For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ನಾಯಿಮರಿ ಇದ್ದರೆ ಸ್ವಚ್ಛತೆಗೂ ಆದ್ಯತೆ ನೀಡಿ

By Arpitha
|

ಪ್ರಾಣಿಗಳನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಅದರಲ್ಲೂ ದನ, ಬೆಕ್ಕು, ನಾಯಿಯನ್ನು ಮನೆಗಳಲ್ಲಿ ಪ್ರೀತಿಯಿಂದ ಸಾಕುತ್ತಾರೆ, ಅಲ್ಲದೆ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳೂ ಸಹ ತಮ್ಮ ಮನೆಯ ಯಜಮಾನ ಮತ್ತು ಮನೆಯವರನ್ನು ದೇವರಂತೆ ಕಾಣುತ್ತವೆ. ಹೀಗೆ ದೇವರು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಆತ್ಮೀಯವಾಗಿ ಬೆಸೆದಿದ್ದಾನೆ. ಸಾಕು ಪ್ರಾಣಿಗಳಲ್ಲಿ ನಾಯಿ ಬೆಕ್ಕು ಮನೆಯ ಮುದ್ದಿನ ಪ್ರಾಣಿಗಳು. ಅದರಲ್ಲೂ ನಾಯಿಯನ್ನು ಅತಿಯಾಗಿ ಪ್ರೀತಿಸುವವರು ನಮ್ಮ ಸುತ್ತಮತ್ತಲಿದ್ದಾರೆ.

ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕಿದರೆ ಅದರಷ್ಟು ಸಂತೋಷ ನೀಡುವುದು ಇನ್ನೊಂದಿಲ್ಲ. ಅದರಲ್ಲಿಯೂ ನಾಯಿಯನ್ನು ಸಾಕಿದರೆ ಅದು ನೀಡುವ ಕಾಳಜಿ ಬೇರೆಯವರಿಂದ ಸಿಗಲಾರದು. ನಾಯಿ ಮಾನವನ ಉತ್ತಮ ಗೆಳೆಯ ಎಂಬ ಮಾತು ಸುಳ್ಳಲ್ಲ. ಆದರೆ ನಾಯಿಯನ್ನು ಮನೆಯಲ್ಲಿ ಸಾಕಿದಾಗ ಮೊದಲು ಗಮನಿಸಬೇಕಾದ ಅಂಶ ಅದರ ರೋಮ. ಆದ್ದರಿಂದ ನಾಯಿಯನ್ನು ಸಾಕಿದಾಗ ಮನೆಯೆಲ್ಲ ಅದರ ರೋಮಗಳು ಉದುರುವುದು ಸಹಜ. ನೀವು ನಿಮ್ಮ ಸಾಕುಪ್ರಾಣಿಯ ಬಗ್ಗೆ ಸಂಪೂರ್ಣ ಗಮನ ನೀಡದಿದ್ದಲ್ಲಿ ಅದರ ಸಹವಾಸವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಆದರೂ ನಾಯಿಯನ್ನು ಮನೆಯಲ್ಲಿಟ್ಟುಕೊಂಡು ಮನೆ ಕ್ಲೀನ್ ಮಾಡುವುದು ಕೂಡ ಸುಲಭದ ಕೆಲಸವಲ್ಲ. ಇದಕ್ಕಾಗಿ ಕೆಲವು ವಿಷಯಗಳ ಬಗ್ಗೆ ಗಮನವಿರಿಸುವುದು ಅಗತ್ಯ.

Tips On How To Clean Your Home If You Have Pets

ಸರಿಯಾದ ತಳಿಯ ನಾಯಿಯನ್ನು ಸಾಕಿದರೆ ಅರ್ಧದಷ್ಟು ಕೆಲಸ ಕಡಿಮೆಯಾದಂತೆ. ನಿಮಗೆ ಇಂತಹದೇ ತಳಿ ಬೇಕು ಎಂದು ಮೊದಲೇ ನಿರ್ಧರಿಸಿದ್ದರೆ ಆ ತಳಿಯ ನಾಯಿಯ ಬಗ್ಗೆ ಸರಿಯಾಗಿ ತಿಳಿದುಕೊಂಡು ಮನೆ ಸ್ವಚ್ಛಗೊಳಿಸುವುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ನಿಮಗೆ ಬೇಕಾದ ತಳಿಯ ನಾಯಿಯನ್ನು ತೆಗೆದುಕೊಳ್ಳುವ ಮೊದಲು ಅದರ ಬಗ್ಗೆ ಸರಿಯಾಗಿ ಅಧ್ಯಯನ ನಡೆಸಿ ಬೇಕಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ನಂತರ ತೆಗೆದುಕೊಳ್ಳುವುದು ಒಳ್ಳೆಯದು. ನಾಯಿಯ ರೋಮದ ಪೋಷಣೆ ಹೇಗೆ?

ನಾಯಿಯ ರೋಮ
ನೀವು ನಾಯಿಯನ್ನು ಸಾಕಿದರೆ ಮನೆಯ ನೆಲದಲ್ಲಿ, ಫರ್ನಿಚರ್ ಮತ್ತು ಬಟ್ಟೆಗಳಲ್ಲಿ ರೋಮ ಕಂಡುಬರುವುದು ಸಾಮಾನ್ಯ. ನಾಯಿ ಕುಳಿತ ಜಾಗಕ್ಕೆ ಬಟ್ಟೆಯನ್ನು ಹಾಸಿ ಇಡುವುದರಿಂದ ಅದನ್ನು ಆಗಾಗ ಹೊರಗೆ ಕೊಡವಿ ಅದರಲ್ಲಿರುವ ರೋಮವನ್ನು ಸ್ವಚ್ಛಗೊಳಿಸಬಹುದು. ನಾಯಿಯ ಕೂದಲನ್ನು ಆಗಾಗ ಬಾಚುವುದರಿಂದ ಕೂಡ ಕೂದಲು ಹೆಚ್ಚು ಉದುರದಂತೆ ತಡೆಯಬಹುದು.

ಕಾರ್ಪೆಟ್ ಹಾಗೂ ಬಟ್ಟೆಗಳು
ಮನೆಯಲ್ಲಿ ಸಾಕುಪ್ರಾಣಿಯಿದ್ದಾಗ ಮನೆ ಸ್ವಚ್ಛಗೊಳಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಕಾರ್ಪೆಟ್ ಅನ್ನು ವಾರದಲ್ಲಿ ಎರಡು ಮೂರು ಬಾರಿಯಾದರೂ ಸ್ವಚ್ಛಗೊಳಿಸಬೇಕಾಗುತ್ತದೆ. ಬಟ್ಟೆಯಲ್ಲಿರುವ ಕೂದಲನ್ನು ಹೋಗಲಾಡಿಸಲು ಟೇಪ್ ರೋಲರ್ ಅನ್ನು ಬಳಸಬಹುದು. ಕೈಹಿಡಿಕೆಯಲ್ಲಿ ಉಪಯೋಗಿಸುವ ವ್ಯಾಕ್ಯೂಮ್ ಕ್ಲೀನರ್ ಮನೆಯ ಪೀಠೋಪಕರಣಗಳನ್ನು ಕ್ಲೀನ್ ಮಾಡಲು ಬಳಸಬಹುದು.

ಕಲೆಗಳು
ನಾಯಿ ಕಾರ್ಪೆಟ್‌ನ ಮೇಲೆ ಮೂತ್ರ ಮಾಡಿದರೆ ತಕ್ಷಣ ಸ್ವಚ್ಛಗೊಳಿಸಬೇಕು. ಸಾಕುಪ್ರಾಣಿಗಳು ಎಲ್ಲೆಂದರಲ್ಲಿ ಮೂತ್ರ ಮಾಡುತ್ತವೆ ಆದ್ದರಿಂದ ಅವುಗಳಿಗೆ ಬಾತ್ ರೂಮ್ ಗೆ ಹೋಗಿ ಮೂತ್ರ ಮಾಡುವುದನ್ನು ಕಲಿಸಿದರೆ ಸುಲಭವಾಗುತ್ತದೆ. ನೀವು ಯಾವ ರೀತಿ ಕಾರ್ಪೆಟ್ ಬಳಸುತ್ತಿದ್ದೀರಿ ಎಂಬುದರ ಮೇಲೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕ್ಲೀನಿಂಗ್ ವ್ಯವಸ್ಥೆ ದೊರಕುತ್ತದೆ.

ದಿಂಬು
ಮಾರುಕಟ್ಟೆಯಲ್ಲಿ ಮೇಲಿನ ಬಟ್ಟೆಯನ್ನು ತೆಗೆದು ತೊಳೆಯಬಹುದಾದ ದಿಂಬುಗಳು ದೊರೆಯುತ್ತವೆ. ಫರ್ನಿಚರ್ ಮೇಲೆ ಅಂತಹ ದಿಂಬು ಬಳಸಿದರೆ ಸ್ವಚ್ಛಗೊಳಿಸುವುದು ಸುಲಭ.ಮೈಕ್ರೋ ಫೈಬರ್ ಫರ್ನಿಚರ್ ಇದ್ದರೆ ಕ್ಲೀನಿಂಗ್ ಇನ್ನು ಸುಲಭವಾಗುತ್ತದೆ. ನಾಯಿಗೆ ತರಬೇತಿ ನೀಡುವುದರ ಮೂಲಕ ಕೂಡ ಸುಲಭವಾಗಿ ಕಾಪಾಡಿಕೊಳ್ಳಬಹುದು.

ನೆಲ ರಕ್ಷಣೆ
ನಾಯಿಯನ್ನು ಸ್ವಚ್ಛಗೊಳಿಸಿ ಇರಿಸುವುದರಿಂದ ನೆಲ ಸ್ಕ್ರಾಚ್ ಆಗುವುದನ್ನು ತಪ್ಪಿಸಬಹುದು. ನಾಯಿಗಳು ಸಾಮಾನ್ಯವಾಗಿ ಬಾಗಿಲನ್ನು ಕೆರೆಯುತ್ತವೆ. ಬಾಗಿಲುಗಳಿಗೆ ಪ್ಲೆಕ್ಸಿಗ್ಲಾಸ್ ಶೀಟ್ ಬಳಸುವುದರಿಂದ ಸ್ಕ್ರಾಚ್ ಆಗದಂತೆ ತಡೆಯಬಹುದು. ನಿಮ್ಮ ಮನೆಯ ಮುದ್ದಿನ ಸಾಕುಪ್ರಾಣಿಗೆ ಇದರ ಬಗ್ಗೆ ಸಂಪೂರ್ಣ ತರಬೇತಿ ನೀಡಿದ ನಂತರ ಇದನ್ನು ತೆಡೆಯಬಹುದು. ಈ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿ ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

English summary

Tips On How To Clean Your Home If You Have Pets

There is nothing interesting than having a pet in the house. The way they care for you, no one else will. Dogs are man's best friend and you will never disagree to this statement if you are a pet owner. But, there are some things that will make life with a pet a bit difficult. One among this is the problems associated with cleaning your home.
X
Desktop Bottom Promotion