For Quick Alerts
ALLOW NOTIFICATIONS  
For Daily Alerts

ಜ. 15ಕ್ಕೆ ಸೇನಾ ದಿನ: ಈ ದಿನದ ಇತಿಹಾಸ ಹಾಗೂ ಮಹತ್ವ

|

ಪ್ರತೀವರ್ಷ ಜನವರಿ 15ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುವುದು. ನಮ್ಮ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶದ ಎಲ್ಲಾ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಈ ದಿನ ಆಚರಿಸಲಾಗುವುದು.

Indian Army Day 2022

ಈ ದಿನದ ಆಚರಣೆಯ ಇತಿಹಾಸವನ್ನು ನೋಡುವುದಾದರೆ:
ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ 1949 ಜನವರಿ 15ರಂದು ಅಧಿಕಾರ ಸ್ವೀಕರಿಸಿದರು. ಅದರ ಗುರುತಾಗಿ ಪ್ರತೀವರ್ಷ ಸೇನಾ ದಿನವನ್ನಾಗಿ ಆಚರಿಸುತ್ತಾ ಬರುತ್ತಿದೆ. ಈ ವರ್ಷ 74ನೇ ಸೇನಾ ದಿನವನ್ಉ ಆಚರಿಸಲಾಗುತ್ತಿದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಕರ್ನಾಟಕದ ಕೊಡಗು ಜಿಲ್ಲೆಯ ವೀರ ಪುತ್ರ ಎಂಬುವುದೇ ನಮ್ಮ ಹೆಮ್ಮೆ.

ಸೇನಾ ದಿನ ಆಚರಣೆ
ಈ ದಿನ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಪಥಸಂಚಲನ, ವೈಮಾನಿಕ ಕಸರತ್ತು, ಯೋಧರಿಂದ ಬೈಕ್‌ ಸ್ಟಂಟ್ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ದೆಹಲಿಯ ಕಂಟೇನ್ಮೆಂಟ್ ಕಾರ್ಯಪ್ಪ ಮೈದಾನದಲ್ಲಿ ಪ್ರಮುಖ ಸೇನಾ ಪರೇಟ್ ನಡೆಸಲಾಗುವುದು. ಈ ದಿನ ವಿಶೇಷ ಸಾಧನೆ ತೋರಿದ ಯೋಧರಿಗೆ ಹಾಗೂ ಹುತಾತ್ಮರಾದ ವೀರ ಸೇನಾನಿಗಳಿಗೆ ಪ್ರಶಸ್ತಿ ಮೂಲಕ ಗೌರವನ್ನು ಸೂಚಿಸಲಾಗುವುದು.

ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಹಿನ್ನೆಲೆ

ಭಾರತಕ್ಕೆ ಸ್ವತಂತ್ರ್ಯ ಸಿಕ್ಕ ಬಳಿಕ ಭಾರತದ ಸೇನಾ ಕಮಾಂಡರ್-ಇನ್-ಚೀಫ್ ಅಧಿಕಾರ ವಹಿಸಿಕೊಂಡವರೇ ಫೀಲ್ಡ್ ಮಾರ್ಷಲ್ ಕೊದಂಡ ಮಾದಪ್ಪ ಕಾರ್ಯಪ್ಪ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಹಾಗೂ ಕೆ ಎಂ ಕಾರ್ಯಪ್ಪ, ಭಾರತೀಯ ಸೇನೆಯ ಪಂಚತಾರಾ ಶ್ರೇಣಿ ಅಧಿಕಾರಿಗಳಾಗಿದ್ದರು. ಭಾರತಕ್ಕೆ ಇವರು ಸಲ್ಲಿಸಿದ ಸೇವೆ ಎಂದೆಂದಿಗೂ ಸ್ಮರಿಸುವಂಥದ್ದು. 1920 ರಿಂದ 1950ರವರೆಗೆ3 ದಶಕಗಳವರೆಗೆ ಭಾರತ ಮಾತೆಯ ಸೇವೆ ಮಾಡಿದ್ದಾರೆ. 1947ರಲ್ಲಿ ಯುನೈಟೆಡ್ ಕಿಂಗಡಮ್‌‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿ ಪಡೆದ, ಮೊದಲ ಭಾರತೀಯ ಕಾರ್ಯಪ್ಪ ಅವರು ಆಗಿದ್ದಾರೆ. ಇವರು ಜನವರಿ 15ರಂದು ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಈ ದಿನವನ್ನು ಭಾರತೀಯರು ಹೆಮ್ಮೆಯಿಂದ ಆಚರಿಸುತ್ತಾರೆ.

ದೇಶವನ್ನು ಕಾಯುವ ವೀರ ಯೋಧರಿಗೆ ನಮ್ಮದೊಂದು ಸಲಾಂ....

Read more about: ಭಾರತ india
English summary

Indian Army Day 2022: Date, History, Quotes and Why January 15 is celebrated as Army Day in India in Kannada

Indian Army Day 2022: Date, History, Quotes and Why January 15 is celebrated as Army Day in India in Kannada
Story first published: Friday, January 14, 2022, 9:00 [IST]
X
Desktop Bottom Promotion