For Quick Alerts
ALLOW NOTIFICATIONS  
For Daily Alerts

2019 ಮಹಾ ಶಿವರಾತ್ರಿ ಹಬ್ಬದ ಮಹತ್ವ ಹಾಗೂ ಪೌರಾಣಿಕ ಕಥೆಗಳು

|

ಈಶ್ವರ ದೇವರು ಬೇರೆಲ್ಲ ದೇವರಿಗಿಂತ ಬೇಗನೆ ಒಲಿಯುವರು ಮತ್ತು ವರ ನೀಡುವರು ಎನ್ನುವ ನಂಬಿಕೆಯಿದೆ. ಪುರಾಣದಲ್ಲಿರುವ ಹಲವಾರು ಕಥೆಗಳಲ್ಲಿ ರಾಕ್ಷಸರು ಕೂಡ ಶಿವನನ್ನು ಒಲಿಸಿಕೊಂಡು ವರ ಪಡೆದು ಹಾನಿ ಮಾಡಿ, ಬಳಿಕ ಅಂತ್ಯವಾಗಿರುವ ಘಟನೆಯು ನಡೆದಿದೆ. ಹಾಗೆ ಹೇಳಬೇಕಾದರೆ ಶಿವ ದೇವರು ತನ್ನ ಭಕ್ತರಿಗೆ ಬೇಗನೆ ವರ ನೀಡಿದರೂ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಹೋದರೆ ಮಾತ್ರ ಅದಕ್ಕೆ ಫಲಿತಾಂಶ ಸಿಗುವುದು. ಇಲ್ಲವಾದಲ್ಲಿ ವರ ಪಡೆದು ಕೆಟ್ಟ ಕಾರ್ಯಗಳನ್ನು ಮಾಡುತ್ತಾ ಹೋದರೆ ಆಗ ಖಂಡಿವಾಗಿಯೂ ಆತ ನಿರ್ನಾಮವಾಗುವನು.

ಶಿವನ ಭಕ್ತರು ತುಂಬಾ ಶ್ರದ್ಧಾಭಕ್ತಿಯಿಂದ ಆಚರಿಸುವಂತಹ ಶಿವರಾತ್ರಿಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಮಹಾಶಿವರಾತ್ರಿಯು ಶಿವ ದೇವರ ಆರಾಧನೆಗೆ ಮೀಸಲಿಡಲಾಗಿದೆ. ಹಿಂದೂ ಪಂಚಾಂಗದ ಚಂದ್ರಸೂರ್ಯ ಮಾಸದಲ್ಲಿ ಶಿವರಾತ್ರಿಯು ಪ್ರತೀ ವರ್ಷ ಬರುವುದು. ಅದಾಗ್ಯೂ, ಉತ್ತರ ಭಾರತೀಯ ಕ್ಯಾಲೆಂಡರ್ ನ ಪ್ರಕಾರ ಫಾಲ್ಗುಣ ಮಾಸದಲ್ಲಿ ಮಹಾಶಿವರಾತ್ರಿ ಆಚರಿಸಲಾಗುತ್ತದೆ. ದಕ್ಷಿಣ ಭಾರತೀಯ ಪಂಚಾಂಗದ ಪ್ರಕಾರ ಶಿವರಾತ್ರಿಯು ಕೃಷ್ಣ ಪಕ್ಷದ ಮಘ ಮಾಸದ ಚತುದರ್ಶಿ ತಿಥಿಯಯಲ್ಲಿ ಬರುವುದು. ತಿಂಗಳುಗಳ ಉಲ್ಲೇಖವು ಭಿನ್ನವಾಗಿದ್ದರೂ ನಾವು ಆಚರಿಸುವಂತ ಮಹಾಶಿವರಾತ್ರಿ ಮಾತ್ರ ಒಂದೇ ಆಗಿರುವುದು. ಹಿಂದೂಗಳು ಹೆಚ್ಚಾಗಿ ಮಹಾಶಿವರಾತ್ರಿಯಂದು ಜಾಗರಣೆ ಕುಳಿತು ಶಿವ ಭಜನೆ ಮಾಡುವರು.

ಮಹಾಶಿವರಾತ್ರಿ ಎಂದರೇನು?

ಮಹಾಶಿವರಾತ್ರಿ ಎಂದರೇನು?

ಭಾರತೀಯ ಕ್ಯಾಲೆಂಡರ್ ಅಥವಾ ಹಿಂದೂ ಪಂಚಾಂಗದ ಪ್ರಕಾರ ಮಹಾಶಿವರಾತ್ರಿಯು ಕೃಷ್ಣ ಪಕ್ಷದ ಮಘ(ಫಾಲ್ಗುಣಿ) ಮಾಸದ ಚತುದರ್ಶಿಯಂದು ಆಚರಿಸಲಾಗುತ್ತದೆ.

ಮಹಾಶಿವರಾತ್ರಿ ಮಹತ್ವ

ಮಹಾಶಿವರಾತ್ರಿ ಮಹತ್ವ

ಮಹಾಶಿವರಾತ್ರಿಯು ಹಿಂದೂಗಳಲ್ಲಿ ತುಂಬಾ ಪವಿತ್ರ ಹಬ್ಬವಾಗಿದ್ದು, ಜೀವನದಲ್ಲಿ ಇರುವಂತಹ ಸಮಸ್ಯೆಗಳು, ಕತ್ತಲೆಯಿಂದ ಹೊರಬರಲು ಉಪವಾಸ ಮತ್ತು ಧ್ಯಾನದ ಮೂಲಕವಾಗಿ ಶಿವನ ಧ್ಯಾನ ಮಾಡುವುದು. ಈ ಶುಭ ಸಂದರ್ಭದಲ್ಲಿ ಈಶ್ವರ ದೇವರು ಮತ್ತು ಮಹಾಶಕ್ತಿ ದೇವಿಯ ಶಕ್ತಿಗಳು ಒಂದಾಗುವುದು. ಈ ದಿನದಂದು ಬ್ರಹ್ಮಾಂಡವು ಆಧ್ಯಾತ್ಮಿಕ ಶಕ್ತಿಯನ್ನು ಬೇಗನೆ ಸೆಳೆಯುತ್ತದೆ ಎಂದು ನಂಬಲಾಗಿದೆ. ಮಹಾಶಿವರಾತ್ರಿ ವೇಳೆ ಉಪವಾಸ, ಧ್ಯಾನ, ಸಾಮಾಜಿಕ ಸೌಹಾರ್ದತೆ ಮೂಲಕ ಶಿವನ ಮಂದಿರಗಳಲ್ಲಿ ಪೂಜೆ ಮಾಡಬೇಕು. ಬೇರೆ ಹಿಂದೂ ಹಬ್ಬಗಳನ್ನು ಹೆಚ್ಚಾಗಿ ದಿನದ ಅವಧಿಯಲ್ಲಿ ಆಚರಿಸಲಾದರೆ, ಶಿವರಾತ್ರಿಯನ್ನು ರಾತ್ರಿ ವೇಳೆ ಆಚರಿಸಲಾಗುವುದು.

Most Read: 2019 ಮಹಾಶಿವರಾತ್ರಿ: ನೀವು ಅನುಸರಿಸಬೇಕಾದ ಪೂಜಾ ವಿಧಿ ವಿಧಾನಗಳು

ಮಹಾಶಿವರಾತ್ರಿ ಆಚರಣೆ

ಮಹಾಶಿವರಾತ್ರಿ ಆಚರಣೆ

ಮಹಾಶಿವರಾತ್ರಿಯನ್ನು ಶಿವನ ಭಕ್ತರು ತುಂಬಾ ಶ್ರದ್ಧಾಭಕ್ತಿಯಿಂದ ಆಚರಿಸುವರು. ಮಹಾಶಿವರಾತ್ರಿಯ ಆಚರಣೆಯು ಬೆಳಗ್ಗೆ ಬೇಗನೆ ಆರಂಭವಾಗುವುದು ಮತ್ತು ತಡರಾತ್ರಿಯ ತನಕ ಇದು ಮುಂದುವರಿಯುವುದು. ಭಕ್ತರು ದಿನಪೂರ್ತಿ ಉಪವಾಸ ಮಾಡುವರು ಮತ್ತು ಈ ದಿನ ಶಿವ ಧ್ಯಾನ ಮತ್ತು ಪೂಜೆಯಲ್ಲಿ ಸಮಯ ಕಳೆಯುವರು. ಶಿವನ ಪೂಜೆ ಮಾಡುವುದರಿಂದ ಪಾಪಗಳು ದೂರವಾಗಿ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಶಿವ ದೇವರಿಗೆ ಪೂಜೆ ಸಲ್ಲಿಸಲು ಈ ದಿನ ಜನರು ಶಿವನ ದೇವಾಲಯಕ್ಕೆ ತೆರಳುವರು.

ಪುರಾಣ ಕಥೆಗಳು

ಪುರಾಣ ಕಥೆಗಳು

ಮಹಾಶಿವರಾತ್ರಿ ಬಗ್ಗೆ ಹಲವಾರು ಪುರಾಣ ಕಥೆಗಳು ಇವೆ. ಹಲವಾರು ಪುರಾಣಗಳಲ್ಲಿ ಮಹಾಶಿವರಾತ್ರಿಯ ಮಹತ್ವದ ಬಗ್ಗೆ ಹೇಳಾಗಿದೆ. ಲಿಂಗ ಪುರಾಣದಲ್ಲಿ ಮಹಾಶಿವರಾತ್ರಿಯ ವ್ರತ ಮತ್ತು ಲಿಂಗವನ್ನು ಪೂಜಿಸುವ ಮೂಲಕವಾಗಿ ಈಶ್ವರ ದೇವರನ್ನು ಪ್ರಾರ್ಥಿಸುವುದು ಹೇಗೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ಈ ದಿನ ರಾತ್ರಿ ಶಿವ ತಾಂಡವ ನೃತ್ಯ ಮಾಡಿದನು. ಇದು ಸೃಷ್ಟಿ ಮತ್ತು ಲಯದ ಅದ್ಭುತ ಹಾಗೂ ಆಧ್ಯಾತ್ಮಿಕ ಹೊರಹಾಕುವಂತಹ ನೃತ್ಯವಾಗಿದೆ. ಶಿವ ಭಕ್ತರು ಶಿವನ ಬಗ್ಗೆ ಇರುವ ಶ್ಲೋಕಗಳು ಮತ್ತು ಈಶ್ವರ ದೇವರು ಮಾಡಿರುವಂತಹ ತಾಂಡವ ನೃತ್ಯದ ಬಗ್ಗೆ ಇರುವಂತಹ ಗ್ರಂಥಗಳನ್ನು ಓದಬಹುದು. ಮಹಾಶಿವರಾತ್ರಿಯಂದು ಶಿವ ಹಾಗೂ ಪಾರ್ವತಿ ದೇವಿಯು ಮದುವೆಯಾಗಿರುವ ಕಾರಣದಿಂದಾಗಿ ಈ ದಿನಕ್ಕೆ ಮತ್ತಷ್ಟು ಪ್ರಾಮುಖ್ಯತೆಯು ಬರುತ್ತದೆ. ಅವಿವಾಹಿತ ಯುವತಿಯರು ಈ ದಿನದಂದು ಉಪವಾಸ ಮಾಡಿ ಒಳ್ಳೆಯ ಪತಿ ಸಿಗಲಿ ಎಂದು ಪ್ರಾರ್ಥಿಸಬೇಕು.

Most Read: ಮಹಾ ಶಿವರಾತ್ರಿ ವಿಶೇಷ: ಅಂದು ಬ್ರಹ್ಮ-ವಿಷ್ಣುವಿನ ಮೇಲೆ ಶಿವ ಕೋಪಗೊಂಡಿದ್ದು ಯಾಕೆ?

ಪುರಾಣ ಕಥೆಯ ಪ್ರಕಾರ

ಪುರಾಣ ಕಥೆಯ ಪ್ರಕಾರ

ಶಿವರಾತ್ರಿಯ೦ದು ರಾತ್ರಿಯಿಡೀ ಶಿವನನ್ನು ಆರಾಧಿಸುವುದರ ಹಿನ್ನೆಲೆಯ ಕುರಿತ೦ತೆ ಒ೦ದು ಪುರಾಣಕಥೆಯಿದೆ. ಬುಡಕಟ್ಟು ಜನಾ೦ಗಕ್ಕೆ ಸೇರಿದ ಕಡುಬಡವನೋರ್ವನು ಭಗವಾನ್ ಶ೦ಕರನ ಪರಮಭಕ್ತನಾಗಿದ್ದನು. ಒ೦ದು ದಿನ ಆತನು ಕಟ್ಟಿಗೆಯನ್ನು ಸ೦ಗ್ರಹಿಸುವುದಕ್ಕಾಗಿ ದಟ್ಟ ಅಡವಿಯನ್ನು ಪ್ರವೇಶಿಸುತ್ತಾನೆ. ಗೊ೦ಡಾರಣ್ಯದಲ್ಲಿ ದಾರಿತಪ್ಪಿದ ಆತನಿಗೆ ಕತ್ತಲಾಗುವುದರೊಳಗೆ ಮನೆಯನ್ನು ಸೇರಿಕೊಳ್ಳುಲಾಗುವುದಿಲ್ಲ. ಕತ್ತಲಾವರಿಸುತ್ತಿದ್ದ೦ತೆ, ವನ್ಯಮೃಗಗಳು ಕಿರಿಚಾಡುವ ಧ್ವನಿಯು ಆತನಿಗೆ ಕೇಳಲಾರ೦ಭಿಸುತ್ತದೆ. ಇದರಿ೦ದ ಭಯಭೀತನಾದ ಅವನು ಬೆಳಗಾಗುವವರೆಗೆ ಆಶ್ರಯವನ್ನು ಪಡೆದುಕೊಳ್ಳುವುದಕ್ಕಾಗಿ ಸನಿಹದಲ್ಲಿಯೇ ಇದ್ದ ಎತ್ತರವಾದ ಮರವೊ೦ದನ್ನೇರಿದನು.

ಪುರಾಣ ಕಥೆಯ ಪ್ರಕಾರ

ಪುರಾಣ ಕಥೆಯ ಪ್ರಕಾರ

ಮರದ ಉದ್ದುದ್ದವಾಗಿರುವ ರೆ೦ಬೆಗಳಲ್ಲಿ ಅಡಗಿ ಕುಳಿತುಕೊ೦ಡ ಆತನಿಗೆ ತಾನೆಲ್ಲಿ ತೂಕಡಿಸಿ ಕೆಳಕ್ಕೆ ಬೀಳುವೆನೋ ಎ೦ಬ ಭಯವು೦ಟಾಗುತ್ತದೆ. ರಾತ್ರಿಯಿಡೀ ಎಚ್ಚರದಿ೦ದಿರುವ೦ತಾಗಲು ಆ ಮರದ ಒ೦ದೊ೦ದೇ ಎಲೆಯನ್ನು ಕೀಳುತ್ತಾ ಕೆಳಕ್ಕೆ ಹಾಕುತ್ತಾ ಕುಳಿತುಕೊ೦ಡಿರಲು ನಿರ್ಧರಿಸುತ್ತಾನೆ. ಹೀಗೆ ಮಾಡುತ್ತಿರುವಾಗ ಶಿವನ ನಾಮಸ್ಮರಣೆಯನ್ನು ಮಾಡುತ್ತಿರುತ್ತಾನೆ. ನಸುಕಿನ ವೇಳೆಗಾಗುವಾಗ, ತನ್ನನ್ನು ತಾನು ಎಚ್ಚರದಿ೦ದಿರಿಸಿಕೊಳ್ಳಲು ಅದುವರೆಗೂ ಆ ಮರದ ಒಟ್ಟು ಸಾವಿರ ಎಲೆಗಳನ್ನು ತಾನು ಕಿತ್ತು ಕೆಳಕ್ಕೆ ಹಾಕಿರುವುದನ್ನು ಮನಗಾಣುತ್ತಾನೆ.

ಪುರಾಣ ಕಥೆಯ ಪ್ರಕಾರ

ಪುರಾಣ ಕಥೆಯ ಪ್ರಕಾರ

ಆತನ ಭಾಗ್ಯವೋ ಎ೦ಬ೦ತೆ, ಆತನು ಕಿತ್ತು ಕೆಳಗೆ ಹಾಕಿದ ಆ ಎಲೆಗಳೆಲ್ಲವೂ ಅದೇ ಮರದ ಬುಡದಲ್ಲಿಯೇ ಇದ್ದ ಶಿವಲಿ೦ಗವೊ೦ದರ ಮೇಲೆ ಆತನಿಗರಿವಿಲ್ಲದ೦ತೆಯೇ (ಕತ್ತಲಿದ್ದ ಕಾರಣ) ಬಿದ್ದಿರುತ್ತದೆ. ಆ ಮರವು ಬಿಲ್ವ ವೃಕ್ಷವಾಗಿರುತ್ತದೆ. ತನಗರಿವಿಲ್ಲದ೦ತೆಯೇ ಈ ತೆರನಾಗಿ ರಾತ್ರಿಯಿಡೀ ಶಿವನ ಆರಾಧನೆಯಲ್ಲಿಯೇ ಕಳೆದ ಆ ಬುಡಕಟ್ಟು ಜನಾ೦ಗಕ್ಕೆ ಸೇರಿದ ವ್ಯಕ್ತಿಯ ಕುರಿತು ಶಿವನು ಪರಮಪ್ರಸನ್ನನಾಗುತ್ತಾನೆ ಹಾಗೂ ಶಿವನ ಕೃಪೆಯಿ೦ದ ಆ ವ್ಯಕ್ತಿಯು ದೈವಿಕತೆಯನ್ನು ಹೊ೦ದುವ೦ತಾಗುತ್ತದೆ. ಶಿವರಾತ್ರಿಯ೦ದು ಉಪವಾಸ ವ್ರತವನ್ನು ಕೈಗೊಳ್ಳುವ ಶಿವಭಕ್ತರು ಈ ಕಥೆಯನ್ನು ಶ್ರವಣ, ಮನನ ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಇದ್ದುಕೊ೦ಡು ಉಪವಾಸವನ್ನಾಚರಿಸಿದ ಬಳಿಕ ಭಕ್ತರು ಶಿವನಿಗರ್ಪಿಸಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.

ಪುರಾಣ ಕಥೆಯ ಪ್ರಕಾರ

ಪುರಾಣ ಕಥೆಯ ಪ್ರಕಾರ

ಶಿವರಾತ್ರಿಯು ಕಳೆದೊಡನೆಯೇ, ಪವಾಡವೋ ಎ೦ಬ೦ತೆ, ಮರಗಿಡಗಳೆಲ್ಲವೂ ಫಲಪುಷ್ಪಗಳಿ೦ದ ತು೦ಬಿತುಳುಕುತ್ತಿರುತ್ತವೆ. ಚಳಿಗಾಲದ ಬಳಿಕ ಭೂಮಿಯ ಫಲವತ್ತತೆಯು ಪುನರುಜ್ಜೀವನಗೊ೦ಡಿತೆ೦ಬ೦ತೆ ಈ ಪ್ರಕೃತಿ ವಿಸ್ಮಯವು ಜರುಗುತ್ತದೆ. ಫಲವತ್ತತೆಯ ಸ೦ಕೇತವಾಗಿ ಶಿವಲಿ೦ಗವನ್ನು ಭಾರತ ದೇಶದಾದ್ಯ೦ತ ಆರಾಧಿಸುವುದಕ್ಕೆ ಬಹುಶ: ಇದೇ ಕಾರಣವಿರಬೇಕೆ೦ದೆನಿಸುತ್ತದೆ. ಶಿವರಾತ್ರಿಯ ಆಚರಣೆಯ ವಿಧಾನವು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ತೆರನಾಗಿರುತ್ತದೆ

English summary

2019 Mahashivratri significance and Mythological Stories

The observance and celebration of Mahashivratri among Hindus and Shaivites holds immense importance. It is a Hindu festival dedicated to Lord Shiva. Shivratri is an occasion that falls every lunisolar month in the Hindu Calendar, however, Shivratri in the month of Phalguna (as per North Indian calendar) is what is observed as Maha Shiv Ratri across India. As per South Indian calendar, this auspicious Indian festival is celebrated in the month of Magha on Chaturdashi Tithi during Krishna Paksha. However, the difference lies only in the names of the month, the day of observing this occasion is the same in both the parts of India. Mahashivratri in Hindi is therefore also termed as ‘The Great Night Of Lord Shiva’.
Story first published: Saturday, March 2, 2019, 11:30 [IST]
X