For Quick Alerts
ALLOW NOTIFICATIONS  
For Daily Alerts

ವಿಶ್ವ ಪರಿಸರ ದಿನ: ಮನೆಗೆ ಬೇಕಾದ ತರಕಾರಿ ಬೆಳೆಯಲು ಬಯಸುತ್ತಿದ್ದೀರಾ?

|

ಜೂನ್5 ವಿಶ್ವ ಪರಿಸರ ದಿನ. ಪರಿಸರ ರಕ್ಷಣೆ ಎಷ್ಟು ಅವಶ್ಯಕ ಎಂಬುವುದು ಈಗಾಗಲೇ ಜನರು ಅರಿತುಕೊಂಡಿರಬೇಕು. ಇಷ್ಟೆಲ್ಲಾ ಆದ ಮೇಲೂ ಆತ ಕಲಿತಿಲ್ಲ ಅಂದ್ರೆ ಪಾಪ ಪ್ರಕೃತಿ ತಾನೆ ಎಷ್ಟು ಸಹಿಸಳು.

ಪ್ರಗತಿಯ ಹೆಸರಿನಲ್ಲಿ ಮನುಷ್ಯ ನಿತ್ಯ ಪರಿಸರಕ್ಕೆ ಹಾನಿ ಮಾಡುತ್ತಲೇ ಬರುತ್ತಿದ್ದಾನೆ. ಮರಗಳನ್ನು ಕಡಿದು ಕಾಡು ನಾಶ ಮಾಡುತ್ತಿದ್ದಾನೆ, ಶುದ್ಧ ಗಾಳಿಗಳಿಗೆ ವಿಷಾನಿಲಗಳನ್ನು ಸೇರಿಸುತ್ತಿದ್ದಾನೆ, ಹರಿಯುವ ಶುದ್ಧ ನೀರಿಗೆ ಕಲ್ಮಶ ಹಾಗೂ ರಾಸಾಯನಿಕಗಳನ್ನು ಸೇರಿಸುತ್ತಾ ಇದ್ದಾನೆ, ಭೂಮಿಗೆ ಪ್ಲಾಸ್ಟಿಕ್ ಹಾಕಿ ನೀರು ಮಳೆನೀರು ಭೂಮಿಗೆ ಇಳಿಯುವುದಕ್ಕೆ ಅಡ್ಡಿ ಪಡಿಸಿದ್ದಾನೆ. ಹೀಗಾಗಿ ಪ್ರಕೃತಿಗೆ ಎಲ್ಲಾ ರೀತಿಯಲ್ಲೂ ಹಾನಿಯುಂಟು ಮಾಡ್ತಾ ಇದ್ದಾನೆ.

ಇದರ ಪ್ರಭಾವವೇ ಅತಿವೃಷ್ಠಿ, ಅನಾವೃಷ್ಠಿ, ಮಾರಕ ಕಾಯಿಲೆಗಳು ಹೀಗೆ ಮನುಷ್ಯನನ್ನು ಕಾಡುತ್ತಿರುವುದು. ಇಲ್ಲಿ ನಾವು ಪ್ರಕೃತಿಗೆ ಅಲ್ಪ ಕೊಡುಗೆಯ ನೀಡುವುದರ ಮುಖಾಂತರ ನಮ್ಮ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ಕೆಲವೊಂದು ಟಿಪ್ಸ್ ನೀಡಿದ್ದೇವೆ ನೋಡಿ:

 ಟೆರೇಸ್ ಗಾರ್ಡನ್‌ನಿಂದ ಸಿಗುವ ಲಾಭಗಳು

ಟೆರೇಸ್ ಗಾರ್ಡನ್‌ನಿಂದ ಸಿಗುವ ಲಾಭಗಳು

ನೀವು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದು ಗಿಡ ನೆಡಲು ಸ್ಥಳವಿಲ್ಲದಿದ್ದರೂ ಮನೆಯ ಟೆರೇಸ್‌ ಗಾರ್ಡನ್‌ ಸಾಕು, ನಿಮ್ಮ ಮನೆ ಮಂದಿ ವರ್ಷ ಪೂರ್ತಿ ತಿನ್ನಲು ಬೇಕಾಗುವಷ್ಟು ತರಕಾರಿ ಬೆಳೆಯಲು. ನೀವೇ ತರಕಾರಿ ಬೆಳೆಯುವುದರಿಂದ ನಿಮಗೆ ದೊರೆಯುವ 3 ಲಾಭಗಳಿವೆ.

1. ಶುದ್ಧವಾದ ಗಾಳಿ ದೊರೆಯುವುದು

2. ಯಾವುದೇ ರಾಸಾಯನಿಕವಿಲ್ಲದ ತರಕಾರಿ ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ

3. ಹಣದ ಉಳಿತಾಯವೂ ಆಗುವುದು

ಟೆರೇಸ್‌ ಗಾರ್ಡನ್ ಮಾಡುವಾಗ ಈ ಟಿಪ್ಸ್ ಪಾಲಿಸಿ

1. ಸಾವಯವ ಪದ್ಧತಿ

1. ಸಾವಯವ ಪದ್ಧತಿ

ನೀವು ಗಿಡಗಳನ್ನು ಬೆಳೆಯುವಾಗ ಸಾವಯವ ಪದ್ಧತಿ ಅನುಸರಿಸಿ. ಗಿಡಗಳಿಗೆ ಔಷಧಿ ಸಿಂಪಡಿಕೆ ಮಾಡುವುದು, ಕ್ರಿಮಿನಾಶಕಗಳನ್ನು ಬಳಸುವುದು ಮಾಡಬೇಡಿ. ತರಕಾರಿ ಮಾತ್ರವಲ್ಲದೆ ಹಣ್ಣಿನ ಗಿಡಗಳನ್ನೂ ಬೆಳೆಯಬಹುದು. ಸ್ಟ್ರಾಬೆರ್ರಿ ಮುಂತಾದ ಹಣ್ಣುಗಳನ್ನು ಹೂ ಕುಂಡದಲ್ಲಿಯೇ ಬೆಳೆಯಬಹುದು.

2. ನೆಲ ವಾಟರ್‌ಫ್ರೂಫ್‌ ಆಗಿರಲಿ

2. ನೆಲ ವಾಟರ್‌ಫ್ರೂಫ್‌ ಆಗಿರಲಿ

ಟೆರೇಸ್‌ ಗಾರ್ಡನ್‌ ಮಾಡುವಾಗ ಹೂ ಕುಂಡದಲ್ಲಿ ಹಾಕಿರುವ ನೀರು ಟೆರೇಸ್‌ನ ಕೆಳಗೆ ಸೋರುದಂತೆ ಎಚ್ಚರವಹಿಸಿ, ಇಲ್ಲದಿದ್ದರೆ ಮನೆ ಹಾಳಾಗುವುದು. ಮಣ್ಣಿನ ಹೂ ಕುಂಡಗಳನ್ನು ಬಳಸಿ, ಅದರ ಕೆಳಗಡೆ ನೀರು ಸೋರದಂತೆ ಪ್ಲಾಸ್ಟಿಕ್ ತಟ್ಟೆ ರೀತಿ ಸಿಗುತ್ತದೆ ಅವುಗಳನ್ನು ಇಡಿ.

3. ಮಳೆಗಾಲದಲ್ಲಿ ಗಿಡಗಳ ಆರೈಕೆ

3. ಮಳೆಗಾಲದಲ್ಲಿ ಗಿಡಗಳ ಆರೈಕೆ

ಮಳೆಗಾಲದಲ್ಲಿ ತುಂಬಾ ನೀರು ಬೀಳದಂತೆ ಎಚ್ಚರವಹಿಸಿ, ಮಳೆ ನೀರಿನಲ್ಲಿ ಮಣ್ಣು ಕೊಚ್ಚಿ ಹೋಗಿದ್ದರೆ ಮಣ್ಣುಗಳನ್ನು ತುಂಬಬೇಕು, ತುಂಬಾ ನೀರು ನಿಂತರೆ ಗಿಡ ಕೊಳೆತು ಹೋಗುವುದು, ಆದ್ದರಿಂದ ಈ ಸಮಯದಲ್ಲಿ ಸ್ವಲ್ಪ ಅಧಿಕ ಜೋಪಾನ ಮಾಡಿ.

4. ಬಿಸಿಲು ಚೆನ್ನಾಗಿ ಬೀಳುವಂತೆ ಇರಬೇಕು

4. ಬಿಸಿಲು ಚೆನ್ನಾಗಿ ಬೀಳುವಂತೆ ಇರಬೇಕು

ಟೆರೇಸ್‌ನ ಗಿಡಗಳಿಗೆ ಬಿಸಿಲು ಹೆಚ್ಚಾಗಿ ಬೀಳುತ್ತದೆ, ಆದರೆ ಈ ಬಿಸಲನ್ನು ಸಹಿಸಿ ಬದುಕುವ ಗಿಡಗಳನ್ನು ಬೆಳೆಸಿ. ತುಂಬಾ ಬಿಸಿಲು ಇರುವಾಗ ಸ್ವಲ್ಪ ನೆರಳು ಇರುವಂತೆ ವ್ಯವಸ್ಥೆ ಮಾಡಿ.

5. ಬೀಜಗಳು

5. ಬೀಜಗಳು

ನಿಮಗೆ ಟೆರೇಸ್‌ ಗಾರ್ಡನ್ ಮಾಡಲು ಬೇಕಾಗುವ ಬೀಜಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ, ಸಾವಯವ ಪದ್ಧತಿಯಲ್ಲಿ ಬೆಳೆದ ಬೀಜಗಳನ್ನು ತರಿಸಿಕೊಳ್ಳಿ. ಅದರ ಬಿತ್ತನೆಯ ವಿಧಾನ ಎಲ್ಲವೂ ಆನ್‌ಲೈನ್‌ನಲ್ಲಿ ಸಿಗುತ್ತದೆ. ಇನ್ನು ಟೆರೇಸ್‌ ಗಾರ್ಡನ್ ಮಾಡಿದವರ ಬಳಿ ಸಲಹೆಯನ್ನೂ ಪಡೆಯಬಹುದು.

ಈ ರೀತಿ ಗಾರ್ಡನ್ ಮಾಡದರೆ ದಿನಾಅವುಗಳನ್ನು ನೋಡುತ್ತಿದ್ದರೆ ಮನಸ್ಸಿಗೂ ಒಂಥರಾ, ಒಂಟಿತನ, ಮಾನಸಿಕ ಒತ್ತಡ ಎಲ್ಲವೂ ಅದರಿಂದಾಗಿ ಮಾಯವಾಗುವುದು.

English summary

World Environment Day 2020: Useful Tips for Terrace Gardening

A garden at the terrace will not only look soothing, it controls temperaturegive you health, save your money, Here are tips to grow terrace garden
X