For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯಲ್ಲೂ ಸಾಕಬಹುದಾದ 5 ಅಸಾಮಾನ್ಯ ಸಾಕುಪ್ರಾಣಿಗಳು

By Super
|

ಸಾಮಾನ್ಯವಾಗಿ ಎಲ್ಲರೂ ಸಾಕುಪ್ರಾಣಿಗಳನ್ನು ತಮ್ಮ ಸಂಗಾತಿಗಳಂತೆ ಜೊತೆಯಲ್ಲಿಯೇ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ನಾಯಿ, ಬೆಕ್ಕು, ಮೊಲ ಮುಂತಾದವು ಜನರು ಇಷ್ಟಪಡುವ ಸಾಕುಪ್ರಾಣಿಗಳಾಗಿರುತ್ತವೆ. ಇವುಗಳ ಹೊರತಾಗಿ ಕೆಲವು ಅಸಾಮಾನ್ಯ ಪ್ರಾಣಿಗಳನ್ನೂ ಕೂಡ ನೀವು ಮನೆಯಲ್ಲಿ ಸಾಕಬಹುದು. ಅಂದರೆ ಕೆಲವರು ಮಾತ್ರ ಇಂತಹ ಪ್ರಾಣಿಗಳನ್ನು ಸಾಕಲು ಇಷ್ಟಪಡುತ್ತಾರೆ. ಇವು ಉಳಿದ ಸಾಕುಪ್ರಾಣಿಗಳಂತೆ ಸುಂದರವಾಗಿರಬಹುದು ಮತ್ತು ಅವುಗಳನ್ನು ಸಾಕುವುದೂ ಅತ್ಯಂತ ಸುಲಭ. ಇಲ್ಲಿ ಕೆಲವು ಸಾಕಬಹುದಾದಂತಹ ಅತ್ಯಂತ ಅನನ್ಯ ಸಾಕುಪ್ರಾಣಿಗಳ ಬಗ್ಗೆ ಹೇಳಲಾಗಿದೆ.

ಇಲಿಗಳು:
ಜನರು ಸಾಮಾನ್ಯವಾಗಿ ಮನೆಯಲ್ಲಿರುವ ಇಂತಹ ಎಲ್ಲಾ ಪ್ರಾಣಿಗಳನ್ನೂ ಹೊರಗೆ ಓಡಿಸಲು ಪ್ರಯತ್ನಿಸುತ್ತಾರೆಯಲ್ಲವೇ? ಆದರೆ, ಅನೇಕ ಜನರು, ಅದರಲ್ಲೂ ವಿಶೇಷವಾಗಿ ಮಕ್ಕಳು ಇಲಿಯನ್ನು ಸಾಕುಪ್ರಾಣಿಯಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ನೀವು ಇಲಿಯನ್ನು ನಿಮ್ಮ ಸಾಕುಪ್ರಾಣಿಯನ್ನಾಗಿ ಸಾಕಲು ಬಯಸಿದರೆ ಮುದ್ದಾಗಿ ಕಾಣುವ ಬಿಳಿ ಇಲಿಯನ್ನು ಸಾಕುವುದು ಉತ್ತಮ. ಈ ಸಾಕುಪ್ರಾಣಿಗಳು ಅಸಾಮಾನ್ಯವೆನಿಸಿದರೂ ಅವುಗಳನ್ನು ನಿಯಂತ್ರಿಸುವುದು ಮತ್ತು ಕಾಳಜಿ ಮಾಡುವುದು ತುಂಬಾ ಸುಲಭ. ಅವು ಕೇವಲ ನೀವು ನೀಡಬಲ್ಲ ಆಹಾರಗಳನ್ನು ಮಾತ್ರ ತಿಂದು ಬೆಳೆಯುತ್ತವೆ. ಮುದ್ದಿನ ಬೆಕ್ಕಿನ ಹಲ್ಲು ತಿಕ್ಕುವವರು ಯಾರು?

5 Unusual Pets To Keep

ಏಡಿಗಳು:
ನೀವು ಈಗ ಅಕ್ವೇರಿಯಂನಲ್ಲಿ ಮೀನುಗಳ ಬದಲು ಏಡಿಗಳನ್ನು ಇರಿಸಬಹುದು. ನೀವು ಏಡಿಗಳನ್ನು ಸಾಕಲು ಇಷ್ಟಪಡುವುದಾದರೆ ಹರ್ಮಿಟ್ ಏಡಿಗಳನ್ನೇ ಇರಿಸಿಕೊಳ್ಳಿ. ಇದು ಹೆಸರಿಗೆ ತಕ್ಕ ಹಾಗೆ ಅದಕ್ಕೆ ತೊಂದರೆ ಮಾಡದಿದ್ದಲ್ಲಿ ಅದು ಯಾರಿಗೂ ಅಪಾಯ ಉಂಟುಮಾಡದು. ಇವು ಸಾಮಾನ್ಯವಾಗಿ ಹುಳುಗಳು ಇತ್ಯಾದಿ ಕೀಟಗಳನ್ನು ತಿಂದು ಬದುಕುತ್ತವೆ ಇದು ಪ್ರಾಣಿಯ ಅಂಗಡಿಗಳಲ್ಲಿ ದೊರೆಯುತ್ತವೆ.

ಮುಳ್ಳುಹಂದಿಗಳು:
ಇವು ತುಂಬಾ ಸ್ನೇಹಿ ಸ್ವಭಾವದವು ಮತ್ತು ಮುದ್ದಾಗಿರುವಂತಹ ಪ್ರಾಣಿಗಳು. ಆದ್ದರಿಂದ ಇವು ಅಸಾಮಾನ್ಯ ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಜನರು ಹೆಚ್ಚು ಇಷ್ಟಪಡುವಂತಹ ಪ್ರಾಣಿಗಳು. ಮತ್ತು ಅವುಗಳೊಂದಿಗೆ ಆಡಲು ಮತ್ತು ಅವುಗಳನನ್ನು ಕಾಳಜಿ ಮಾಡುವುದು ತುಂಬಾ ಸುಲಭ. ಮತ್ತು ಈ ಸಾಕುಪ್ರಾಣಿಗಳು ಆಗಾಗ ಹಾಕುವ ಶಿಳ್ಳೆ ನಿಮ್ಮನ್ನು ಸಂತೋಷಗೊಳಿಸುವುದರಲ್ಲಿ ಸಂಶಯವಿಲ್ಲ. ಸಣ್ಣ ಮಕ್ಕಳಿಗೆ ಈ ಪ್ರಾಣಿಯೆಂದರ ತುಂಬಾ ಇಷ್ಟ. ಈ ಅಸಾಮಾನ್ಯ ಸಾಕುಪ್ರಾಣಿಗಳಿಗೆ ಸಣ್ಣ ಕೀಟಗಳೇ ಆಹಾರ. ಆದರೆ ಈ ಪ್ರಾಣಿಗಳು ಕೊಬ್ಬು ಅಥವಾ ಸಕ್ಕರೆಯ ಅಂಶವಿರುವ ಆಹಾರವನ್ನು ಹೆಚ್ಚು ಇಷ್ಟಪಡುತ್ತವೆ.

ಕಪ್ಪೆಗಳು:
ಅದ್ಭುತವಾದ ಹಸಿರು ಬಣ್ಣದ ಕಪ್ಪೆಗಳ ಕೆಲವರಿಗೆ ಕಿರಿಕಿರಿಯನ್ನುಂಟುಮಾಡಿದರೆ, ಇನ್ನೂ ಅನೇಕ ಜನರು ತಮ್ಮ ಅಸಾಮಾನ್ಯ ಸಾಕುಪ್ರಾಣಿಗಳು ಪಟ್ಟಿಯಲ್ಲಿ ಕಪ್ಪೆಗಳನ್ನು ಸೇರಿಸಲು ಇಷ್ಟಪಡುತ್ತಾರೆ. ನೀವು ಮೊದಲ ನೋಡಿದಾಗ ಈ ಪ್ರಾಣಿ ಅಷ್ಟು ಆಸಕ್ತಿದಾಯಕ ಎಂದು ಅನ್ನಿಸದಿದ್ದರೂ, ಇವು ವಾಸ್ತವವಾಗಿ ಉತ್ತಮ ಸಾಕುಪ್ರಾಣಿಗಳಾಗಿರುವುದರಲ್ಲಿ ಸಂಶಯವಿಲ್ಲ. ಇವು ಅಪಾಯಕಾರಿಯಲ್ಲ ಆದ್ದರಿಂದ ಮಕ್ಕಳಿಗೆ ಆಡಲು ಸೂಕ್ತವಾದ ಸಾಕುಪ್ರಾಣಿ ಇವು. ಆದರೆ, ಒಂದೇ ಕಪ್ಪೆಯನ್ನು ಸಾಕುವುದು ಉತ್ತಮ. ಅಂಡಾಕಾರದ ಮೀನು ಬಟ್ಟಲಿನಲ್ಲಿ ಕಪ್ಪೆಗಳನ್ನು ಇಡುವುದು ಉತ್ತಮ ಇದರಿಂದ ಅವು ಜಿಗಿದು ಹೊರಗೆಹೋಗುದನ್ನು ತಪ್ಪಿಸಬಹುದು. ನಾಯಿ, ಬೆಕ್ಕಿಗಿಂತ ಪಕ್ಷಿಗಳನ್ನು ಸಾಕಿದರೆ 6 ಲಾಭ!

ಆಮೆಗಳು ಮತ್ತು ಕಡಲಾಮೆಗಳು
ಇವು ಅತ್ಯಂತ ಶಾಂತ ಮತ್ತು ಅಸಾಮಾನ್ಯ ಸಾಕುಪ್ರಾಣಿಗಳಲ್ಲಿ ಒಂದಾಗಿದೆ. ಇವುಗಳಿಗೆ ಉಳಿಯಲು ವಿಸ್ತಾರವಾದ ಜಾಗ ಬೇಕು. ಈ ಪ್ರಾಣಿಯ ಒಂದು ಉತ್ತಮ ವಿಷಯವೆಂದರೆ ಇವು ದೀರ್ಘ ಜೀವಿತಾವಧಿಯನ್ನು ಹೊಂದಿರುತ್ತವೆ. ನೀವು ನಿಮ್ಮ ತೋಟದಲ್ಲಿ ಆಮೆಗಾಗಿ ಒಂದು ಸಣ್ಣ ನೀರಿನ ಪೂಲ್ ನಿರ್ಮಿಸುವುದು ಒಳ್ಳೆಯದು. ಆದರೆ, ಆಮೆಗಳು ಬಹಳಷ್ಟು ಬೇಗ ಸೋಂಕು ರೋಗಗಳಿಗೆ ಒಳಗಾಗುವ ಸಾಧ್ಯತೆಯಿರುವುದರಿಂದ ಅವುಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಆಗಾಗ ನೀಡುವ ಅಗತ್ಯವಿದೆ. ಸ್ವಲ್ಪ ಎಚ್ಚರಿಕೆಯಿಂದ ನೋಡಿಕೊಂಡರೆ ಈ ಅಸಾಮಾನ್ಯ ಸಾಕುಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಸಾಕಷ್ಟು ಮೋಜಿನಿಂದ ಕೂಡಿರುತ್ತದೆ.

English summary

5 Unusual Pets To Keep

There are many people who love to keep pets as they become one of their best companions. Dogs, cats and rabbits are some of the most popular pets. But, apart from them there are also some very unusual pets that you can keep at home. Here are some of the most unique pets that you would cherish.
Story first published: Thursday, November 13, 2014, 18:48 [IST]
X
Desktop Bottom Promotion