For Quick Alerts
ALLOW NOTIFICATIONS  
For Daily Alerts

ಶಿವನ ಸಿದ್ಧಿ ಪಡೆಯಲು ಶ್ರಾವಣ ಮಾಸದಲ್ಲಿ ಈ ಮಂತ್ರಗಳನ್ನು ಪಠಿಸಿ

|

ಇದೇ ಬರುವ ಆಗಸ್ಟ್ 9ರಿಂದ ಶ್ರಾವಣ ಮಾಸ ಆರಂಭವಾಗುವುದು. ಶಿವನಿಗೆ ವಿಶೇಷವಾದ ಈ ತಿಂಗಳಲ್ಲಿ, ಶಿವ ಮತ್ತು ಪಾರ್ವತಿ ಭಕ್ತರು ತಮ್ಮ ಆಶೀರ್ವಾದ ಪಡೆಯಲು ದೇವಸ್ಥಾನಗಳಿಗೆ ಆಗಮಿಸುತ್ತಾರೆ. ಶ್ರಾವಣತಿಂಗಳ ಸೋಮವಾರ ಅತ್ಯಂತ ಮಹತ್ವದ್ದಾಗಿದ್ದು, ಈ ಅವಧಿಯಲ್ಲಿ ಭಕ್ತರು, ವ್ರತ ಹಾಗೂ ಪೂಜೆಗಳನ್ನು ಸಲ್ಲಿಸಿ, ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಈ ಸಮಯದಲ್ಲಿ ಕೆಲವೊಂದು ಮಂತ್ರ ಪಠಿಸುವ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು, ಇಷ್ಟಾರ್ಥ ಸಿದ್ದಿಸಿಕೊಳ್ಳಬಹುದು.

ಶ್ರಾವಣ ಸೋಮವಾರದಂದು, ಶಿವನ ಕೃಪೆಗೆ ಪಾತ್ರರಾಗಲು ಪಠಿಸಬೇಕಾದ ಮಂತ್ರಗಳನ್ನು ಈ ಕೆಳಗೆ ನೀಡಲಾಗಿದೆ:

ಶಿವ ಮೂಲ ಮಂತ್ರ:

ಶಿವ ಮೂಲ ಮಂತ್ರ:

ಓಂ ನಮಃ ಶಿವಾಯ

ಅರ್ಥ: ಓ ಪರಮಾತ್ಮನೇ, ನನ್ನ ಆತ್ಮದಲ್ಲಿ ನೆಲೆಸಿರುವ ನಿನಗೆ ತಲೆಬಾಗುತ್ತೇನೆ.

ರುದ್ರ ಗಾಯತ್ರಿ ಮಂತ್ರ:

ರುದ್ರ ಗಾಯತ್ರಿ ಮಂತ್ರ:

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ

ತನ್ನೋ ರುದ್ರಃ ಪ್ರಚೋದಯಾತ್||

ರುದ್ರ ಗಾಯತ್ರಿ ಮಂತ್ರದ ಅರ್ಥ: ದೇವರುಗಳಲ್ಲಿ ಅತ್ಯಂತ ಶಕ್ತಿಶಾಲಿ, ಆದರ್ಶ ಪುರುಷ, ಮಹಾದೇವನನ್ನು ನಾನು ಪ್ರಾರ್ಥಿಸುತ್ತೇನೆ. ಬುದ್ಧಿ ನೀಡಿ ನನ್ನನ್ನು ಆಶೀರ್ವದಿಸು ಮತ್ತು ಜ್ಞಾನದಿಂದ ನನ್ನನ್ನು ಬೆಳಗಿಸು.

ಮಹಾಮೃತ್ಯುಂಜಯ ಮಂತ್ರ:

ಮಹಾಮೃತ್ಯುಂಜಯ ಮಂತ್ರ:

ಓ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಶಿ-ವರ್ಧನಂ ǀ

ಉರ್ವರುಕಂ-ಇವ ಬಂಧನ ಮತ್ಯೋರ್ಮುಕಾಯ ಮಾಮಿತಿತಾ ǁ

ಅರ್ಥ: ನಾವು ನಿನ್ನನ್ನು ಧ್ಯಾನಿಸುತ್ತೇವೆ ಓಹ್ ಶಿವ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನಮಗೆ ಸಹಾಯ ಮಾಡಿ.

ಶಿವ ಧ್ಯಾನ ಮಂತ್ರ:

ಶಿವ ಧ್ಯಾನ ಮಂತ್ರ:

ಕರ್ಚರಂಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವಣ್ಣಯಂಜಂ ವಾ ಮಾಂಸಂ ವಾ ಪರಧಂ |

ವಿಹಿತಂ ವಿಹಿತಂ ವಾ ಸರ್ವ ಮೆಟತ್ ಕ್ಷಮಸ್ವ ಜೈ ಜೈ ಕರುಣಾಬ್ಧೆ ಶ್ರೀ ಮಹಾದೇವ ಶಂಭೋ

ಅರ್ಥ :ಒಬ್ಬ ವ್ಯಕ್ತಿಯು ಎದುರಿಸುವ ಎಲ್ಲಾ ಒತ್ತಡ, ನಿರಾಕರಣೆ, ವೈಫಲ್ಯ, ಖಿನ್ನತೆ ಮತ್ತು ಇತರ ನಕಾರಾತ್ಮಕ ಶಕ್ತಿಗಳಿಂದ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲು ಪರಮಾತ್ಮನಿಗೆ ವಿನಂತಿಸಿಕೊಳ್ಳುತ್ತಿದ್ದೇನೆ,

ರುದ್ರ ಮಂತ್ರ:

ರುದ್ರ ಮಂತ್ರ:

ಓಂ ನಮೋ ಭಗವತೇ ರುದ್ರಾಯ

ಅರ್ಥ : ಶಿವನ ಆಶೀರ್ವಾದ ಪಡೆಯಲು ರುದ್ರ ಮಂತ್ರವನ್ನು ಪಠಿಸಲಾಗುತ್ತದೆ ಮತ್ತು ಒಬ್ಬರ ಆಸೆಗಳನ್ನು ಈಡೇರಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.

English summary

Shiva Mantras to Chant During Shravan Month

Here we talking about Shiva Mantras to chant during Shravan month, read on
X
Desktop Bottom Promotion