For Quick Alerts
ALLOW NOTIFICATIONS  
For Daily Alerts

ವಾಸ್ತುದೋಷದಿಂದ ಮನೆಯಲ್ಲಿ ಸಮಸ್ಯೆಗಳಾಗುತ್ತಿದ್ದರೆ, ಈ ವಾಸ್ತು ಸಲಹೆಗಳನ್ನು ಪಾಲಿಸಿ

|

ಮನೆ ಅಥವಾ ಯಾವುದೇ ನಿರ್ಮಾಣ ಕಾರ್ಯದಲ್ಲಿ ವಾಸ್ತು ಅತ್ಯಂತ ಮುಖ್ಯವಾಗಿದೆ. ವಾಸ್ತು ಪ್ರಕಾರ ನಿರ್ಮಿಸದ ಮನೆಗಳಲ್ಲಿ,ಹಲವಾರು ದೋಷಗಳ ಹುಟ್ಟಿಕೊಳ್ಳುತ್ತವೆ. ಇದರಿಂದ ಆ ಮನೆಯಲ್ಲಿ ವಾಸವಿರುವವರು ನಾನಾ ಸಮಸ್ಯೆ ಎದುರಿಸಬೇಕಾಗಿದೆ. ಆದರೆ ವಾಸ್ತು ಶಾಸ್ತ್ರದಲ್ಲಿ ಈ ಸಮಸ್ಯೆಗಳಿಗೆ ಪರಿಹಾರವನ್ನೂ ಹೇಳಲಾಗಿದೆ. ಇಂದು ನಾವು ನಿಮ್ಮ ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸುವ ಅಂತಹ ಕೆಲವು ಪರಿಹಾರಗಳನ್ನು ಹೇಳಲಿದ್ದೇವೆ.

ಮನೆಯ ವಾಸ್ತುದೋಷ ನಿವಾರಿಸುವ ಕೆಲವೊಂದು ಪರಿಹಾರ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

1. ಅಡುಗೆಮನೆಗೆ ಬಲ್ಬ್ ಹಾಕಿ:

1. ಅಡುಗೆಮನೆಗೆ ಬಲ್ಬ್ ಹಾಕಿ:

ವಾಸ್ತು ಶಾಸ್ತ್ರದಲ್ಲಿ ಅಡುಗೆ ಅಥವಾ ಅಡುಗೆ ಮನೆಯನ್ನು ಸಂತೋಷ ಮತ್ತು ಸಮೃದ್ಧಿಯ ಮೂಲವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿರಬೇಕು. ಹಾಗಾಗದಿದ್ದರೆ ಮನೆ ಮತ್ತು ಅಡುಗೆ ಮನೆಯ ಅಗ್ನಿ ಮೂಲೆಯಲ್ಲಿ ಬಲ್ಬ್ ಅಳವಡಿಸಬೇಕು. ದಿನಕ್ಕೆ ಒಮ್ಮೆಯಾದರೂ ಈ ಬಲ್ಬ್ ಅನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ಅಡುಗೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ.

2. ಹಾರ್ಸ್‌ಶೂ ಅಥವಾ ಕುದುರೆ ಲಾಳವನ್ನು ಗೇಟ್‌ನಲ್ಲಿಡಿ:

2. ಹಾರ್ಸ್‌ಶೂ ಅಥವಾ ಕುದುರೆ ಲಾಳವನ್ನು ಗೇಟ್‌ನಲ್ಲಿಡಿ:

ಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಾರ್ಸ್‌ಶೂ ಅಥವಾ ಕುದುರೆ ಲಾಳವನ್ನು ನೇತು ಹಾಕುವುದು ಮಂಗಳಕರ ಎಂಬ ನಂಬಿಕೆಯಿದೆ. ಆದ್ದರಿಂದ ಅದನ್ನು ಮನೆಯ ಮುಖ್ಯ ಗೇಟಿನ ಮೇಲೆ ತೂಗು ಹಾಕಬೇಕು. ಹೀಗೆ ಮಾಡುವುದರಿಂದ ಮನೆಯ ಭದ್ರತೆ ಹೆಚ್ಚುತ್ತದೆ. ದುಷ್ಟ ಕಣ್ಣು ಅಥವಾ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ತೆಗೆದುಹಾಕುವುದು. ಆದರೆ, ಹಾರ್ಸ್‌ಶೂ "ಯು" ಆಕಾರದಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ.

3. ಈಶಾನ್ಯದಲ್ಲಿ ಕಲಶವನ್ನು ಇಡಿ:

3. ಈಶಾನ್ಯದಲ್ಲಿ ಕಲಶವನ್ನು ಇಡಿ:

ವಾಸ್ತು ದೋಷಗಳನ್ನು ಹೋಗಲಾಡಿಸಲು ಕಲಶವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಿ. ಕಲಶವನ್ನು ಇಡಲು ಈ ಮೂಲೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕಲಶ ಒಡೆಯಬಾರದು ಎಂಬುದನ್ನು ನೆನಪಿಡಿ. ಹೀಗೆ ಮಾಡುವುದರಿಂದ ಮನೆಯ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ.

4. ಕಸ ಎಸೆಯುವ ದಿಕ್ಕನ್ನು ನೆನಪಿನಲ್ಲಿಡಿ:

4. ಕಸ ಎಸೆಯುವ ದಿಕ್ಕನ್ನು ನೆನಪಿನಲ್ಲಿಡಿ:

ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಕಸವನ್ನು ಇಡಬಾರದು ಎಂಬುದನ್ನು ಮರೆಯಬೇಡಿ, ಜೊತೆಗೆ ಯಾವುದೇ ದೊಡ್ಡ ಯಂತ್ರವನ್ನು ಈ ದಿಕ್ಕಿನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ವಾಸ್ತು ದೋಷಗಳು ಉಂಟಾಗುತ್ತವೆ. ಮನೆಯ ಮುಖ್ಯ ದ್ವಾರ ಅಥವಾ ಕಿಟಕಿಗಳು ಈ ದಿಕ್ಕಿನಲ್ಲಿರುವುದು ಅತ್ಯಂತ ಮಂಗಳಕರ.

5. ಮುಖ್ಯ ದ್ವಾರದ ಬಳಿ ಅಶೋಕ ಮರಗಳಿರಲಿ:

5. ಮುಖ್ಯ ದ್ವಾರದ ಬಳಿ ಅಶೋಕ ಮರಗಳಿರಲಿ:

ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಮನೆಯ ಮುಖ್ಯ ದ್ವಾರದ ಎರಡೂ ಬದಿಯಲ್ಲಿ ಅಶೋಕ ಮರಗಳನ್ನು ಬೆಳೆಯಬೇಕು. ಇದು ನಿಮ್ಮ ಮನೆಯ ವಾಸ್ತು ದೋಷಗಳನ್ನು ನಿವಾರಿಸುತ್ತದೆ ಜೊತೆಗೆ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ.

English summary

Tips to Remove House Vastu Dosha to End the Problems of life in Kannada

Here we talking about Tips to Remove House Vastu Dosha to End the problems of life in Kannada, read on
Story first published: Monday, November 15, 2021, 11:02 [IST]
X