For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಇಡಬಹುದಾದ ವಾಸ್ತು ಗಿಡಗಳು: ನೀವು ತಿಳಿಯಬೇಕಾದ ಸಂಗತಿಗಳು

|

ವಾಸ್ತುಶಾಸ್ತ್ರವೆನ್ನುವುದು ಶತಮಾನಕ್ಕಿಂತಲೂ ಹಿಂದಿನಿಂದಲೂ ಇತ್ತು. ಆಗಿನ ಕಾಲದಲ್ಲಿ ಕಟ್ಟಡ, ಮನೆ ಹಾಗೂ ಯಾವುದೇ ರೀತಿಯ ನಿರ್ಮಾಣ ಮಾಡಬೇಕಿದ್ದರೂ ವಾಸ್ತು ಪ್ರಕಾರವೇ ಅದನ್ನು ಮಾಡಿಕೊಂಡು ಬರಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರವೂ ವಾಣಿಜ್ಯೀಕರಣವಾಗಿರುವ ಹಿನ್ನೆಲೆಯಲ್ಲಿ ವಾಸ್ತು ಶಾಸ್ತ್ರವು ಹಾಗೆ ಆಗಿದೆ. ವಾಸ್ತುಶಾಸ್ತ್ರವು ಅತಿಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಇಂದು ಯಾವುದೇ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದರೂ ಅಲಂಕಾರ ಅಥವಾ ಯಾವುದೇ ಪೀಠೋಪಕರಣ ಇಡಬೇಕಿದ್ದರೂ ಅದನ್ನು ವಾಸ್ತುಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ.

Vastu Plant for Home

ವಾಸ್ತು ಸರಿಯಾಗಿದ್ದರೆ ಆಗ ಆ ಮನೆ ಅಥವಾ ಕಟ್ಟಡದಲ್ಲಿ ವಾಸವಾಗುವ ಜನರ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯು ಇರುವುದು. ಮನೆಯಲ್ಲಿ ಯಾವುದೇ ರೀತಿಯ ಹಿಂಸೆಯಿಂದಾಗಿ ಅಲ್ಲಿ ನಕಾರಾತ್ಮಕ ಪರಿಣಾಮವು ಉಂಟಾಗಿ, ದುರಾದೃಷ್ಟವು ಬರುವುದು. ಮನೆ ಅಥವಾ ಕಟ್ಟಡದಲ್ಲಿ ಸುಖ, ಸಮೃದ್ಧಿ ನೆಲೆಸಬೇಕಿದ್ದರೆ ಕೆಲವೊಂದು ವಾಸ್ತು ಸೂತ್ರಗಳನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ಸಮಸ್ಯೆಗಳು ಪರಿಹಾರವಾಗುವುದು. ಹಣಕ್ಕಾಗಿ ಇರುವಂತಹ ಕೆಲವೊಂದು ವಾಸ್ತು ಸಸ್ಯಗಳು ಯಾವುದೆಂದರೆ ಮನಿ ಪ್ಲ್ಯಾಂಟ್, ಅದೃಷ್ಟದ ಬಿದಿರು, ಪೀಸ್ ಲಿಲಿ, ಸಿಂಗೊನಿಯಮ್ ಗಳು, ಅಥುರಿಯಮ್ ಗಳು ಮತ್ತು ಜೇಡ್ ಗಳು ಇದರಲ್ಲಿದೆ. ಹಣವನ್ನು ಆಹ್ವಾನಿಸಲು ಅದೃಷ್ಟದ ಬಿದಿರು ಮತ್ತು ಮನಿ ಪ್ಲ್ಯಾಂಟ್ ನ್ನು ಮನೆಯಲ್ಲಿ ಇಡುವುದು ಸಾಮಾನ್ಯ.

Vastu Plant for Home

ವಾಸ್ತು ಪ್ರಕಾರ ಅದೃಷ್ಟದ ಬಿದಿರು

ಫೆಂಗ್ ಶೂಯಿ ಅದೃಷ್ಟದ ಬಿದಿರನ್ನು ಮನೆಯಲ್ಲಿ ಇಡಬೇಕು ಎಂದು ಸಲಹೆ ನೀಡುತ್ತದೆ. ಇದು ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿದೆ. ಇದನ್ನು ನೀವು ಖರೀದಿ ಮಾಡುವುದು ತುಂಬಾ ಒಳ್ಳೆಯದು. ಇದು ಆನ್ ಲೈನ್ ಮತ್ತು ಅಂಗಡಿಯಲ್ಲೂ ಸಿಗುವುದು. ಇದು ನೀರು ಮತ್ತು ಮಣ್ಣಿನಲ್ಲಿ ಎರಡರಲ್ಲೂ ಬೆಳೆಯುವುದು. ಇದು ಚಿಕಣಿ ಬಿದಿರಿಗೆ ಕಂಡುಬಂದರೂ ಅದು ಡ್ರಯಕೆನಾ ಕುಲಕ್ಕೆ ಸೇರಿರುವಂತದ್ದಾಗಿದೆ. ಆಫ್ರಿಕಾ ಮೂಲದಿಂದ ಬಂದಿರುವಂತಹ ಇದರ ಎರಡು ವೈಜ್ಞಾನಿಕವಾದ ಹೆಸರುಗಳೆಂದರೆ ಡ್ರಾಕನೆ ಬ್ರಾಯುನಿ ಅಥವಾ ಡ್ರಾಕನೆ ಸ್ಯಾಂಡೇರಿಯಾನಾ. ಇದು ಮನೆಯ ಒಳಗಡೆ ಸುಮಾರು ಮೂರು ಅಡಿಯಷ್ಟು ಎತ್ತರಕ್ಕೆ ಬೆಳೆಯುವುದು. ಆದರೆ ಇದರ ನಿರ್ವಹಣೆ ಮತ್ತು ಆರೈಕೆಯು ತುಂಬಾ ಸುಲಭ.

ಹಣಕ್ಕಾಗಿ ಅದೃಷ್ಟದ ಬಿದಿರನ್ನು ಇಡಲು ಕೆಲವು ಸಲಹೆಗಳು

•ಅದೃಷ್ಟದ ಬಿದಿರಿನಲ್ಲಿ ಎಲ್ಲಾ ಐದು ಅಂಶಗಳಾಗಿರುವಂತಹ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶವು ಪ್ರತಿನಿಧಿಸುವ ಕಾರಣದಿಂದಾಗಿ ಇದು ಮನೆಯ ಒಳಗೆ ಸಮೃದ್ಧಿ ಹಾಗೂ ಅದೃಷ್ಟವನ್ನು ತರುವುದು.

•ಮನೆಯಲ್ಲಿ ಲಕ್ಷ್ಮೀಯು ಬರಬೇಕೆಂದಿದ್ದರೆ ಆಗ ನೀವು ಈ ಅದೃಷ್ಟದ ಬಿದಿರನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು.

•ಉಡುಗೊರೆಯಾಗಿ ಇದನ್ನು ಪಡೆದಾಗ ಅದು ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಅದೃಷ್ಟ ತರುವುದು.

•ಅದೃಷ್ಟದ ಬಿದಿರನ್ನು ಇಡುವ ವೇಳೆ ಇದರ ಸುತ್ತಲು ನಕಾರಾತ್ಮಕವಾದ ವಸ್ತುಗಳನ್ನು ಇಡಬೇಡಿ. ಅದೇನೆಂದರೆ ತುಂಡಾಗಿರುವ ಅಥವಾ ಕೆಲಸಕ್ಕೆ ಬಾರದ ವಸ್ತುಗಳನ್ನು ಇಡಬೇಡಿ.

Vastu Plant for Home

ವಾಸ್ತು ಪ್ರಕಾರ ಮನಿ ಪ್ಲ್ಯಾಂಟ್

ಏಶ್ಯಾದ ರಾಷ್ಟ್ರಗಳಿಗೆ ನೆರೆ ರಾಷ್ಟ್ರವಾಗಿರುವಂತಹ ಮಲೇಶಿಯಾ ಮತ್ತು ಇಂಡೋನೇಶಿಯಾದಲ್ಲಿ ಅತೀ ಜನಪ್ರಿಯ ಪ್ರಕೃತಿದತ್ತ ಮನಿ ಪ್ಲ್ಯಾಂಟ್ ಗಳು ಲಭ್ಯವಿದೆ. ಇವುಗಳ ವೈಜ್ಞಾನಿಕವಾದ ಹೆಸರುಗಳೆಂದರೆ ಸ್ಕಿಂಡಪ್ಸಸ್ ಔರೆಯಸ ಮತ್ತು ಎಪಿಪ್ರೆಮ್ನಮ್ ಔರೆಮ್. ಈ ಸಸ್ಯಗಳನ್ನು ಇತರ ಕೆಲವೊಂದು ಸಾಮಾನ್ಯ ಹೆಸರುಗಳಾಗಿರುವಂತಹ ಪೊಥೋಸ್, ಸಿಲ್ವರ್ ವಿನೆ, ಡೆವಿಲ್ಸ್ ಐವೆ ಮತ್ತು ಸೊಲೊಮೊನ್ ಐಲ್ಯಾಂಡ್ ಐವೆ ಎಂದು ಕರೆಯಲಾಗುತ್ತದೆ. ಮನಿಪ್ಲ್ಯಾಂಟ್ ಗಳು ಮನೆಯ ಒಳಗೆ ಚೆನ್ನಾಗಿ ಬೆಳೆಯುವುದು. ಅದೇ ರೀತಿಯಾಗಿ ಇದನ್ನು ಒಂದು ಹೂ ಕುಂಡದಲ್ಲಿ ಇಟ್ಟುಕೊಂಡು ಮಣ್ಣು ಹಾಗೂ ನೀರಿನಲ್ಲಿ ಬೆಳೆಸಬಹುದು. ಈ ಸಸ್ಯವು ನೀವು ಬಯಸಿದಂತೆ ಎತ್ತರಕ್ಕೆ ಬೆಳೆಯುವುದು.

ಹಣಕ್ಕಾಗಿ ಮನಿಪ್ಲ್ಯಾಂಟ್ ನ ಕೆಲವು ಸಲಹೆಗಳು

•ಮನಿ ಪ್ಲ್ಯಾಂಟ್ ತನ್ನ ಶುದ್ಧೀಕರಿಸುವ ಗುಣದಿಂದಾಗಿ ಜನಪ್ರಿಯವಾಗಿದೆ. ಇದು ಇಟ್ಟಂತಹ ಜಾಗದಲ್ಲಿ ಶಕ್ತಿ ತುಂಬುವುದು ಮತ್ತು ವಿಕಿರಣ ಹೀರಿಕೊಳ್ಳುವುದು, ಒತ್ತಡ ಕಡಿಮೆ ಮಾಡುವುದು ಮತ್ತು ಸಂಪತ್ತು ಹಾಗೂ ಸಮೃದ್ಧಿ ತರುವುದು.

•ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡಲು ಇದು ನೆರವಾಗುವುದು ಮತ್ತು ಮನೆಯಲ್ಲಿ ಹಣವು ಸ್ಥಿರವಾಗಿ ಹರಿಯುವಂತೆ ಮಾಡುವುದು. ವಿವಿಧ ಮೂಲಗಳಿಂದ ಇದು ಆದಾಯ ತಂದುಕೊಡುವುದು.

•ವಾಸ್ತುಶಾಸ್ತ್ರದ ಪ್ರಕಾರ ಈ ಗಿಡವನ್ನು ಮನೆಯ ಒಳಗಡೆಯೇ ಬೆಳೆಸಬೇಕು ಮತ್ತು ಇದನ್ನು ಹೂದೋಟದಲ್ಲಿ ಬೆಳೆಸಬಾರದು.

ಮನಿಪ್ಲ್ಯಾಂಟ್ ನ್ನು ಮನೆಯಲ್ಲಿ ಇಡಲು ಕೆಲವೊಂದು ಸಲಹೆಗಳು

•ಮನೆಯ ಹಾಲ್ ಅಥವಾ ವಾಸಿಸುವ ಕೊಠಡಿಯ ಆಗ್ನೇಯ ಭಾಗದಲ್ಲಿ ಮನಿಪ್ಲ್ಯಾಂಟ್ ನ್ನು ಇಡಲು ಸರಿಯಾದ ಜಾಗವಾಗಿದೆ. ಮನೆಯ ಆಗ್ನೇಯ ದಿಕ್ಕಿನ ಯಜಮಾನ ಗಣೇಶನಾಗಿರುವನು. ಈ ಪ್ರದೇಶದ ಆಡಳಿತಾಧಿಕಾರಿ ಶುಕ್ರ. ಗಣೇಶನು ಬರುವಂತಹ ತೊಂದರೆಗಳನ್ನು ನಿವಾರಣೆ ಮಾಡುವನು ಮತ್ತು ಶುಕ್ರನು ಸಂಪತ್ತನ್ನು ತರುವನು. ಇದರಿಂದ ಮನೆಯ ಆಗ್ನೇಯ ಭಾಗದಲ್ಲೇ ಈ ಮನಿಪ್ಲ್ಯಾಂಟ್ ನ್ನು ಇಡಬೇಕು.

•ಮನೆಯ ಈಶಾನ್ಯ ಭಾಗದಲ್ಲಿ ಯಾವತ್ತಿಗೂ ಮನಿಪ್ಲ್ಯಾಂಟ್ ನ್ನು ಇಡಬಾರದು. ಈ ಭಾಗದ ಆಡಳಿತಾಧಿಕಾರಿ ಗುರು, ಇದು ಶುಕ್ರ ಗ್ರಹದ ಶತ್ರುವಾಗಿದೆ. ಈ ಜಾಗದಲ್ಲಿ ಮನಿಪ್ಲ್ಯಾಂಟ್ ನ್ನು ಇಟ್ಟರೆ ಅದರಿಂದ ದುರಾದೃಷ್ಟವು ಬರುವುದು.

ಮರಗಳನ್ನು ನೆಡುವುದರಿಂದ ಎತ್ತರಕ್ಕೆ ಬೆಳೆಯುವ ಅಶೋಕ, ಬೇವು, ತೆಂಗಿನ ಮರ ಮತ್ತು ಗಿಡಗಳಾದ ತುಳಸಿ ಮತ್ತು ಅರಿಶಿನಗಳು ನಿಮ್ಮ ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸುವುದನ್ನು ತಡೆಯುತ್ತವೆ ಹಾಗೂ ಇತರ ಸಸ್ಯಗಳಿಂದ ಎದುರಾಗಬಹುದಾಗಿದ್ದ ಕೆಟ್ಟ ಪ್ರಭಾವವನ್ನೂ ಕಡಿಮೆಗೊಳಿಸುತ್ತವೆ. ಹತ್ತಿಗಿಡ, ರೇಷ್ಮೆ ಹತ್ತಿಗಿಡ (Silky cotton plant) ಮತ್ತು ತಾಳೆ ಮರಗಳು ಮನೆಯ ಆವರಣದಲ್ಲಿರುವುದು ದುರಾದೃಷ್ಟವನ್ನು ತರುತ್ತದೆ ಎಂದು ವಾಸ್ತು ತಿಳಿಸುತ್ತದೆ. ವಿಶೇಷ ಟಿಪ್ಪಣಿ: ಮನೆಯ ಅಕ್ಕಪಕ್ಕ ಯಾವುದೇ ಗಿಡ ಅಥವಾ ಮರ ಸಾಯುತ್ತಿದ್ದರೆ ಅದನ್ನು ಆದಷ್ಟು ಬೇಗ ಅಲ್ಲಿಂದ ತೆಗೆಸಿ. ಒಣಗಿದ ಹೂವುಗಳು ಸಹಾ ದುರಾದೃಷ್ಟವನ್ನು ತರಬಹುದು.

ಪೀಸ್ ಲಿಲ್ಲಿ (Peace Lilly)

ದಟ್ಟಹಸಿರು ಬಣ್ಣದ ಎಲೆಗಳು ಮತ್ತು ಬಾವುಟದಂತಹ ಹೂವುಗಳಿಂದ ಆಕರ್ಷಕವಾಗಿ ಕಾಣುವ ಈ ಗಿಡವನ್ನು ಮನೆಯ ಯಾವುದೇ ಕೋಣೆಯಲ್ಲಿಟ್ಟರೂ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲು ನೆರವಾಗುತ್ತದೆ.

English summary

Vastu Plant for Home- Things You Must know

According to Vastu and Fengshui both Money Plants should be kept indoors in south east direction of living room or hall. In Vastu Southeast direction owner is Lord Ganesha and planet that rule is Venus. This is why vastu experts prefer money plant in this direction. Ganehsa removes bad luck and venus increases wealth.
Story first published: Tuesday, July 30, 2019, 15:37 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more