Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮನೆಯ ಮುಖ್ಯದ್ವಾರ ಪಶ್ಚಿಮ ದಿಕ್ಕಿನಲ್ಲಿದ್ದರೆ ಈ ವಾಸ್ತು ಟಿಪ್ಸ್ ಪಾಲಿಸಿ
ಹೆಚ್ಚಿನವರು ಮನೆ ಕಟ್ಟುವಾಗ ವಾಸ್ತು ಪ್ರಕಾರ ಕಟ್ಟುತ್ತಾರೆ. ಆದರೆ ಕೆಲವೊಮ್ಮೆ ಮನೆ ಕಟ್ಟುವಾಗ ಸ್ಥಳಕ್ಕೆ ಅನುಗುಣವಾಗಿ ಪಶ್ಚಿಮಕ್ಕೆ ಮನೆಯ ದ್ವಾರ ಇಟ್ಟಿರುತ್ತಾರೆ. ಪಶ್ಚಿಮಕ್ಕೆ ಮನೆಯ ದ್ವಾರವಿದ್ದರೆ ಒಳ್ಳೆಯದಲ್ಲ ಎಂಬುವುದು ಸಾಮಾನ್ಯ ನಂಬಿಕೆ ಇದೆ.ಆದರೆ ವಾಸ್ತು ಶಾಸ್ತ್ರ ಪ್ರಕಾರ ಎಲ್ಲಾ ದಿಕ್ಕಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಪಶ್ಚಿಮಕ್ಕೆ ಮನೆಯ ದ್ವಾರವಿದ್ದರೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ....

ಪಶ್ಚಿಮಕ್ಕೆ ಮನೆಯ ದ್ವಾರವಿದ್ದರೆ ವಾಸ್ತುಶಾಸ್ತ್ರದಲ್ಲಿ ಏನು ಹೇಳಲಾಗಿದೆ ನೋಡಿ:
ವಾಸ್ತು ಶಾಸ್ತ್ರ ಪ್ರಕಾರ ಮನೆಯ ದ್ವಾರ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಯಾವುದೇ ಭಾಗದಲ್ಲಿರಲಿ ಸಮಾನ ಪ್ರಾಮುಖ್ಯತೆ ಹೊಂದಿದೆ. ಮನೆಯ ಮುಖ್ಯ ದ್ವಾರ ಯಾವ ಭಾಗದಲ್ಲಿದೆ ಎಂಬುವುದಕ್ಕೆ ಯಾವ ಸ್ಥಳದಲ್ಲಿದೆ ಎಂಬುವುದು ಮುಖ್ಯವಾಗುತ್ತದೆ.
ಮನೆಯ ಪಶ್ಚಿಮ ದಿಕ್ಕು ಯಾವುದಕ್ಕೆ ಸೂಕ್ತ?
* ಬೆಡ್‌ರೂಂ
*ಮಕ್ಕಳ ಕೋಣೆ
* ಲಿವಿಂಗ್ ರೂಂ
* ಪೂಜಾ ರೂಂ
* ಅಡುಗೆ ಕೋಣೆ
* ಸ್ಟೇರ್‌ಕೇಸ್
ಪಶ್ಚಿಮ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ
ಜಪಾನಿಗಳು ಮನೆಯ ಮುಖ್ಯ ದ್ವಾರ ಪಶ್ಚಿಮ ದಿಕ್ಕಿನಲ್ಲಿ ಇರುವುದು ಒಳ್ಳೆಯದು ಎಂದು ಪರಿಗಣಿಸುತ್ತಾರೆ. ಈ ದಿಕ್ಕಿನಲ್ಲಿದ್ದರೆ ಮನೆಯ ಸಂಪತ್ತು ವೃದ್ಧಿಸುವುದು ಎಂಬುವುದು ನಂಬಿಕೆ.
ಉದ್ಯಮಿ, ರಾಜಕೀಯ, ಶಿಕ್ಷಕ, ಧಾರ್ಮಿಕ ವ್ಯಕ್ತಿಗಳು ಈ ದಿಕ್ಕು ಅದೃಷ್ಟಕರವಂತೆ.
ಪಶ್ಚಿಮ ದಿಕ್ಕಿಗೆ ಮುಖ್ಯದ್ವಾರವಿದ್ದರೆ ವಾಸ್ತು ಶಾಸ್ತ್ರ
* 3, 4, 5 ಮತ್ತು 6 ಪದಗಳು ಮನೆಯ ಮುಖ್ಯ ದ್ವಾರಕ್ಕೆ ಸರಿಯಾದ ಸ್ಥಳ .
* ಈ ಪದಗಳಿಗಿಂತ ಮೇಲೆ ಇಡಬಾರದು, ಒಂದು ವೇಳೆ ಮೇಲೆ ಹೇಳಿದ ಪದದಲ್ಲಿ ಸಾಧ್ಯವಾಗದಿದ್ದರೆ 1 ಅಥವಾ 2 ಪದದಲ್ಲಿ ಸ್ಥಾಪಿಸಿ.
* ಮನೆಯ ಮುಖ್ಯ ದ್ವಾರಕ್ಕೆ 7,8,9 ಪದ ಉತ್ತಮ, ಆದರೆ ಮುಖ್ಯದ್ವಾರ ಪಶ್ಚಿಮ ದಿಕ್ಕಿನಲ್ಲಿರುವ ಮನೆಗಲ್ಲ.



Click it and Unblock the Notifications

