For Quick Alerts
ALLOW NOTIFICATIONS  
For Daily Alerts

ವಾಸ್ತು ಶಾಸ್ತ್ರ ಪ್ರಕಾರ ನಮ್ಮ ಕೆಲಸ ಮತ್ತಷ್ಟು ಭದ್ರ ಮಾಡುತ್ತೆ ಈ ಟಿಪ್ಸ್

|

ಒಂದು ಭದ್ರವಾದ ಕೆಲಸ ಜೀವನದಲ್ಲಿ ಸಾಕಷ್ಟು ಭದ್ರತೆಗಳನ್ನು ನೀಡುತ್ತದೆ. ಆದರೆ ನಾವು ಮಾಡುವ ಕೆಲಸದಲ್ಲಿ ಭದ್ರತೆ ಅಥವಾ ನಾವು ಬಯಸಿದಂಥ ಫಲಿತಾಂಶ ದೊರೆಯದಿದ್ದರೆ ತುಂಬಾನೇ ಚಿಂತೆ ಉಂಟಾಗುವುದು. ಏಕೆಂದರೆ ಆ ಕೆಲಸ ನಂಬಿ ಏನೂ ಮಾಡಲು ಸಾಧ್ಯವಿಲ್ಲ, ಮುಂದೆ ಏನು ಮಾಡಬೇಕೆಂಬ ಚಿಂತೆ ಕಾಡಲಾರಂಭಿಸುವುದು.

ಕೆಲಸದ ಭದ್ರತೆ ನೀಡುವಲ್ಲಿ ವಾಸ್ತು ಟಿಪ್ಸ್ ಸಹಾಯ ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನೀವು ವಾಸ್ತು ನಂಬುವುದಾದರೆ ಈ ಟಿಪ್ಸ್ ನಿಮ್ಮ ವೃತ್ತಿ ಬದುಕಿನಲ್ಲಿ ಬೆಳೆಯಲು ಸಹಾಯವಾಗುವುದು ನೋಡಿ:

* ನೀವು ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಪೋನ್‌ ಯಾವ ದಿಕ್ಕಿನಲ್ಲಿ ಇಡುತ್ತೀರಿ?

ನೀವು ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಪೋನ್‌ ಯಾವ ದಿಕ್ಕಿನಲ್ಲಿ ಇಡುತ್ತೀರಿ ಎಂಬುವುದು ಕೂಡ ಮುಖ್ಯ. ಎಲೆಕ್ಟ್ರಾನಿಕ್‌ ವಸ್ತುಗಳನ್ನು ಈಶಾನ್ಯ ದಿಕ್ಕಿನಲ್ಲಿಟ್ಟು ಕೆಲಸ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು, ಅಲ್ಲದೆ ಲ್ಯಾಪ್‌ಟಾಪ್‌ಗೆ ಚಾರ್ಜರ್‌, ವೈರ್‌ಗಳು ಎಲ್ಲಾ ಮೇಲೆ ಇಡಬೇಡಿ. ಅಫೀಸ್‌ನಲ್ಲಿ ನಿಮಗೇ ಅಂತಲೇ ಪ್ರತ್ಯೇಕ ಸೀಟಿಂಗ್ ವ್ಯವಸ್ಥೆ ಇರುತ್ತದೆ, ಆದರೆ ಅವುಗಳ ಡೈರೆಕ್ಷನ್‌ ನಿಮಗೆ ಬೇಕಾದ ಕಡೆ ಇಡಬಹುದು.


* ಕೆಲಸದ ಜಾಗದಲ್ಲಿ ಕಾಲು ಮೇಲೆ ಕಾಲು ಹಾಕಿ ಕೂರಬೇಡಿ, ಇದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುವುದು. ಕೆಲಸದ ಜಾಗದಲ್ಲಿ ಶಿಸ್ತು ಕಾಪಾಡಿ, ಇದು ನಿಮ್ಮ ವೃತ್ತಿ ಬದುಕಿನ ಪ್ರಗತಿಗೆ ಒಳ್ಳೆಯದು.

* ವರ್ಕ್‌ ಫ್ರಂ ಹೋಂ ಮಾಡ್ತಾ ಇದ್ದೀರಾ?
ತುಂಬಾ ಜನ ವರ್ಕ್‌ ಫ್ರಂ ಮಾಡ್ತಾ ಇರುತ್ತೀರಿ,ಅವರು ಬೆಡ್‌ ಮೇಲೆ ಕೂತು ಕೆಲಸ ಮಾಡುವುದು ಮಾಡಬಾರದು. ಮನೆಯಾದರೂ ನಿಮಗೇ ಅಂತಲೇ ಚೇರ್‌, ಟೇಬಲ್‌ ಹಾಕಿ ಆಫೀಸ್‌ ಸೆಟ್‌ಅಪ್‌ ಮಾಡಿ, ಇದರಿಂದ ನೀವು ಕೆಲಸದತ್ತ ತುಂಬಾ ಗಮನ ಹರಿಸುವಿರಿ, ಇದರಿಂದ ನಿಮ್ಮ ಪ್ರಾಡೆಕ್ಟ್‌ವಿಟಿ ಹೆಚ್ಚುವುದು. ಅಲ್ಲದೆ ಕೆಲಸದ ಟೇಬಲ್‌ನಲ್ಲಿ ಚಿಕ್ಕ ಗಿಡಗಳನ್ನು ಇಡಿ.

ಪೂರ್ವಕ್ಕೆ ತಲೆ ಇಟ್ಟು ಮಲಗಿ
ವಾಸ್ತು ವಿಜ್ಞಾನದ ಪ್ರಕಾರ ಪೂರ್ವಕ್ಕೆ ತಲೆ ಇಟ್ಟು ಮಲಗಬೇಕು. ಇದರಿಂದ ವೃತ್ತಿ ಬದುಕಿಗೆ ಒಳಿತಾಗುವುದು, ಇದರಿಂದ ಮಾನಸಿಕ ಸ್ವಾಸ್ಥ್ಯ ಹೆಚ್ಚುವುದು. ಅಲ್ಲದೆ ನೀವು ಕೂರುವ ಹಿಂದುಗಡೆ ಕಿಟಕಿ ಇರದಿದ್ದರೆ ಒಳ್ಳೆಯದು.

ಈ ಟಿಪ್ಸ್‌ನಲ್ಲಿ ವಾಸ್ತವಕ್ಕೆ ಹತ್ತಿರವಾಗಿರುವ ಅಂಶಗಳನ್ನು ಗಮನಿಸಿದ್ದೀರಾ? ಹೌದು ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬುವುದರ ಮೇಲೆ ನಮ್ಮ ಕೆಲಸದ ಪ್ರಗತಿಯಾಗುವುದು. ನಾವು ಕೂರುವ ರೀತಿ, ಕೆಲಸಕ್ಕೆ ಯಾವುದೇ ತೊಂದರೆಯಾಗದಿರುವ ಸ್ಥಳ ಎಲ್ಲವೂ ಮುಖ್ಯವಾಗುತ್ತದೆ.

English summary

Vastu Tips For Job Security In Kannada

Vastu Tips For Job, Vastu Tips For Job Security, Vastu Tips For career growth,
Story first published: Friday, November 25, 2022, 20:59 [IST]
X
Desktop Bottom Promotion