For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕಾಡುವ ಈ ರೋಗಗಳಿಂದ ನಿಮ್ಮ ಮುದ್ದಿನ ಸಾಕು ಪ್ರಾಣಿಗಳನ್ನು ಹೀಗೆ ರಕ್ಷಿಸಿ

|

ಸಾಕು ಪ್ರಾಣಿಗಳ ಪ್ರಿಯರೇ..... ಮಕ್ಕಳನ್ನು ಪ್ರೀತಿಸುವಷ್ಟೇ ನಿಮ್ಮ ಮುದ್ದಿನ ಸಾಕು ಪ್ರಾಣಿಯನ್ನೂ ಪ್ರೀತಿಸುತ್ತೀರಾ ಎಂದ ಮೇಲೆ ಅವುಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾದರೂ ನಿಮ್ಮ ಮನಸ್ಸು ಬೇಸರಗೊಳ್ಳದೆ ಇರುವುದಿಲ್ಲ. ಹೀಗಿರುವಾಗ, ಅವುಗಳಿಗಾಗಿ ಸ್ವಲ್ಪ ಹೆಚ್ಚಿನ ಜಾಗರೂಕತೆಯನ್ನು ವಹಿಸಿದಲ್ಲಿ ನಿಮ್ಮ ಮುದ್ದಿನ ಮರಿಯು ಅನುಭವಿಸಬೇಕಾದ ತೊಂದರೆಯನ್ನು ನೀವು ನೋಡಬೇಕಾದ ಪ್ರಮೇಯ ಎದುರಾಗುವುದಿಲ್ಲ. ಅದರಲ್ಲೂ ದಿನ ದಿನಕ್ಕೆ ಹೆಚ್ಚಾಗುತ್ತಿರುವ,ಮೈ ಕೊರೆಯುವ ಈ ಥಂಡಿಗೆ ಉಂಟಾಗಬಹುದಾದ ರೋಗಗಳನ್ನು ತಡೆಗಟ್ಟುವ ಮೂಲಕ,ಮೂಕ ಪ್ರಾಣಿಯ ವೇದನೆಯನ್ನೂ ತಡೆಗಟ್ಟಬಹುದು.

ಮನುಷ್ಯರಂತೆ ಸಾಕು ಪ್ರಾಣಿಗಳೂ ಕೂಡ ಅತಿಯಾದ ಚಳಿಗೆ ಅಥವಾ ಅತಿಯಾದ ಚಳಿಯ ತಾಪಮಾನಗಳಿಗೆ ಮೈ ಒಡ್ದುವುದು ಸೂಕ್ತವಲ್ಲ. ಚಳಿಗೆ ಬೆಚ್ಚನೆಯ ಬಟ್ಟೆಯ ನಿಮಗೆ ಹೇಗೆ ಅವಶ್ಯಕವೊ, ಹಾಗೆಯೇ ಅವುಗಳಿಗೂ ಅತ್ಯಾವಶ್ಯಕ. ಅವುಗಳ ಹಾಸಿಗೆಯನ್ನು ಇನ್ನಿಷ್ಟು ಬೆಚ್ಚಗೆ ಇರಿಸುವುದು ಒಳ್ಳೆಯದು. ಅಷ್ಟೇ ಅಲ್ಲದೆ,ಚಳಿಗಾಲದಲ್ಲಿ ಸಂರಕ್ಷಣೆ ನೀಡುವ ಅವುಗಳ ಕೂದಲುಗಳನ್ನು ಕತ್ತರಿಸಬೇಡಿ. ಇವು ಚಳಿಯ ವಿರುದ್ಧ ಅವುಗಳಿಗೆ ನೈಸರ್ಗಿಕವಾಗಿ ಸಂರಕ್ಷಣೆಯನ್ನು ಒದಗಿಸುತ್ತದೆ.

01. ಪ್ರಥಮ ಚಿಕಿತ್ಸೆ ಹೀಗಿರಲಿ!

01. ಪ್ರಥಮ ಚಿಕಿತ್ಸೆ ಹೀಗಿರಲಿ!

* ನಾಯಿಗಳ ಚರ್ಮ ಮತ್ತು ಪಾದಗಳು ಚಳಿಯ ಪ್ರಭಾವಕ್ಕೊಳಗಾಗುತ್ತದೆ. ಅದಕ್ಕಾಗಿ ಅವುಗಳಿಗೆ ಶೂಗಳನ್ನು ಹಾಕಿ, ಅವುಗಳ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವುದು ಉತ್ತಮ.

* ಅವುಗಳಲ್ಲಿ ಶೀತ, ಕೆಮ್ಮು, ಕಡಿಮೆಯಾದ ದೇಹದ ಉಷ್ಣಾಂಶ, ಸ್ನಾಯುಗಳಲ್ಲಿ ನೋವು ಇಂತಹ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಆದಷ್ಟು ಬೇಗ ಪಶು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. (ಕನೈನ್ ಲಿಂಫೋಮ ಎಚ್ಚರಿಕೆ ಇರಲಿ: ನಾಯಿಗಳಲ್ಲಿ ಕಂಡು ಬರುವ ಸಾಮಾನ್ಯ ಕ್ಯಾನ್ಸರ್ ಲಕ್ಷಣಗಳು)

ಸಾಕು ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಚಳಿಗಾಲದ ರೋಗಗಳು ಯಾವುವು ಮತ್ತು ಅವುಗಳನ್ನು ಹೇಗೆ ತಡೆಗಟ್ಟಬಹುದು ಮುಂದೆ ತಿಳಿಯೋಣ:

1. ಹೈಪೋಥರ್ಮಿಯ

1. ಹೈಪೋಥರ್ಮಿಯ

ಸಾಕು ಪ್ರಾಣಿಗಳು ಸಾಕಷ್ಟು ಸಮಯ ಚಳಿಯಲ್ಲಿ ಕಳೆದರೆ ಅವುಗಳ ದೇಹದ ಉಷ್ಣಾಂಶ ಕೆಳಗಿಳಿಯುತ್ತದೆ ನಡುಗುವುದು ನಿಶಕ್ತಿ ಸುಸ್ತು ಮತ್ತು ಮಂಕಾಗುವುದು ಈ ರೋಗದ ಲಕ್ಷಣಗಳು. ನಾಯಿ ಅಥವಾ ಬೆಕ್ಕು ಗಳಲ್ಲಿ 94ಕ್ಕಿಂತ ಕಡಿಮೆ ಉಷ್ಣಾಂಶ ವಾದಲ್ಲಿ ಅವುಗಳಿಗೆ ಹೈಪೋಥರ್ಮಿಯ ಉಂಟಾಗುತ್ತದೆ ಆದುದರಿಂದ ಇಂತಹ ಯಾವುದೇ ರೂಗಲಕ್ಷಣಗಳು ಕಂಡುಬಂದಲ್ಲಿ ಅಲಕ್ಷಿಸದೆ ಪಶು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ

2. ಫ್ರೋಸ್ಟ್ ಬೈಟ್/ಚಳಿ ಹುಣ್ಣು

2. ಫ್ರೋಸ್ಟ್ ಬೈಟ್/ಚಳಿ ಹುಣ್ಣು

ಸಾಕು ಪ್ರಾಣಿಗಳ ದೇಹ ತಣ್ಣಗಾದಾಗ, ಜೀವಕೋಶಗಳಲ್ಲಿ ಮಂಜು ಗೆಡ್ಡೆಗಳು ಉಂಟಾಗುತ್ತದೆ.ಇದರಿಂದ ಅವುಗಳ ಜೀವಕೋಶಗಳು ಹಾಳಾಗುತ್ತವೆ. ನಡುಗುವುದು,ಪ್ರಜ್ಞೆ ತಪ್ಪುವುದು, ಚಟುವಟಿಕೆ ಇಲ್ಲದೆ ನಿರಾಸಕ್ತಿಯಿಂದ ಇರುವುದು, ಅತಿಯಾಗಿ ನಿದ್ದೆ ಮಾಡುವುದು ಈ ರೋಗದ ಲಕ್ಷಣಗಳು.

3. ಸ್ನಿಫಲ್ಸ್/ಸೊರಗುಟ್ಟುವಿಕೆ

3. ಸ್ನಿಫಲ್ಸ್/ಸೊರಗುಟ್ಟುವಿಕೆ

ಇದು ಮೇಲ್ಭಾಗದ ಶ್ವಾಸಕೋಶದ ಸೋಂಕು.ಮೂಗಿನಿಂದ ನೀರು ಸೋರುವುದು, ಕೆಮ್ಮು, ಸುಸ್ತು, ಸೀನುವುದು ಮತ್ತು ಕಣ್ಣಲ್ಲಿ ನೀರಾಡುವುದು ಈ ರೋಗದ ಲಕ್ಷಣಗಳು. ಸಾಕಷ್ಟು ಸಾಕು ಪ್ರಾಣಿಗಳಲ್ಲಿ ಈ ತೊಂದರೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಹೀಗಾಗಿ ಅವುಗಳನ್ನು ಬೆಚ್ಚನೆಯ ಬಟ್ಟೆಗಳಿಂದ ಕಾಪಾಡಿ. ಬಿಸಿಯಾದ ಪಾನೀಯಗಳು ಹಾಗೂ ಸಾಕಷ್ಟು ನೀರನ್ನು ಅವುಗಳಿಗೆ ನೀಡಿ. ಮನೆಯಲ್ಲಿ ಹ್ಯುಮಿಡಿಫೈಯರ್ ಬಳಸಿ.ಇಂತಹ ರೋಗಲಕ್ಷಣಗಳು ಕಂಡು ಬಂದಾಗ ಪಶು ವೈದ್ಯರ ಬಳಿ ಕರೆದುಕೊಂಡು ಹೋಗಿ. ಅವರು ಆಂಟಿಬಯೋಟಿಕ್ಸ್ ಕೊಡಬಹುದು.

4. ಫ್ಲು/ಶೀತ ಜ್ವರ

4. ಫ್ಲು/ಶೀತ ಜ್ವರ

ಇದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಜ್ವರ, ಒಣ ಕೆಮ್ಮು, ನೆಗಡಿ ಮತ್ತು ಕಿವಿಯ ಸೋಂಕುಗಳು ಅವುಗಳನ್ನು ಕಾಡುತ್ತವೆ. ಇಂತಹ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅಲಕ್ಷಿಸದೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಿ.

5. ನೆಗಡಿ

5. ನೆಗಡಿ

ಮನುಷ್ಯರಂತೆ ನಾಯಿ ಮತ್ತು ಬೆಕ್ಕುಗಳಿಗೂ ಸಹ ಬರುವ ನೆಗಡಿ ಅವುಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಅವುಗಳು ಮನೆಯ ಹೊರಗಿನ ಚಳಿಗೆ ಮೈ ಒಡ್ಡದಂತೆ, ಮನೆಯೊಳಗೆ ಬೆಚ್ಚಗೆ ಇರುವಂತೆ ನೋಡಿಕೊಳ್ಳಿ.

6. ಆರ್ಥರೈಟಿಸ್

6. ಆರ್ಥರೈಟಿಸ್

ಸಾಕುಪ್ರಾಣಿಗಳಿಗೆ ಚಳಿಯ ಹವಾಮಾನ ಅಥವಾ ಚಳಿಗಾಲಕ್ಕೆ ಕೀಲು ನೋವು ಕಂಡು ಬರಬಹುದು. ಇದರಿಂದ ಉರಿಯೂತ ಮತ್ತು ಕೀಲುಗಳು ಊದಬಹುದು.ಈ ತೊಂದರೆಯಿಂದ ಕಾಪಾಡಲು ಅವು ಆರೋಗ್ಯಕರವಾದ ತೂಕವನ್ನು ಹೊಂದಿರುವಂತೆ ನೋಡಿಕೊಳ್ಳಿ ಮತ್ತು ದಿನನಿತ್ಯ ವಾಕಿಂಗ್ ಕರೆದುಕೊಂಡು ಹೋಗಿ.

English summary

Common winter illnesses in pets; Know how to avoid them in Kannada

Like humans pets can also suffer from bone chilling cold. It is necessary to take precautions and protect our pets from diseases which can occur in winter. Please read this article for useful information.
Story first published: Wednesday, November 16, 2022, 13:00 [IST]
X
Desktop Bottom Promotion