For Quick Alerts
ALLOW NOTIFICATIONS  
For Daily Alerts

New Year 2023 Vastu Tips : ವಾಸ್ತು ಟಿಪ್ಸ್: ಹೊಸ ವರ್ಷದಲ್ಲಿ ಹೀಗೆ ಮಾಡಿದರೆ ಸಮೃದ್ಧಿ ಹೆಚ್ಚುವುದು

|

ಹೊಸ ವರ್ಷಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯುಳಿದಿದೆ. ಹೊಸ ವರ್ಷವನ್ನು ಸ್ವಾಗತಿಸಲು ಈಗಾಗಲೇ ಪ್ಲ್ಯಾನ್ ಮಾಡುತ್ತಿರಬಹುದು ಅಲ್ವೇ? ಹೊಸ ವರ್ಷ ಸಂತೋಷ, ಸಮೃದ್ಧಿಯಿಂದ ಕೂಡಿರಬೇಕು ಎಂದು ಬಯಸುತ್ತೇವೆ. ನೀವು ವಾಸ್ತು ನಂಬುವುದಾದರೆ 2023 ನಿಮಗೆ ಮತ್ತಷ್ಟು ಸಮೃದ್ಧಿಯಾಗಿರಲು ಈ ವಾಸ್ತು ಟಿಪ್ಸ್ ಪಾಲಿಸಿ:

ಹೊಸವರ್ಷ ಹೊಸ ಚೈತನ್ಯ ತುಂಬಲು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆ ಮಾತ್ರವಲ್ಲ ಈ ದಿನ ಮನಸ್ಸನ್ನು ಕೂಡ ಸ್ವಚ್ಛವಾಗಿಡಿ.

ಹೊಸವರ್ಷ ಹೊಸ ಚೈತನ್ಯ ತುಂಬಲು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆ ಮಾತ್ರವಲ್ಲ ಈ ದಿನ ಮನಸ್ಸನ್ನು ಕೂಡ ಸ್ವಚ್ಛವಾಗಿಡಿ.

* ಹೊಸ ವರ್ಷಕ್ಕೆ ಕಿತ್ತಳೆ, ಹಳದಿ, ಕೆಂಪು, ಗೋಲ್ಡನ್‌ ಬಣ್ಣದ ಡ್ರೆಸ್‌ ಧರಿಸಿ. ಈ ದಿನ ಬಿಳಿ ಹಾಗೂ ನೀಲಿ ಧರಿಸುವುದು ಅಷ್ಟು ಒಳ್ಳೆಯದಲ್ಲ.

* ಹೊಸ ವರ್ಷದಲ್ಲಿ ಗಿಡ ನೆಡುವುದು ಶುಭವೆಂದು ಪರಿಗಣಿಸಲಾಗಿದೆ. ಚಿಕ್ಕದಾಗಿ ಬೆಳೆಯುವ ಗಿಡವಾದರೆ ಮನೆಯ ಬಲಭಾಗದಲ್ಲಿ ನೆಡಿ, ದೊಡ್ಡದಾಗಿ ಬೆಳೆಯುವ ಗಿಡವಾದರೆ ಮನೆಯ ಎಡಭಾಗದಲ್ಲಿ ನೆಡಿ. ಮುಳ್ಳಿನ ಗಿಡಗಳನ್ನು ಮನೆಯ ಸಮೀಪ ನೆಡಬಾರದು.

ವಾಸ್ತು ಪ್ರಕಾರ ಈ ದಿನ ತೆಂಗಿನ ಗಿಡ, ಹಲಸಿನ ಗಿಡ, ಅಶೋಕ ಗಿಡ ನಟ್ಟು ಪೋಷಿಸಿದರೆ ಒಳ್ಳೆಯದು.

 ಹೊಸ ವರ್ಷದ ಮೊದಲನೇ ದಿನ ಈ ರೀತಿ ಮಾಡಿ

ಹೊಸ ವರ್ಷದ ಮೊದಲನೇ ದಿನ ಈ ರೀತಿ ಮಾಡಿ

ಈ ದಿನ ಬೆಳಗ್ಗೆ ಎದ್ದು ಮನೆಯ ಕಿಟಕಿಗಳನ್ನು ತೆರೆದಿಡಿ, ಫ್ರೆಷ್ ಗಾಳಿ ಮನೆಯೊಳಗಡೆ ಬರಬೇಕು. ನಂತರ ಆ ದಿನ ಹೊಸ ವರ್ಷದಲ್ಲಿ ನೀವು ಮಾಡಿರುವ ಸಂಕಲ್ಪ ಬರೆದು ಗೋಡೆಗೆ ಅಂಟಿಸಿ ನೀಡಿ, ಅದು ನೋಡುವಾಗೆಲ್ಲಾ ನಿಮಗೆ ಸ್ಪೂರ್ತಿ ಸಿಗುವಂತಿರಬೇಕು.

ಕ್ಯಾಲೆಂಡರ್‌

ಹೊಸ ವರ್ಷದಲ್ಲಿ ಕ್ಯಾಲೆಂಡರ್‌ ತಂದು ನೇತುಹಾಕುತ್ತೇವೆ, ಆದರೆ ಕ್ಯಾಲೆಂಡರ್‌ ಅನ್ನು ಪಶ್ಚಿಮ ಭಾಗದಲ್ಲಿ ನೇತು ಹಾಕಬೇಡಿ.

ಹೊಸ ವರ್ಷದಲ್ಲಿ ಗಾಡಿ ಖರೀದಿಸಲು ಬಯಸುವುದಾದರೆ

ನೀವು ನಿಮ್ಮ ಮನೆಯ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ ಫೌಂಟೇನ್‌ ಅಥವಾ ಅಕ್ವೇರಿಯಂ ಇಡಿ ಅಥವಾ ಒಂದು ಬೌಲ್‌ನಲ್ಲಿ ನೀರು ತುಂಬಿಡಿ. ಅಲ್ಲದೆ ಗಿಡ, ಹೂಗಳ ಫೋಟೋವನ್ನು ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ನೇತು ಹಾಕಿ.

ಮನೆಯಲ್ಲಿ ನೆಮ್ಮದಿಗಾಗಿ

ಕುಟುಂಬದಲ್ಲಿ ನೆಮ್ಮದಿ ಇರಬೇಕು, ಖುಷಿ ಇರಬೇಕು ಎಂದು ನಾವೆಲ್ಲಾ ಬಯಸುತ್ತೇವೆ. ಆದ್ದರಿಂದ ಕುಟುಂಬದವರ ಫೋಟೋವನ್ನು ಉತ್ತರ ಭಾಗದಲ್ಲಿ ನೇತು ಹಾಕಿ. ಇದು ಪಾಸಿಟಿವ್ ಶಜ್ತಿಯನ್ನು ಆಕರ್ಷಿಸುತ್ತದೆ.

ಜಾಗ ಖರೀದಿ ಮಾಡುವುದಾದರೆ

ಜಾಗ ಖರೀದಿ ಮಾಡುವುದಾದರೆ

ಹೊಸ ವರ್ಷದಲ್ಲಿ ನೀವು ಜಾಗ ಖರೀದಿ ಮಾಡಬೇಕೆಂದು ಬಯಸುವುದಾದರೆ ಜಾಗ ಚೌಕಾಕರ ಅಥವಾ ಆಯಾತಾಕಾರದಲ್ಲಿರಲಿ. ಜಾಗದ ಮಧ್ಯಭಾಗ ಇತರ ಭಾಗಕ್ಕಿಂತ ಎತ್ತರವಾಗಿರಬೇಕು, ಆದ್ದರಿಂದ ಅಲ್ಲಿ ಮಣ್ಣು ತಂದು ಹಾಕಿ. ನೈಋತ್ಯ ಭಾಗ ಎತ್ತರದಲ್ಲಿರಬೇಕು. ಶೇಪ್ ಸರಿಯಾಗಿರದ ಜಾಗವಾದರೆ ಅಷ್ಟು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ನೀರು ಕೊಳವೆ ಅಥವಾ ನೀರು ಚಿಲುಮೆ ಎಲ್ಲಿರಬೇಕು

ಮನೆಗೆ ಬಳಸುವ ಬಾವಿ ಅಥವಾ ನೀರು ಕೊಳೆ, ಮನೆಯ ಅಲಂಕಾರಕ್ಕೆ ಇರುವ ನೀರು ಚಿಲುಮೆ ಇವುಗಳು ಪೂರ್ವ ಭಾಗಕ್ಕೆ ಇದ್ದರೆ ಆ ಮನೆಗೆ ಒಳ್ಲೆಯದು. ನೀವು ಮಳೆ ಇಂಗು ಗುಂಡಿ ಮಾಡುವುದಾದರೂ ಪೂರ್ವ ಭಾಗದಲ್ಲಿದ್ದರೆ ಒಳ್ಳೆಯದು.

ಮನೆ ಹೇಗಿರಬೇಕು?

ಮನೆ ಹೇಗಿರಬೇಕು?

ಮನೆ ಸರಿಯಾದ ಶೇಪ್‌ನಲ್ಲಿರಬೇಕು. ಮನೆ ಶೇಪ್‌ನಲ್ಲಿ ಏನಾದರೂ ಕಟ್‌ ಅಥವಾ ದಕ್ಷಿಣ ಭಾಗದಲ್ಲಿ ಕಟ್‌ ಇದ್ದರೆ (ಮುರಿದು ಹೋಗಿರುವುದು ಅಥವಾ ಕೆಲಸ ಅರ್ಧಕ್ಕೆ ನಿಂತಿರುವುಉದ) ಈ ರೀತಿ ಇದ್ದರೆ ಆ ಮನೆಗೆ ಆರ್ಥಿಕ ನಷ್ಟ ಉಂಟಾಗುವುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಮನೆಯ ಗೇಟ್‌

ಮನೆಯೊಳಗೆ ಬರಲು ಗೇಟ್ ಮನೆ ಇರುವ ಬಲಭಾಗಲ್ಲಿರಬೇಕು. ಎಡಭಾಗದ ಗೇಟ್‌ನಿಂದ ಮನೆಗೆ ಬರುವುದು ಒಳ್ಳೆಯದಲ್ಲ. ಅಲ್ಲದೆ ಗೇಟ್‌ನ ಮುಂಭಾಗ ಗುಂಡಿ ಅಥವಾ ಯಾವುದೇ ಅಡಚಣೆ ಇರಬಾರದು. ಇನ್ನು ಮನೆಯ ಪ್ರವೇಶ ದ್ವಾದ 3'x7' ಇದ್ದರೆ ಒಳ್ಳೆಯದು.

ಮನೆಯ ಪೂರ್ವ ಭಾಗದಲ್ಲಿ ಅಕ್ವೇರಿಯಂ ಇಡುವುದರಿಂದ ವಿದ್ಯಾಭಾಗ, ವೃತ್ತಿ ಜೀವನ, ಉದ್ಯಮ ಇವುಗಳಲ್ಲಿ ಯಶಸ್ವಿ ಕಾಣುವಿರಿ ಉತ್ತರ ಭಾಗ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.'

English summary

Vastu Tips For New Year 2023 To get Good Luck and Prosperity in Kannada

Vastu Tips: Here are vastu tips for increase luck in new year....
X
Desktop Bottom Promotion