆ ಇರುವ ಮೂರು ಕಣ್ಣುಗಳನ್ನು ಸಹ ತೋರಿಸುತ್ತದೆ.

ಆಲದ ಮರದ ಎಲೆ

ಆಲದ ಮರದ ಎಲೆ

ಸ್ಕಂದ ಪುರಾಣದ ಪ್ರಕಾರ ಬ್ರಹ್ಮ, ವಿಷ್ಣು, ಶಿವ ಈ ಮರದಲ್ಲಿ ಬೇರು, ಕಾಂಡ, ಎಲೆಯ ರೂಪದಲ್ಲಿ ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸುವಾಗ ಆಲದ ಮರದ ಎಲೆಯನ್ನು ಅರ್ಪಿಸಿ ಶಿವ ಪೂಜೆ ಮಾಡಿ ಶಿವನನ್ನು ಒಲಿಸಿಕೊಳ್ಳಬಹುದು. ಶನಿದೋಷ ಮುಂತಾದ ದೋಷ ನಿವಾರಣೆಗೆ ಆಲದ ಮರದ ಎಲೆಯನ್ನು ಅರ್ಪಿಸಿ ಶಿವನನ್ನು ಬೇಡಿದರೆ ಕಷ್ಟ ಪರಿಹಾರವಾಗುವುದು.

ಅಶ್ವಥ ಮರದ ಎಲೆ

ಅಶ್ವಥ ಮರದ ಎಲೆ

ಅಶ್ವಥ ಮರದ ಅಮರತ್ವದ ಸಂಕೇತ. ಮದುವೆ, ಸಂತಾನಕ್ಕಾಗಿ ಶಿವನಲ್ಲಿ ಕೇಳಿಕೊಳ್ಳುವ ಭಕ್ತರು ಶಿವಲಿಂಗಕ್ಕೆ ಅಶ್ವಥ ಮರದ ಎಲೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ.ಶಿವ ಅಶ್ವಥ ಮರದಲ್ಲಿ ನೆಲೆಸಿರುತ್ತಾನೆ. ಇಡೀ ಜಗತ್ತನ್ನು ಆಳುವ ಶಕ್ತಿ ಆತ, ಆತನನ್ನು ಒಲಿಸಿಕೊಳ್ಳಲು ಅಶ್ವಥ ಮರದ ಎಲೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುವುದರಿಂದ ದೀರ್ಘಾಯುಸ್ಸು ದೊರೆಯುವುದು ಹಾಗೂ ಕಷ್ಟಗಳು ಪರಿಹಾರವಾಗುವುದು.

ಅಶೋಕ ಮರ

ಅಶೋಕ ಮರ

ಹಿಂದೂ ಧರ್ಮದಲ್ಲಿ ಅಶೋಕ ಮರಕ್ಕೆ ಮಹತ್ವದ ಸ್ಥಾನವಿದೆ. ಇದನ್ನು ಪೂಜೆಗಳಲ್ಲಿ ಬಳಸಲಾಗುವುದು. ಅಶೋಕ ಮರದ ಎಲೆಗಳಿಗೆ ಧನಾತ್ಮಕ ಶಕ್ತಿಗಳನ್ನು ಆಕರ್ಷಿಸುವ ಶಕ್ತಿ ಇದೆ. ಶಿವನಿಗೆ ಅಶೋಕ ಮರದ ಎಲೆಗಳನ್ನು ಅರ್ಪಿಸಿ ಪೂಜೆ ಮಾಡುವುದರಿಂದ ಸಂತಾನ ಬಾಗ್ಯ ದೊರೆಯುವುದು, ಪ್ರಸಿದ್ಧಿ ದೊರೆಯುವುದು ಎಂಬ ನಂಬಿಕೆ ಶಿವ ಭಕ್ತರಲ್ಲಿದೆ.

ಮಾವಿನ ಮರದ ಎಲೆ

ಮಾವಿನ ಮರದ ಎಲೆ

ಮನೆಯ ಮುಂದೆ ಶುಭ ಸಮಾರಂಭಗಳಿಗೆ ಮಾವಿನ ಎಲೆಯ ತೋರಣ ಕಟ್ಟಲಾಗುವುದು. ಮಾವಿನ ಎಲೆ ಸಮೃದ್ಧಿಯ ಸಂಕೇತವಾಗಿದೆ. ಹಿಂದೂಗಳ ಪವಿತ್ರ ಗ್ರಂಥವಾದ ರಾಮಾಯಣ, ಮಹಾಭಾರತದಲ್ಲಿ ಮಾವಿನ ಎಲೆಯ ಮಹತ್ವದ ಬಗ್ಗೆ ಹೇಳಲಾಗಿದೆ. ಶಿವನಿಗೆ ಮಾವಿನ ಎಲೆಯನ್ನು ಅರ್ಪಿಸಿ ಪೂಜೆ ಮಾಡಿದರೆ ಸಮೃದ್ಧಿ ದೊರೆಯುವುದು.

ಎಕ್ಕ ಗಿಡದ ಎಲೆ

ಎಕ್ಕ ಗಿಡದ ಎಲೆ

ಎಕ್ಕ ಗಿಡದ ಎಲೆ ಮತ್ತು ಹೂವನ್ನು ಶಿವನಿಗೆ ಅರ್ಪಿಸಲಾಗುವುದು. ಎಕ್ಕದ ಹೂ ಶಿವನ ಪುತ್ರ ಶಿವನಿಗೆ ತುಂಬಾ ಪ್ರಿಯವಾದದ್ದು. ಮಾನಸಿಕ ಸಮಸ್ಯೆ, ಅತಿಯಾದ ಮಾನಸಿಕ ಒತ್ತಡ ಇವುಗಳಿಂದ ಹೊರಬರಲು ಶಿವನಿಗೆ ಎಕ್ಕ ಗಎಲೆ ಅರ್ಪಿಸಿ ಪೂಜೆ ಸಲ್ಲಿಸಿದರೆ ಒಳ್ಳೆಯದು.

ದಾಳಿಂಬೆ ಎಲೆ

ದಾಳಿಂಬೆ ಎಲೆ

ದಾಳಿಂಬೆ ಗಿಡದ ಎಲೆಯನ್ನು ಶಿವನಿಗೆ ಅರ್ಪಿಸಿ ಪೂಜೆ ಮಾಡಲಾಗುವುದು. ಎಲ್ಲಾ ನೋವು, ಸಂಕಟಗಳನ್ನು ಹೋಗಲಾಡಿಸಿ ಬಾಳಿನಲ್ಲಿ ಖುಷಿ, ನೆಮ್ಮದಿ ಕೊಡು ಎಂದು ಕೇಳಿ ಭಕ್ತರು ದಾಳಿಂಬೆ ಎಲೆಯನ್ನು ಶಿವನಿಗೆ ಅರ್ಪಿಸುತ್ತಾರೆ.

English summary

7 Types Of Leaves Offered To Lord Shiva

To seek blessing these 6 types of leaves offered to Lord Shiva.
Story first published: Monday, February 17, 2020, 16:39 [IST]
X
Desktop Bottom Promotion